Kannada News Sports India vs England: 2ನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾಗೆ ಗೆಲುವು, ಅಶ್ವಿನ್ ಪಂದ್ಯ ಶ್ರೇಷ್ಠ.. ರೋಚಕ ಕ್ಷಣಗಳ Photos ನೋಡಿ..!
India vs England: 2ನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾಗೆ ಗೆಲುವು, ಅಶ್ವಿನ್ ಪಂದ್ಯ ಶ್ರೇಷ್ಠ.. ರೋಚಕ ಕ್ಷಣಗಳ Photos ನೋಡಿ..!
ಪೃಥ್ವಿಶಂಕರ | Updated By: Digi Tech Desk
Updated on:
Feb 17, 2021 | 7:21 PM
India vs England: ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲಲು ಇಂಗ್ಲೆಂಡ್ಗೆ 2ನೇ ಇನ್ನಿಂಗ್ಸ್ನಲ್ಲಿ 482 ರನ್ಗಳ ಗುರಿ ನೀಡಲಾಯಿತು. ಈ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ 164 ರನ್ಗಳಿಗೆ ತನ್ನೇಲ್ಲಾ ವಿಕೆಟ್ ಕಳೆದುಕೊಂಡು ಸರ್ವಪತನಗೊಂಡಿತು.
1 / 12
ಎಂ. ಎ. ಚಿದಂಬರಂ ಮೈದಾನದಲ್ಲಿ ನಡೆದ ಇಂಡಿಯಾ- ಇಂಗ್ಲೆಂಡ್ ನಡುವಿನ 4 ಟೆಸ್ಟ್ ಪಂದ್ಯಗಳ ಸರಣಿಯ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 317 ರನ್ಗಳ ಭರ್ಜರಿ ಜಯ ಸಾಧಿಸಿದೆ.
2 / 12
ಇಂಗ್ಲೆಂಡ್ನ 2ನೇ ಇನ್ನಿಂಗ್ಸ್ ಆರಂಭದಿಂದಲೂ ಆರ್ಭಟ ತೋರಿದ ಟೀಂ ಇಂಡಿಯಾ ವೇಗಿಗಳು ಇಂಗ್ಲೆಂಡ್ ತಂಡವನ್ನು ಕಡಿಮೆ ರನ್ಗಳಿಗೆ ಆಲ್ಔಟ್ ಮಾಡುವದರಲ್ಲಿ ಯಶಸ್ವಿಯಾದರು.
3 / 12
ಟೀಂ ಇಂಡಿಯಾ ಪರ ಬ್ಯಾಟಿಂಗ್ನಲ್ಲಿ ಶತಕ ಸಿಡಿಸಿ ಮಿಂಚಿದ ಅಶ್ವಿನ್, ಬೌಲಿಂಗ್ನಲ್ಲೂ ಕಮಾಲ್ ಮಾಡಿದರು. 2ನೇ ಇನ್ನಿಂಗ್ಸ್ನಲ್ಲಿ 106 ರನ್ ಸಿಡಿಸಿದ ಅಶ್ವಿನ್ 3 ವಿಕೆಟ್ ಪಡೆದು ಮಿಂಚಿದರು.
4 / 12
High Five- ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಪರ ಮಿಂಚಿದ ಅಶ್ವಿನ್ 5 ವಿಕೆಟ್ ಪಡೆದರೆ, ಉಳಿದಂತೆ ಇಶಾಂತ್ ಶರ್ಮಾ ಹಾಗೂ ಅಕ್ಸಾರ್ ಪಟೇಲ್ ತಲಾ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಹಾಗೆಯೇ ವೇಗಿ ಸಿರಾಜ್ ಸಹ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
5 / 12
ಆರಂಭದಿಂದಲೂ ಇಂಗ್ಲೆಂಡ್ ದಾಂಡಿಗರನ್ನು ಕಾಡಿದ ಅಶ್ವಿನ್ ಪ್ರಮುಖ 3 ವಿಕೆಟ್ ತೆಗೆದು ಇಂಗ್ಲೆಂಡ್ ಬ್ಯಾಟಿಂಗ್ ಬೆನ್ನೇಲುಬ್ಬನ್ನ ಮುರಿದರು.
6 / 12
ಚೆಂಡ ಬುಗುರಿಯಂತೆ ತಿರುಗುತ್ತಿರುವ ಪಿಚ್ನಲ್ಲಿ ಅತ್ಯುತ್ತಮವಾಗಿ ಆಡಿದ ಕೊಹ್ಲಿ 149 ಎಸೆತಗಳಲ್ಲಿ 7 ಬೌಂಡರಿಗಳಿದ್ದ 62 ರನ್ ಬಾರಿಸಿದರು.
7 / 12
ಅಶ್ವಿನ್ 2ನೇ ಟೆಸ್ಟ್‌ನಲ್ಲಿ ದಾಖಲಿಸಿದ್ದು ತಮ್ಮ ಟೆಸ್ಟ್ ಕರೀಯರ್ನ 5 ನೇ ಶತಕ. ಅವರ ಮೊದಲ 4 ಶತಕಗಳು ವೆಸ್ಟ್ ಇಂಡೀಸ್ ವಿರುದ್ಧ ಬಂದಿರುವುದು ವಿಶೇಷ.
8 / 12
ಆಲ್ರೌಂಡರ್ ರವಿಚಂದ್ರನ್ ಅಶ್ವಿನ್ ಕ್ರಿಕೆಟ್ ಬದುಕಿನ ಸರ್ವಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನವನ್ನು ತಮ್ಮ ಹೋಮ್ ಪಿಚ್ನಲ್ಲಿ ಇಂದು ನೀಡಿದರು. ಅತಿರಥ ಮಾಹಾರಥ ಬ್ಯಾಟ್ಸ್ಮನ್ಗಳು ರನ್ ಗಳಿಸಲು ತಿಣುಕಾಡಿದ ಚೆನೈ ಪಿಚ್ನಲ್ಲಿ ಅಶ್ವಿನ್ ಶತಕ ಬಾರಿಸಿದ್ದು ಅವರಲ್ಲಿರುವ ಬ್ಯಾಟಿಂಗ್ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.
9 / 12
26 ರನ್ಗಳಿಸಿ ಅಪಾಯಕಾರಿಯಾಗಿ ಕಾಣುತ್ತಿದ್ದ ಲಾರೆನ್ಸ್ ಅವರನ್ನು ಸ್ಟಂಪ್ಔಟ್ ಮಾಡುವಲ್ಲಿ ರಿಶಭ್ ಪಂತ್ ಯಶಸ್ವಿಯಾದರು.
10 / 12
ಅಶ್ವಿನ್ಗೆ ಉತ್ತಮ ಸಾಥ್ ನೀಡಿದ ಅಕ್ಸಾರ್ ಪಟೇಲ್ ಮೊದಲ ಟೆಸ್ಟ್ನಲ್ಲಿಯೇ 5 ವಿಕೆಟ್ ಪಡೆದು ಮಿಂಚಿದರು. ಈ ಇಬ್ಬರು ಸ್ಪಿನ್ನರ್‌ಗಳ ನೆರವಿನಿಂದ ಟೀಂ ಇಂಡಿಯಾ 317 ರನ್ಗಳ ಭರ್ಜರಿ ಜಯ ಸಾದಿಸಿತು.
11 / 12
ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಪರ ಇಶಾಂತ್ ಶರ್ಮಾ ಹಾಗೂ ಅಕ್ಸಾರ್ ಪಟೇಲ್ ತಲಾ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಹಾಗೆಯೇ ವೇಗಿ ಸಿರಾಜ್ ಸಹ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
12 / 12
ಆಡಿದ ಮೊದಲ ಪಂದ್ಯದಲ್ಲೇ ಭರವಸೆಯ ಆಟ ಆಡಿದ ಅಕ್ಸಾರ್ ಪಟೇಲ್ ಒಟ್ಟಾರೆ 2ನೇ ಟೆಸ್ಟ್‌ನಲ್ಲಿ 7 ವಿಕೆಟ್ ಪಡೆದು ಮಿಂಚಿದರು.
Published On - 2:48 pm, Tue, 16 February 21