India vs New Zealand, WTC Final 2021, Day 1: ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿ; ಮೊದಲ ದಿನದ ಆಟ ರದ್ದು!
India vs New Zealand: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಕದನಕ್ಕೆ ವರುಣನ ಅಡ್ಡಿ. ಮಳೆಯಿಂದಾಗಿ ಟಾಸ್ ವಿಳಂಬ. ಮೊದಲ ಸೆಷನ್ ರದ್ದು.
ಸೌತಾಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯವನ್ನು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಇಂದು (ಜೂನ್ 18) ಆರಂಭಿಸಬೇಕಿತ್ತು. ಆದರೆ, ಬಹಳ ಕುತೂಹಲ ಮೂಡಿಸಿದ್ದ ಆಟಕ್ಕೆ ಮೊದಲ ದಿನವೇ ವರುಣ ಅಡ್ಡಿಪಡಿಸಿದ್ದಾನೆ. ಟಾಸ್ಗೂ ಮೊದಲು ಮೊದಲ ಸೆಷನ್ ರದ್ದುಗೊಳಿಸುವ ನಿರ್ಧಾರ ಕೈಗೊಳ್ಳುವಂತಾಗಿತ್ತು. 2.30ಕ್ಕೆ ಆರಂಭವಾಗಬೇಕಿದ್ದ ಪಂದ್ಯ ಮಳೆಯ ಕಾರಣದಿಂದ ತಡವಾಗಿ ಆರಂಭವಾಗಬೇಕಿತ್ತು. ಆದರೆ, ಮ್ಯಾಚ್ನ ಮೊದಲ ಸೆಷನ್ ರದ್ದುಗೊಳಿಸಲಾಗಿತ್ತು. ಇದೀಗ, ಇನ್ನೂ ಮಳೆ ಕಡಿಮೆ ಆಗಿರದ ಕಾರಣ ಮೊದಲ ದಿನದಾಟವನ್ನೇ ರದ್ದುಗೊಳಿಸಲಾಗಿದೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್, ನಾಯಕರಾಗಿ ತಮ್ಮ ಮೊದಲ ಐಸಿಸಿ ಟ್ರೋಫಿ ಆಡುತ್ತಿದ್ದಾರೆ. ಆದರೆ, ಸೌತಾಂಪ್ಟನ್ನ ಹವಾಮಾನ ಆಡಲು ಅವಕಾಶ ಮಾಡಿಕೊಡುತ್ತಿಲ್ಲ. ಹವಾಮಾನ ವರದಿ ನೋಡಿದರೂ ಪಂದ್ಯಕ್ಕೆ ಸೂಕ್ತ ಅವಕಾಶ ಮಾಡಿಕೊಡುವಂತೆ ಕಾಣಿಸುತ್ತಿಲ್ಲ. ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಮುಂದೇನಾಗುತ್ತೆ ಎಂದು ಕಾದು ನೋಡಬೇಕಿದೆ!
ಪಂದ್ಯದ ಲೈವ್ ಅಪ್ಡೇಟ್ಗಳಿಗಾಗಿ ಈ ಕೆಳಗೆ ಓದಿರಿ.
LIVE NEWS & UPDATES
-
ಮೊದಲ ದಿನದಾಟ ರದ್ದು
ಭಾರತ- ನ್ಯೂಜಿಲೆಂಡ್ ಮೊದಲ ದಿನದಾಟ ರದ್ದಾಗಿದೆ. ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಪಂದ್ಯ ನಾಳೆ (ಜೂನ್ 19) ಆರಂಭವಾಗಲಿದೆ.
UPDATE – Unfortunately, play on Day 1 has been called off due to rains. 10.30 AM local time start tomorrow.#WTC21
— BCCI (@BCCI) June 18, 2021
-
ಭಾರತ- ನ್ಯೂಜಿಲೆಂಡ್ ಪಂದ್ಯಕ್ಕೆ ಮಳೆ ಅಡ್ಡಿ
ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಐಸಿಸಿ ವಿಶ್ವ ಕ್ರಿಕೆಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಟಾಸ್ಗೂ ಮೊದಲೇ ಮಳೆ ಶುರುವಾಗಿದ್ದು, ಪಂದ್ಯದ ಆರಂಭಕ್ಕೆ ಅಡ್ಡಿ ಉಂಟಾಗಿತ್ತು. ಹಾಗಾಗಿ, ಮೊದಲ ಸೆಷನ್ ರದ್ದುಗೊಳಿಸಲಾಗಿತ್ತು. ಇದೀಗ, ಕ್ರಿಕ್ಬಜ್ ವರದಿ ಮಾಡಿರುವಂತೆ ಮಳೆ ಇನ್ನೂ ಕಡಿಮೆ ಆಗಿಲ್ಲ. ಮೈದಾನದಲ್ಲಿ ಆಟ ಶುರುವಾಗದೆ, ಮಳೆಯಿಂದಾಗಿ ನಿರಾಸೆ ಉಂಟಾಗಿದೆ.
-
ಮೊದಲ ಸೆಷನ್ಗೆ ಮಳೆ ಅಡ್ಡಿ
ಸೌತಾಂಪ್ಟನ್ನ ಹವಾಮಾನ ಆಡಲು ಅವಕಾಶ ಮಾಡಿಕೊಡುತ್ತಿಲ್ಲ. ಹವಾಮಾನ ವರದಿ ನೋಡಿದರೂ ಪಂದ್ಯಕ್ಕೆ ಸೂಕ್ತ ಅವಕಾಶ ಮಾಡಿಕೊಡುವಂತೆ ಕಾಣಿಸುತ್ತಿಲ್ಲ. ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಮುಂದೇನಾಗುತ್ತೆ ಎಂದು ಕಾದು ನೋಡಬೇಕು..
Good morning from Southampton. We are just over an hour away from the scheduled start of play but It continues to drizzle here. The match officials are on the field now. ☔ #WTC21 pic.twitter.com/Kl77pJIJLo
— BCCI (@BCCI) June 18, 2021
ಕಳೆದ ಐದು ಟೆಸ್ಟ್ ಪಂದ್ಯಗಳಲ್ಲಿ ನ್ಯೂಜಿಲೆಂಡ್
ಪಾಕಿಸ್ತಾನ ವಿರುದ್ಧ 176 ರನ್ ಹಾಗೂ ಇನ್ನಿಂಗ್ಸ್ ವಿಜಯ ಪಾಕಿಸ್ತಾನ ವಿರುದ್ಧ 101 ರನ್ಗಳ ಜಯ ವೆಸ್ಟ್ ಇಂಡೀಸ್ ವಿರುದ್ಧ 12 ರನ್ ಹಾಗೂ ಇನ್ನಿಂಗ್ಸ್ ಗೆಲುವು ವೆಸ್ಟ್ ಇಂಡೀಸ್ ವಿರುದ್ಧ 134 ರನ್ ಹಾಗೂ ಇನ್ನಿಂಗ್ಸ್ ಜಯ ಭಾರತದ ವಿರುದ್ಧ 7 ವಿಕೆಟ್ ಗೆಲುವು
ಭಾರತ ತಂಡಕ್ಕೆ ಶುಭ ಹಾರೈಸಿದ ಹಾರ್ದಿಕ್ ಪಾಂಡ್ಯ
ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಆಡುತ್ತಿರುವ ಭಾರತ ತಂಡಕ್ಕೆ ಹಾರ್ದಿಕ್ ಪಾಂಡ್ಯ ಶುಭ ಹಾರೈಸಿದ್ದಾರೆ. ಕಪ್ ಗೆದ್ದು ಬನ್ನಿ ಎಂದು ಟ್ವಿಟರ್ ಮೂಲಕ ಆಶಯ ವ್ಯಕ್ತಪಡಿಸಿದ್ದಾರೆ.
One final Test awaits boys! Bring the cup home ??? @BCCI pic.twitter.com/vkgCOamazh
— hardik pandya (@hardikpandya7) June 18, 2021
ಕಳೆದ ಐದು ಟೆಸ್ಟ್ ಪಂದ್ಯಗಳಲ್ಲಿ ಭಾರತ
ಇಂಗ್ಲೆಂಡ್ ವಿರುದ್ಧ 25 ರನ್ ಹಾಗೂ ಇನ್ನಿಂಗ್ಸ್ ಗೆಲುವು ಇಂಗ್ಲೆಂಡ್ ವಿರುದ್ಧ 10 ವಿಕೆಟ್ ವಿಜಯ ಇಂಗ್ಲೆಂಡ್ ವಿರುದ್ಧ 317 ರನ್ಗಳ ಜಯ ಇಂಗ್ಲೆಂಡ್ ವಿರುದ್ಧ 227 ರನ್ಗಳ ಸೋಲು ಆಸ್ಟ್ರೇಲಿಯಾ ವಿರುದ್ಧ 3 ವಿಕೆಟ್ ಗೆಲುವು
ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್
ಭಾರತ ಮತ್ತು ನ್ಯೂಜಿಲೆಂಡ್ ತಂಡದ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ಭಾರತ ತಂಡ ಹೀಗಿದೆ: ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ
Published On - Jun 18,2021 7:32 PM