4 ಓವರ್, 4 ವಿಕೆಟ್, ಇಬ್ಬರು ಶೂನ್ಯಕ್ಕೆ ಔಟ್; ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಬೌಲರ್ ಅಬ್ಬರಕ್ಕೆ ಸೋತ ಎದುರಾಳಿ

4 ಓವರ್, 4 ವಿಕೆಟ್, ಇಬ್ಬರು ಶೂನ್ಯಕ್ಕೆ ಔಟ್; ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಬೌಲರ್ ಅಬ್ಬರಕ್ಕೆ ಸೋತ ಎದುರಾಳಿ
ರುಬೆಲ್ ಹೊಸೈನ್

ಪಂದ್ಯದಲ್ಲಿ ರುಬೆಲ್ ಹೊಸೈನ್ 4 ಓವರ್‌ಗಳಲ್ಲಿ 30 ರನ್‌ ನೀಡಿ 4 ಬ್ಯಾಟ್ಸ್‌ಮನ್‌ಗಳನ್ನು ಬಲಿ ಪಡೆದರು. ಈ ಪೈಕಿ 2 ಬ್ಯಾಟ್ಸ್‌ಮನ್‌ಗಳು ಉನ್ನತ ಕ್ರಮಾಂಕದವರಾಗಿದ್ದರೆ, ಉಳಿದ 2 ಮಂದಿ ಮಧ್ಯಮ ಕ್ರಮಾಂಕದವರು

pruthvi Shankar

|

Jun 07, 2021 | 9:09 PM

ಒಬ್ಬ ಕ್ರಿಕೆಟ್ ಆಟಗಾರನಲ್ಲಿ ಒಂದು ಮಿಲಿಯನ್​ಗಟ್ಟಲೆ ದುಷ್ಟಗಳಿರಬಹುದು. ಆದರೆ ಅವನು ತನ್ನ ಸಾಮರ್ಥ್ಯದ ಬಲದಿಂದ ಅವೆಲ್ಲವನ್ನು ಜಯಿಸಬಹುದು. ಬಾಂಗ್ಲಾದೇಶದ ಬೌಲರ್ ಈ ಮಾತಿಗೆ ಸಾಕ್ಷಿಯಾಗಿ ನಿಂತಿದ್ದಾನೆ. ಈತನ ಜೊತೆಗೆ ಈಗ ಇಂಗ್ಲೆಂಡ್‌ನ ವೇಗದ ಬೌಲರ್ ಆಲ್ಲಿ ರಾಬಿನ್ಸನ್ ಕೂಡ ಇದಕ್ಕೆ ಉದಾಹರಣೆಯಾಗಬಹುದು. ಸಹಜವಾಗಿ, 9 ವರ್ಷಗಳ ಹಿಂದೆ ಮಾಡಿದ ಒಂದು ತಪ್ಪಿಗೆ ರಾಬಿನ್ಸನ್​ಗೆ ಶಿಕ್ಷೆಯಾಗಿದೆ. ಆದರೆ ನ್ಯೂಜಿಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್‌ನಲ್ಲಿ ಅವರ ಅದ್ಭುತ ಪ್ರದರ್ಶನದಿಂದ ಅವರು ಖಂಡಿತವಾಗಿಯೂ ಜನರ ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಕೆಲವು ವರ್ಷಗಳ ಹಿಂದೆ ಮಾಡಿದ ತಪ್ಪು ಅವರ ಈ ಸಾಧನೆಯನ್ನು ಅಳಿಸಿ ಹಾಕಿದೆ. ಆದರೆ ನಾವಿಲ್ಲಿ ಮಾತನಾಡುತ್ತಿರುವುದು ಅವರ ಬಗೆಗಲ್ಲ. ಬದಲಿಗೆ ಬಾಂಗ್ಲಾದೇಶದ ರುಬೆಲ್ ಹೊಸೈನ್ ಬಗ್ಗೆ. ಅವರು ಡಾಕಾ ಟಿ 20 ಲೀಗ್‌ನಲ್ಲಿ ಕೇವಲ 24 ಎಸೆತಗಳಲ್ಲಿ ಅಗ್ರ ಕ್ರಮಾಂಕದಿಂದ ತಂಡದ ಮಧ್ಯಮ ಕ್ರಮಾಂಕದವರೆಗೆ ಬ್ಯಾಟ್ಸ್​ಮನ್​ಗಳನ್ನು ಬಲಿ ಪಡೆದು ತಂಡದ ಗೆಲುವಿಗೆ ಕಾರಣಕರ್ತರಾಗಿದ್ದಾರೆ.

ಪಾರ್ಟೆಕ್ಸ್ ಸ್ಪೋರ್ಟಿಂಗ್ ಕ್ಲಬ್ ವಿರುದ್ಧ ಆಡಿದ ಬಲಗೈ ವೇಗದ ಬೌಲರ್ ರುಬೆಲ್ ಹೊಸೈನ್ ಈ ಸಾಧನೆ ಮಾಡಿದ್ದಾರೆ. ಪಂದ್ಯದಲ್ಲಿ ಮೊದಲು ಆಡಿದ ರುಬೆಲ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 167 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, 168 ರನ್‌ಗಳ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಪಾರ್ಟೆಕ್ಸ್ ಸ್ಪೋರ್ಟಿಂಗ್ ಕ್ಲಬ್‌ನ ತಂಡವು ರುಬೆಲ್ ಹೊಸೈನ್‌ನ ಘಾತಕ ದಾಳಿಯ ಮುಂದೆ ನಿಲ್ಲಲು ಸಾಧ್ಯವಾಗಲಿಲ್ಲ. ಜೊತೆಗೆ ಕೇವಲ 95 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.

4 ಓವರ್‌ಗಳಲ್ಲಿ 4 ಬ್ಯಾಟ್ಸ್‌ಮನ್‌ಗಳ ಬಲಿ ಪಂದ್ಯದಲ್ಲಿ ರುಬೆಲ್ ಹೊಸೈನ್ 4 ಓವರ್‌ಗಳಲ್ಲಿ 30 ರನ್‌ ನೀಡಿ 4 ಬ್ಯಾಟ್ಸ್‌ಮನ್‌ಗಳನ್ನು ಬಲಿ ಪಡೆದರು. ಈ ಪೈಕಿ 2 ಬ್ಯಾಟ್ಸ್‌ಮನ್‌ಗಳು ಉನ್ನತ ಕ್ರಮಾಂಕದವರಾಗಿದ್ದರೆ, ಉಳಿದ 2 ಮಂದಿ ಮಧ್ಯಮ ಕ್ರಮಾಂಕದವರು. ರುಬೆಲ್‌ಗೆ ಬಲಿಯಾದ 4 ಬ್ಯಾಟ್ಸ್‌ಮನ್‌ಗಳಲ್ಲಿ 2 ಮಂದಿಗೆ ಖಾತೆ ತೆರೆಯಲು ಸಹ ಸಾಧ್ಯವಾಗಲಿಲ್ಲ. ಅದೇ ಸಮಯದಲ್ಲಿ, ಎರಡಂಕ್ಕಿ ದಾಟುವ ಮೊದಲು ಮತ್ತೊಬ್ಬ ಔಟಾದರೆ. ಇನ್ನೊಬ್ಬರು ಹತ್ತು ರನ್ ಗಳಿಸಲುವಲ್ಲಿ ಯಶಸ್ವಿಯಾದರು.

ಅತ್ಯಾಚಾರ ಆರೋಪದಲ್ಲಿ ಜೈಲು ಶಿಕ್ಷೆ 31 ವರ್ಷದ ಬಾಂಗ್ಲಾದೇಶದ ವೇಗದ ಬೌಲರ್ ಕ್ರಿಕೆಟ್ ಮೈದಾನದಲ್ಲಿ ಅವರ ಸಾಧನೆಯ ಬಗ್ಗೆ ಚರ್ಚೆಯಲ್ಲಿದ್ದಂತೆ, ಅವರು ವಿವಾದಗಳೊಂದಿಗೆ ಆಳವಾಗಿ ಸಂಬಂಧ ಹೊಂದಿದ್ದಾರೆ. ಅವರ ಮೇಲೆ ಅತ್ಯಾಚಾರದಂತಹ ಗಂಭೀರ ಆರೋಪವೂ ಇದೆ. ಅತ್ಯಾಚಾರದ ಆರೋಪದಡಿಯಲ್ಲಿ ಅವರು 3 ದಿನಗಳ ಕಾಲ ಲಾಕ್ ಅಪ್ ಗಾಳಿಯನ್ನು ಸಹ ಸೇವಿಸಿದ್ದಾರೆ. ಆದಾಗ್ಯೂ, ಜಾಮೀನಿನ ಮೇಲೆ ಬಿಡುಗಡೆಯಾದ ನಂತರ, ಅವರನ್ನು ಬಾಂಗ್ಲಾದೇಶದ 2015 ರ ವಿಶ್ವಕಪ್ ತಂಡದಲ್ಲಿ ಆಯ್ಕೆ ಮಾಡಲಾಯಿತು. ಅಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನು ಗೆದ್ದ ನಂತರ ಅವರ ವಿರುದ್ಧದ ಎಲ್ಲಾ ಆರೋಪಗಳನ್ನು ಕೈಬಿಡಲಾಯಿತು.

Follow us on

Most Read Stories

Click on your DTH Provider to Add TV9 Kannada