Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England: ಟೀಂ ಇಂಡಿಯಾದಲ್ಲಿ ಕನ್ನಡಿಗನ ಕಮಾಲ್​.. ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಪ್ರಸಿದ್ಧ್ ಕೃಷ್ಣ!

India vs England: 8.1 ಓವರ್‌ಗಳಲ್ಲಿ ಪ್ರಸಿದ್ಧ್ ಕೃಷ್ಣ 54 ರನ್ ನೀಡಿ 4 ವಿಕೆಟ್ ಪಡೆದರು. ಏಕದಿನ ಚೊಚ್ಚಲ ಪಂದ್ಯದಲ್ಲಿ 4 ವಿಕೆಟ್ ಪಡೆದ ಮೊದಲ ಭಾರತೀಯ ಪುರುಷ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

India vs England: ಟೀಂ ಇಂಡಿಯಾದಲ್ಲಿ ಕನ್ನಡಿಗನ ಕಮಾಲ್​.. ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಪ್ರಸಿದ್ಧ್ ಕೃಷ್ಣ!
ಪ್ರಸಿದ್ಧ್ ಕೃಷ್ಣ
Follow us
ಪೃಥ್ವಿಶಂಕರ
|

Updated on:Mar 24, 2021 | 1:42 PM

ಕಳೆದ ಬಾರಿಯ ಆಸ್ಟ್ರೇಲಿಯಾ ಪ್ರವಾಸದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಉದಯೋನ್ಮುಖ ಆಟಗಾರರಾದ ಶುಬ್ಮನ್ ಗಿಲ್ ಮತ್ತು ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾ ಪರ ಚೊಚ್ಚಲ ಪಂದ್ಯ ಆಡಿದರು.ಅಂದಿನಿಂದ ಇಂದಿನವರೆಗು, ಅಂದರೆ ಮಾರ್ಚ್ 23 ರಂದು ಪುಣೆಯಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದವರೆಗೆ ಅನೇಕ ಆಟಗಾರರು ಭಾರತೀಯ ತಂಡದಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಅವರೆಲ್ಲರಲ್ಲೂ ಒಂದು ವಿಷಯ ಬಹಳ ವಿಶೇಷವಾಗಿದೆ. ಅದೆನೆಂದರೆ, ಅದು ಅವರ ಕಾರ್ಯಕ್ಷಮತೆಯಾಗಿದೆ. ಸಿರಾಜ್-ಶುಬ್ಮನ್ ಅಥವಾ ಟಿ ನಟರಾಜನ್-ವಾಷಿಂಗ್ಟನ್ ಸುಂದರ್ ಅಥವಾ ಅಕ್ಷರ್ ಪಟೇಲ್-ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಯಾರೇ ಇರಲಿ, ಈ ಎಲ್ಲ ಆಟಗಾರರು ತಮ್ಮ ಚೊಚ್ಚಲ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರತಕ್ಕೆ ಅನೇಕ ವಿಜಯಗಳನ್ನು ನೀಡಿದರು. ಈಗ ಕನ್ನಡಿಗ ಪ್ರಸಿದ್ಧ್ ಕೃಷ್ಣ ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಕರ್ನಾಟಕ ವೇಗದ ಬೌಲರ್ ಚೊಚ್ಚಲ ಪಂದ್ಯದಲ್ಲೇ ದಾಖಲೆಯನ್ನು ಮಾಡಿದ್ದು, ಟೀಂ ಇಂಡಿಯಾದ ಗೆಲುವಿಗೆ ನೆರವಾಗಿದ್ದಾರೆ.

ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರಿಗೆ ಇದು ವಿಶೇಷ ಪಂದ್ಯಾವಳಿ ಮಾರ್ಚ್ 23 ರ ಮಂಗಳವಾರ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು 66 ರನ್‌ಗಳಿಂದ ಸೋಲಿಸಿತು. ಟೀಮ್ ಇಂಡಿಯಾದ ಈ ಗೆಲುವಿಗೆ ಅನೇಕ ಆಟಗಾರರು ಕೊಡುಗೆ ನೀಡಿದ್ದರು, ಆದರೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರಿಗೆ ಇದು ವಿಶೇಷ ಪಂದ್ಯಾವಳಿಯಾಗಿದೆ. ಇಂಗ್ಲಿಷ್ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ನೀಡಲು ತನ್ನ ಉದ್ದ ಮತ್ತು ವೇಗದ ಲಾಭವನ್ನು ಪಡೆದುಕೊಳ್ಳಲು 25 ವರ್ಷದ ವೇಗದ ಬೌಲರ್‌ನನ್ನು ಟೀಮ್ ಇಂಡಿಯಾದಲ್ಲಿ ಸೇರಿಸಿಕೊಳ್ಳಲಾಯಿತು. ಇದನ್ನು ಸದುಪಯೋಗ ಮಾಡಿಕೊಂಡ ಪ್ರಸಿದ್ಧ್ ಚೊಚ್ಚಲ ಪಂದ್ಯದಲ್ಲೇ 4 ವಿಕೆಟ್​ ಪಡೆದು ಮಿಂಚಿದರು.

ಬೈರ್‌ಸ್ಟೋವ್ ಎದುರು ಮಂಕಾಗಿದ್ದ ಪ್ರಸಿದ್ಧ್ ಪ್ರಸಿದ್ಧ್ ಕೃಷ್ಣ ತನ್ನ ಬೌಲಿಂಗ್​ನಲ್ಲಿ ವೇಗ ಮತ್ತು ಬೌನ್ಸ್ ಎರಡನ್ನೂ ಹೊಂದಿದ್ದಾರೆ. ಆದರೆ ಆರಂಭಿಕ ಓವರ್‌ಗಳಲ್ಲಿ ಜಾನಿ ಬೈರ್‌ಸ್ಟೋವ್ ಮತ್ತು ಜೇಸನ್ ರಾಯ್ ಸಾಕಷ್ಟು ರನ್ ಗಳಿಸಿದರು. ನಂತರ ಬೈರ್‌ಸ್ಟೋವ್ ಒಂದೇ ಓವರ್‌ನಲ್ಲಿ 22 ರನ್ ಗಳಿಸಿದರು. ಇಲ್ಲಿಂದ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಕೇವಲ ಭುವನೇಶ್ವರ ಹೊರತುಪಡಿಸಿ ಪ್ರತಿಯೊಬ್ಬ ಭಾರತೀಯ ಬೌಲರ್‌ನನ್ನು ಸರಿಯಾಗಿಯೇ ದಂಡಿಸಿದರು. ಕೇವಲ 14 ಓವರ್‌ಗಳಲ್ಲಿ ಇಂಗ್ಲೆಂಡ್ ವಿಕೆಟ್ ಕಳೆದುಕೊಳ್ಳದೆ 131 ರನ್ ಗಳಿಸಿತ್ತು.

ನಂತರ ನಾಯಕ ವಿರಾಟ್ ಕೊಹ್ಲಿ ಕೃಷ್ಣನನ್ನು ವಿಕೆಟ್ ಹುಡುಕಿಕೊಡುವ ನಿರೀಕ್ಷೆಯಲ್ಲಿ ದಾಳಿಗಿಳಿಸಿದರು. ಆದರೆ ಮೊದಲ ಎಸೆತದಲ್ಲಿ ಪ್ರಸಿದ್ಧ್ ನಾಲ್ಕು ರನ್ ನೀಡಿದರು. ನಂತರದ ಎಸೆತದಲ್ಲಿ ಟೀಂ ಇಂಡಿಯಾಕ್ಕೆ ಮೊದಲ ಯಶಸ್ಸು ತಂದುಕೊಟ್ಟ ಪ್ರಸಿದ್ಧ್ ರಾಯ್ ಅವರನ್ನು ಬಲಿಪಡೆದರು. ಇಲ್ಲಿಂದ ಭಾರತದ ಪಂದ್ಯಕ್ಕೆ ವಾಪಾಸಾತಿ ಮಾಡಿತು. ಕೃಷ್ಣ ಮುಂದಿನ ಓವರ್​ನಲ್ಲಿ ಬೆನ್ ಸ್ಟೋಕ್ಸ್ ಎದುರು ಕೇವಲ 1 ರನ್ ನೀಡಿದರು.

ಕೊಹ್ಲಿ ನಿರೀಕ್ಷೆಯನ್ನು ಹುಸಿಗೊಳಿಸದ ಪ್ರಸಿದ್ಧ್ ಇದರ ನಂತರ, ಬಹಳ ಸಮಯದ ನಂತರ ಮತ್ತೆ ಮೊಯಿನ್ ಅಲಿ ಮತ್ತು ಸ್ಯಾಮ್ ಬಿಲ್ಲಿಂಗ್ಸ್ ನಡುವೆ ಪಾಲುದಾರಿಕೆ ಉಂಟಾಯಿತು. ಮತ್ತೆ ಕೊಹ್ಲಿ, ಕೃಷ್ಣನನ್ನು ಬೌಲಿಂಗ್ ಮಾಡಲು ಹೇಳಿದರು. ಕೊಹ್ಲಿ ನಿರೀಕ್ಷೆಯನ್ನು ಹುಸಿಗೊಳಿಸದ ಪ್ರಸಿದ್ಧ್ ಮೊದಲ ಎಸೆತದಲ್ಲೇ ಬಿಲ್ಲಿಂಗ್ಸ್ ವಿಕೆಟ್ ಪಡೆದರು. ಕೃಷ್ಣ ಇಂಗ್ಲೆಂಡ್‌ನ ಇನ್ನಿಂಗ್ಸ್‌ನ ಕೊನೆಯ ವಿಕೆಟ್ ತೆಗೆದುಕೊಂಡು ತಂಡವನ್ನು 66 ರನ್‌ಗಳಿಂದ ಗೆಲ್ಲುವಂತೆ ಮಾಡಿದರು.

ಅವರ 8.1 ಓವರ್‌ಗಳಲ್ಲಿ ಪ್ರಸಿದ್ಧ್ ಕೃಷ್ಣ 54 ರನ್ ನೀಡಿ 4 ವಿಕೆಟ್ ಪಡೆದರು. ಇದರೊಂದಿಗೆ ಅವರು ಭಾರತೀಯ ಪುರುಷರ ಕ್ರಿಕೆಟ್‌ನಲ್ಲಿ ಹೊಸ ದಾಖಲೆಯನ್ನು ಮಾಡಿದರು. ಏಕದಿನ ಚೊಚ್ಚಲ ಪಂದ್ಯದಲ್ಲಿ 4 ವಿಕೆಟ್ ಪಡೆದ ಮೊದಲ ಭಾರತೀಯ ಪುರುಷ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪ್ರಸಿದ್ಧ್​ ನಂತರ ಟೀಂ ಇಂಡಿಯಾದ 16 ಬೌಲರ್‌ಗಳು ತಮ್ಮ ಚೊಚ್ಚಲ ಪಂದ್ಯದಲ್ಲಿ 3 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರು. ಇದರಲ್ಲಿ ಭಗವತ್ ಚಂದ್ರಶೇಖರ್, ದಿಲೀಪ್ ದೋಶಿ ಮತ್ತು ಹಾರ್ದಿಕ್ ಪಾಂಡ್ಯ ಸಹ ಸೇರಿದ್ದಾರೆ.

ಕ್ರುನಾಲ್-ಶಾರ್ದುಲ್ ಕೂಡ ಸ್ಟಾರ್ ಆದರು ಪ್ರಸಿದ್ಧ್ ಅಲ್ಲದೆ, ಟೀಮ್ ಇಂಡಿಯಾ ಪರ ಈ ಪಂದ್ಯದ ದಿಕ್ಕನ್ನು ಬದಲಿಸಿದವರಲ್ಲಿ ಮತ್ತೊಬ್ಬ ಆಟಗಾರ ಕ್ರುನಾಲ್ ಪಾಂಡ್ಯ ಕೂಡ ಒಬ್ಬರು. ಕ್ರುನಾಲ್ ಈಗಾಗಲೇ ಟೀಮ್ ಇಂಡಿಯಾ ಪರ ಟಿ 20 ಪಂದ್ಯಗಳನ್ನು ಆಡಿದ್ದಾರೆ, ಆದರೆ ಇದು ಏಕದಿನ ಪಂದ್ಯಗಳಲ್ಲಿ ಅವರ ಮೊದಲ ಪಂದ್ಯವಾಗಿದೆ. ಕ್ರುನಾಲ್ ಕೇವಲ 26 ಎಸೆತಗಳಲ್ಲಿ ಅರ್ಧಶತಕದೊಂದಿಗೆ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದರು ಮತ್ತು ತಂಡವನ್ನು 317 ಸ್ಕೋರ್‌ಗೆ ತಂದರು. ಕ್ರುನಾಲ್ ಅವರ ಹೊರತಾಗಿ, ಶಾರ್ದುಲ್ ಠಾಕೂರ್ ಕೂಡ ಮಧ್ಯಮ ಓವರ್‌ಗಳಲ್ಲಿ ಪಂದ್ಯದ ದಿಕ್ಕನ್ನು ಬದಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಪ್ರಸಿದ್ಧ್ ನೀಡಿದ 2 ಯಶಸ್ಸುಗಳ ನಂತರ, ಕ್ರುನಾಲ್ 2 ಓವರ್‌ಗಳಲ್ಲಿ 3 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತವನ್ನು ಸಂಪೂರ್ಣವಾಗಿ ಪಂದ್ಯಕ್ಕೆ ಮರಳಿಸಿದರು.

ಇದನ್ನೂ ಓದಿ:India vs England: ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ಪ್ರಸಿದ್ಧ್​ ಕೃಷ್ಣ.. ದೇಶಿ ಕ್ರಿಕೆಟ್​ನಲ್ಲಿ ಕನ್ನಡಿಗನ ಸಾಧನೆ ಹೀಗಿದೆ!

Published On - 1:42 pm, Wed, 24 March 21

ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ