Asian Games: 16 ಚಿನ್ನ, 71 ಪದಕ; ಏಷ್ಯನ್ ಗೇಮ್ಸ್​ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಭಾರತ..! ಪ್ರಧಾನಿ ಮೋದಿ ಮೆಚ್ಚುಗೆ

|

Updated on: Oct 04, 2023 | 3:07 PM

Asian Games: ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಭಾರತ ಹೊಸ ಯಶೋಗಾಥೆ ಬರೆದಿದೆ. ಈ ಹಿಂದೆ ಜಕಾರ್ತದಲ್ಲಿ ನಡೆದಿದ್ದ 2018ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 16 ಚಿನ್ನ ಸೇರಿದಂತೆ ಒಟ್ಟು 70 ಪದಕಗಳನ್ನು ಗೆದ್ದಿತ್ತು. ಆದರೆ ಈಗ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್​ನ 11ನೇ ದಿನದಂದು 16ನೇ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಪದಕಗಳ ಸಂಖ್ಯೆ 71 ಕ್ಕೇರಿದೆ.

Asian Games: 16 ಚಿನ್ನ, 71 ಪದಕ; ಏಷ್ಯನ್ ಗೇಮ್ಸ್​ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಭಾರತ..! ಪ್ರಧಾನಿ ಮೋದಿ ಮೆಚ್ಚುಗೆ
ನರೇಂದ್ರ ಮೋದಿ
Follow us on

ಏಷ್ಯನ್ ಗೇಮ್ಸ್ (Asian Games 2023) ಇತಿಹಾಸದಲ್ಲಿ ಭಾರತ ಹೊಸ ಯಶೋಗಾಥೆ ಬರೆದಿದೆ. ಈ ಹಿಂದೆ ಜಕಾರ್ತದಲ್ಲಿ ನಡೆದಿದ್ದ 2018ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 16 ಚಿನ್ನ ಸೇರಿದಂತೆ ಒಟ್ಟು 70 ಪದಕಗಳನ್ನು ಗೆದ್ದಿತ್ತು. ಆದರೆ ಈಗ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್​ನ 11ನೇ ದಿನದಂದು 16ನೇ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಪದಕಗಳ ಸಂಖ್ಯೆ 71 ಕ್ಕೇರಿದೆ. ಈ ಮೂಲಕ ಭಾರತ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಅಧಿಕ ಪದಕಗಳನ್ನು ಗೆದ್ದ ತನ್ನ ದಾಖಲೆಯನ್ನು ಮುರಿದಿದೆ. ಇಂದು ಬೆಳಿಗ್ಗೆ ಆರ್ಚರಿ ಸಂಯುಕ್ತ ಮಿಶ್ರ ತಂಡ ಸ್ಪರ್ಧೆಯಲ್ಲಿ (Compound Mixed-team Event of Archery) ಭಾರತ 16ನೇ ಚಿನ್ನದ ಪದಕ ಗೆದ್ದುಕೊಂಡಿದ್ದು, ಪದಕಗಳ ವಿಚಾರದಲ್ಲಿ ಐತಿಹಾಸಿಕ ಸಾಧನೆ ಮಾಡಿದೆ.

ಫೈನಲ್​ನಲ್ಲಿ ರೋಚಕ ಹಣಾಹಣಿ

ಆರ್ಚರಿ ಕಾಂಪೌಂಡ್ ವಿಭಾಗದ ಮಿಶ್ರ ಸ್ಪರ್ಧೆಯಲ್ಲಿ ಓಜಸ್ ಪ್ರವೀಣ್ ಡಿಯೋಟಾಲೆ ಮತ್ತು ಜ್ಯೋತಿ ಸುರೇಖಾ ವೆನ್ನಂ ಭಾರತಕ್ಕೆ ಚಿನ್ನ ತಂದುಕೊಟ್ಟಿದ್ದಾರೆ. ಪ್ರವೀಣ್ ಮತ್ತು ಜ್ಯೋತಿ ಮಿಶ್ರ ಡಬಲ್ಸ್ ಸೆಮಿಫೈನಲ್‌ನಲ್ಲಿ ಕಜಕಿಸ್ತಾನ್ ಜೋಡಿಯನ್ನು 159-154 ರಿಂದ ಸೋಲಿಸಿ ಫೈನಲ್ ತಲುಪಿದ್ದರು. ಇನ್ನು ಫೈನಲ್​ನಲ್ಲಿ ಭಾರತದ ಆರ್ಚರಿ ತಂಡದ ಮುಂದೆ ಕೊರಿಯಾ ಜೋಡಿ ಆರಂಭದಿಂದಲೇ ಒತ್ತಡಕ್ಕೆ ಸಿಲುಕಿತ್ತು. ಮೊದಲ ಸೆಟ್‌ನಲ್ಲಿ ಭಾರತದ ಜೋಡಿ 40 ಅಂಕಗಳು ಕಲೆಹಾಕಿತು. ಕೊರಿಯಾದ ಆರ್ಚರಿ ತಂಡ 38 ಅಂಕ ಕಲೆಹಾಕಿತು. ಮುಂದಿನ ಸುತ್ತಿನಲ್ಲೂ ಭಾರತದ ಜೋಡಿ 6 ಪ್ರಯತ್ನದಲ್ಲೂ ತಲಾ 10 ಅಂಕ ಸಂಪಾದಿಸಿತು. ಆದರೆ ಕೊರಿಯಾದ ಜೋಡಿ ನಿಧಾನವಾಗಿ ಆಟಕ್ಕೆ ಮರಳಿತು. ಈ ವೇಳೆ ಶಾಟ್ ನಂಬರ್ 9ರಲ್ಲಿ ಪ್ರವೀಣ್ 9 ಅಂಕ ಕಲೆಹಾಕಿದರು. ಆ ತಪ್ಪಿನ ಲಾಭ ಪಡೆದ ಕೊರಿಯಾದ ಬಿಲ್ಲುಗಾರರು ಸ್ಕೋರ್ ಸಮಗೊಳಿಸಿದರು.

ಏಷ್ಯನ್ ಗೇಮ್ಸ್​ನಲ್ಲಿ ದಾಖಲೆ ಸೃಷ್ಟಿಸಿದ ಭಾರತದ ಶೂಟರ್​ಗಳು; 22 ಪದಕಗಳೊಂದಿಗೆ ಪಯಣ ಅಂತ್ಯ

ಕೊನೆಯಲ್ಲಿ ಗೆದ್ದ ಭಾರತ

ಅಂತಿಮ ಸೆಟ್‌ನಲ್ಲಿ ಭಾರತದ ಜೋಡಿ ತಲಾ 10 ಅಂಕ ಸಂಪಾದಿಸಿತು. ಆದರೆ ಅಂತಿಮ ಸೆಟ್​ನಲ್ಲಿ ಒತ್ತಡಕ್ಕೆ ಸಿಲುಕಿದ ಕೊರಿಯನ್ ಜೋಡಿ 19 ಅಂಕ ಕಲೆಹಾಕಿತು. ಅಂತಿಮವಾಗಿ ಭಾರತದ ಜೋಡಿಯು 159-158 ಅಂಕಗಳೊಂದಿಗೆ ಜೋ ಜೆಹುನ್ ಮತ್ತು ಸೊ ಚಿಯೋನ್ ಜೋಡಿಯನ್ನು ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಟಿತು.

ಇನ್ನು ಏಷ್ಯನ್ ಗೇಮ್ಸ್​ನಲ್ಲಿ ಇತಿಹಾಸ ನಿರ್ಮಿಸಿದ ಭಾರತದ ಕ್ರೀಡಾ ಸ್ಪರ್ಧಿಗಳಿಗೆ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡ ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಭಾರತೀಯರ ಸಾಧನೆಯನ್ನು ಕೊಂಡಾಡಿದ್ದಾರೆ.

ಹ್ಯಾಂಗ್‌ಝೌ ಕ್ರೀಡಾಕೂಟದಲ್ಲಿ ಭಾರತ 100 ಪದಕ ಗೆಲ್ಲುವ ಗುರಿ ಹೊಂದಿದೆ. ಐದು ವರ್ಷಗಳ ಹಿಂದೆ ಜಕಾರ್ತಾ ಏಷ್ಯನ್ ಗೇಮ್ಸ್ 16 ಚಿನ್ನ ಸೇರಿದಂತೆ 70 ಪದಕಗಳನ್ನು ತಂದಿತ್ತು. ಆದರೆ ಈ ಬಾರಿಯ ಏಷ್ಯನ್ ಗೇಮ್ಸ್​ನಲ್ಲಿ ಭಾರತ ಸದ್ಯ 16ನೇ ಚಿನ್ನದ ಪದಕದೊಂದಿಗೆ 71 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:30 am, Wed, 4 October 23