AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈದಾನದಲ್ಲಿ ತಲೆಕೆಳಗಾಗಿ ನಡೆದು ಅಭಿಮಾನಿಗಳನ್ನು ರಂಜಿಸಿದ ಬೆನ್​ ಸ್ಟೋಕ್ಸ್​! ವಿಡಿಯೋ ವೈರಲ್​

Ind vs Eng, 2nd Test Day 3 | Ben Stokes | ಇಂಗ್ಲೆಂಡ್​ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ ಮೈದಾನದಲ್ಲಿ ಸರ್ಕಸ್​ ಮಾಡಿದ್ದಾರೆ! ತಲೆಕೆಳಗಾಗಿ ನಡೆದು ಪ್ರೇಕ್ಷಕರನ್ನು ರಂಜಿಸಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮೈದಾನದಲ್ಲಿ ತಲೆಕೆಳಗಾಗಿ ನಡೆದು ಅಭಿಮಾನಿಗಳನ್ನು ರಂಜಿಸಿದ ಬೆನ್​ ಸ್ಟೋಕ್ಸ್​! ವಿಡಿಯೋ ವೈರಲ್​
ತಲೆಕೆಳಗಾಗಿ ನಡೆದ ಬೆನ್​ ಸ್ಟೋಕ್ಸ್​
ರಾಜೇಶ್ ದುಗ್ಗುಮನೆ
| Edited By: |

Updated on:Feb 15, 2021 | 2:19 PM

Share

ಕೆಲ ಆಟಗಾರರು ಮೈದಾನದಲ್ಲಿದ್ದಾಗ ಕುಚೇಷ್ಟೆ ಮಾಡುತ್ತಿರುತ್ತಾರೆ. ಮೈದಾನದಲ್ಲಿ ಮೊಳಗುವ ಹಾಡಿಗೆ ಒಮ್ಮೊಮ್ಮೆ ಡ್ಯಾನ್ಸ್​ ಮಾಡಿದ್ದು ಉಂಟು. ಅಭಿಮಾನಿಗಳನ್ನು ರಂಜಿಸಲು ನೃತ್ಯ ಮಾಡಿದ ಉದಾಹರಣೆಯೂ ಇದೆ. ಅದೇ ರೀತಿ, ಭಾರತ-ಇಂಗ್ಲೆಂಡ್​ ನಡುವಣ ಎರಡನೇ ಟೆಸ್ಟ್​​ನ ಮೂರನೇ ದಿನದಾಟದಂದು ಇಂಗ್ಲೆಂಡ್​ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ ಮೈದಾನದಲ್ಲಿ ಸರ್ಕಸ್​ ಮಾಡಿದ್ದಾರೆ! ತಲೆಕೆಳಗಾಗಿ ನಡೆದು ಪ್ರೇಕ್ಷಕರನ್ನು ರಂಜಿಸಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮೂರನೇ ದಿನದಾಟದಲ್ಲಿ ಭಾರತ ಆರು ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ತುತ್ತಾಗಿತ್ತು. ಈ ವೇಳೆ ನಾಯಕ ವಿರಾಟ್​ ಕೊಹ್ಲಿ ಹಾಗೂ ಆರ್​. ಅಶ್ವಿನ್​ ಎಚ್ಚರಿಕೆಯ ಆಟಕ್ಕೆ ಮುಂದಾದಾದರು. ಕೊಹ್ಲಿ ವಿಕೆಟ್​ ತೆಗೆಯಲು ಬೌಲರ್​ಗಳು ಹೆಣಗಾಡಿದರು. ಈ ವೇಳೆ, ಬೆನ್​ ಸ್ಟೋಕ್ಸ್​ ಏಕಾಏಕಿ ಮೈದಾನದಲ್ಲಿ ತಲೆಕೆಳಗಾಗಿ ನಡೆದಿದ್ದಾರೆ. ಅವರು ಹೀಗೆ ಉಲ್ಟಾ ನಡೆಯುತ್ತಿದ್ದಂತೆ, ನೆರೆದಿದ್ದ ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ದಾರೆ.

ಸ್ಟೋಕ್ಸ್ ಭೂತೋಚ್ಚಾಟಕ ಮೂಡ್‌ಗೆ ಹೋಗಿದ್ದಾರೆ. ಬಹುಶಃ ಪಿಚ್‌ನಲ್ಲಿರುವ ರಾಕ್ಷಸರನ್ನು ಹೆದರಿಸಲು ಅವರು ಪ್ರಯತ್ನಿಸಿರಬಹುದು ಎಂದು ಅಭಿಮಾನಿಗಳು ಟೀಕಿಸಿದ್ದಾರೆ.

ಕೊಹ್ಲಿ-ಅಶ್ವಿನ್​ ಎಚ್ಚರಿಕೆಯ ಆಟದಿಂದ ಟೀಂ ಇಂಡಿಯಾ 400+ ರನ್​ಗಳ ಲೀಡ್​ ಕಂಡುಕೊಂಡಿದೆ. ಇನ್ನೂ ಎರಡು ದಿನಗಳು ಬಾಕಿ ಇದೆ.

Published On - 2:12 pm, Mon, 15 February 21

ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ