24ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್​ ಕುವರಿ ಸ್ಮೃತಿ ಮಂದಾನ!

| Updated By: ಸಾಧು ಶ್ರೀನಾಥ್​

Updated on: Jul 18, 2020 | 3:15 PM

ಮುಂಬೈ: ದೇಶದ ಖ್ಯಾತ ಮಹಿಳಾ ಕ್ರಿಕೆಟ್​ ಆಟಗಾರ್ತಿ ಹಾಗೂ ಟೀಮ್​ ಇಂಡಿಯಾದ ಓಪನರ್​ ಸ್ಮೃತಿ ಮಂದಾನ ಇಂದು ತಮ್ಮ 24ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಹೀಗಾಗಿ, ದೇಶದ ಮಾಜಿ ಕ್ರಿಕೆಟಿಗ ಯುವರಾಜ್​ ಸಿಂಗ್​ರಿಂದ ಹಿಡಿದು ಇವರ ಇಡೀ ಅಭಿಮಾನಿ ಬಳಗವೇ ಸೋಷಿಯಲ್​ ಮೀಡಿಯಾ ಮುಖಾಂತರ ತಮ್ಮ ಬರ್ತ್​ ಡೇ ವಿಶಸ್​ ಹಂಚಿಕೊಂಡಿದ್ದಾರೆ. 1996ರಲ್ಲಿ ಜನಿಸಿದ ಸ್ಮೃತಿ ಭಾರತೀಯ ಮಹಿಳಾ ಕ್ರಿಕೆಟ್​ ತಂಡದ ಓಪನರ್​ ಆಗಿ ತಮ್ಮದೇ ಛಾಪು ಮೂಡಿಸಿದ್ದಾರೆ. ODI ಶ್ರೇಣಿಯಲ್ಲಿ 4ನೇ ಅತ್ಯುತ್ತಮ ಬ್ಯಾಟ್ಸ್​ವುಮನ್​ ಎಂಬ ಹೆಗ್ಗಳಿಕೆಗೆ […]

24ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್​ ಕುವರಿ ಸ್ಮೃತಿ ಮಂದಾನ!
Follow us on

ಮುಂಬೈ: ದೇಶದ ಖ್ಯಾತ ಮಹಿಳಾ ಕ್ರಿಕೆಟ್​ ಆಟಗಾರ್ತಿ ಹಾಗೂ ಟೀಮ್​ ಇಂಡಿಯಾದ ಓಪನರ್​ ಸ್ಮೃತಿ ಮಂದಾನ ಇಂದು ತಮ್ಮ 24ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಹೀಗಾಗಿ, ದೇಶದ ಮಾಜಿ ಕ್ರಿಕೆಟಿಗ ಯುವರಾಜ್​ ಸಿಂಗ್​ರಿಂದ ಹಿಡಿದು ಇವರ ಇಡೀ ಅಭಿಮಾನಿ ಬಳಗವೇ ಸೋಷಿಯಲ್​ ಮೀಡಿಯಾ ಮುಖಾಂತರ ತಮ್ಮ ಬರ್ತ್​ ಡೇ ವಿಶಸ್​ ಹಂಚಿಕೊಂಡಿದ್ದಾರೆ.

1996ರಲ್ಲಿ ಜನಿಸಿದ ಸ್ಮೃತಿ ಭಾರತೀಯ ಮಹಿಳಾ ಕ್ರಿಕೆಟ್​ ತಂಡದ ಓಪನರ್​ ಆಗಿ ತಮ್ಮದೇ ಛಾಪು ಮೂಡಿಸಿದ್ದಾರೆ. ODI ಶ್ರೇಣಿಯಲ್ಲಿ 4ನೇ ಅತ್ಯುತ್ತಮ ಬ್ಯಾಟ್ಸ್​ವುಮನ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಮುಂಬೈ ಬೆಡಗಿ ವಿಶ್ವದ ಗಮನ ಸೆಳೆದಿದ್ದು 2018ರಲ್ಲಿ ನಡೆದ ICC ಮಹಿಳಾ T20 ಪಂದ್ಯಾವಳಿಯಲ್ಲಿ. ಕೇವಲ ಐದು ಮ್ಯಾಚ್​ನಲ್ಲಿ 178 ರನ್​ ಗಳಿಸಿ ಪಂದ್ಯಾವಳಿಯ ಮೂರನೇ ಅತ್ಯುತ್ತಮ ಬ್ಯಾಟ್ಸ್​ವುಮನ್ ಆಗಿ ಹೊರಹೊಮ್ಮಿದರು.

ಇದಲ್ಲದೆ, ಮಹಿಳಾ IPL ಟ್ರೇಲ್​ಬ್ಲೇಜರ್ಸ್​ ತಂಡದ ಕ್ಯಾಪ್ಟನ್​ ಆಗಿ ಮಿಂಚಿದ ಈ ಲೆಫ್ಟ್ ಹ್ಯಾಂಡ್​ ಬ್ಯಾಟ್ಸ್​ವುಮನ್ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್​ ಲೋಕದಲ್ಲಿ ಅಭೂತಪೂರ್ವ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ಇತ್ತೀಚೆಗೆ BCCI ಸ್ಮೃತಿಗೆ ಅತ್ಯುತ್ತಮ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್​ ಆಟಗಾರ್ತಿ ಎಂದು ಹೆಸರಿಸಿ ಸನ್ಮಾಸಿತ್ತು.

2020ರ T20 ವಿಶ್ವ ಕಪ್​ನಲ್ಲಿ ಆಸ್ಟ್ರೇಲಿಯ ವಿರುದ್ಧ ಫೈನಲ್ ತಲುಪಿದ್ದ ಟೀಮ್​ ಇಂಡಿಯಾ ತಂಡದಲ್ಲಿ ಸ್ಮೃತಿ ಮಂದಾನ ಮಹತ್ತರ ಪಾತ್ರ ವಹಿಸಿದ್ದರು.