20 ಓವರ್, ಕೇವಲ ಒಂದು ಬೌಂಡರಿ, 19 ಹೆಚ್ಚುವರಿ ರನ್; ಈ ಟಿ-20 ಪಂದ್ಯದ ವಿಶೇಷತೆಗಳು ಒಂದೆರಡಲ್ಲ
ನೈಜೀರಿಯನ್ನರು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 52 ರನ್ ಗಳಿಸಿದರು ಮತ್ತು 8 ವಿಕೆಟ್‌ಗಳನ್ನು ಕಳೆದುಕೊಂಡರು. ಈ ಹಂತದಲ್ಲಿ ತಂಡದಿಂದ ಕೇವಲ ಒಂದು ಬೌಂಡರಿ ಮಾತ್ರ ಬಂದಿತು.
ಟಿ 20 ಕೇವಲ ಬ್ಯಾಟ್ಸ್‌ಮನ್‌ಗಳ ಆಟವಾಗಿದೆ. ಬೌಲರ್‌ಗಳಿಗೆ ಅವಕಾಶವಿಲ್ಲ ಎನ್ನುವವರು ಈ ಪಂದ್ಯವನ್ನು ನೋಡಬೇಕು. ಇದು ಆಫ್ರಿಕನ್ ನೆಲದಲ್ಲಿ ನಡೆದ ಪಂದ್ಯವಾಗಿತ್ತು. 20 ಓವರ್ ಆಡಿದ ತಂಡ ಕೇವಲ ಒಂದು ಬೌಂಡರಿ ಮಾತ್ರ ಗಳಿಸಲು ಶಕ್ತವಾಯಿತು. 10 ಬ್ಯಾಟ್ಸ್‌ಮನ್‌ಗಳು ಬ್ಯಾಟಿಂಗ್ ಮಾಡಿ ಕೇವಲ ಒಂದು ಬೌಂಡರಿ ಗಳಿಸಿದರು. ನೈಜೀರಿಯಾ ವುಮೆನ್ ವರ್ಸಸ್ ನಮೀಬಿಯಾ ನಡುವಿನ ಮಹಿಳಾ ಟಿ 20 ಪಂದ್ಯದಲ್ಲಿ ನಡೆದ ಘಟನೆ ಇದು. ರುವಾಂಡನ್ ಪಿಚ್‌ನಲ್ಲಿ ಈ ಪಂದ್ಯ ನಡೆಯಿತು. ನೈಜೀರಿಯನ್ನರು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 52 ರನ್ ಗಳಿಸಿದರು ಮತ್ತು 8 ವಿಕೆಟ್‌ಗಳನ್ನು ಕಳೆದುಕೊಂಡರು. ಈ ಹಂತದಲ್ಲಿ ತಂಡದಿಂದ ಕೇವಲ ಒಂದು ಬೌಂಡರಿ ಮಾತ್ರ ಬಂದಿತು. ಆಶ್ಚರ್ಯಕರ ಸಂಗತಿಯೆಂದರೆ ನೈಜೀರಿಯಾದ ಪ್ರತಿಯೊಬ್ಬ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿ ನಿಲ್ಲಲು ಹೆಣಗಾಡುತ್ತಿರುವಂತೆ ಕಾಣುತ್ತಿತ್ತು. ಆದರೆ ಯಾರೂ ಕೂಡ ಡಬಲ್ ಫಿಗರ್ ದಾಟಲು ಸಾಧ್ಯವಾಗಲಿಲ್ಲ.
10 ಬ್ಯಾಟ್ಸ್‌ಮನ್, 20 ಓವರ್, ಕೇವಲ ಒಂದು ಬೌಂಡರಿ ನೈಜೀರಿಯನ್ ತಂಡದ ಪರ ವೈಯಕ್ತಿಕವಾಗಿ ದಾಖಲಾದ ಅತಿದೊಡ್ಡ ಸ್ಕೋರ್ 7 ರನ್ ಆಗಿದೆ. ನೈಜೀರಿಯನ್ ತಂಡದ ನಾಯಕಿ ಈ ರನ್ ಬಾರಿಸಿದರು. ಅವರೊಂದಿಗೆ ಮತ್ತೊಬ್ಬ ಆಟಗಾರ್ತಿ 7 ರನ್ ಗಳಿಸಿದರು. ಇಬ್ಬರು ಬ್ಯಾಟ್ಸ್‌ಮನ್‌ಗಳು ಖಾತೆ ಕೂಡ ತೆರೆಯಲಿಲ್ಲ. ಉಳಿದ ಇಬ್ಬರು ಕೇವಲ 3 ರನ್ ಗಳಿಸಿದರು. ಮತ್ತಿಬ್ಬರು ಕೇವಲ 2 ರನ್ ಗಳಿಸಲಷ್ಟೇ ಶಕ್ತರಾದರು. ಒಬ್ಬ ಆಟಗಾರ್ತಿ 6 ಕ್ಕೆ ಔಟಾದರು. 6 ರನ್ ಗಳಿಸಿದ ಆ ಆಟಗಾರ್ತಿ ಖಾತೆಯಲ್ಲಿ ಬೌಂಡರಿ ಸಿಕ್ಕಿತು. ಅದೃಷ್ಟವಶಾತ್ ನಮೀಬಿಯಾ ತಂಡವು ಎದುರಾಳಿಗೆ ಹೆಚ್ಚುವರಿಯಾಗಿ 19 ರನ್ಗಳನ್ನು ಬಿಟ್ಟುಕೊಟ್ಟಿತು. ಇದರಿಂದಾಗಿ ಸ್ಕೋರ್ ಬೋರ್ಡ್ 50 ರನ್ ದಾಟಿತು.
ಪಂದ್ಯಶ್ರೇಷ್ಠ 18 ವರ್ಷದ ನಮೀಬಿಯಾದ ಬೌಲರ್ ವಿಕ್ಟೋರಿಯಾ ಹಮುನೆಲ್ಲಾ ಪಂದ್ಯಶ್ರೇಷ್ಠರಾಗಿದ್ದು, 4 ಓವರ್‌ಗಳಲ್ಲಿ 8 ರನ್ಗಳಿಗೆ 4 ವಿಕೆಟ್ ಪಡೆದರು. ಆದಾಗ್ಯೂ, ನಮೀಬಿಯಾ 2 ವಿಕೆಟ್ ಕಳೆದುಕೊಂಡು 56 ಎಸೆತಗಳಲ್ಲಿ ಪಂದ್ಯವನ್ನು ಜಯದೊಂದಿಗೆ ಮುಗಿಸಿದರು. ನಮೀಬಿಯಾ ತಂಡವು 64 ಎಸೆತಗಳು ಬಾಕಿಯಿರುವಂತೆ 8 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
ಇದನ್ನೂ ಓದಿ: ಮಾತು ಉಳಿಸಿಕೊಂಡ ಬಿಸಿಸಿಐ; ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಕೊನೆಗೂ ಸಿಗ್ತು ವಿಶ್ವಕಪ್ ಬಹುಮಾನದ ಹಣ
ಮಗನ ಕ್ರಿಕೆಟ್ ತರಬೇತಿಗಾಗಿ 5 ಎಕರೆ ದ್ರಾಕ್ಷಿ ತೋಟವನ್ನೇ ಕ್ರಿಕೆಟ್ ಕ್ರೀಡಾಂಗಣವನ್ನಾಗಿಸಿದ ಅಪ್ಪ! ಯಾವುರಲ್ಲಿ?