India vs England: ರಾಹುಲ್ ಶತಕ ಸಿಡಿಸಿದ ನಂತರ ಕಿವಿ ಮುಚ್ಚಿ ಸಂಭ್ರಮಿಸುವುದ್ಯಾಕೆ? ಕನ್ನಡಿಗನ ಸ್ಪಷ್ಟನೆಗೆ ನೀವು ಸಹ ಬೆರಗಾಗುತ್ತೀರಿ!

|

Updated on: Mar 27, 2021 | 11:05 AM

India vs England: ಕೆಲವೊಮ್ಮೆ ಹೊರಗಿನಿಂದ ಬರುವ ಕೆಲ ಮಾತುಗಳು ನಮ್ಮನ್ನು ವಿಚಲಿತರನ್ನಾಗಿಸುತ್ತಿದೆ. ಈ ಋಣಾತ್ಮಕ ಶಬ್ಧಗಳಿಗೆ ಕಿವಿಗೊಡದೆ ಆಟದ ಕಡೆಗೆ ಗಮನ ನೀಡಬೇಕು ಎಂಬುದಷ್ಟೇ ಇದರ ಹಿಂದಿನ ಅರ್ಥವಾಗಿದೆ ಎಂದರು.

India vs England: ರಾಹುಲ್ ಶತಕ ಸಿಡಿಸಿದ ನಂತರ ಕಿವಿ ಮುಚ್ಚಿ ಸಂಭ್ರಮಿಸುವುದ್ಯಾಕೆ? ಕನ್ನಡಿಗನ ಸ್ಪಷ್ಟನೆಗೆ ನೀವು ಸಹ ಬೆರಗಾಗುತ್ತೀರಿ!
ಕೆ.ಎಲ್ ರಾಹುಲ್
Follow us on

ಪುಣೆ: ಕನ್ನಡಿಗ ಕೆ.ಎಲ್ ರಾಹುಲ್ ಕ್ರಿಕೆಟ್​ನ ಶ್ರೇಷ್ಠ ಬ್ಯಾಟ್ಸ್‌ಮನ್ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅವರ ಹೊಡೆತಗಳನ್ನು ನೋಡಿ ಎಲ್ಲರ ಬಾಯಿಂದ ವಾಹ್ ಎಂಬ ಶಬ್ದ ಹೊರಬಂದೆ ಬರುತ್ತದೆ. ಆದರೆ ಅವರ ಬ್ಯಾಟ್ ರನ್ ಗಳಿಸದಿದ್ದಾಗ ವಿಮರ್ಶಕರ ಬಾಯಿ ಮಾತಾನಾಡಲು ಆರಂಭಿಸುತ್ತದೆ. ಇನ್ನಿಲ್ಲದಂತೆ ಆತನನ್ನು ನಿಂದಿಸಲಾಗುತ್ತದೆ. ಇದಕ್ಕೆಲ್ಲಾ ತಕ್ಕ ಉತ್ತರ ಎಂಬಂತೆ 2ನೇ ಏಕದಿನ ಸರಣಿಯಲ್ಲಿ ರಾಹುಲ್ ಅದ್ಭುತ ಶತಕ ಸಿಡಿಸಿ ಮಿಂಚಿದರು. ಈ ಮೂಲಕ ನಿಂದಕರಿಗೆ ಸರಿಯಾಗಿಯೇ ಬಿಸಿ ಮುಟಿಸಿದರು. ಜೊತೆಗೆ ತಮ್ಮ ಶತಕದ ನಂತರ ನಾನು ಏತಕೆ ನನ್ನ ಎರಡು ಕಿವಿಗಳನ್ನು ಮುಚ್ಚಿ ಸಂಭ್ರಮಾಚಾರಣೆ ಮಾಡುತ್ತೇನೆ ಎಂಬುದಕ್ಕೂ ಸ್ಪಷ್ಟನೆ ನೀಡಿದರು.

ಪುಣೆಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರಾಹುಲ್ 114 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 108 ರನ್ ಗಳಿಸಿದರು. ಏಕದಿನ ವೃತ್ತಿಜೀವನದಲ್ಲಿ ಇದು ರಾಹುಲ್ ಅವರ ಐದನೇ ಶತಕ. ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಅವರ ಶತಕದ ಸಹಭಾಗಿತ್ವದಲ್ಲಿ ಭಾರತ 50 ಓವರ್‌ಗಳಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡು 336 ರನ್ ಗಳಿಸುವಲ್ಲಿ ಅವರು ಮಹತ್ವದ ಕೊಡುಗೆ ನೀಡಿದ್ದಾರೆ.

ಟಿ 20 ಸರಣಿಯಲ್ಲಿ ನಿರಾಶೆಯಾಯಿತು
ಇಂಗ್ಲೆಂಡ್ ವಿರುದ್ಧ ಆಡಿದ ಟಿ 20 ಸರಣಿಯಲ್ಲಿ ರನ್ ಗಳಿಸದ ಕಾರಣ ಖಂಡಿತವಾಗಿಯೂ ನಿರಾಶೆಗೊಂಡಿದ್ದೇನೆ ಎಂದು ರಾಹುಲ್ ಒಪ್ಪಿಕೊಂಡರು. ಇನ್ನಿಂಗ್ಸ್ ಮುಗಿದ ನಂತರ ಮಾತಾನಾಡಿದ ರಾಹುಲ್, ನೀವು ರನ್ ಗಳಿಸುವ ಮೂಲಕ ಆತ್ಮವಿಶ್ವಾಸವನ್ನು ಪಡೆಯುತ್ತೀರಿ. ಟಿ 20 ಸರಣಿಯಲ್ಲಿ ನಾನು ಕಳಪೆ ಪ್ರದರ್ಶನ ನೀಡಿದಕ್ಕೆ ನನಗೆ ನಿರಾಶೆಯಾಯಿತು. ಇಂದು ಕೊಹ್ಲಿ ಮತ್ತು ಪಂತ್ ಅವರೊಂದಿಗೆ ಪಾಲುದಾರಿಕೆ ಅಗತ್ಯವಾಗಿತ್ತು. ಹಾಗಾಗಿ ಅವಶ್ಯಕ ಸಮಯದಲ್ಲಿ ನಾನು ತಂಡಕ್ಕೆ ನೆರವಾದೆ ಎಂದರು.

ಕಿವಿ ಮುಚ್ಚಿ ಸಂಭ್ರಮಿಸುವುದ್ಯಾಕೆ?
ಶತಕದ ನಂತರ ನಾನು ಕಿವಿ ಮುಚ್ಚಿ ಸಂಭ್ರಮಿಸುವುದು ಏಕೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿದ ರಾಹುಲ್, ಹೊರಗಿನ ಶಬ್ಧಗಳಿಗೆ ಕೊವಿಗೊಡಬಾರದು ಎಂಬುದು ಇದರ ಹಿಂದಿನ ಸರಳ ಅರ್ಥ. ಕೆಲವೊಮ್ಮೆ ಹೊರಗಿನಿಂದ ಬರುವ ಕೆಲ ಮಾತುಗಳು ನಮ್ಮನ್ನು ವಿಚಲಿತರನ್ನಾಗಿಸುತ್ತಿದೆ. ಈ ಋಣಾತ್ಮಕ ಶಬ್ಧಗಳಿಗೆ ಕಿವಿಗೊಡದೆ ಆಟದ ಕಡೆಗೆ ಗಮನ ನೀಡಬೇಕು ಎಂಬುದಷ್ಟೇ ಇದರ ಹಿಂದಿನ ಅರ್ಥವಾಗಿದೆ ಎಂದರು.

ಕೊಹ್ಲಿ-ಪಂತ್ ಜೊತೆ ಶತಕದ ಜೊತೆಯಾಟ
ರಾಹುಲ್ ಮೈದಾನಕ್ಕೆ ಇಳಿದಾಗ ತಂಡದ ಸ್ಕೋರ್ 37 ರನ್‌ಗಳಿಗೆ ಎರಡು ವಿಕೆಟ್ ಬಿದ್ದಿತ್ತು. ಈ ಫಾರ್ಮ್ ಬ್ಯಾಟ್ಸ್‌ಮನ್‌ಗಳಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಪೆವಿಲಿಯನ್‌ಗೆ ಮರಳಿದ್ದರು. ಇಲ್ಲಿಂದ ಕೊಹ್ಲಿ ಮತ್ತು ರಾಹುಲ್ ತಂಡವನ್ನು ಬಿಕ್ಕಟ್ಟಿನಿಂದ ಹೊರಗೆ ಕರೆದೊಯ್ದರು. ಇಬ್ಬರೂ ಮೂರನೇ ವಿಕೆಟ್‌ಗೆ 141 ಎಸೆತಗಳಲ್ಲಿ 121 ರನ್ ಗಳಿಸಿದರು. ಕೊಹ್ಲಿ ತಂಡದ ಮೊತ್ತ 158 ರನ್‌ ಇದ್ದಾಗ ಔಟಾದರೂ ರಾಹುಲ್ ಹಾಗೇ ಇದ್ದರು ಮತ್ತು ಯುವ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರೊಂದಿಗೆ ಅದೇ ಕೆಲಸವನ್ನು ಮುಂದುವರೆಸಿದರು. ಈ ಇಬ್ಬರೂ ಸಹ ಶತಕದ ಸಹಭಾಗಿತ್ವವನ್ನು ರೂಪಿಸಿದರು. ಪಂತ್ ಮತ್ತು ರಾಹುಲ್ ಐದನೇ ವಿಕೆಟ್‌ಗೆ 113 ರನ್ ಸೇರಿಸಿದರು. 45 ನೇ ಓವರ್‌ನ ಐದನೇ ಎಸೆತದಲ್ಲಿ ರಾಹುಲ್ ವಿಕೆಟ್ ಬಿದ್ದಿತು. 108 ರನ್‌ಗಳ ಇನಿಂಗ್ಸ್‌ನಲ್ಲಿ ಅವರು 114 ಎಸೆತಗಳನ್ನು ಎದುರಿಸಿದರು ಮತ್ತು ಏಳು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಹೊಡೆದರು.

ಮೊದಲ ಏಕದಿನ ಪಂದ್ಯದಲ್ಲೂ ಉತ್ತಮ ಪ್ರದರ್ಶನ
ಮಂಗಳವಾರ ಆಡಿದ ಮೊದಲ ಏಕದಿನ ಪಂದ್ಯದಲ್ಲಿ ರಾಹುಲ್ ತಂಡಕ್ಕೆ ಬಲವಾದ ಸ್ಕೋರ್ ನೀಡಿ, ಭಾರತವನ್ನು ಕಠಿಣ ಪರಿಸ್ಥಿತಿಯಿಂದ ಪಾರು ಮಾಡಿದ್ದರು. ರಾಹುಲ್ ಮೈದಾನಕ್ಕೆ ಕಾಲಿಟ್ಟಾಗ ತಂಡದ ಸ್ಕೋರ್ 34.5 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 187 ರನ್ ಆಗಿತ್ತು. ತಂಡದ ರನ್ ದರ ನಿಧಾನವಾಗಿತ್ತು ಮತ್ತು ತಂಡವು ಬೃಹತ್ ಸ್ಕೋರ್ ತಲುಪುವುದು ಕಷ್ಟಕರವೆಂದು ತೋರುತ್ತಿತ್ತು. ಇಲ್ಲಿಂದ ರಾಹುಲ್ ತಂಡವನ್ನು ಬಿಕ್ಕಟ್ಟಿನಿಂದ ಹೊರತಂದರು. ನಾಲ್ಕು ಸಿಕ್ಸರ್ ನೆರವಿನಿಂದ 43 ಎಸೆತಗಳಲ್ಲಿ ಅಜೇಯ 62 ರನ್ ಗಳಿಸಿದರು. ಇದರೊಂದಿಗೆ ಅವರು ಕ್ರುನಾಲ್ ಪಾಂಡ್ಯ ಅವರ ಮೊದಲ ಏಕದಿನ ಪಂದ್ಯದೊಂದಿಗೆ ಆರನೇ ವಿಕೆಟ್‌ಗೆ 112 ರನ್​ಗಳ ಜೊತೆಯಾಟ ಹಂಚಿಕೊಂಡರು ಮತ್ತು ತಂಡಕ್ಕೆ 317 ರನ್‌ಗಳ ಬೃಹತ್ ಸ್ಕೋರ್ ನೀಡಿದರು.

ಇದನ್ನೂ ಓದಿ:India vs England: ಆಂಗ್ಲರ ಅಬ್ಬರಕ್ಕೆ ಶರಣಾದ ಕೊಹ್ಲಿ ಪಡೆ, ಕುತೂಹಲ ಕೆರಳಿಸಿದೆ ನಾಳಿನ ಪಂದ್ಯ!