AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ENG vs NZ Test: ನಿಧಾನಗತಿಯ ಓವರ್, ಇಂಗ್ಲೆಂಡ್ ತಂಡಕ್ಕೆ ದಂಡದ ಬರೆ; ಡ್ರಾದಲ್ಲಿ ಕೊನೆಯಾಯ್ತು ಮೊದಲ ಟೆಸ್ಟ್

ENG vs NZ Test: ಲಾರ್ಡ್ಸ್ ಟೆಸ್ಟ್ನಲ್ಲಿ ನಿಧಾನಗತಿಯ ಓವರ್​ ಮಾಡಿದಕ್ಕಾಗಿ ದಂಡವಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಇಂಗ್ಲಿಷ್ ತಂಡದ ಪಂದ್ಯ ಶುಲ್ಕದ 40 ಪ್ರತಿಶತವನ್ನು ಕಡಿತಗೊಳಿಸಿದೆ.

ENG vs NZ Test: ನಿಧಾನಗತಿಯ ಓವರ್, ಇಂಗ್ಲೆಂಡ್ ತಂಡಕ್ಕೆ ದಂಡದ ಬರೆ; ಡ್ರಾದಲ್ಲಿ ಕೊನೆಯಾಯ್ತು ಮೊದಲ ಟೆಸ್ಟ್
ಇಂಗ್ಲೆಂಡ್ ಕ್ರಿಕೆಟ್ ತಂಡ
Follow us
ಪೃಥ್ವಿಶಂಕರ
|

Updated on: Jun 07, 2021 | 7:51 PM

ಕಳೆದ ಕೆಲವು ತಿಂಗಳುಗಳಿಂದ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಮೈದಾನದಲ್ಲಿ ಅದೃಷ್ಟ ಸರಿಯಾಗಿ ಕೈಕೊಡುತ್ತಿದೆ. ಭಾರತ ಪ್ರವಾಸದಲ್ಲಿ 3-1 ಟೆಸ್ಟ್ ಸರಣಿಯ ಸೋಲು ಮತ್ತು ವಿವಾದಾತ್ಮಕ ರೊಟೆಷನ್ ಪಾಲಿಸಿ ಈಗಾಗಲೇ ಇಂಗ್ಲಿಷ್ ತಂಡವನ್ನು ಟೀಕೆಗೆ ಒಳಪಡಿಸಿದೆ. ಏತನ್ಮಧ್ಯೆ, ಲಾರ್ಡ್ಸ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ, ತಂಡವು ತಮ್ಮ ತವರಿನಲ್ಲಿ ಎದುರಾಳಿ ತಂಡದೆದೂರು ಸೋಲಿನ ದವಡೆಯಿಂದ ಸ್ವಲ್ಪದರಲ್ಲಿ ಪಾರಾಗಿದೆ. ಇದರೊಂದಿಗೆ, ಆಟಗಾರರ ಗಾಯ ಮತ್ತು ಆಫ್-ಫೀಲ್ಡ್ ವಿವಾದಗಳು ಸಹ ತಂಡದ ವಿರುದ್ಧ ವಿವಾದಗಳನ್ನು ಸೃಷ್ಟಿಸಿವೆ. ಅಂತಹ ಪರಿಸ್ಥಿತಿಯಲ್ಲಿ, ಈಗಾಗಲೇ ಅನೇಕ ತೊಂದರೆಗಳನ್ನು ಎದುರಿಸುತ್ತಿರುವ ರೂಟ್ ನೇತೃತ್ವದ ತಂಡಕ್ಕೆ ಈಗ ಮತ್ತೊಂದು ಶಿಕ್ಷೆ ಸಿಕ್ಕಿದೆ. ಲಾರ್ಡ್ಸ್ ಟೆಸ್ಟ್ನಲ್ಲಿ ನಿಧಾನಗತಿಯ ಓವರ್​ ಮಾಡಿದಕ್ಕಾಗಿ ದಂಡವಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಇಂಗ್ಲಿಷ್ ತಂಡದ ಪಂದ್ಯ ಶುಲ್ಕದ 40 ಪ್ರತಿಶತವನ್ನು ಕಡಿತಗೊಳಿಸಿದೆ.

ಕಳೆದ ವಾರ ಜೂನ್ 2 ರಂದು ಪ್ರಾರಂಭವಾದ ಎರಡು ಪಂದ್ಯಗಳ ಸರಣಿಯ ಮೊದಲ ಪಂದ್ಯವು ಜೂನ್ 6 ರ ಭಾನುವಾರದಂದು ಡ್ರಾದಲ್ಲಿ ಕೊನೆಗೊಂಡಿತು. ಪಂದ್ಯ ಮುಗಿದ ನಂತರ, ಮೈದಾನದ ಅಂಪೈರ್‌ಗಳಾದ ರಿಚರ್ಡ್ ಕ್ಯಾಟಲ್ಬರೋ ಮತ್ತು ಮೈಕೆಲ್ ಗೌಗ್, ಮೂರನೇ ಅಂಪೈರ್ ರಿಚರ್ಡ್ ಇಲಿಂಗ್ವರ್ತ್ ಮತ್ತು ನಾಲ್ಕನೇ ಅಂಪೈರ್ ಮೈಕ್ ಬರ್ನ್ಸ್ ಇಂಗ್ಲಿಷ್ ತಂಡದ ವಿರುದ್ಧ ನಿಧಾನಗತಿಯ ಓವರ್​ಗಾಗಿ ಆರೋಪ ಹೊರಿಸಿದ್ದಾರೆ. ಅದರ ನಂತರ ಪಂದ್ಯದ ರೆಫರಿ ಕ್ರಿಸ್ ಬ್ರಾಡ್ ಇಡೀ ತಂಡಕ್ಕೆ ದಂಡ ವಿಧಿಸಿದರು.

ನಿಗದಿತ ಸಮಯಕ್ಕಿಂತ 2 ಓವರ್‌ ನಿಧಾನ ಐಸಿಸಿ ಹೊರಡಿಸಿದ ಅಧಿಕೃತ ಪತ್ರಿಕಾ ಹೇಳಿಕೆಯಲ್ಲಿ, ಗಣ್ಯರ ಸಮಿತಿಯ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್, ಅಂಪೈರ್‌ಗಳ ದೂರಿನ ನಂತರ, ಇಂಗ್ಲಿಷ್ ತಂಡವು ನಿಗದಿತ ಸಮಯಕ್ಕಿಂತ 2 ಓವರ್ ನಿಧಾನವಾಗಿದೆಯೆಂದು ಕಂಡು ದಂಡವನ್ನು ವಿಧಿಸಿತು. ಇದರ ಪ್ರಕಾರ, ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಯ ಐಸಿಸಿ ನೀತಿ ಸಂಹಿತೆ 2.22 ಅನ್ನು ಆಧರಿಸಿ, ಆಟಗಾರರಿಗೆ ಪ್ರತಿ ಓವರ್‌ಗೆ ಪಂದ್ಯದ ಶುಲ್ಕದ 20 ಪ್ರತಿಶತದಷ್ಟು ದಂಡ ವಿಧಿಸಲಾಗುತ್ತದೆ.

ಐಸಿಸಿ ಪ್ರಕಾರ, ಇಂಗ್ಲಿಷ್ ತಂಡದ ನಾಯಕ ಜೋ ರೂಟ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ ಹಾಗೂ ದಂಡವನ್ನು ಕಟ್ಟಲು ಒಪ್ಪಿಕೊಂಡಿದ್ದಾರೆ. ಈ ಕಾರಣದಿಂದಾಗಿ ವಿಚಾರಣೆಯ ಅಗತ್ಯವಿಲ್ಲ ಎಂಬುದು ವರದಿಯಾಗಿದೆ.

ಗೆಲ್ಲಲು 273 ರನ್‌ಗಳ ಅಗತ್ಯವಿತ್ತು, ಪಂದ್ಯವು ಡ್ರಾದಲ್ಲಿ ಕೊನೆಗೊಂಡಿತು ಪಂದ್ಯದ ಕೊನೆಯ ದಿನದಂದು, ನ್ಯೂಜಿಲೆಂಡ್ ತಮ್ಮ ಎರಡನೇ ಇನ್ನಿಂಗ್ಸ್ ಅನ್ನು 6 ವಿಕೆಟ್​ ಕಳೆದುಕೊಂಡು 169 ರನ್ ಗಳಿಗೆ ಇನ್ನಿಂಗ್ಸ್ ಘೋಷಿಸಿತು. ಕೊನೆಯ ಎರಡು ಸೆಷನ್ಗಳಲ್ಲಿ ಗೆಲ್ಲಲು ಇಂಗ್ಲೆಂಡ್ 273 ರನ್ಗಳ ಗುರಿಯನ್ನು ಹೊಂದಿತ್ತು. ಆದಾಗ್ಯೂ, ಇಂಗ್ಲಿಷ್ ತಂಡವು ಕಳಪೆ ಆರಂಭವನ್ನು ಹೊಂದಿತ್ತು ಮತ್ತು ಗುರಿಯನ್ನು ಬೆನ್ನಟ್ಟಲು ಪ್ರಯತ್ನಿಸುವ ಬದಲು, ತಂಡವು ಪಂದ್ಯವನ್ನು ಡ್ರಾ ಮಾಡಿಕೊಳ್ಳುವತ್ತ ಗಮನ ಹರಿಸಿತು. ಓಪನರ್ ಡೊಮ್ ಸಿಬ್ಲಿ ತಂಡಕ್ಕೆ ಅಜೇಯ 60 ರನ್ ಗಳಿಸಿದರೆ, ನಾಯಕ ಜೋ ರೂಟ್ ಸಹ 40 ರನ್ ಗಳಿಸಿದರು ಮತ್ತು ಪಂದ್ಯವು ಡ್ರಾದಲ್ಲಿ ಕೊನೆಗೊಂಡಿತು. ಸರಣಿಯ ಎರಡನೇ ಪಂದ್ಯ ಜೂನ್ 10 ರಿಂದ ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ನಲ್ಲಿ ನಡೆಯಲಿದೆ.

ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ
ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ
ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ
Udupi Rains: ಉಡುಪಿಯಲ್ಲಿ ಮಳೆ ಆರ್ಭಟ: ಮಣಿಪಾಲ ರಸ್ತೆಯಲ್ಲಿ ಪ್ರವಾಹ
Udupi Rains: ಉಡುಪಿಯಲ್ಲಿ ಮಳೆ ಆರ್ಭಟ: ಮಣಿಪಾಲ ರಸ್ತೆಯಲ್ಲಿ ಪ್ರವಾಹ
ಸಚಿವನಿಂದ ಪ್ರಾಸ್ತಾವಿಕ ಭಾಷಣ; ವೇದಿಕೆ ಮೇಲಿದ್ದವರು ಮಾತಿನಲ್ಲಿ ಬ್ಯೂಸಿ
ಸಚಿವನಿಂದ ಪ್ರಾಸ್ತಾವಿಕ ಭಾಷಣ; ವೇದಿಕೆ ಮೇಲಿದ್ದವರು ಮಾತಿನಲ್ಲಿ ಬ್ಯೂಸಿ
ನಿರ್ಮಾಣ ಹಂತದ ನಾಡಪ್ರಭು ಕೆಂಪೇಗೌಡ ಲೇಔಟ್​ನಲ್ಲೂ ಜಲ ಪ್ರವಾಹ
ನಿರ್ಮಾಣ ಹಂತದ ನಾಡಪ್ರಭು ಕೆಂಪೇಗೌಡ ಲೇಔಟ್​ನಲ್ಲೂ ಜಲ ಪ್ರವಾಹ
ಬೆಳಗ್ಗೆ ಸುರಿದ ಮಳೆಯಿಂದ ಮತ್ತಷ್ಟು ಹೆಚ್ಚಿದ ನೀರು, ಟ್ರಾಫಿಕ್ ಡೈವರ್ಟ್
ಬೆಳಗ್ಗೆ ಸುರಿದ ಮಳೆಯಿಂದ ಮತ್ತಷ್ಟು ಹೆಚ್ಚಿದ ನೀರು, ಟ್ರಾಫಿಕ್ ಡೈವರ್ಟ್
ರೈಲು ಹತ್ತುವ ಭರದಲ್ಲಿ ಪ್ರಯಾಣಿಕನನ್ನು ಕೆಳಗೆ ಬೀಳಿಸಿದ ವ್ಯಕ್ತಿ
ರೈಲು ಹತ್ತುವ ಭರದಲ್ಲಿ ಪ್ರಯಾಣಿಕನನ್ನು ಕೆಳಗೆ ಬೀಳಿಸಿದ ವ್ಯಕ್ತಿ
ಜನ ನಿಶ್ಚಿಂತೆಯಿಂದ ಇರುವಂತೆ ಹೇಳಿ ಶಿವಕುಮಾರ್ ಹೊಸಪೇಟೆಗೆ ತೆರಳಿದರು
ಜನ ನಿಶ್ಚಿಂತೆಯಿಂದ ಇರುವಂತೆ ಹೇಳಿ ಶಿವಕುಮಾರ್ ಹೊಸಪೇಟೆಗೆ ತೆರಳಿದರು
ಕೋರ್ಟ್​ ಹಾಲಲ್ಲಿ ದರ್ಶನ್,ಪವಿತ್ರಾ ಅಕ್ಕ-ಪಕ್ಕ; ಹೊರಬರುವಾಗ ಅಪರೂಪದ ಘಟನೆ
ಕೋರ್ಟ್​ ಹಾಲಲ್ಲಿ ದರ್ಶನ್,ಪವಿತ್ರಾ ಅಕ್ಕ-ಪಕ್ಕ; ಹೊರಬರುವಾಗ ಅಪರೂಪದ ಘಟನೆ
ವಿಡಿಯೋ: ಡಿವೈಡರ್ ಹಾರಿ ಬೈಕ್​ಗೆ ಗುದ್ದಿ ಪಲ್ಟಿಯಾದ ಕೆಎಸ್​ಆರ್​ಟಿಸಿ ಬಸ್
ವಿಡಿಯೋ: ಡಿವೈಡರ್ ಹಾರಿ ಬೈಕ್​ಗೆ ಗುದ್ದಿ ಪಲ್ಟಿಯಾದ ಕೆಎಸ್​ಆರ್​ಟಿಸಿ ಬಸ್