AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಣ್ಮಕ್ಳೆ ಸ್ಟ್ರಾಂಗು ಗುರು: ಸತತ 2ನೇ ಬಾರಿ ಕಬಡ್ಡಿಯಲ್ಲಿ ವಿಶ್ವಕಪ್ ಗೆದ್ದ ಭಾರತೀಯ ನಾರಿಯರು

Women’s Kabaddi World Cup: ಸೋಮವಾರ ನಡೆದ ಮಹಿಳಾ ಕಬಡ್ಡಿ ವಿಶ್ವಕಪ್​​ ಟೂರ್ನಿ ಫೈನಲ್ ಪಂದ್ಯದಲ್ಲಿ ಚೈನೀಸ್ ತೈಪೆ ತಂಡವನ್ನು ಸೋಲಿಸುವ ಮೂಲಕ ಭಾರತ ತಂಡ ಸತತ ಎರಡನೇ ಬಾರಿಗೆ ವಿಶ್ವಕಪ್ ಅನ್ನು ಗೆದ್ದು ಬೀಗಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಹೆಣ್ಮಕ್ಳೆ ಸ್ಟ್ರಾಂಗು ಗುರು: ಸತತ 2ನೇ ಬಾರಿ ಕಬಡ್ಡಿಯಲ್ಲಿ ವಿಶ್ವಕಪ್ ಗೆದ್ದ ಭಾರತೀಯ ನಾರಿಯರು
ಭಾರತೀಯ ಕಬ್ಬಡಿ ತಂಡ
ಗಂಗಾಧರ​ ಬ. ಸಾಬೋಜಿ
|

Updated on:Nov 24, 2025 | 9:43 PM

Share

ಸೋಮವಾರ ಬಾಂಗ್ಲಾದೇಶದ ಢಾಕಾದಲ್ಲಿ ನಡೆದ 2025ರ ಮಹಿಳಾ ಕಬಡ್ಡಿ ವಿಶ್ವಕಪ್​​ ಟೂರ್ನಿಯಲ್ಲಿ (Women’s Kabaddi World Cup) ಭಾರತ ತಂಡ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಆ ಮೂಲಕ ಭಾರತೀಯ ನಾರಿಯರು ಸತತ ಎರಡನೇ ಬಾರಿಗೆ ವಿಶ್ವಕಪ್​​ ಅನ್ನು ಮುಡಿಗೇರಿಸಿಕೊಂಡಿದ್ದಾರೆ. ರೋಚಕ ಫೈನಲ್ ಪಂದ್ಯದಲ್ಲಿ ಚೈನೀಸ್ ತೈಪೆ ತಂಡವನ್ನು 35-28 ಅಂಕಗಳ ಅಂತರದಲ್ಲಿ ಸೋಲಿಸುವ ಮೂಲಕ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ.

2012ರಲ್ಲಿ ಬಿಹಾರದಲ್ಲಿ ಕೊನೆಯ ಬಾರಿ ವಿಶ್ವಕಪ್​​ ಪಂದ್ಯ ನಡೆದಿತ್ತು. ಆ ಬಳಿಕ 13 ವರ್ಷಗಳ ನಂತರ ಎರಡನೇ ಆವೃತ್ತಿಯ ಮಹಿಳೆಯರ ವಿಶ್ವಕಪ್​​ ಟೂರ್ನಿ ಆಯೋಜಿಸಲಾಗಿತ್ತು. ಮೊದಲ ಆವೃತ್ತಿಯಲ್ಲಿ ಕೂಡ ಭಾರತ ತಂಡ ಚಾಂಪಿಯನ್​ ಆಗಿತ್ತು.

ಪ್ರಧಾನಿ ಮೋದಿ ಟ್ವೀಟ್​

ಸೆಮಿಫೈನಲ್‌ನಲ್ಲಿ ಇರಾನ್ ತಂಡವನ್ನು 33–21 ಅಂತರದಿಂದ ಸೋಲಿಸುವ ಮೂಲಕ ಭಾರತ ತಂಡ ಫೈನಲ್ ಪ್ರವೇಶಿಸಿತ್ತು. ಇತ್ತ ಚೈನೀಸ್ ತೈಪೆ ತಂಡ ಕೂಡ ತನ್ನದೇ ಆದ ಅಜೇಯ ದಾಖಲೆಯೊಂದಿಗೆ ಫೈನಲ್‌ಗೆ ತಲುಪಿತ್ತು. ಇಂದು ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಚೈನೀಸ್ ತೈಪೆ ತಂಡವನ್ನು ಮಣಿಸುವ ಮೂಲಕ ವಿಶ್ವಕಪ್​​ ಟ್ರೋಫಿಯನ್ನು ಭಾರತ ತಂಡ ಎತ್ತಿಹಿಡಿದಿದೆ.

ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

ಮಹಿಳಾ ಕಬಡ್ಡಿ ವಿಶ್ವಕಪ್​​ ಟೂರ್ನಿಯಲ್ಲಿ ಭಾರತ ತಂಡ ಗೆದ್ದ ಖುಷಿಯಲ್ಲಿ ಟ್ವೀಟ್​ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ‘2025ರ ಕಬಡ್ಡಿ ವಿಶ್ವಕಪ್​​​ ಗೆಲ್ಲುವ ಮೂಲಕ ದೇಶ ಹೆಮ್ಮೆಪಡುವಂತೆ ಮಾಡಿದ ನಮ್ಮ ಭಾರತೀಯ ಮಹಿಳಾ ಕಬಡ್ಡಿ ತಂಡಕ್ಕೆ ಅಭಿನಂದನೆಗಳು.  ಅವರು ಅತ್ಯುತ್ತಮ ಕ್ರೀಡಾ ಸಮರ್ಪಣಾ ಭಾವವನ್ನು ಪ್ರದರ್ಶಿಸಿದ್ದಾರೆ. ಅವರ ಈ ಗೆಲುವು ಅಸಂಖ್ಯಾತ ಯುವಕರಿಗೆ ಸ್ಫೂರ್ತಿ’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:59 pm, Mon, 24 November 25

Follow Us
ಅಪ್ಪು ಪುತ್ಥಳಿ ಅನಾವರಣ: ಅಶ್ವಿನಿ ಪುನೀತ್​​ರಾಜ್​ಕುಮಾರ್ ಮಾತು
ಅಪ್ಪು ಪುತ್ಥಳಿ ಅನಾವರಣ: ಅಶ್ವಿನಿ ಪುನೀತ್​​ರಾಜ್​ಕುಮಾರ್ ಮಾತು
ವಾಹನ ಖರೀದಿದಾರರಿಗೆ ಶಾಕ್​! ಕಾರು, ಬೈಕ್ ಬೆಲೆಯಲ್ಲಿ ಏರಿಕೆ ಸಾಧ್ಯತೆ
ವಾಹನ ಖರೀದಿದಾರರಿಗೆ ಶಾಕ್​! ಕಾರು, ಬೈಕ್ ಬೆಲೆಯಲ್ಲಿ ಏರಿಕೆ ಸಾಧ್ಯತೆ
ರಾಜ್ಯದಲ್ಲಿ ಮತ್ತೆ ಬಸ್ ಟಿಕೆಟ್‌ ದರ ಹೆಚ್ಚಾಗುತ್ತಾ?
ರಾಜ್ಯದಲ್ಲಿ ಮತ್ತೆ ಬಸ್ ಟಿಕೆಟ್‌ ದರ ಹೆಚ್ಚಾಗುತ್ತಾ?
ಕೋರಮಂಗಲದಲ್ಲಿ 13 ಟನ್ ಹಸಿ ಕಸದಿಂದ ಇಂಧನ ಉತ್ಪಾದನೆ
ಕೋರಮಂಗಲದಲ್ಲಿ 13 ಟನ್ ಹಸಿ ಕಸದಿಂದ ಇಂಧನ ಉತ್ಪಾದನೆ
ಪವನ್ ಕಲ್ಯಾಣ್, ಶ್ರೀಲೀಲಾ ಜೊತೆಗೆ ‘ಉಸ್ತಾದ್ ಭಗತ್ ಸಿಂಗ್’ ನೋಡಿದ ಚಿರಂಜೀವಿ
ಪವನ್ ಕಲ್ಯಾಣ್, ಶ್ರೀಲೀಲಾ ಜೊತೆಗೆ ‘ಉಸ್ತಾದ್ ಭಗತ್ ಸಿಂಗ್’ ನೋಡಿದ ಚಿರಂಜೀವಿ
ಸಿಲಿಂಡರ್ ಕದ್ದು ಪರಾರಿಯಾದ ಕಳ್ಳರು; ಸಿಸಿಟಿವಿಯಲ್ಲಿ ಖತರ್ನಾಕ್ ಕೃತ್ಯ ಸೆರೆ
ಸಿಲಿಂಡರ್ ಕದ್ದು ಪರಾರಿಯಾದ ಕಳ್ಳರು; ಸಿಸಿಟಿವಿಯಲ್ಲಿ ಖತರ್ನಾಕ್ ಕೃತ್ಯ ಸೆರೆ
ಪಶುವೈದ್ಯೆ ಸಾವು: ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ; ಸಮೀಕ್ಷಾ ರೆಡ್ಡಿ ಮಾವ
ಪಶುವೈದ್ಯೆ ಸಾವು: ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ; ಸಮೀಕ್ಷಾ ರೆಡ್ಡಿ ಮಾವ
ಪ್ರವಾಹದಿಂದ ಬಿಹಾರದ ವಿಕ್ರಮಶಿಲಾ ಸೇತುವೆಯ ಕಂಬಕ್ಕೆ ಹಾನಿ
ಪ್ರವಾಹದಿಂದ ಬಿಹಾರದ ವಿಕ್ರಮಶಿಲಾ ಸೇತುವೆಯ ಕಂಬಕ್ಕೆ ಹಾನಿ
ಡಿಕೆಶಿ​​​ನ್ನ ಸಿಎಂ ಮಾಡಿ ಎಂದಿದ್ದಕ್ಕೆ ಬಜೆಟ್​​ನಲ್ಲಿ 1 ರೂ ನೀಡಿಲ್ಲ
ಡಿಕೆಶಿ​​​ನ್ನ ಸಿಎಂ ಮಾಡಿ ಎಂದಿದ್ದಕ್ಕೆ ಬಜೆಟ್​​ನಲ್ಲಿ 1 ರೂ ನೀಡಿಲ್ಲ
ರೂಮಿನಲ್ಲಿ ಕೂಡಿ ಹಾಕಿ ಬೆಲ್ಟ್‌ನಿಂದ ಬಾರಿಸಿದ ಪ್ರಿನ್ಸಿಪಾಲ್!
ರೂಮಿನಲ್ಲಿ ಕೂಡಿ ಹಾಕಿ ಬೆಲ್ಟ್‌ನಿಂದ ಬಾರಿಸಿದ ಪ್ರಿನ್ಸಿಪಾಲ್!