ಏಷ್ಯನ್ ಗೇಮ್ಸ್‌ನಲ್ಲಿ ದಾಖಲೆ ಸೃಷ್ಟಿಸಿದ ಭಾರತದ ಶೂಟರ್‌ಗಳು; 22 ಪದಕಗಳೊಂದಿಗೆ ಪಯಣ ಅಂತ್ಯ
Asian Games 2023: ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಶೂಟರ್‌ಗಳು 7 ಚಿನ್ನ, 9 ಬೆಳ್ಳಿ ಮತ್ತು 6 ಕಂಚು ಸೇರಿದಂತೆ ಒಟ್ಟು 22 ಪದಕಗಳನ್ನು ಗೆಲ್ಲುವ ಮೂಲಕ ತಮ್ಮ ಪ್ರಯಾಣವನ್ನು ಅಂತ್ಯಗೊಳಿಸಿದ್ದಾರೆ. ವಾಸ್ತವವಾಗಿ 2018 ರಲ್ಲಿ ಜಕಾರ್ತಾದಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಶೂಟರ್‌ಗಳು 2 ಚಿನ್ನ, 4 ಬೆಳ್ಳಿ ಮತ್ತು 3 ಕಂಚು ಸೇರಿದಂತೆ ಒಟ್ಟು 9 ಪದಕಗಳನ್ನು ಪಡೆದಿದ್ದರು.
ಏಷ್ಯನ್ ಗೇಮ್ಸ್‌ನಲ್ಲಿ (Asian Games 2023) ಗಮನಾರ್ಹ ಪ್ರದರ್ಶನ ನೀಡಿದ ಭಾರತದ ಶೂಟರ್‌ಗಳು (Indian Shooters) ಬ್ಯಾಕ್-ಟು-ಬ್ಯಾಕ್ ಪದಕಗಳನ್ನು ಗೆಲ್ಲು ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ . ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಶೂಟರ್‌ಗಳು 7 ಚಿನ್ನ, 9 ಬೆಳ್ಳಿ ಮತ್ತು 6 ಕಂಚು ಸೇರಿದಂತೆ ಒಟ್ಟು 22 ಪದಕಗಳನ್ನು ಗೆಲ್ಲುವ ಮೂಲಕ ತಮ್ಮ ಪ್ರಯಾಣವನ್ನು ಅಂತ್ಯಗೊಳಿಸಿದ್ದಾರೆ. ವಾಸ್ತವವಾಗಿ 2018 ರಲ್ಲಿ ಜಕಾರ್ತಾದಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಶೂಟರ್‌ಗಳು 2 ಚಿನ್ನ, 4 ಬೆಳ್ಳಿ ಮತ್ತು 3 ಕಂಚು ಸೇರಿದಂತೆ ಒಟ್ಟು 9 ಪದಕಗಳನ್ನು ಪಡೆದಿದ್ದರು. ಆದಾಗ್ಯೂ, ಜಕಾರ್ತಾದಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನಲ್ಲಿ ಯಾವುದೇ ಶೂಟಿಂಗ್ ಟೀಮ್ ಈವೆಂಟ್ ಇರಲಿಲ್ಲ. ಈ ಬಾರಿ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಭಾರತದ ಶೂಟರ್‌ಗಳು ಈ ಸ್ಪರ್ಧೆಯ ಪ್ರತಿಯೊಂದು ವಿಭಾಗದಲ್ಲೂ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಶೂಟಿಂಗ್ನಲ್ಲಿ ಭಾರತಕ್ಕೆ ಸಿಕ್ಕ ಪದಕಗಳ ಪಟ್ಟಿ ಇಲ್ಲಿದೆ.
ಚಿನ್ನದ ಪದಕ ವಿಜೇತರು
- ಪುರುಷರ 10 ಮೀ ಏರ್ ಪಿಸ್ತೂಲ್ (ತಂಡ) – ಅರ್ಜುನ್ ಸಿಂಗ್ ಚೀಮಾ, ಶಿವ ನರ್ವಾಲ್, ಸರಬ್ಜೋತ್ ಸಿಂಗ್.
- ಪುರುಷರ 10 ಮೀ ಏರ್ ರೈಫಲ್ (ತಂಡ)- ದಿವ್ಯಾನ್ಶ್ ಸಿಂಗ್ ಪನ್ವಾರ್, ರುದ್ರಾಂಶ್ ಪಾಟೀಲ್, ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್.
- ಪುರುಷರ 50 ಮೀ ರೈಫಲ್ ತ್ರೀ ಪೊಸಿಷನ್ (ತಂಡ)- ಸುರೇಶ್ ಸ್ವಪ್ನಿಲ್ ಕುಸಾಲೆ, ಅಖಿಲ್, ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್.
- ಮಹಿಳೆಯರ 10 ಮೀ ಏರ್ ಪಿಸ್ತೂಲ್ (ವೈಯಕ್ತಿಕ) – ಪಾಲಕ್ ಗುಲಿಯಾ.
- ಮಹಿಳೆಯರ 25 ಮೀ ಪಿಸ್ತೂಲ್ (ತಂಡ) – ಮನು ಭಾಕರ್, ರಿದಮ್ ಸಾಂಗ್ವಾನ್, ಇಶಾ ಸಿಂಗ್.
- ಪುರುಷರ 50 ಮೀ ಟ್ರ್ಯಾಪ್ ಶೂಟಿಂಗ್ (ತಂಡ)- ಕೆನನ್ ಚೆನ್ನೈ, ಜೋರಾಬರ್ ಸಿಂಗ್, ಪೃಥ್ವಿರಾಜ್ ತೊಂಡಿಯಾಮನ್.
- ಮಹಿಳೆಯರ 50 ಮೀ ರೈಫಲ್ ಮೂರು ಸ್ಥಾನಗಳು (ವೈಯಕ್ತಿಕ)- ಸಿಫ್ಟ್ ಕೌರ್ ಸಮ್ರಾ.
ಪದಕಗಳ ಅರ್ಧಶತಕ ಪೂರ್ಣ; ಒಂದೇ ದಿನ ಅಧಿಕ ಪದಕ ಗೆದ್ದು ತನ್ನದೇ ದಾಖಲೆ ಮುರಿದ ಭಾರತ..!
ಬೆಳ್ಳಿ ಗೆದ್ದ ಶೂಟರ್‌ಗಳ ಪಟ್ಟಿ
- ಪುರುಷರ 50 ಮೀ ರೈಫಲ್ 3 ಪೊಸಿಷನ್(ವೈಯಕ್ತಿಕ) – ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್.
- ಪುರುಷರ ಸ್ಕೀಟ್ (ವೈಯಕ್ತಿಕ) – ಅನಂತಜಿತ್ ಸಿಂಗ್.
- ಮಹಿಳೆಯರ 10 ಮೀ ಏರ್ ಪಿಸ್ತೂಲ್ (ವೈಯಕ್ತಿಕ) – ಇಶಾ ಸಿಂಗ್.
- ಮಹಿಳೆಯರ 10 ಮೀ ಏರ್ ಪಿಸ್ತೂಲ್ (ತಂಡ) – ದಿವ್ಯಾ ಟಿಎಸ್, ಇಶಾ ಸಿಂಗ್, ಪಾಲಕ್ ಗುಲಿಯಾ.
- ಮಹಿಳೆಯರ 10 ಮೀ ಏರ್ ರೈಫಲ್ (ತಂಡ) – ರಮಿತಾ, ಮೆಹುಲಿ ಘೋಷ್, ಅಸಿ ಚೌಕ್ಸೆ.
- ಮಹಿಳೆಯರ 25 ಮೀ ಪಿಸ್ತೂಲ್ (ವೈಯಕ್ತಿಕ) – ಇಶಾ ಸಿಂಗ್
- ಮಹಿಳೆಯರ 50 ಮೀ ರೈಫಲ್ 3 ಪೊಸಿಷನ್ (ತಂಡ)- ಸಿಫ್ಟ್ ಕೌರ್ ಸಮ್ರಾ, ಅಸಿ ಚೌಕ್ಸೆ, ಮಾನಿನಿ ಕೌಶಿಕ್.
- 10 ಮೀ ಏರ್ ಪಿಸ್ತೂಲ್ ಮಿಶ್ರ ತಂಡ – ಸರಬ್ಜೋತ್ ಸಿಂಗ್, ದಿವ್ಯಾ ಟಿಎಸ್.
- ಟ್ರ್ಯಾಪ್ ಮಹಿಳಾ ತಂಡ – ರಾಜೇಶ್ವರಿ ಕುಮಾರಿ, ಮನಿಶಾ ಖೇರ್, ಪ್ರೀತಿ ರಜಾಕ್.
ಕಂಚು ಗೆದ್ದ ಭಾರತದ ಶೂಟರ್‌ಗಳ ಪಟ್ಟಿ
- ಪುರುಷರ 10 ಮೀ ಏರ್ ರೈಫಲ್- ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್.
- ಪುರುಷರ 25 ಮೀ ರಾಪಿಡ್ ಫೈರ್ ಪಿಸ್ತೂಲ್ (ತಂಡ) – ಆದರ್ಶ್ ಸಿಂಗ್, ಅನೀಶ್, ವಿಜಯವೀರ್ ಸಿಧು.
- ಸ್ಕೀಟ್ ಪುರುಷರ ತಂಡ – ಅಂಗದ್ ಬೀರ್ ಸಿಂಗ್ ಬಜ್ವಾ, ಅನಂತಜಿತ್ ಸಿಂಗ್ ನರುಕಾ, ಗುರ್ಜೋತ್ ಸಿಂಗ್ ಖಂಗುರಾ.
- ಮಹಿಳೆಯರ 10 ಮೀ ಏರ್ ರೈಫಲ್(ವೈಯಕ್ತಿಕ) – ರಮಿತಾ ಜಿಂದಾಲ್.
- 50 ಮೀ ರೈಫಲ್ 3 ನೇ ಸ್ಥಾನ – ಅಸಿ ಚೌಕ್ಸೆ.
- ಟ್ರ್ಯಾಪ್ ಪುರುಷರ ಫೈನಲ್ (ವೈಯಕ್ತಿಕ)- ಕೀನನ್ ಚೆನ್ನೈ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ