Thomas Cup 2022: ಬ್ಯಾಡ್ಮಿಂಟನ್​ನಲ್ಲಿ ಹೊಸ ಇತಿಹಾಸ: ಚೊಚ್ಚಲ ಬಾರಿಗೆ ಥಾಮಸ್ ಕಪ್ ಗೆದ್ದ ಭಾರತ

| Updated By: ಝಾಹಿರ್ ಯೂಸುಫ್

Updated on: May 15, 2022 | 4:26 PM

Thomas Cup 2022: ಕಿಡಂಬಿ ಶ್ರೀಕಾಂತ್ ಎರಡನೇ ಸಿಂಗಲ್ಸ್‌ನಲ್ಲಿ 21-15, 23-21 ಜೊನಾಟನ್ ಕ್ರಿಸ್ಟಿ ಅವರನ್ನು ಸೋಲಿಸಿ ಸ್ಪರ್ಧೆಯ ಇತಿಹಾಸದಲ್ಲಿ ಭಾರತದ ಚೊಚ್ಚಲ ಕಿರೀಟಕ್ಕೆ ಮುದ್ರೆಯೊತ್ತಿದರು.

Thomas Cup 2022: ಬ್ಯಾಡ್ಮಿಂಟನ್​ನಲ್ಲಿ ಹೊಸ ಇತಿಹಾಸ: ಚೊಚ್ಚಲ ಬಾರಿಗೆ ಥಾಮಸ್ ಕಪ್ ಗೆದ್ದ ಭಾರತ
India win first-ever Thomas Cup crown
Follow us on

ಭಾನುವಾರ ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ನಡೆದ ಪ್ರತಿಷ್ಠಿತ ಥಾಮಸ್ ಮತ್ತು ಉಬರ್ ಕಪ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ವೀರೋಚಿತ ಪ್ರಯತ್ನದಲ್ಲಿ 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾವನ್ನು 3-0 ಅಂತರದಿಂದ ಸೋಲಿಸಿ ಭಾರತದ ಪುರುಷರ ತಂಡ ಮೊದಲ ಬಾರಿಗೆ ಪ್ರಶಸ್ತಿ ಗೆದ್ದು ಹೊಸ ಇತಿಹಾಸ ನಿರ್ಮಿಸಿದೆ. ಟೂರ್ನಿಯ 73 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಭಾರತವು ಥಾಮಸ್ ಮತ್ತು ಉಬರ್ ಕಪ್‌ನ ಫೈನಲ್ ತಲುಪಿರಲಿಲ್ಲ. ಆದರೆ ಈ ಬಾರಿ ಭಾರತೀಯ ಪುರುಷರ ತಂಡ ಐತಿಹಾಸಿಕ ಗೆಲುವು ದಾಖಲಿಸಿ ಬ್ಯಾಡ್ಮಿಂಟನ್​ನಲ್ಲಿ ಹೊಸ ಚರಿತ್ರೆ ಬರೆದಿದೆ. ಈ ಮೂಲಕ  ಚೀನಾ, ಇಂಡೋನೇಷ್ಯಾ, ಜಪಾನ್, ಡೆನ್ಮಾರ್ಕ್ ನಂತರ ಥಾಮಸ್ ಕಪ್ ಗೆದ್ದ 6ನೇ ರಾಷ್ಟ್ರ ಎನಿಸಿಕೊಂಡಿದೆ.

ಲಕ್ಷ್ಯ ಸೇನ್,  ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಮತ್ತು ಕಿಡಂಬಿ ಶ್ರೀಕಾಂತ್ ಅವರು ಅದ್ಭುತ ಪ್ರದರ್ಶನ ನೀಡುವ ಮೂಲಕ ಹೊಸ ಇತಿಹಾಸ ಬರೆದಿದ್ದು, ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡವು ಇಂಡೋನೇಷ್ಯಾವನ್ನು 3-0 ಗೋಲುಗಳಿಂದ ಸೋಲಿಸಿ ಚೊಚ್ಚಲ ಬಾರಿಗೆ ಕಿರೀಟವನ್ನು ತನ್ನದಾಗಿಸಿಕೊಂಡಿದೆ.

ಕಿಡಂಬಿ ಶ್ರೀಕಾಂತ್ ಎರಡನೇ ಸಿಂಗಲ್ಸ್‌ನಲ್ಲಿ 21-15, 23-21 ಜೊನಾಟನ್ ಕ್ರಿಸ್ಟಿ ಅವರನ್ನು ಸೋಲಿಸಿ ಸ್ಪರ್ಧೆಯ ಇತಿಹಾಸದಲ್ಲಿ ಭಾರತದ ಚೊಚ್ಚಲ ಕಿರೀಟಕ್ಕೆ ಮುದ್ರೆಯೊತ್ತಿದರು. ಇದಕ್ಕೂ ಮೊದಲು, ಯುವ ಆಟಗಾರ ವಿಶ್ವದ ಐದನೇ ಶ್ರೇಯಾಂಕಿತ ಆಂಥೋನಿ ಸಿನಿಸುಕಾ ಗಿಂಟಿಂಗ್ ವಿರುದ್ಧ ಗೆಲುವು ದಾಖಲಿಸಿದ  ಲಕ್ಷ್ಯ ಸೇನ್ ಭಾರತಕ್ಕೆ ಅದ್ಭುತ ಆರಂಭ ಒದಗಿಸಿದ್ದರು.

ಇದನ್ನೂ ಓದಿ
Virat Kohli: ಕಳಪೆ ಫಾರ್ಮ್​ ನಡುವೆಯೂ 2 ದಾಖಲೆ ಬರೆದ ಕಿಂಗ್ ಕೊಹ್ಲಿ
IPL 2022: RCB ತಂಡದ ಸೋಲಿಗೆ ಇವರಿಬ್ಬರೇ ಕಾರಣ..!
IPL 2022: ಸೋಲುತ್ತೆ ನಿಜ, ಆದರೆ ಇದು?, LSG ಆಟಗಾರರ ವಿರುದ್ದ ಗಂಭೀರ್ ಗರಂ
IPL 2022: ಅಂದು ಲಯನ್ಸ್, ಇಂದು ಟೈಟನ್ಸ್: ಗುಜರಾತ್ ತಂಡದ ಫ್ಯಾನ್ಸ್​ಗೆ ಹೊಸ ಚಿಂತೆ ಶುರು..!

ಆ ಬಳಿಕ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ತಮ್ಮ ಕೌಶಲ್ಯ ಮತ್ತು ಅನುಭವದೊಂದಿಗೆ ಮೊಹಮ್ಮದ್ ಅಹ್ಸಾನ್ ಮತ್ತು ಕೆವಿನ್ ಸಂಜಯ ಸುಕಮುಲ್ಜೊ ಅವರನ್ನು ಸೋಲಿಸಿದರು. ಕಿಡಂಬಿ ಶ್ರೀಕಾಂತ್ ಅವರು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಜೊನಾಟನ್ ಕ್ರಿಸ್ಟಿ ಅವರನ್ನು 21-15 23-21 ರಿಂದ ಸೋಲಿಸುವ ಮೂಲಕ ಭಾರತಕ್ಕೆ ಮೊದಲ ಬಾರಿಗೆ ಥಾಮಸ್ ಕಪ್ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು.

 

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:33 pm, Sun, 15 May 22