ವಿಚ್ಛೇದನ ಮತ್ತು ಹೊಸ ಬದುಕು: ಭಾರತ ತಂಡದ ಈ 5 ಪ್ರಸಿದ್ಧ ಆಟಗಾರರು ಮದುವೆಯಾಗಿದ್ದು ವಿಚ್ಛೇದಿತರನ್ನು

ಭಾರತೀಯ ಕ್ರಿಕೆಟ್​ ರಂಗದಲ್ಲಿ ವಿಚ್ಛೇದಿತ ಮಹಿಳೆಯರೊಂದಿಗೆ ಬದುಕು ಹಂಚಿಕೊಂಡ ಕೆಲ ಪ್ರಮುಖ ಆಟಗಾರರಿದ್ದಾರೆ. ಪ್ರೀತಿಗೆ ಯಾವುದೇ ಕಟ್ಟುಪಾಡುಗಳು ಅಡ್ಡ ಬಾರದು ಎನ್ನುವುದಕ್ಕೆ ಈ ಕೆಳಗಿನ ಆಟಗಾರರೇ ಸಾಕ್ಷಿ.

ವಿಚ್ಛೇದನ ಮತ್ತು ಹೊಸ ಬದುಕು: ಭಾರತ ತಂಡದ ಈ 5 ಪ್ರಸಿದ್ಧ ಆಟಗಾರರು ಮದುವೆಯಾಗಿದ್ದು ವಿಚ್ಛೇದಿತರನ್ನು
ಮೊಹಮ್ಮದ್ ಶಮಿ ಹಾಗೂ ಪತ್ನಿ, ಶಿಖರ್ ಧವನ್ ಹಾಗೂ ಪತ್ನಿ
Edited By:

Updated on: Jun 08, 2021 | 12:21 PM

ಭಾರತೀಯ ಸಂಸ್ಕೃತಿಯಲ್ಲಿ ವಿವಾಹಕ್ಕೆ ಇಂದಿಗೂ ವಿಶೇಷ ಸ್ಥಾನಮಾನ ನೀಡಲಾಗುತ್ತದೆ. ವಿವಾಹವೆಂದರೆ ಪವಿತ್ರವೆಂದೂ, ಅದು ಬದುಕಿನ ಹೊಸ ಆಯಾಮವೆಂದೂ ಪರಿಗಣಿಸಲ್ಪಡುತ್ತದೆ. ಆದರೆ, ಅದೊಂದು ಕಾಲದಲ್ಲಿ ಮದುವೆಯಾದ ನಂತರ ಕಷ್ಟವೋ, ಸುಖವೋ ಹಣೆಬರಹದಲ್ಲಿ ಇದ್ದಂತೆ ಆಗಿದೆ ಎಂದು ಅನುಭವಿಸಿಕೊಂಡು ಹೋಗಬೇಕೇ ಹೊರತು ವೈವಾಹಿಕ ಜೀವನದಿಂದ ವಿಮುಖರಾಗಬಾರದು ಎನ್ನುವುದನ್ನು ಪರಿಪಾಲಿಸಲಾಗುತ್ತಿತ್ತು. ಈಗ ಕಾಲ, ಮನಸ್ಥಿತಿ ಬದಲಾದಂತೆ ಕಟ್ಟುಪಾಡುಗಳು ಸಡಿಲಗೊಂಡು, ಆಯ್ಕೆಯ ವಿಚಾರದಲ್ಲಿ ಒಂದಷ್ಟು ಬದಲಾವಣೆಗಳು ಕಾಣಿಸುತ್ತಿರುವುದಂತೂ ಸತ್ಯ.

ಈಗ ವಿಚ್ಛೇದನ ಎನ್ನುವುದು ವೈಯಕ್ತಿಕ ಆಯ್ಕೆ ಎನ್ನುವುದನ್ನು ಜನ ಒಪ್ಪಿಕೊಳ್ಳುವ ಮಟ್ಟಿಗೆ ಕಾಲ ತನ್ನನ್ನು ತಾನು ತೆರೆದುಕೊಂಡಿದೆ. ಹಾಗಾಗಿ ವಿಚ್ಛೇದನ ಪಡೆಯುವುದು ಅಥವಾ ವಿಚ್ಛೇದಿತರನ್ನು ವರಿಸುವುದು ಆಶ್ಚರ್ಯಕರ ಇಲ್ಲವೇ ಆಘಾತಕಾರಿ ಸಂಗತಿಯಾಗಿ ಉಳಿದಿಲ್ಲ. ಅಂದಹಾಗೆ ಭಾರತೀಯ ಕ್ರಿಕೆಟ್​ ರಂಗದಲ್ಲಿ ವಿಚ್ಛೇದಿತ ಮಹಿಳೆಯರೊಂದಿಗೆ ಬದುಕು ಹಂಚಿಕೊಂಡ ಕೆಲ ಪ್ರಮುಖ ಆಟಗಾರರಿದ್ದಾರೆ. ಪ್ರೀತಿಗೆ ಯಾವುದೇ ಕಟ್ಟುಪಾಡುಗಳು ಅಡ್ಡ ಬಾರದು ಎನ್ನುವುದಕ್ಕೆ ಈ ಕೆಳಗಿನ ಆಟಗಾರರೇ ಸಾಕ್ಷಿ.

ಶಿಖರ್ ಧವನ್: ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಶಿಖರ್​ ಧವನ್​ 2012ರಲ್ಲಿ ಆಯೇಶಾ ಮುಖರ್ಜಿ ಎಂಬುವವರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಆಯೇಶಾ ಮುಖರ್ಜಿ ವಯಸ್ಸಿನಲ್ಲಿ ಶಿಖರ್​ ಧವನ್​ಗಿಂತ 10 ವರ್ಷ ದೊಡ್ಡವರಾಗಿದ್ದು, ಮೊದಲ ವೈವಾಹಿಕ ಸಂಬಂಧವನ್ನು ಕಡಿದುಕೊಂಡು ಶಿಖರ್​ ಧವನ್​ ಅವರನ್ನು ವರಿಸುವಾಗ ಇಬ್ಬರು ಹೆಣ್ಣುಮಕ್ಕಳ ತಾಯಿ ಆಗಿದ್ದರು. ಇದೀಗ ಶಿಖರ್ ಮತ್ತು ಆಯೇಶಾ ಸಂತಸದಿಂದ ದಾಂಪತ್ಯ ಜೀವನ ಸಾಗಿಸುತ್ತಿದ್ದಾರೆ.

ಶಿಖರ್ ಧವನ್, ಆಯೇಶಾ ಮುಖರ್ಜಿ

ಮುರಳಿ ವಿಜಯ್: ಕ್ರಿಕೆಟಿಗ ಮುರಳಿ ವಿಜಯ್ ಅವರ ಪ್ರೇಮಕತೆ ನಿಜಕ್ಕೂ ವಿಭಿನ್ನವಾಗಿದೆ. ಭಾರತೀಯ ಕ್ರಿಕೆಟ್​ ತಂಡದ ಆಡಗಾರ ದಿನೇಶ್ ಕಾರ್ತಿಕ್​ ಅವರನ್ನು ವರಿಸಿದ್ದ ನಿಖಿತಾ ವನ್ಜಾರ ಮೊದಲು ಮುರಳಿ ವಿಜಯ್​ ಅವರ ಸ್ನೇಹಿತೆಯಾಗಿದ್ದರು. ನಂತರ ದಿನೇಶ್ ಕಾರ್ತಿಕ್ ಜತೆಗಿನ ವೈವಾಹಿಕ ಜೀವನವನ್ನು ಅಂತ್ಯಗೊಳಿಸಿದ ನಿಖಿತಾ ಮುರಳಿ ವಿಜಯ್ ಅವರನ್ನು ಮದುವೆಯಾಗಿದ್ದಾರೆ.

ಮುರಳಿ ವಿಜಯ್, ನಿಖಿತಾ ವನ್ಜಾರ

ಮೊಹಮ್ಮದ್ ಶಮಿ: ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್​ ಶಮಿ 2014ರಲ್ಲಿ ಹಸೀನ್ ಜಹಾನ್​ ಎಂಬುವವರೊಂದಿಗೆ ವೈವಾಹಿಕ ಜೀವನ ಆರಂಭಿಸಿದ್ದಾರೆ. ಹಸೀನ್​ ಜಹಾನ್​ ತನ್ನ ಮೊದಲ ಪತಿಯಿಂದ ವಿಚ್ಛೇದನ ಪಡೆದು ಶಮಿಯನ್ನು ವರಿಸಿದ್ದಾರೆ. ಆದರೆ, ಸದ್ಯ ಇವರಿಬ್ಬರ ನಡುವೆ ಕೆಲ ಮನಸ್ತಾಪಗಳು ತಲೆದೋರಿರುವ ಕಾರಣ ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎಂದು ಗುಸುಗುಸು ಎದ್ದಿತ್ತಾದರೂ ಪ್ರಸ್ತುತ ವಿಚ್ಛೇದನ ಪಡೆಯದೇ ಪ್ರತ್ಯೇಕ ವಾಸ ಮಾಡುತ್ತಿದ್ದಾರೆ.

ಮೊಹಮ್ಮದ್ ಶಮಿ, ಹಸೀನ್ ಜಹಾನ್

ಅನಿಲ್​ ಕುಂಬ್ಳೆ: ಕನ್ನಡಿಗ ಮತ್ತು ಭಾರತ ತಂಡದ ಅತ್ಯುತ್ತಮ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಅನಿಲ್​ ಕುಂಬ್ಳೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು 1999ರಲ್ಲಿ. ಅದಾಗಲೇ ಒಂದು ಹೆಣ್ಣು ಮಗುವಿಗೆ ತಾಯಿಯಾಗಿ, ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದ ಚೇತನ ಅವರನ್ನು ವರಿಸಿದ ಅನಿಲ್​ ಕುಂಬ್ಳೆ ಸುಂದರ ಜೀವನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅನಿಲ್​ ಕುಂಬ್ಳೆ, ಚೇತನ

ವೆಂಕಟೇಶ್ ಪ್ರಸಾದ್: ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ, ವೇಗದ ಬೌಲರ್ ವೆಂಕಟೇಶ್​ ಪ್ರಸಾದ್ 1996ರಲ್ಲಿ ಜಯಂತಿ ಅವರನ್ನು ವರಿಸಿದರು. ಮೊದಲ ವಿವಾಹದಿಂದ ವಿಚ್ಛೇದನ ಪಡೆದು ಹೊರಬಂದಿದ್ದ ಜಯಂತಿ ಹಾಗೂ ವೆಂಕಟೇಶ್ ಪ್ರಸಾದ್ ಮೊದಲ ಬಾರಿಗೆ ಭೇಟಿಯಾಗಲು ಅನಿಲ್​ ಕುಂಬ್ಳೆ ಕಾರಣರಾಗಿದ್ದರು ಎನ್ನುವುದು ವಿಶೇಷ.

ವೆಂಕಟೇಶ್​ ಪ್ರಸಾದ್, ಆರತಿ

ಇದನ್ನೂ ಓದಿ:
ಕಮಲ್​ ಹಾಸನ್​ ವಿಚ್ಛೇದನ ಪಡೆದಾಗ ಖುಷಿಪಟ್ಟಿದ್ದ ಮಗಳು ಶ್ರುತಿ ಹಾಸನ್​; ಕಾರಣ ಏನು? 

Bill Gates: ಹೆಂಡತಿ ಮುಂದೆ ಹೆಂಗಸರ ದೌರ್ಬಲ್ಯದ ಬಿಲ್​ ಗೇಟ್ಸ್​ ಬಯಲು; ವಿಚ್ಛೇದನದ ಕಾರಣ ಅಂತೂ ಗೊತ್ತಾಯ್ತು

Published On - 12:21 pm, Tue, 8 June 21