IPLಗೆ 12 ವರ್ಷ: ಧೋನಿಯಿಂದ ಕಮ್ಮಿನ್ಸ್‌ ತನಕ.. ಕುಬೇರರ ಕತೆಯೇನು? ಗೆದ್ದವರು, ಬಿದ್ದವರಾರು?

|

Updated on: Sep 12, 2020 | 2:08 PM

ಪ್ರತಿ ವರ್ಷವೂ ಐಪಿಎಲ್ ಬಿಡ್ಡಿಂಗ್​ನಲ್ಲಿ ಕೆಲ ಆಟಗಾರರು ಕೋಟಿ ಕೋಟಿ ಮೊತ್ತಕ್ಕೆ ಸೇಲ್ ಆಗ್ತಾರೆ. ಈ ಪೈಕಿ ಕೆಲ ಆಟಗಾರರು ಮಾತ್ರ ಮಾಲೀಕರ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ್ರೆ, ಇನ್ನೂ ಕೆಲ ಕೋಟಿ ವೀರರು ಫ್ರಾಂಚೈಸಿ ನಂಬಿಕೆ ಉಳಿಸಿಕೊಳ್ಳುವಲ್ಲಿ ವಿಫಲರಾಗ್ತಾರೆ. ಹಾಗಾದ್ರೆ 12 ವರ್ಷದಿಂದ ಅಂದ್ರೆ ಧೋನಿಯಿಂದ ಕಮಿನ್ಸ್​ವರೆಗೆ ಐಪಿಎಲ್ ಕುಬೇರರ ಕತೆಯೇನು ಅನ್ನೋದು ಇಲ್ಲಿದೆ 2008ರ ಐಪಿಎಲ್ ಬಿಡ್ಡಿಂಗ್​ನಲ್ಲಿ 6 ಕೋಟಿಗೆ ಚೆನ್ನೈ ತಂಡದ ಪಾಲಾದ ಧೋನಿ, ತಮ್ಮ ಆಯ್ಕೆಯನ್ನ ನಿರೀಕ್ಷೆಗೂ ಮೀರಿ ಇಂದಿಗೂ ಸಮರ್ಥಿಸಿಕೊಂಡಿದ್ದಾರೆ. […]

IPLಗೆ 12 ವರ್ಷ: ಧೋನಿಯಿಂದ ಕಮ್ಮಿನ್ಸ್‌ ತನಕ.. ಕುಬೇರರ ಕತೆಯೇನು? ಗೆದ್ದವರು, ಬಿದ್ದವರಾರು?
ಐಪಿಎಲ್​ ಟ್ರೋಪಿ
Follow us on

ಪ್ರತಿ ವರ್ಷವೂ ಐಪಿಎಲ್ ಬಿಡ್ಡಿಂಗ್​ನಲ್ಲಿ ಕೆಲ ಆಟಗಾರರು ಕೋಟಿ ಕೋಟಿ ಮೊತ್ತಕ್ಕೆ ಸೇಲ್ ಆಗ್ತಾರೆ. ಈ ಪೈಕಿ ಕೆಲ ಆಟಗಾರರು ಮಾತ್ರ ಮಾಲೀಕರ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ್ರೆ, ಇನ್ನೂ ಕೆಲ ಕೋಟಿ ವೀರರು ಫ್ರಾಂಚೈಸಿ ನಂಬಿಕೆ ಉಳಿಸಿಕೊಳ್ಳುವಲ್ಲಿ ವಿಫಲರಾಗ್ತಾರೆ. ಹಾಗಾದ್ರೆ 12 ವರ್ಷದಿಂದ ಅಂದ್ರೆ ಧೋನಿಯಿಂದ ಕಮಿನ್ಸ್​ವರೆಗೆ ಐಪಿಎಲ್ ಕುಬೇರರ ಕತೆಯೇನು ಅನ್ನೋದು ಇಲ್ಲಿದೆ

2008ರ ಐಪಿಎಲ್ ಬಿಡ್ಡಿಂಗ್​ನಲ್ಲಿ 6 ಕೋಟಿಗೆ ಚೆನ್ನೈ ತಂಡದ ಪಾಲಾದ ಧೋನಿ, ತಮ್ಮ ಆಯ್ಕೆಯನ್ನ ನಿರೀಕ್ಷೆಗೂ ಮೀರಿ ಇಂದಿಗೂ ಸಮರ್ಥಿಸಿಕೊಂಡಿದ್ದಾರೆ. 2009ರಲ್ಲಿ ಚೆನ್ನೈ ಇಂಗ್ಲೆಂಡ್​ನ ಫ್ಲಿಂಟಾಫ್​ಗೆ 7.35 ಕೋಟಿ ಸುರಿದ್ರೂ ಪ್ರಯೋಜನವಾಗ್ಲಿಲ್ಲ. 2010ರಲ್ಲಿ ಮುಂಬೈ ವಿಂಡೀಸ್​ನ ಕೆರಾನ್ ಪೊಲ್ಲಾರ್ಡ್​ಗೆ 3.40 ಕೋಟಿಗೆ ಮತ್ತು 2011ರಲ್ಲಿ ಕೊಲ್ಕತ್ತಾ ಗೌತಮ್ ಗಂಭೀರ್​ರನ್ನ 11.40 ಕೋಟಿಗೆ ಖರೀದಿ ಮಾಡಿದ್ವು. ಇಬ್ಬರು ತಮ್ಮ ಫ್ರಾಂಚೈಸಿ ಇಟ್ಟ ನಂಬಿಕೆಯನ್ನ ಉಳಿಸಿಕೊಂಡ್ರು.

2012ರಲ್ಲಿ ಚೆನ್ನೈ ರವೀಂದ್ರ ಜಡೇಜಾಗೆ 9.72 ಕೋಟಿ ನೀಡ್ತು. ಜಡ್ಡು ತಾವು ಪಡೆದ ಹಣಕ್ಕೆ ಮೋಸ ಮಾಡ್ಲಿಲ್ಲ. 2013ರಲ್ಲಿ ಪಂಜಾಬ್ ಮ್ಯಾಕ್ಸ್​ವೆಲ್​ಗೆ 5.30 ಕೋಟಿ ನೀಡಿದ್ರೆ, 2014ರಲ್ಲಿ ಯುವರಾಜ್ ಸಿಂಗ್​ಗೆ ಆರ್​ಸಿಬಿ 14 ಕೋಟಿ ನೀಡ್ತು. ಇಬ್ಬರು ಐಪಿಎಲ್​ನಲ್ಲಿ ಠುಸ್ ಪಟಾಕಿ ಆದ್ರು. 2015ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಯುವರಾಜ್​ಗೆ 16 ಕೋಟಿ ನೀಡಿ, ಕೈ ಸುಟ್ಟಿಕೊಳ್ತು.

2016ರಲ್ಲಿ ಆರ್​ಸಿಬಿ ಶೇನ್ ವ್ಯಾಟ್ಸನ್​ಗೆ 9.5 ಕೋಟಿ ನೀಡಿದ್ರೂ, ವ್ಯಾಟ್ಸನ್ ಆರ್​ಸಿಬಿಗೆ ಯಶಸ್ಸು ತಂದುಕೊಡ್ಲಿಲ್ಲ. 2017ರಲ್ಲಿ ಬೆನ್ ಸ್ಟೋಕ್ಸ್​​ಗೆ ಪುಣೆ ಸೂಪರ್ ಜೈಂಟ್ಸ್ 14.50 ಕೋಟಿ ನೀಡಿದ್ರೆ, 2018ರಲ್ಲಿ ರಾಜಸ್ಥಾನ್ ರಾಯಲ್ಸ್ ಸ್ಟೋಕ್ಸ್​ಗೆ 12.50 ಕೋಟಿ ನೀಡಿತು. 2019ರಲ್ಲಿ ರಾಜಸ್ಥಾನ್ ರಾಯಲ್ಸ್ ವೇಗಿ ಜಯದೇವ್ ಉನಾದ್ಕಟ್​ಗೆ 8.40 ಕೋಟಿ ನೀಡಿತು.

ಇವರೆಲ್ಲರ ಖರೀದಿ ಮೊತ್ತವನ್ನ ನೋಡಿದ್ರೆ, ಧೋನಿ, ಗಂಭೀರ್, ಪೊಲ್ಲಾರ್ಡ್ ಮಾತ್ರ ತಮಗೆ ಸುರಿದ ಹಣಕ್ಕೆ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಉಳಿದವರೆಲ್ಲ ಭಾರಿ ಮೊತ್ತಕ್ಕೆ ಸೇಲ್ ಆಗಿಯೇ ಸುದ್ದಿಯಾದ್ರು. ಹೀಗಾಗಿ ಈಗ ಕೆಕೆಆರ್ ಫ್ರಾಂಚೈಸಿಗೂ, ಕಮ್ಮಿನ್ಸ್‌ ವಿಚಾರದಲ್ಲಿ, ಭಾರಿ ಮೊತ್ತ ನೀಡಿ ಎವಟ್ಟು ಮಾಡಿಕೊಂಡ್ವೋ ಅನ್ನೋ ಆತಂಕ ಶುರುವಾಗಿದೆ.

Published On - 2:04 pm, Sat, 12 September 20