IND vs SL: ಅವಕಾಶ ನೀಡದೆ ಅವಮಾನ.. 2 ವರ್ಷಗಳ ವನವಾಸ ಅಂತ್ಯ: ಲಂಕಾ ವಿರುದ್ಧ ಮಿಂಚುತ್ತಿರುವ ಕುಲ್ದೀಪ್- ಚಹಲ್

IND vs SL: ಚಹಲ್ ತಮ್ಮ ಮೊದಲ ಓವರ್​ನ ಮೊದಲ ಎಸೆತದಲ್ಲೇ ವಿಕೆಟ್ ಪಡೆದರೆ, ಕುಲ್ದೀಪ್ 2 ವಿಕೆಟ್ ಪಡೆದು ತಮ್ಮ ಬೌಲಿಂಗ್ ಮುಂದುವರೆಸಿದ್ದಾರೆ.

IND vs SL: ಅವಕಾಶ ನೀಡದೆ ಅವಮಾನ.. 2 ವರ್ಷಗಳ ವನವಾಸ ಅಂತ್ಯ: ಲಂಕಾ ವಿರುದ್ಧ ಮಿಂಚುತ್ತಿರುವ ಕುಲ್ದೀಪ್- ಚಹಲ್
ಯುಜ್ವೇಂದ್ರ ಚಹಲ್ ಮತ್ತು ಕುಲ್ದೀಪ್ ಯಾದವ್
Follow us
TV9 Web
| Updated By: ಪೃಥ್ವಿಶಂಕರ

Updated on: Jul 18, 2021 | 4:56 PM

ಶಿಖರ್ ಧವನ್ ನಾಯಕತ್ವದಲ್ಲಿ ಭಾರತ ತಂಡ ಭಾನುವಾರ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯನ್ನು ಪ್ರಾರಂಭಿಸಿದೆ. ಟಾಸ್‌ ಗೆದ್ದ ಶ್ರೀಲಂಕಾ ತಂಡ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಮತ್ತು ಮುಂಬೈ ಇಂಡಿಯನ್ಸ್ ತಾರೆ ಸೂರ್ಯ ಕುಮಾರ್ ಯಾದವ್ ಅವರು ಭಾರತದ ಪರ ಈ ಪಂದ್ಯಕ್ಕೆ ಪಾದಾರ್ಪಣೆ ಮಾಡುವ ಅವಕಾಶ ಪಡೆದಿದ್ದಾರೆ. ಈ ಪಂದ್ಯದೊಂದಿಗೆ, ಟೀಮ್ ಇಂಡಿಯಾದ ‘ಕುಲ್-ಚ’ ಜೋಡಿ ಬಹಳ ಸಮಯದ ನಂತರ ತಂಡಕ್ಕೆ ಮರಳುತ್ತಿದೆ. ಚೀನಾಮಾನ್ ಬೌಲರ್ ಕುಲ್ದೀಪ್ ಯಾದವ್ ಮತ್ತು ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರಿಗೆ ಮೊದಲ ಏಕದಿನ ಪಂದ್ಯದ ಇಲೆವೆನ್‌ನಲ್ಲಿ ಅವಕಾಶ ನೀಡಲಾಗಿದೆ.

ವಿಕೆಟ್ ಪಡೆದು ಮಿಂಚಿದ ಕುಲ್-ಚ ಜೋಡಿ ಮಣಿಕಟ್ಟಿನ ಸ್ಪಿನ್ನರ್‌ಗಳ (wrist spinners) ಜೋಡಿಯನ್ನು ಭಾರತೀಯ ಅಭಿಮಾನಿಗಳು ಪ್ರೀತಿಯಿಂದ ‘ಕುಲ್-ಚ’ ಎಂದು ಕರೆಯುತ್ತಾರೆ. ಬಹಳ ಸಮಯದ ನಂತರ, ಇಬ್ಬರೂ ತಂಡದಲ್ಲಿ ಒಟ್ಟಿಗೆ ಮರಳಿದ್ದಾರೆ. ಟೀಮ್ ಇಂಡಿಯಾ ಪರ ಕೊಲಂಬೊದಲ್ಲಿ 2017 ರಲ್ಲಿ ಮೊದಲ ಬಾರಿಗೆ ಇಬ್ಬರೂ ಒಟ್ಟಿಗೆ ಆಡಿದರು. ಈ ಮೊದಲ ಪಂದ್ಯದಲ್ಲಿ ಆಯ್ಕೆಗಾರರ ನಂಬಿಕೆ ಉಳಿಸಿಕೊಂಡಿರುವ ಜೋಡಿ ಈ ಸುದ್ದಿ ಬರೆಯುವ ವೇಳೆಗೆ ವಿಕೆಟ್ ಪಡೆದು ಮಿಂಚುತ್ತಿದ್ದಾರೆ. ಚಹಲ್ ತಮ್ಮ ಮೊದಲ ಓವರ್​ನ ಮೊದಲ ಎಸೆತದಲ್ಲೇ ವಿಕೆಟ್ ಪಡೆದರೆ, ಕುಲ್ದೀಪ್ 2 ವಿಕೆಟ್ ಪಡೆದು ತಮ್ಮ ಬೌಲಿಂಗ್ ಮುಂದುವರೆಸಿದ್ದಾರೆ.

ಚಹಲ್ ಮತ್ತು ಕುಲ್ದೀಪ್ ಎರಡು ವರ್ಷಗಳ ನಂತರ ಒಟ್ಟಿಗೆ ಯುಜ್ವೇಂದ್ರ ಚಹಲ್ ಮತ್ತು ಕುಲ್ದೀಪ್ ಯಾದವ್ ಎರಡು ವರ್ಷಗಳ ನಂತರ ಒಟ್ಟಿಗೆ ಟೀಮ್ ಇಂಡಿಯಾ ಪರ ಆಡುತ್ತಿದ್ದಾರೆ. 2019 ರ ವಿಶ್ವಕಪ್‌ನಲ್ಲಿ ಕೊನೆಯ ಬಾರಿಗೆ ಇಬ್ಬರೂ ಒಟ್ಟಿಗೆ ಆಡಿದ್ದರು. ಲೀಗ್ ಸುತ್ತಿನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಇಬ್ಬರೂ ಆಡುವ ಇಲೆವೆನ್‌ನ ಭಾಗವಾಗಿದ್ದರು. ಅಂದಿನಿಂದ, ಟೀಮ್ ಇಂಡಿಯಾ ಅನೇಕ ಸರಣಿಗಳನ್ನು ಆಡಿದೆ ಆದರೆ ಈ ಇಬ್ಬರು ಒಟ್ಟಿಗೆ ಆಡಲು ಅವಕಾಶ ಸಿಗಲಿಲ್ಲ. ಇಬ್ಬರೂ ಇಲ್ಲಿಯವರೆಗೆ 34 ಏಕದಿನ ಪಂದ್ಯಗಳನ್ನು ಒಟ್ಟಿಗೆ ಆಡಿದ್ದಾರೆ. ಈ 34 ಪಂದ್ಯಗಳಲ್ಲಿ ಭಾರತ 24 ಜಯಗಳಿಸಿದೆ, ಒಂಬತ್ತು ಪಂದ್ಯದಲ್ಲಿ ಸೋತಿದೆ ಮತ್ತು ಒಂದು ಪಂದ್ಯವನ್ನು ಸಮಗೊಳಿಸಿದೆ. ಒಟ್ಟಾಗಿ 34 ಏಕದಿನ ಪಂದ್ಯಗಳಲ್ಲಿ 118 ವಿಕೆಟ್ ಪಡೆದಿದ್ದಾರೆ. ಈ 65 ವಿಕೆಟ್‌ಗಳಲ್ಲಿ ಕುಲ್ದೀಪ್ ಯಾದವ್ ಅವರ ಹೆಸರಿನಲ್ಲಿದ್ದರೆ ಯುಜ್ವೇಂದ್ರ ಚಹಲ್ 53 ವಿಕೆಟ್ ಪಡೆದಿದ್ದಾರೆ.

ಕುಲ್-ಚ ಜೋಡಿ ಭಾರತಕ್ಕೆ ಮುಖ್ಯ ಎಂದ ಧವನ್ ಪಂದ್ಯದ ಮೊದಲು, ಶಿಖರ್ ಧವನ್ ಈ ಜೋಡಿಯನ್ನು ಪ್ರವಾಸಕ್ಕೆ ಬಹಳ ಮುಖ್ಯ ಎಂದು ಬಣ್ಣಿಸಿದ್ದರು. ಯುಜ್ವೇಂದ್ರ ಚಹಲ್ ಮತ್ತು ಕುಲ್ದೀಪ್ ಯಾದವ್ ತಂಡಕ್ಕಾಗಿ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಈ ಸರಣಿಯಲ್ಲಿ ಇಬ್ಬರೂ ಅನೇಕ ವಿಕೆಟ್ಗಳನ್ನು ತೆಗೆದುಕೊಳ್ಳುತ್ತಾರೆ ಎಂದು ನನಗೆ ಖಚಿತವಾಗಿದೆ. ಮಣಿಕಟ್ಟಿನ ಸ್ಪಿನ್ನರ್ (wrist spinner) ಕುಲ್ದೀಪ್ ಏಕದಿನ ಪಂದ್ಯಗಳಲ್ಲಿ ಪ್ರಯಾಸಪಟ್ಟಿದ್ದಾರೆ. ಕಳೆದ 16 ತಿಂಗಳಲ್ಲಿ ಮೂರು ಏಕದಿನ ಪಂದ್ಯಗಳಲ್ಲಿ 29 ಓವರ್‌ಗಳಲ್ಲಿ 7.2 ದರದಲ್ಲಿ 209 ರನ್ ನೀಡಿದ್ದಾರೆ. ಕಳೆದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 10 ಓವರ್‌ಗಳಲ್ಲಿ 84 ರನ್ ನೀಡಿದ್ದರು.

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ