AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lionel Messi: ಬಾರ್ಸಿಲೋನಾ ತೊರೆದು ಪಿಎಸ್‌ಜಿ ಕ್ಲಬ್‌ ಸೇರಿದ ಮೆಸ್ಸಿ; ನೇಮರ್, ಎಂಬಾಪೆ ಜೊತೆಗೂಡಿದ ಫುಟ್ಬಾಲ್ ಮಾಂತ್ರಿಕ

Lionel Messi: 13 ನೇ ವಯಸ್ಸಿನಲ್ಲಿ ಬಾರ್ಸಿಲೋನಾದ ಅಕಾಡೆಮಿಗೆ ಸೇರಿದ ಮೆಸ್ಸಿಯ ಒಪ್ಪಂದವು ಈ ವರ್ಷದ ಜೂನ್ 30 ರಂದು ಕೊನೆಗೊಂಡಿತು. ಬಾರ್ಸಿಲೋನಾದ ಆರ್ಥಿಕ ಪರಿಸ್ಥಿತಿ ಮತ್ತು ಅದರ ಮೇಲೆ ಲಾ ಲಿಗಾ ನಿಯಮಗಳಿಂದಾಗಿ ಮೆಸ್ಸಿ ಬೇರೆಯಾಗಬೇಕಾಯಿತು.

Lionel Messi: ಬಾರ್ಸಿಲೋನಾ ತೊರೆದು ಪಿಎಸ್‌ಜಿ ಕ್ಲಬ್‌ ಸೇರಿದ ಮೆಸ್ಸಿ; ನೇಮರ್, ಎಂಬಾಪೆ ಜೊತೆಗೂಡಿದ ಫುಟ್ಬಾಲ್ ಮಾಂತ್ರಿಕ
ಪಿಎಸ್‌ಜಿ ಕ್ಲಬ್‌ ಸೇರಿದ ಮೆಸ್ಸಿ
TV9 Web
| Edited By: |

Updated on: Aug 11, 2021 | 7:43 PM

Share

ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಬಾರ್ಸಿಲೋನಾದೊಂದಿಗಿನ ಒಪ್ಪಂದವನ್ನು ಕೊನೆಗೊಳಿಸಿದ ನಂತರ ತನ್ನ ಹೊಸ ಕ್ಲಬ್ ಅನ್ನು ಬಹುತೇಕ ಅಂತಿಮಗೊಳಿಸಿದ್ದಾರೆ. ವರದಿಗಳ ಪ್ರಕಾರ, ಪಿಎಸ್‌ಜಿ ಕ್ಲಬ್‌ನೊಂದಿಗೆ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಲು ಮೆಸ್ಸಿ ಒಪ್ಪಿಕೊಂಡಿದ್ದಾರೆ. ಪಿಎಸ್‌ಜಿಯಲ್ಲಿ ಮೆಸ್ಸಿಯ ಮಾಜಿ ಸಹ ಆಟಗಾರ ನೇಮರ್ ಈಗಾಗಲೇ ಇದ್ದಾರೆ. 34 ವರ್ಷದ ಲಿಯೋನೆಲ್ ಮೆಸ್ಸಿ ಭಾನುವಾರವೇ ಬಾರ್ಸಿಲೋನಾ ಕ್ಲಬ್‌ಗೆ ಭಾವನಾತ್ಮಕ ವಿದಾಯ ಹೇಳಿದರು. ಪಿಎಸ್‌ಜಿಯಲ್ಲಿ ನೇಮರ್ ಹೊರತಾಗಿ, ಫ್ರಾನ್ಸ್‌ನ ಕೈಲಿನ್ ಎಂಬಾಪೆ ಕೂಡ ಸೇರಿದ್ದಾರೆ, ಮೆಸ್ಸಿ ಆ ಕ್ಲಬ್‌ಗೆ ಸೇರ್ಪಡೆಯಾಗಿರುವುದು ಕ್ಲಬ್ ಅನ್ನು ಮತ್ತಷ್ಟು ಬಲಪಡಿಸಲಿದೆ.

13 ನೇ ವಯಸ್ಸಿನಲ್ಲಿ ಬಾರ್ಸಿಲೋನಾದ ಅಕಾಡೆಮಿಗೆ ಸೇರಿದ ಮೆಸ್ಸಿಯ ಒಪ್ಪಂದವು ಈ ವರ್ಷದ ಜೂನ್ 30 ರಂದು ಕೊನೆಗೊಂಡಿತು. ಬಾರ್ಸಿಲೋನಾದ ಆರ್ಥಿಕ ಪರಿಸ್ಥಿತಿ ಮತ್ತು ಅದರ ಮೇಲೆ ಲಾ ಲಿಗಾ ನಿಯಮಗಳಿಂದಾಗಿ ಮೆಸ್ಸಿ ಬೇರೆಯಾಗಬೇಕಾಯಿತು. ಬಾರ್ಸಿಲೋನಾದೊಂದಿಗೆ ಇರಲು ಮೆಸ್ಸಿ ಬಯಸಿದ್ದರು, ಇದಕ್ಕಾಗಿ ಅವರು 50 ಪ್ರತಿಶತ ಕಡಿತಕ್ಕೆ ಸಿದ್ಧರಾಗಿದ್ದರು. ಆದಾಗ್ಯೂ, ಇದರ ನಂತರವೂ ಕ್ಲಬ್ ಅವರನ್ನು ಒಟ್ಟಿಗೆ ಇರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಒಪ್ಪಂದದ ಎಲ್ಲಾ ಔಪಚಾರಿಕತೆಗಳನ್ನು ಮುಂಚಿತವಾಗಿ ಪೂರ್ಣಗೊಳಿಸಿದರೆ, ಮೆಸ್ಸಿ ಶನಿವಾರ ಕ್ಲಬ್‌ನ ತವರು ಮೈದಾನದಲ್ಲಿ ಪಾದಾರ್ಪಣೆ ಮಾಡಬಹುದು.

ಲಿಯೋನೆಲ್ ಮೆಸ್ಸಿಯ ಡೀಲ್ ಮೊತ್ತವನ್ನು ಬಹಿರಂಗಪಡಿಸಲಾಗಿಲ್ಲ ಎಷ್ಟು ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಲಿಯೋನೆಲ್ ಮೆಸ್ಸಿ ಮತ್ತು ಪಿಎಸ್‌ಜಿ ಇನ್ನೂ ದೃಢಪಡಿಸಿಲ್ಲ. ಫ್ರೆಂಚ್ ಮಾಧ್ಯಮದ ಪ್ರಕಾರ ಮೆಸ್ಸಿ ಪಿಎಸ್‌ಜಿಗೆ ಸೇರಿಕೊಂಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿದೆ. ಅದು ಸಂಭವಿಸಿದಲ್ಲಿ, ಮೆಸ್ಸಿ ಈ ಬೇಸಿಗೆಯಲ್ಲಿ ಪಿಎಸ್‌ಜಿಯ ನಾಲ್ಕನೇ ಶುಲ್ಕ ವರ್ಗಾವಣೆಯ ಒಪ್ಪಂದವಾಗಲಿದ್ದಾರೆ. ಮೆಸ್ಸಿಗಿಂತ ಮುಂಚೆಯೇ, ಪಿಎಸ್‌ಜಿ ಎರಡು ಬಾರಿ ವಿಶ್ವದ ಅತ್ಯಂತ ದುಬಾರಿ ಒಪ್ಪಂದಕ್ಕೆ ಸಹಿ ಹಾಕಿದೆ. ಒಪ್ಪಂದದ ಮೊತ್ತದ ಬಗ್ಗೆ ಯಾವುದೇ ಸುದ್ದಿ ಹೊರಬಿದ್ದಿಲ್ಲ.

ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ