ಭಾರತದ ವಿರುದ್ಧ ಮುಂಬರುವ ಟಿ 20 ಸರಣಿಗೆ ಇಂಗ್ಲೆಂಡ್ 16 ಸದಸ್ಯರ ತಂಡವನ್ನು ಘೋಷಿಸಿದೆ. ಟೆಸ್ಟ್ ಸರಣಿಯ ಮುಕ್ತಾಯದ ನಂತರ ಐದು ಪಂದ್ಯಗಳ ಟಿ 20 ಸರಣಿಯಲ್ಲಿ ಇಂಗ್ಲೆಂಡ್ ಮತ್ತು ಭಾರತ ಪರಸ್ಪರ ಮುಖಾಮುಖಿಯಾಗಲಿವೆ. ಮಾರ್ಚ್ 12 ರಿಂದ 20 ರವರೆಗೆ ಅಹಮದಾಬಾದ್‌ನಲ್ಲಿ ನಡೆಯಲಿರುವ ಭಾರತ ವಿರುದ್ಧದ ಐದು ಟಿ 20 ಅಂತರರಾಷ್ಟ್ರೀಯ ಪಂದ್ಯಗಳಿಗೆ ಇಂಗ್ಲೆಂಡ್ ತಂಡದಲ್ಲಿ ಹಿರಿಯ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್‌ಗಳಾದ ಜೋಸ್ ಬಟ್ಲರ್ ಮತ್ತು ಜಾನಿ ಬೈರ್‌ಸ್ಟೋವ್ ಆಯ್ಕೆಯಾಗಿದ್ದಾರೆ.
ಟೆಸ್ಟ್ ಸರಣಿಗೆ ವಿಶ್ರಾಂತಿ ಪಡೆದಿದ್ದ ಐಪಿಎಲ್ ಫ್ರ್ಯಾಂಚೈಸ್ ಚೆನ್ನೈ ಸೂಪರ್ ಕಿಂಗ್ಸ್ನ ಆಲ್‌ರೌಂಡರ್ ಸ್ಯಾಮ್ ಕುರ್ರನ್ ಕೂಡ ಟಿ 20ಗೆ ಹಿಂದಿರುಗಲಿದ್ದಾರೆ. ಸ್ಫೋಟಕ ಬ್ಯಾಟ್ಸ್‌ಮನ್ ಇಯೊನ್ ಮೋರ್ಗಾನ್ ಮತ್ತೊಮ್ಮೆ ತಂಡವನ್ನು ಮುನ್ನಡೆಸಲಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಬಿಗ್ ಬ್ಯಾಷ್ ಲೀಗ್‌ನಲ್ಲಿ ಪ್ರಭಾವ ಬೀರಿದ ಲಿಯಾಮ್ ಲಿವಿಂಗ್‌ಸ್ಟನ್‌ಗೆ ತಂಡದಲ್ಲಿ ಅವಕಾಶ ಸಿಕ್ಕಿದೆ.
ಆಂಡರ್ಸನ್ ಮತ್ತು ಬ್ರಾಡ್ ಟೆಸ್ಟ್ಗೆ ವಿದಾಯ..
ಅನುಭವಿ ವೇಗಿಗಳಾದ ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಇನ್ನು ಮುಂದೆ ವೈಟ್ ಬಾಲ್ ಕ್ರಿಕೆಟ್ ಆಡುವುದಿಲ್ಲ. ಐದು ಪಂದ್ಯಗಳ ಟಿ20 ಸರಣಿಗೆ ಜೋಫ್ರಾ ಆರ್ಚರ್ ಲಭ್ಯವಿರುತ್ತಾರೆ. ಟೆಸ್ಟ್ ತಂಡಕ್ಕಿಂತ ಭಿನ್ನವಾಗಿ, ಇಂಗ್ಲೆಂಡ್‌ನ ಟಿ20 ತಂಡವು ಎಲ್ಲಾ 16 ಆಟಗಾರರು ಸರಣಿಯಲ್ಲಿ ಸಂಪೂರ್ಣ ಲಭ್ಯವಿರುವಂತೆ ತಯಾರಿ ನಡೆಸಿದೆ. ಇದರಿಂದಾಗಿ ಜೇಕ್ ಬಾಲ್ ಮತ್ತು ಮ್ಯಾಟ್ ಪಾರ್ಕಿನ್ಸನ್ ಕೂಡ ಭಾರತಕ್ಕೆ ಆಗಮಿಸಲಿದ್ದಾರೆ. ಈ ತಂಡದಲ್ಲಿ ಇತ್ತೀಚಿನ ಟಿ20 ಡ್ಯಾಶರ್ ಡೇವಿಡ್ ಮಲನ್ ಕೂಡ ಇದ್ದಾರೆ. ಇವರು ಫೆಬ್ರವರಿ 18 ರಂದು ಚೆನ್ನೈನಲ್ಲಿ ನಡೆಯುವ ಐಪಿಎಲ್ ಹರಾಜಿನಲ್ಲಿ ಹಾಟ್ ಪಿಕ್ ಸಹ ಆಗಿರಬಹುದು.
ಟಿ20ಗೆ ಇಂಗ್ಲೆಂಡ್ ತಂಡ..
ಇಯೊನ್ ಮೋರ್ಗಾನ್ (ನಾಯಕ), ಮೊಯೀನ್ ಅಲಿ, ಜೋಫ್ರಾ ಆರ್ಚರ್, ಜೊನಾಥನ್ ಬೈರ್‌ಸ್ಟೋವ್, ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್, ಸ್ಯಾಮ್ ಕರ್ರನ್, ಟಾಮ್ ಕರ್ರನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲನ್, ಆದಿಲ್ ರಶೀದ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲೆ, ಮಾರ್ಕ್ ವುಡ್.