ಒಲಂಪಿಕ್ಸ್​ನಲ್ಲಿ ಕಂಚಿನ ಪದಕ.. ತಾಯಿಯ ಮಡಿಲಲ್ಲಿ ನೆಮ್ಮದಿಯ ನಿದ್ರೆ! ನೆಟ್ಟಿಗರ ಹೃದಯ ಗೆದ್ದ ಮನ್ಪ್ರೀತ್ ಸಿಂಗ್ ಫೋಟೋ

ಮನ್ಪ್ರೀತ್ ತನ್ನ ತಾಯಿಯ ಮಡಿಲಲ್ಲಿ ತಲೆಯಿಟ್ಟು ಮಲಗಿರುವ ಫೋಟೋವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದು, ತಾಯಿಯ ಕುತ್ತಿಗೆಯಲ್ಲಿ ಕಂಚಿನ ಪದಕವಿದೆ.

ಒಲಂಪಿಕ್ಸ್​ನಲ್ಲಿ ಕಂಚಿನ ಪದಕ.. ತಾಯಿಯ ಮಡಿಲಲ್ಲಿ ನೆಮ್ಮದಿಯ ನಿದ್ರೆ! ನೆಟ್ಟಿಗರ ಹೃದಯ ಗೆದ್ದ ಮನ್ಪ್ರೀತ್ ಸಿಂಗ್ ಫೋಟೋ
ಕ್ಯಾಪ್ಟನ್ ಮನ್ಪ್ರೀತ್ ಸಿಂಗ್
Follow us
TV9 Web
| Updated By: ಪೃಥ್ವಿಶಂಕರ

Updated on: Aug 11, 2021 | 10:30 PM

ಶನಿವಾರ 7 ಆಗಸ್ಟ್ 2021, ಭಾರತೀಯ ಕ್ರೀಡೆಗಳಿಗೆ ಅತ್ಯಂತ ಅದ್ಭುತವಾದ, ಸ್ಮರಣೀಯ ಮತ್ತು ಐತಿಹಾಸಿಕ ಉಡುಗೊರೆಯನ್ನು ತಂದಿದೆ. ಪುರುಷರ ಜಾವೆಲಿನ್ ಎಸೆತದಲ್ಲಿ ಭಾರತದ ಯುವ ತಾರೆ ನೀರಜ್ ಚೋಪ್ರಾ 87.58 ಮೀಟರ್ ದೂರ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದರು. ಇದು ಅಥ್ಲೆಟಿಕ್ಸ್‌ನಲ್ಲಿ ಭಾರತದ ಮೊದಲ ಒಲಿಂಪಿಕ್ ಪದಕವಾಗಿದ್ದು ಇತಿಹಾಸ ಸೃಷ್ಟಿಸಿದೆ. ಪ್ರತಿಯೊಬ್ಬರೂ ಈಗ ಅದರ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಈ ಐತಿಹಾಸಿಕ ದಿನಕ್ಕೆ ಎರಡು ದಿನಗಳ ಮೊದಲು, ಭಾರತೀಯ ಪುರುಷರ ಹಾಕಿ ತಂಡವು ಜರ್ಮನಿಯನ್ನು 5-4 ರಿಂದ ಸೋಲಿಸಿ ಕಂಚಿನ ಪದಕ ಗೆದ್ದಿತು. ಹಲವಾರು ದಶಕಗಳ ಕಾಲ ಹಾಕಿಯಲ್ಲಿ ಪ್ರಾಬಲ್ಯ ಹೊಂದಿದ್ದ ಭಾರತ, 41 ವರ್ಷಗಳ ನಂತರ ತನ್ನ ಮೊದಲ ಒಲಿಂಪಿಕ್ ಪದಕವನ್ನು ಪಡೆದುಕೊಂಡಿತು ಮತ್ತು ಇದು ಇಡೀ ದೇಶವನ್ನು ಭಾವುಕರನ್ನಾಗಿಸಿತು. ಈ ಐತಿಹಾಸಿಕ ವಿಜಯದ ಹಿಂದೆ ಅನೇಕರ ಪರಿಶ್ರಮವಿದೆ. ಅವರಲ್ಲಿ ಕ್ಯಾಪ್ಟನ್ ಮನ್ಪ್ರೀತ್ ಸಿಂಗ್ ಕೂಡ ಒಬ್ಬರು. ಆಟಕ್ಕಾಗಿ ಹಲವಾರು ತಿಂಗಳುಗಳ ಕಾಲ ಮನೆಯಿಂದ ದೂರ ಇರಬೇಕಾಯ್ತು. ಆದರೆ ಈಗ ಅದ್ಭುತ ಸಾದನೆ ಮಾಡಿ ತಮ್ಮ ಕುಟುಂಬವನ್ನು ಸೇರಿದ್ದಾರೆ. ನಾಯಕ ಮನ್ಪ್ರೀತ್ ತನ್ನ ಕುಟುಂಬದೊಂದಿಗಿನ ಅದ್ಭುತ ಕ್ಷಣವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

2012 ರಲ್ಲಿ ಮೊದಲ ಬಾರಿಗೆ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿ ತಂಡದ ಭಾಗವಾಗಿದ್ದ ಮನ್ ಪ್ರೀತ್ ಸಿಂಗ್, 9 ವರ್ಷಗಳ ಬಳಿಕ ತಂಡದ ಕಮಾಂಡ್ ಪಡೆದ ನಂತರ ಕಂಚಿನ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂದಿನಿಂದ ಮನ್ ಪ್ರೀತ್ ಸೇರಿದಂತೆ ಇಡೀ ಹಾಕಿ ತಂಡವನ್ನು ನಿರಂತರವಾಗಿ ಅಭಿನಂದಿಸಲಾಗುತ್ತಿದೆ. ಸೋಮವಾರ ದೇಶಕ್ಕೆ ಮರಳಿದ ನಂತರ, ಎಲ್ಲಾ ಆಟಗಾರರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಈಗ ಅಂತಿಮವಾಗಿ ಎಲ್ಲರೂ ತಮ್ಮ ತಮ್ಮ ಮನೆಗಳನ್ನು ತಲುಪಿದ್ದಾರೆ.

ತಾಯಿಯ ಮಡಿಲಲ್ಲಿ ನೆಮ್ಮದಿಯ ನಿದ್ರೆ ಟೋಕಿಯೊದಲ್ಲಿ 41 ವರ್ಷಗಳ ಸುದೀರ್ಘ ಕಾಯುವಿಕೆಯನ್ನು ಕೊನೆಗೊಳಿಸಿದ ನಂತರ ಭಾರತೀಯ ಆಟಗಾರರು ಮೈದಾನದಲ್ಲಿ ತಮ್ಮ ಸಂತೋಷ ಮತ್ತು ಭಾವನೆಗಳನ್ನು ವ್ಯಕ್ತಪಡಿಸಿದ ರೀತಿ, ಅದೇ ಸಂತೋಷವು ಕೋಟ್ಯಂತರ ಭಾರತೀಯರ ಮುಖದಲ್ಲಿತ್ತು. ದೇಶಕ್ಕೆ ತುಂಬಾ ಸಂತೋಷವನ್ನು ನೀಡಿದ ನಂತರವೂ, ಕ್ಯಾಪ್ಟನ್ ಮನ್ಪ್ರೀತ್ ಅವರ ನಿಜವಾದ ಸಂತೋಷವು ಮನೆಗೆ ತಲುಪಿದ ಮೇಲೆ ಸಿಕ್ಕಿದೆ. ಮನ್ಪ್ರೀತ್ ತನ್ನ ತಾಯಿಯ ಮಡಿಲಲ್ಲಿ ತಲೆಯಿಟ್ಟು ಮಲಗಿರುವ ಫೋಟೋವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದು, ತಾಯಿಯ ಕುತ್ತಿಗೆಯಲ್ಲಿ ಕಂಚಿನ ಪದಕವಿದೆ.

ಆಟಗಾರರಿಗೆ ಭವ್ಯ ಸ್ವಾಗತ ಈ ಮೊದಲು, ಪಂಜಾಬ್‌ಗೆ ಸೇರಿದ ಭಾರತೀಯ ಆಟಗಾರರು ಆಗಸ್ಟ್ 11 ರ ಬುಧವಾರ ರಾಜ್ಯವನ್ನು ತಲುಪಿದರು. ಅಲ್ಲಿ ಅವರಿಗೆ ಆತ್ಮೀಯ ಸ್ವಾಗತ ನೀಡಲಾಯಿತು. ಮನ್ ಪ್ರೀತ್ ಸಿಂಗ್ ಗುರ್ಜಿತ್ ಕೌರ್ ನೇತೃತ್ವದ ಭಾರತೀಯ ಪುರುಷರ ಹಾಕಿ ತಂಡದ ಪಂಜಾಬ್ ಆಟಗಾರರು ಮತ್ತು ಮಹಿಳಾ ಆಟಗಾರರು ಬುಧವಾರ ಅಮೃತಸರದ ಹರ್ಮಂದಿರ್ ಸಾಹಿಬ್ (ಸುವರ್ಣ ದೇವಸ್ಥಾನ) ಕ್ಕೆ ಭೇಟಿ ನೀಡಿದರು. ಮತ್ತೊಂದೆಡೆ, ಜಲಂಧರ್ ನಲ್ಲಿ ವಾಸಿಸುತ್ತಿರುವ ಕ್ಯಾಪ್ಟನ್ ಮನ್ ಪ್ರೀತ್, ಮನ್ ದೀಪ್ ಮತ್ತು ವರುಣ್ ಕುಮಾರ್ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು.

ಹನುಮಂತನಿಗೆ ಕಳಪೆ ಕೊಟ್ಟ ಮನೆಮಂದಿ, ಜೈಲು ಸೇರಿದ ಹಾಡು ಹಕ್ಕಿ
ಹನುಮಂತನಿಗೆ ಕಳಪೆ ಕೊಟ್ಟ ಮನೆಮಂದಿ, ಜೈಲು ಸೇರಿದ ಹಾಡು ಹಕ್ಕಿ
Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ
Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್