AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup: 0,0,0,0.. 5 ಪಂದ್ಯಗಳಲ್ಲಿ 4 ಸೊನ್ನೆ ಸುತ್ತಿದ ಭಾರತದ ಆರಂಭಿಕರು

India's T20 World Cup 2026 Opener Crisis: 2026ರ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಗುಂಪು ಹಂತದಲ್ಲಿ ಅಜೇಯವಾಗಿ ಸೂಪರ್ 8 ತಲುಪಿದ್ದರೂ, ಆರಂಭಿಕರ ವೈಫಲ್ಯದ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಲೀಗ್ ಹಂತದಲ್ಲಿ ಅಭಿಷೇಕ್ ಶರ್ಮಾ ಪದೇ ಪದೇ ಶೂನ್ಯಕ್ಕೆ ಔಟಾದರೆ, ಸೂಪರ್ 8ರಲ್ಲಿ ಇಶಾನ್ ಕಿಶನ್ ಕೂಡ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಆತಂಕ ಸೃಷ್ಟಿಸಿದ್ದಾರೆ. ಆರಂಭಿಕರ ಈ ಕಳಪೆ ಫಾರ್ಮ್ ತಂಡಕ್ಕೆ ಸವಾಲಾಗಿದೆ.

ಪೃಥ್ವಿಶಂಕರ
|

Updated on: Feb 22, 2026 | 9:34 PM

Share
2026 ರ ಟಿ20 ವಿಶ್ವಕಪ್​ನ ಗುಂಪು ಹಂತದಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದಿದ್ದ ಟೀಂ ಇಂಡಿಯಾ ಅಜೇಯ ತಂಡವಾಗಿ ಸೂಪರ್ 8 ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಆದರೆ ಲೀಗ್ ಹಂತದಲ್ಲಿ ಆರಂಭವಾದ ಭಾರತದ ಆರಂಭಿಕರ ಸೊನ್ನೆ ಸುತ್ತುವ ಸಮಸ್ಯೆಗೆ ಸೂಪರ್ 8 ಸುತ್ತಿನಲ್ಲೂ ಪರಿಹಾರ ಸಿಕ್ಕಿಲ್ಲ. ಈ ಸುತ್ತಿನಲ್ಲೂ ಭಾರತದ ಆರಂಭಿಕ ಸೊನ್ನೆ ಸುತ್ತಿದ್ದಾನೆ.

1 / 5
ಲೀಗ್ ಹಂತದಲ್ಲಿ ಭಾರತ ಆಡಿದ 4 ಪಂದ್ಯಗಳಲ್ಲಿ ಆರಂಭಿಕ ಅಭಿಷೇಕ್ ಶರ್ಮಾ ತಂಡದ ಪರ ಮೂರು ಪಂದ್ಯಗಳಲ್ಲಿ ಇನ್ನಿಂಗ್ಸ್ ಆರಂಭಿಸಿದರು. ಆದರೆ ಈ ಮೂರು ಪಂದ್ಯಗಳಲ್ಲೂ ಅಭಿಷೇಕ್​ಗೆ ಖಾತೆ ತೆರೆಯಲು ಸಾಧ್ಯವಾಗಿರಲಿಲ್ಲ. ಆದರೆ ಅಭಿಷೇಕ್ ಕಳಪೆ ಫಾರ್ಮ್​ ಅನ್ನು ಇಶಾನ್ ಕಿಶನ್ ಅದ್ಭುತ ಬ್ಯಾಟಿಂಗ್‌ ಮಾಡುವ ಮೂಲಕ ಸರಿದೂಗಿಸುತ್ತಿದ್ದರು.

2 / 5
ಆದರೆ ಲೀಗ್ ಹಂತ ಮುಗಿದ ಬಳಿಕ ಸೂಪರ್ 8 ಹಂತ ಆರಂಭವಾಗಿದ್ದು, ಈ ಸುತ್ತಿನಲ್ಲಿ ಅಭಿಷೇಕ್ ಕೊನೆಗೂ ಖಾತೆ ತೆರೆದಿದ್ದಾರೆ. ಆದರೆ ಇಷ್ಟು ದಿನ ಅಭಿಷೇಕ್ ಬೆನ್ನು ಬಿತ್ತಿದ್ದ ಸೊನ್ನೆ ಸುತ್ತುವ ಪ್ರವೃತ್ತಿ ಇದೀಗ ಇಶಾನ್ ಕಿಶನ್ ಹೆಗಲೇರಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಸೂಪರ್ 8 ಪಂದ್ಯದಲ್ಲಿ ಇಶಾನ್ ಕಿಶನ್ ಶೂನ್ಯಕ್ಕೆ ಔಟಾದರು.

3 / 5
ಅಮೆರಿಕ ವಿರುದ್ಧದ ಮೊದಲ ಲೀಗ್ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದ್ದರು. ಆ ನಂತರ ನಡೆದಿದ್ದ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಆಡಿರಲಿಲ್ಲ. ಪಾಕಿಸ್ತಾನ ವಿರುದ್ಧದ ಮೂರನೇ ಪಂದ್ಯದಲ್ಲಿ ಮತ್ತೆ ಕಣಕ್ಕಿಳಿದಿದ್ದ ಅಭಿಷೇಕ್ 4 ಎಸೆತಗಳನ್ನು ಎದುರಿಸಿ ಸೊನ್ನೆ ಸುತ್ತಿದ್ದರು. ಆ ಬಳಿಕ ಕೊನೆಯ ಲೀಗ್ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧವೂ ಅಭಿಷೇಕ್ 3 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಔಟಾಗಿದ್ದರು.

4 / 5
ಆದರೆ ಲೀಗ್ ಹಂತದಲ್ಲಿ ಆಡಿದ್ದ ಎಲ್ಲಾ 4 ಪಂದ್ಯಗಳಲ್ಲಿ ಖಾತೆ ತೆರೆಯುವುದರ ಜೊತೆಗೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಇಶಾನ್ ಕಿಶನ್ ಭರ್ಜರಿ ಫಾರ್ಮ್​ನಲ್ಲಿದ್ದರು. ಹೀಗಾಗಿ ಸೂಪರ್ 8 ಸುತ್ತಿನಲ್ಲೂ ಅವರಿಂದ ಈ ಪ್ರದರ್ಶನವನ್ನು ನಿರೀಕ್ಷಿಸಲಾಗಿತ್ತು. ಆದರೆ ಕಿಶನ್ ಮೊದಲ ಸೂಪರ್ 8 ಪಂದ್ಯದಲ್ಲಿ 4 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಔಟಾದರು.

5 / 5
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ

ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು

ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ

ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ

ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್

ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!

ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್

ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ

‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ

ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ