AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್ ಕ್ರಿಕೆಟಿಗನ ಪತ್ನಿಗೆ ಕೊಹ್ಲಿ ನೆಚ್ಚಿನ ಕ್ರಿಕೆಟಿಗನಂತೆ; ಹುಡುಗಿಯರಿಗೆ ಮಾತ್ರವಲ್ಲ ಅಲ್ಲಿನ ಕ್ರಿಕೆಟಿಗರಿಗೂ ಕೊಹ್ಲಿಯೇ ಕಿಂಗ್

ಎಲ್ಲಾ ಸ್ವರೂಪಗಳಲ್ಲಿ ಕೊಹ್ಲಿ ಅತ್ಯುತ್ತಮ ಆಟವಾಡುತ್ತಿದ್ದಾರೆ. ತನ್ನನ್ನು ಇಷ್ಟು ದೊಡ್ಡ ಆಟಗಾರನೊಂದಿಗೆ ಹೋಲಿಸಿದ್ದಕ್ಕಾಗಿ ಹೆಮ್ಮೆಪಡುತ್ತೇನೆ ಎಂದು ಬಾಬರ್ ಹೇಳಿದ್ದಾರೆ.

ಪಾಕ್ ಕ್ರಿಕೆಟಿಗನ ಪತ್ನಿಗೆ ಕೊಹ್ಲಿ ನೆಚ್ಚಿನ ಕ್ರಿಕೆಟಿಗನಂತೆ; ಹುಡುಗಿಯರಿಗೆ ಮಾತ್ರವಲ್ಲ ಅಲ್ಲಿನ ಕ್ರಿಕೆಟಿಗರಿಗೂ ಕೊಹ್ಲಿಯೇ ಕಿಂಗ್
ಶಾಮಿಯಾ ಅರ್ಜು, ವಿರಾಟ್ ಕೊಹ್ಲಿ
ಪೃಥ್ವಿಶಂಕರ
| Edited By: |

Updated on: Jun 08, 2021 | 9:44 AM

Share

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ವಿರಾಟ್ ಈ ಪೀಳಿಗೆಯ ಕ್ರಿಕೆಟ್ ಪ್ರಿಯರ ನೆಚ್ಚಿನ ಆಟಗಾರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದಾಗ್ಯೂ, ಪಾಕಿಸ್ತಾನದಲ್ಲೂ ಕೂಡ ಕೊಹ್ಲಿಗೆ ಕಟ್ಟಾ ಅಭಿಮಾನಿಗಳಿದ್ದಾರೆ. ನೀವು ಅಲ್ಲಿ ಯಾರನ್ನಾದರೂ ಕೇಳಿದರೆ, ಅವರು ತಮ್ಮ ನೆಚ್ಚಿನ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಎಂದು ಹೇಳುತ್ತಾರೆ. ಒಂದರ್ಥದಲ್ಲಿ ಪಾಕ್ ಹುಡುಗಿಯರ ಕನಸುಗಳ ರಾಜಕುಮಾರನಂತಾಗಿದ್ದಾರೆ ವಿರಾಟ್. ಅಲ್ಲದೆ ಬಹಿರಂಗವಾಗಿ ಕೊಹ್ಲಿ ಮೇಲಿರುವ ಪ್ರೀತಿಯನ್ನು ಪ್ರಸ್ತಾಪಿಸಿದ ಹುಡುಗಿಯರಿದ್ದಾರೆ. ಅದರೆ ಈಗ ಪಾಕ್​ ಹೆಸರಾಂತ ಕ್ರಿಕೆಟಿಗನ ಮಡದಿ ನೀಡಿರುವ ಹೇಳಿಕೆ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.

ಕ್ಷಣವೂ ಯೋಚಿಸದೆ ವಿರಾಟ್ ಕೊಹ್ಲಿಯ ಹೆಸರು ಪಾಕಿಸ್ತಾನದ ಇತ್ತೀಚಿನ ವೇಗದ ಬೌಲರ್ ಹಸನ್ ಅಲಿ ಅವರ ಪತ್ನಿ ಶಾಮಿಯಾ ಅರ್ಜು ಕೂಡ ತಮ್ಮ ನೆಚ್ಚಿನ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಎಂದು ಹೇಳಿದ್ದಾರೆ. ಶಾಮಿಯಾ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಈ ಮಾತನ್ನು ಹೇಳಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಶಾಮಿಯಾ ಈ ರೀತಿಯಾಗಿ ಉತ್ತರಿಸಿದ್ದಾರೆ. ಅಭಿಮಾನಿಗಳು ಶಾಮಿಯಾ ಅವರನ್ನು ನಿಮ್ಮ ನೆಚ್ಚಿನ ಬೌಲರ್ ಯಾರು ಎಂದು ಕೇಳಿದರೆ, ಅದಕ್ಕೆ ನೀವು, ಹಸನ್ ಅಲಿ ಎಂದು ಉತ್ತರಿಸುತ್ತೀರಿ ಎಂಬುದು ನಮಗೆ ತಿಳಿದಿದೆ. ಹೀಗಾಗಿ ನಿಮ್ಮ ನೆಚ್ಚಿನ ಬ್ಯಾಟ್ಸ್‌ಮನ್ ಯಾರೆಂದು ಹೇಳಲು ನೆಟಿಜನ್ ಶಾಮಿಯಾ ಅವರನ್ನು ಕೇಳಿಕೊಂಡರು. ಇದಕ್ಕೆ ಒಂದು ಕ್ಷಣವೂ ಯೋಚಿಸದೆ ವಿರಾಟ್ ಕೊಹ್ಲಿಯ ಹೆಸರನ್ನು ಶಾಮಿಯಾ ಅರ್ಜು ಹೇಳಿದರು.

ಶಾಮಿಯಾ ಅರ್ಜು ಭಾರತೀಯ ಮೂಲದವರಾಗಿದ್ದಾರೆ. ಅವರ ಕುಟುಂಬ ಪ್ರಸ್ತುತ ದೆಹಲಿಯಲ್ಲಿ ವಾಸಿಸುತ್ತಿದೆ. ಎಮಿರೇಟ್ಸ್ ಏರ್ಲೈನ್ಸ್ನಲ್ಲಿ ಫ್ಲೈಟ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾಗ ಹಸನ್ ಅಲಿ ಶಾಮಿಯಾ ಅವರನ್ನು ಭೇಟಿಯಾದರು. ಸ್ವಲ್ಪ ಸಮಯದವರೆಗೆ ಸ್ನೇಹಿತರಾಗಿದ್ದ ಇಬ್ಬರು ಆ ನಂತರ ಪ್ರೀತಿಯಲ್ಲಿ ಬಿದ್ದರು. ಹಿರಿಯರಿಗೆ ಮನವರಿಕೆ ಮಾಡಿಕೊಟ್ಟ ಬಳಿಕ ಈ ಜೋಡಿ 2019 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಆ ಸಮಯದಲ್ಲಿ ಈ ಜೋಡಿಗೆ ದುಬೈನಲ್ಲಿ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಪಾರ್ಟಿ ನೀಡಿದರು.

ಕೊಹ್ಲಿಯೊಂದಿಗೆ ಹೋಲಿಸಿದ್ದಕ್ಕಾಗಿ ಹೆಮ್ಮೆಪಡುತ್ತೇನೆ ಇವರ ಜೊತೆಗೆ ಪಾಕಿಸ್ತಾನ ಕ್ರಿಕೆಟ್ ನಾಯಕ ಬಾಬರ್ ಅಜಮ್ ಕೂಡ ವಿರಾಟ್ ಅವರ ಅಭಿಮಾನಿ. ಈಗ ಬಾಬರ್ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ವಿರಾಟ್ ಅವರನ್ನು ಹಿಂದಿಕ್ಕಿದ್ದಾರೆ. ಜೊತೆಗೆ ಪ್ರಥಮ ಸ್ಥಾನವನ್ನು ತಲುಪಿದ್ದಾರೆ. ಬಾಬರ್ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಕೆಲವರು ಬಾಬರ್ ಅಜಮ್ ಅವರನ್ನು ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯೊಂದಿಗೆ ಹೋಲಿಸುತ್ತಾರೆ. ಕೊಹ್ಲಿಗೆ ಹೋಲಿಸಿದರೆ ತುಂಬಾ ಹೆಮ್ಮೆ ಎನಿಸುತ್ತದೆ ಎಂದು ಅಜಮ್ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ವಿರಾಟ್ ವಿಶ್ವದ ಶ್ರೇಷ್ಠ ಆಟಗಾರ ಮತ್ತು ಬ್ಯಾಟಿಂಗ್ ಮೂಲಕ ಅನೇಕ ಬಾರಿ ಅದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ ಎಂದು ಬಾಬರ್ ಹೇಳಿದ್ದಾರೆ. ಎಲ್ಲಾ ಸ್ವರೂಪಗಳಲ್ಲಿ ಕೊಹ್ಲಿ ಅತ್ಯುತ್ತಮ ಆಟವಾಡುತ್ತಿದ್ದಾರೆ. ತನ್ನನ್ನು ಇಷ್ಟು ದೊಡ್ಡ ಆಟಗಾರನೊಂದಿಗೆ ಹೋಲಿಸಿದ್ದಕ್ಕಾಗಿ ಹೆಮ್ಮೆಪಡುತ್ತೇನೆ ಎಂದು ಬಾಬರ್ ಹೇಳಿದ್ದಾರೆ. ಕೇವಲ ಬಾಬರ್ ಮಾತ್ರವಲ್ಲ ವಿರಾಟ್ ಕೊಹ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನ ಸೂಪರ್ ಲೀಗ್: ಅಭ್ಯಾಸದ ವೇಳೆ ಅವಘಡ.. ಆಸೀಸ್ ಆಟಗಾರನಿಗೆ ಇಂಜುರಿ! ತುಟಿಗೆ ಬಿದ್ದವು 7 ಹೊಲಿಗೆ 

ಕೊಹ್ಲಿ, ರೋಹಿತ್​, ಧೋನಿಯಲ್ಲ.. ಆರ್ಸಿಬಿಯ ಈ ಆಟಗಾರ ವಿಶ್ವದ ಬೆಸ್ಟ್ ಟಿ20 ಕ್ರಿಕೆಟಿಗ: ಸುನಿಲ್ ಗವಾಸ್ಕರ್

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ