World Test Championship: 2ನೇ ಟೆಸ್ಟ್ ಗೆಲುವಿನೊಂದಿಗೆ ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್​ನಲ್ಲಿ 2ನೇ ಸ್ಥಾನಕ್ಕೆ ಜಿಗಿದ ಭಾರತ

World Test Championship: 2ನೇ ಟೆಸ್ಟ್ ಗೆಲುವಿನೊಂದಿಗೆ ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್​ನಲ್ಲಿ 2ನೇ ಸ್ಥಾನಕ್ಕೆ ಜಿಗಿದ ಭಾರತ
ಎರಡನೇ ಟೆಸ್ಟ್​ ಸುಲಭವಾಗಿ ಗೆದ್ದ ಟೀಮ್ ಇಂಡಿಯಾ

ಮೊದಲ ಟೆಸ್ಟ್​ ಪಂದ್ಯವನ್ನುಅವಮಾನಕರ ರೀತಿಯಲ್ಲಿ ಸೋತಿದ್ದ ಭಾರತ ಡಬ್ಲ್ಯುಟಿಸಿ ಪಾಯಿಂಟ್ಸ್​ ಟೇಬಲ್​ನಲ್ಲಿ ಅಗ್ರಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಜಾರಿತ್ತು. ಆದರೆ ಈ ಗೆಲುವಿನ ನಂತರ ಭಾರತ ಎರಡನೇ ಸ್ಥಾನಕ್ಕೆ ಜಿಗಿದಿದೆ.

Arun Belly

|

Feb 16, 2021 | 4:48 PM

ಇಂಗ್ಲೆಂಡ್ ವಿರುದ್ಧ ಚೆನೈನಲ್ಲಿ ಇಂದು (ಫೆ.16) 317 ರನ್​ಗಳ ಬೃಹತ್ ಅಂತರದ ಗೆಲುವು ಸಾಧಿಸಿದ ನಂತರ ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ (ಡಬ್ಲ್ಯುಟಿಸಿ) ಪೈನಲ್​ಗೆ ಅರ್ಹತೆ ಗಿಟ್ಟಿಸುವ ಸಾಧ್ಯತೆ ಮತ್ತೊಮ್ಮೆ ಹೆಚ್ಚಾಗಿದೆ. ಕ್ರಿಕೆಟ್ ಪ್ರೇಮಿಗಳಿಗೆ ನೆನಪಿರಬಹುದು. ಇಂಗ್ಲೆಂಡ್ ವಿರುದ್ಧ ಇದೇ ಮೈದಾನದಲ್ಲಿ ಆಡಿದ ಮೊದಲ ಟೆಸ್ಟ್​ ಪಂದ್ಯವನ್ನು ಅವಮಾನಕರ ರೀತಿಯಲ್ಲಿ ಸೋತಿದ್ದ ಭಾರತ ಡಬ್ಲ್ಯುಟಿಸಿ ಪಾಯಿಂಟ್ಸ್​ ಟೇಬಲ್​ನಲ್ಲಿ ಅಗ್ರಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಜಾರಿತ್ತು. ಆದರೆ ಈ ಗೆಲುವಿನ ನಂತರ ಭಾರತ ಎರಡನೇ ಸ್ಥಾನಕ್ಕೆ ಜಿಗಿದಿದೆ.

ಈಗಾಗಲೇ ಫೈನಲ್ ಅಡುವ ಅರ್ಹತೆ ಗಿಟ್ಟಿಸಿರುವ ನ್ಯೂಜಿಲೆಂಡ್ ಮೊದಲ ಸ್ಥಾನದಲ್ಲಿದೆ. ಇಂಗ್ಲೆಂಡ್ 4ನೇ ಸ್ಥಾನಕ್ಕೆ ಕುಸಿದಿದೆ ಮತ್ತು ಆಸ್ಟ್ರೇಲಿಯಾ 3ನೇ ಸ್ಥಾನದಲ್ಲಿದೆ.

ಭಾರತ ಫೈನಲ್ ಅಡುವುದು ಇನ್ನೂ ನಿಶ್ಚಿತವಲ್ಲ. ಪಾಯಿಂಟ್ಸ್ ಟೇಬಲ್​ನಲ್ಲಿ ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಕೂಡ ಅರ್ಹತೆ ಗಿಟ್ಟಿಸುವ ಸಾಧ್ಯತೆಯಿದೆ.

ಭಾರತ ಮತ್ತು ಇಂಗ್ಲೆಂಡ್​ ಮಧ್ಯೆ ನಡೆಯುತ್ತಿರುವ ಸರಣಿಯಲ್ಲಿ ಇನ್ನೂ ಎರಡು ಟೆಸ್ಟ್​ ಆಡುವುದು ಬಾಕಿಯಿವೆ. ಭಾರತ 2-1 ಇಲ್ಲವೇ 3-1 ಅಂತರದಿಂದ ಸರಣಿ ಗೆದ್ದರೆ ಭಾರತ ಅರ್ಹತೆ ಪಡೆದುಕೊಂಡುಬಿಡುತ್ತದೆ. ಇಂಗ್ಲೆಂಡ್ ಸರಣಿಯನ್ನು 3-1 ಅಂತರದಿಂದ ತನ್ನದಾಗಿಸಿಕೊಂಡರೆ ಅದು ನ್ಯೂಜಿಲೆಂಡ್ ಜೊತೆ ಲಾರ್ಡ್ಸ್​ನಲ್ಲಿ ಚಾಂಪಿಯನ್​ಶಿಪ್​ಗಾಗಿ ಸೆಣಸುತ್ತದೆ. ಹಾಗೆಯೇ ಒಂದು ಪಕ್ಷ ಸದರಿ ಸರಣಿಯು 1-1 ಇಲ್ಲವೇ 2-2 ರಿಂದ ಸಮವಾದರೆ ಆಸ್ಟ್ರೇಲಿಯಾ ಕ್ವಾಲಿಫೈ ಆಗಲಿದೆ.

Follow us on

Related Stories

Most Read Stories

Click on your DTH Provider to Add TV9 Kannada