Krunal Pandya: ಪ್ರಾಮಾಣಿಕವಾಗಿ ಹೇಳಿ, ಕೃನಾಲ್ ಭಾರತದ ಪರ ಆಡ್ತಾನಾ? ಕೃನಾಲ್ ತಂದೆಯ ಬಗ್ಗೆ ಕೋಚ್ ಹೇಳಿದ್ದೇನು?
India vs England: ಕೃನಾಲ್ ಕ್ರಿಕೆಟ್ ಅಭ್ಯಾಸ ಮಾಡುವಾಗ ಅವರ ತಂದೆ, ಪ್ರಾಮಾಣಿಕವಾಗಿ ಹೇಳಿ,ಕೃನಾಲ್ ಭಾರತ ಪರ ಆಡುತ್ತಾನಾ? ಖೇಲೆಗಾ ಯೆ? ’ಎಂದು ನನ್ನ ಬಳಿ ಪದೇ ಪದೇ ಕೇಳುತ್ತಿದ್ದರು.
ಪುಣೆ: ಪುಣೆ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲೇ ಕೊಹ್ಲಿ ಪಡೆ ಭರ್ಜರಿ ಗೆಲುವು ದಾಖಲಿಸಿದೆ. ಕೊಹ್ಲಿ ಪಡೆ ನೀಡಿದ ಬಿಗ್ ಟಾರ್ಗೆಟ್ ಬೆನ್ನತ್ತಿದ ಮಾರ್ಗನ್ ಪಡೆಗೆ, ಕನ್ನಡಿಗ ಪ್ರಸಿದ್ಧ್ ಕೃಷ್ಣ ಹಾಗೂ ಕೃನಾಲ್ ಪಾಂಡ್ಯ ಚೊಚ್ಚಲ ಪಂದ್ಯದಲ್ಲೇ ಸರಿಯಾದ ಬಿಸಿ ಮುಟ್ಟಿಸಿದ್ದಾರೆ. ಪುಣೆ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾಕ್ಕೆ ಆರಂಭಿಕರಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ 64 ರನ್ಗಳ ಡೀಸೆಂಟ್ ಓಪನಿಂಗ್ ನೀಡಿದ್ರು. ರೋಹಿತ್ ಶರ್ಮಾ 28 ರನ್ಗಳಾಗಿದ್ದಾಗ ವಿಕೆಟ್ ಒಪ್ಪಿಸಿದ್ರು. 2ನೇ ವಿಕೆಟ್ಗೆ ಧವನ್ ಜೊತೆಯಾದ ನಾಯಕ ವಿರಾಟ್ ಕೊಹ್ಲಿ, ಅದ್ಭುತ ಆಟವಾಡಿದ್ರು.
ಕೊಹ್ಲಿ, ಧವನ್, 105 ರನ್ಗಳ ಜೊತೆಯಾಟವಾಡಿದ್ರು.. 2ನೇ ವಿಕೆಟ್ಗೆ ತಲಾ ಅರ್ಧಶತಕ ಸಿಡಿಸಿದ ಕೊಹ್ಲಿ, ಧವನ್, 105 ರನ್ಗಳ ಜೊತೆಯಾಟವಾಡಿದ್ರು. ಕೊಹ್ಲಿ 56 ರನ್ಗಳಿಸಿದ್ರೆ, ತನ್ನ ಪಾಲಿನ ಅಗ್ನಿ ಪರೀಕ್ಷೆ ಪಂದ್ಯದಲ್ಲಿ ಮಿಂಚಿದ ಧವನ್, 98 ರನ್ಗಳಾಗಿದ್ದಾಗ ವಿಕೆಟ್ ಒಪ್ಪಿಸಿ ಶತಕ ವಂಚಿತರಾದ್ರು. ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯಾ ಬೇಗನೇ ವಿಕೆಟ್ ಒಪ್ಪಿಸಿದ್ರು. ಆದ್ರೆ 6ನೇ ವಿಕೆಟ್ಗೆ ಜೊತೆಯಾದ ಕನ್ನಡಿಗ ಕೆ.ಎಲ್.ರಾಹುಲ್ ಮತ್ತು ಕೃನಾಲ್ ಪಾಂಡ್ಯಾ 112 ರನ್ಗಳ ಜೊತೆಯಾಟವಾಡಿ, ತಂಡದ ಸ್ಕೋರ್ ಹೆಚ್ಚಿಸಿದ್ರು. ಕೃನಾಲ್ ಪಾಂಡ್ಯಾ ಪದಾರ್ಪಣೆ ಪಂದ್ಯದಲ್ಲೇ ಅಜೇಯ 58 ರನ್ಗಳಿಸಿದ್ರು. ಇದರೊಂದಿಗೆ ಕೃನಾಲ್ ಪದಾರ್ಪಣೆ ಪಂದ್ಯದಲ್ಲೇ ವೇಗವಾಗಿ ಅರ್ಧಶತಕ ಸಿಡಿಸಿದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡ್ರು.
ಮೈದಾನದಲ್ಲೇ ಕಣ್ಣೀರು ಹಾಕಿದರು.. ಪಂದ್ಯದ ಗೆಲುವಿನ ನಂತರ ಪ್ರಸಾರಕರೊಂದಿಗಿನ ಮಾತುಯಕತೆಯಲ್ಲಿ ಬಾಗವಹಿಸಿದ್ದ ಕೃನಾಲ್ ಪಾಂಡ್ಯ, ತಮ್ಮ ದಿವಂಗತ ತಂದೆಯನ್ನ ನೆನೆದು ಮೈದಾನದಲ್ಲೇ ಕಣ್ಣೀರು ಹಾಕಿದರು. ಕೃನಾಲ್ ಅವರ ಈ ನೋವಿನ ಹಿಂದಿರುವ ರೋಚಕ ಕಥೆಯನ್ನು ಅವರ ದೀರ್ಘಕಾಲದ ತರಬೇತುದಾರ ಜಿತೇಂದ್ರ ಸಿಂಗ್ ಬಿಚ್ಚಿಟ್ಟಿದ್ದಾರೆ.
ಪ್ರಾಮಾಣಿಕವಾಗಿ ಹೇಳಿ, ಕ್ರುನಾಲ್ ಭಾರತದ ಪರ ಆಡುತ್ತಾನಾ? ಕೃನಾಲ್ ಕ್ರಿಕೆಟ್ ಅಭ್ಯಾಸ ಮಾಡುವಾಗ ಅವರ ತಂದೆ, ಪ್ರಾಮಾಣಿಕವಾಗಿ ಹೇಳಿ,ಕೃನಾಲ್ ಭಾರತ ಪರ ಆಡುತ್ತಾನಾ? ಖೇಲೆಗಾ ಯೆ? ’ಎಂದು ನನ್ನ ಬಳಿ ಪದೇ ಪದೇ ಕೇಳುತ್ತಿದ್ದರು. ಹಾರ್ದಿಕ್‌ಗಿಂತ ಹೆಚ್ಚಾಗಿ ಕೃನಾಲ್, ಟೀಂ ಇಂಡಿಯಾದಲ್ಲಿ ಆಡುತ್ತಾನೆ ಎಂದು ಅವರ ತಂದೆ ಹಿಮಾಂಶು ಭಾಯ್ ಕನಸು ಕಂಡಿದ್ದರು ಎಂಬುದು ಹಲವರಿಗೆ ತಿಳಿದಿಲ್ಲ. ಹೀಗಾಗಿ ತಂದೆಯ ಕನಸನ್ನ ಈಡೇರಿಸಿದ ಕೆಪಿಯ ಭಾವನಾತ್ಮಕ ಪ್ರತಿಕ್ರಿಯೆಗಳು ಎಲ್ಲಿಂದ ಬಂದವು ಎಂಬುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ ಎಂದರು. ಜೊತೆಗೆ ತಂದೆಯನ್ನು ತುಂಬಾ ಪ್ರೀತಿಸುತ್ತಿದ್ದ ಕೃನಾಲ್ ಅವರ ತಂದೆಯ ಹೆಸರನ್ನು ತನ್ನ ಬ್ಯಾಟ್‌ನಲ್ಲಿ ಬರೆದುಕೊಂಡಿರುವ ವಿಚಾರವನ್ನು ಬಹಿರಂಗಗೊಳಿಸಿದರು.
ಕೃನಾಲ್ ಅವರ ಆರಂಭದ ದಿನಗಳನ್ನು ನೆನೆದ ಕೋಚ್ ಹೇಳಿದ್ದು ಹೀಗೆ. ಕೆಲವು ಸಂದರ್ಭಗಳು ಕೃನಾಲ್ ಕನಸನ್ನು ಹಳಿ ತಪ್ಪಿಸಲು ಸಂಚು ರೂಪಿಸಿದವು. 2008 ರ ಸುಮಾರಿಗೆ, ಕೃನಾಲ್ ಅವರ ತಂದೆ ಮೊದಲ ಬಾರಿಗೆ ಹೃದಯಾಘಾತಕ್ಕೆ ಒಳಗಾದರು. ಹೀಗಾಗಿ 2014 ರವರೆಗೆ ಕೃನಾಲ್ ಅವರ ಕುಟುಂಬಕ್ಕೆ ಬರುತ್ತಿದ್ದ ಆದಾಯ ನಿಂತು ಹೋಯಿತು. ಇದರಿಂದ ಜೀವನ ನಿರ್ವಹಣಕ್ಕೆ ತೀರ ಸಂಕಷ್ಟ ಎದುರಾಯಿತು. ಹಿಮಾಂಶುಭಾಯ್ ಅವರ ಹೃದಯಾಘಾತದಿಂದ ಸಾಕಷ್ಟು ತೊಂದರೆಗಳು ಎದುರಾದವು. ಇದರಿಂದ ಅವರ ಬಳಿ ಇದ್ದ ಅಲ್ಪಸ್ವಲ್ಪ ಹಣ ಕಾಲಿಯಾಯಿತು.
This is all heart ??
A teary moment for ODI debutant @krunalpandya24 post his brilliant quick-fire half-century??@hardikpandya7 #TeamIndia #INDvENG @Paytm pic.twitter.com/w3x8pj18CD
— BCCI (@BCCI) March 23, 2021
ಹಿರಿಯ ಮಗನಾಗಿದ್ದರಿಂದ ಮನೆಯ ಜವಾಬ್ದಾರಿ ಹೊರಬೇಕಿತ್ತು.. ಕೃನಾಲ್ ದೇಶಕ್ಕಾಗಿ ಆಡಬೇಕೆನ್ನುವುದು ಹಿಮಾಂಶುಭಾಯ್ ಕನಸ್ಸಾಗಿತ್ತು. ಆಗ ಹಾರ್ದಿಕ್ ಇನ್ನೂ ಚಿಕ್ಕವನಾಗಿದ್ದ. ಹೀಗಾಗಿ ಹಣಕಾಸಿನ ತೊಂದರೆಯಿಂದ ಕ್ರುನಾಲ್ ವಿಚಲಿತರಾಗಿದ್ದರು. ಅವನು ಚಿಕ್ಕವನಾಗಿದ್ದರೂ ಹಿರಿಯ ಮಗನಾಗಿದ್ದರಿಂದ ಮನೆಯ ಜವಾಬ್ದಾರಿ ಹೊರಬೇಕಿತ್ತು. ವರ್ಷಗಳು ಉರುಳಿದಂತೆ, ವಿಶೇಷವಾಗಿ ಆರ್ಥಿಕ ತೊಂದರೆಗಳ ಸಮಯದಲ್ಲಿ, ಕೃನಾಲ್ ಆಟವನ್ನು ತ್ಯಜಿಸಿ ಮನೆಯ ನಿರ್ವಹಣೆಗಾಗಿ ಬೆರೆಡೆ ಕೆಲಸ ಮಾಡಲು ಯೋಚಿಸುತ್ತಿದ್ದರು. ಜೊತೆಗೆ ಕೃನಾಲ್ಗೆ ಸ್ವಯಂ ಅನುಮಾನ ಕೂಡ ಒಂದು ಅಡಚಣೆಯನ್ನು ಸೃಷ್ಟಿಸಿದೆ ಎಂದು ಕೋಚ್ ಭಾವಿಸುತ್ತಾರೆ. ಆದರೆ ಅವರ ಕಿರಿಯ ಸಹೋದರ ಹಾರ್ದಿಕ್ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದನ್ನು ನೋಡಿದ ಕೃನಾಲ್ ಮತ್ತೆ ಪ್ರೇರಣೆ ಪಡೆದರು.
ಕಿರಿಯ ಸಹೋದರನ ಯಶಸ್ಸು, ಕೃನಾಲ್ ಪಾಂಡ್ಯ ಅವರ ಆತ್ಮವಿಶ್ವಾಸ ಹೆಚ್ಚಿಸಿತು. ಇದರಿಂದ ಕೃನಾಲ್ ಮತ್ತೆ ಅಭ್ಯಾಸಕ್ಕೆ ಮರಳಿದರು. ಜೊತೆಗೆ ಇದು ಅಸಾಧ್ಯವಾದ ಕನಸು ಅಲ್ಲ ಎಂದು ಅವರು ಯೋಚಿಸಲು ಪ್ರಾರಂಭಿಸಿದರು. ಹಾರ್ದಿಕ್‌ಗೆ ಈ ಸಾಧನೆಯನ್ನು ಮಾಡಲು ಸಾಧ್ಯವಾದರೆ, ನಾನು ಕೂಡ ಅದನ್ನು ಮಾಡೇ ತೀರುತ್ತೇನೆ ಎಂಬ ಆಲೋಚನೆಗಳು ಕ್ರುನಾಲ್ಗೆ ಸಹಾಯ ಮಾಡಿದವು. ಆಡದ ಮೇಲಿದ್ದ ಕೃನಾಲ್ ಅವರ ಶ್ರದ್ಧೆಯಿಂದ ಅವರು U-23 ವಯಸ್ಸಿನ ಪಂದ್ಯಾವಳಿಯ ಮೂಲಕ ಅವರು ಕ್ರಿಕೆಟ್ಗೆ ಮರಳಿದರು.
ಅದು ನನ್ನ ಮತ್ತು ನಿನ್ನ ತಂದೆಯ ಕನಸಾಗಿದೆ.. ಒಮ್ಮೆ ನಾನು ಕೃನಾಲ್ ಪಾಂಡ್ಯ ಅವರ ಮನೆಯಲ್ಲಿ ಭೋಜನಾ ಕೂಟದಲ್ಲಿ ಭಾಗವಿಹಿಸಿದ್ದೆ. ಆ ಸಮಯದಲ್ಲಿ ಅವರ ಕುಟುಂಬಸ್ಥರೆಲ್ಲಾ ಅಲ್ಲಿಯೇ ಇದ್ದರು. ಅಷ್ಟೋತ್ತಿಗಾಗಲೇ ಟೀಂ ಇಂಡಿಯಾದ ಟಿ20 ಕ್ರಿಕೆಟ್ ತಂಡಕ್ಕೆ ಕೃನಾಲ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಒಂದೇ ಒಂದು ಪಂದ್ಯವನ್ನು ಆಡಲು ಅವಕಾಶ ನೀಡಿರಲಿಲ್ಲ. ಇದರಿಂದ ಬೇಸರಕ್ಕೊಳಗಾಗಿದ್ದ ಕೃನಾಲ್ಗೆ ಕೊಂಚ ಆತ್ಮ ವಿಶ್ವಾಸ ತುಂಬಿದ್ದೆ. ಕೃನಾಲ್, ನೀನು ಐಪಿಎಲ್‌ನಲ್ಲಿ ಆಡುತ್ತಿದ್ದೀಯಾ. ಆದರೆ ಅದು ಸಾಕಾಗುವುದಿಲ್ಲ. ಬದಲಿಗೆ ನೀನು ಟೀಂ ಇಂಡಿಯಾದ ಏಕದಿನ ಪಂದ್ಯಾವಳಿಯ ತಂಡದಲ್ಲಿ ಆಡಬೇಕು. ಅದು ನನ್ನ ಮತ್ತು ನಿನ್ನ ತಂದೆಯ ಕನಸಾಗಿದೆ. ನೀನು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದು ಹಲವು ಜನರಿಗೆ ನಿಮ್ಮ ಮೇಲಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಬೇಕಿದೆ ಎಂದು ಆತ್ಮ ವಿಶ್ವಾಸ ತುಂಬಿದೆ.
ನನ್ನ ಮಾತುಗಳನ್ನು ಗಂಭೀರವಾಗಿ ತೆಗೆದುಕೊಂಡ ಕ್ರುನಾಲ್, ಮತ್ತೆ ಭಾರತಕ್ಕಾಗಿ ಆಡುವುದಾಗಿ ಭರವಸೆ ನೀಡಿದರು. ಆ ಹೊತ್ತಿಗೆ ಕೃನಾಲ್ ಆಟದ ಬಗ್ಗೆ ತುಂಬಾ ಗಂಭೀರವಾಗಿದ್ದರು ಮತ್ತು ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಆದರೆ ಕಳೆದ ಬಾರಿಯ ಅಂಡರ್ 23 ವಯಸ್ಸಿವರ ಪಂದ್ಯಾವಳಿಯಲ್ಲಿ ಕೃನಾಲ್ ಅವರ ಪ್ರದರ್ಶನ ಅಷ್ಟೇನೂ ಉತ್ತಮವಾಗಿರಲಿಲ್ಲ. ಇದರಿಂದ ಅವರನ್ನು ತಂಡದಿಂದ ಕೈಬೀಡುವ ಸುದ್ದಿಗಳು ಬರಲಾರಂಭಿಸಿದವು. ನಾನು ಇದನ್ನು ಪದೇ ಪದೇ ಕ್ರುನಾಲ್ಗೆ ಹೇಳುತ್ತಾ ಬಂದೆ. ಕೃನಾಲ್ ಭವಿಷ್ಯದ ಬಗ್ಗೆ ತುಂಬಾ ಕನಸು ಕಂಡಿದ್ದ ಅವರ ತಂದೆ ಹಿಮಾಂಶುಭಾಯ್, ಕೃನಾಲ್ ಅವರ ಸಂಪೂರ್ಣ ಜವಾಬ್ದಾರಿಯನ್ನು ನನಗೆ ವಹಿಸಿದರು. ಜೊತೆಗೆ ಆಗಾಗ ನನ್ನ ಬಳಿ, ಕೆಪಿಗೆ ಕ್ರಿಕೆಟ್ನಲ್ಲಿ ಭವಿಷ್ಯ ಇದ್ಯಾ ಎಂದು ಕೇಳುತ್ತಿದ್ದರು. ಆ ವೇಳೆ ನಾನು, ಕೆಪಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದಾನೆ. ಜೊತೆಗೆ ಬೌಲಿಂಗ್ನಲ್ಲಿ ಬಾಲನ್ನು ಉತ್ತಮವಾಗಿ ಸ್ವಿಂಗ್ ಮಾಡುತ್ತಿದ್ದಾನೆ. ಬ್ಯಾಟಿಂಗ್ನಲ್ಲಿ ಉತ್ತಮ ಫಾರ್ಮ್ ಕಂಡುಕೊಳ್ಳುತ್ತಿದ್ದಾನೆ ಎಂದು ಅವರಿಗೆ ಧೈರ್ಯ ಹೇಳುತ್ತಿದ್ದೆ ಎಂಬುದನ್ನು ನೆನೆಪಿಸಿಕೊಂಡಿದ್ದಾರೆ.
Century stand ✅Half centuries for @klrahul11 & @krunalpandya24 ✅300+ on the board ✅
Brilliant batting display from #TeamIndia as they post 317/5 in 50 overs. @Paytm #INDvENG pic.twitter.com/9iU3lmZQBz
— BCCI (@BCCI) March 23, 2021
ಇದನ್ನೂ ಓದಿ:Krunal Pandya: ಮೊದಲ ಪಂದ್ಯದಲ್ಲೇ ಹೊಸ ದಾಖಲೆ ಬರೆದ ಕೃನಾಲ್ ಪಾಂಡ್ಯ ಭಾವುಕರಾದ ವಿಡಿಯೋ ವೈರಲ್
Published On - 11:43 am, Wed, 24 March 21