ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ನಡುವೆ ಚೆನ್ನೈನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟ ಮುಗಿದಿದ್ದು, 2ನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ನೀಡಿರುವ 420 ರನ್ಗಳ ಬೃಹತ್ ಮೊತ್ತವನ್ನು ಟೀಂ ಇಂಡಿಯಾ ಬೆನ್ನತ್ತಿದೆ. ಆದರೆ ಟೀಂ ಇಂಡಿಯಾಕ್ಕೆ ಆರಂಭದಲ್ಲಿಯೇ ಆಘಾತ ಉಂಟಾಗಿದೆ. 12 ರನ್ ಗಳಿಸಿದ್ದ ರೋಹಿತ್ ಬೇಗನೆ ಪೆವಿಲಿಯನ್ ಸೇರಿದ್ದಾರೆ. ತಾಳ್ಮೆಯ ಆಟಕ್ಕೆ ಮುಂದಾಗಿರುವ ಗಿಲ್ 15 ರನ್ ಹಾಗೂ ಪೂಜಾರ 12 ರನ್ ಗಳಿಸಿ, ಅಂತಿಮ ದಿನದಾಟಕ್ಕೆ ಬ್ಯಾಟಿಂಗ್ ಉಳಿಸಿಕೊಂಡಿದ್ದಾರೆ.
Published On - 5:10 pm, Mon, 8 February 21