AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

MSD ಈ ಕ್ರಮಾಂಕದಲ್ಲಿ ಬ್ಯಾಟ್​ ಬೀಸಲಿದ್ದಾರೆ.. ಹಾಗಾದ್ರೆ ರನ್​ ಮಳೆ ಫಿಕ್ಸ್​

ಪ್ರತಿ ಐಪಿಎಲ್ ಸೀಸನ್​ನಲ್ಲೂ ಅಭಿಮಾನಿಗಳು ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಆರ್ಭಟವನ್ನ, ಕೊನೆ ಎರಡ್ಮೂರು ಓವರ್​ಗಳಲ್ಲಿ ಕಣ್ತುಂಬಿಸಿಕೊಳ್ತಿದ್ರು. ಧೋನಿ ಧಮ್​ಧಾರ್ ಬ್ಯಾಟಿಂಗ್ ನೋಡಿದವರೆಲ್ಲಾ, ಧೋನಿ ಇನ್ನೊಂದೆರಡು ಓವರ್ ಮೊದಲೇ ಬಂದಿದ್ರೆ, ಮಜಾ ಇರ್ತಿತ್ತು ಅಂತಾ ಮಾತನಾಡಿಕೊಳ್ತಿದ್ರು. ಆದ್ರೆ ಮರಳುಗಾಡಿನ ಐಪಿಎಲ್ ಸೀಸನ್​ನಲ್ಲಿ ಆ ಪ್ರಮೇಯವೇ ಬರೋದಿಲ್ಲ. ಒನ್​ಡೌನ್​ನಲ್ಲಿ ಕ್ರೀಸ್​ಗಿಳಿಯಲಿದ್ದಾರೆ ಎಂ.ಎಸ್.ಧೋನಿ! ಚೆನ್ನೈ ಪರ ಪ್ರತಿ ಸೀಸನ್​ನಲ್ಲೂ ನಂಬರ್ 3ನಲ್ಲಿ ಅಂದ್ರೆ ವಂಡೌನ್ ಕ್ರಮಾಂಕದಲ್ಲಿ ಸುರೇಶ್ ರೈನಾ ಕ್ರೀಸ್​ಗಿಳಿಯುತ್ತಿದ್ರು. ಆದ್ರೀಗ ಸುರೇಶ್ ರೈನಾ ಚೆನ್ನೈ ತಂಡವನ್ನ ತೊರೆದಿದ್ದಾರೆ. ಹೀಗಾಗಿ […]

MSD ಈ ಕ್ರಮಾಂಕದಲ್ಲಿ ಬ್ಯಾಟ್​ ಬೀಸಲಿದ್ದಾರೆ.. ಹಾಗಾದ್ರೆ ರನ್​ ಮಳೆ ಫಿಕ್ಸ್​
ಎಂ ಎಸ್ ಧೋನಿ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Sep 16, 2020 | 1:36 PM

Share

ಪ್ರತಿ ಐಪಿಎಲ್ ಸೀಸನ್​ನಲ್ಲೂ ಅಭಿಮಾನಿಗಳು ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಆರ್ಭಟವನ್ನ, ಕೊನೆ ಎರಡ್ಮೂರು ಓವರ್​ಗಳಲ್ಲಿ ಕಣ್ತುಂಬಿಸಿಕೊಳ್ತಿದ್ರು. ಧೋನಿ ಧಮ್​ಧಾರ್ ಬ್ಯಾಟಿಂಗ್ ನೋಡಿದವರೆಲ್ಲಾ, ಧೋನಿ ಇನ್ನೊಂದೆರಡು ಓವರ್ ಮೊದಲೇ ಬಂದಿದ್ರೆ, ಮಜಾ ಇರ್ತಿತ್ತು ಅಂತಾ ಮಾತನಾಡಿಕೊಳ್ತಿದ್ರು. ಆದ್ರೆ ಮರಳುಗಾಡಿನ ಐಪಿಎಲ್ ಸೀಸನ್​ನಲ್ಲಿ ಆ ಪ್ರಮೇಯವೇ ಬರೋದಿಲ್ಲ.

ಒನ್​ಡೌನ್​ನಲ್ಲಿ ಕ್ರೀಸ್​ಗಿಳಿಯಲಿದ್ದಾರೆ ಎಂ.ಎಸ್.ಧೋನಿ! ಚೆನ್ನೈ ಪರ ಪ್ರತಿ ಸೀಸನ್​ನಲ್ಲೂ ನಂಬರ್ 3ನಲ್ಲಿ ಅಂದ್ರೆ ವಂಡೌನ್ ಕ್ರಮಾಂಕದಲ್ಲಿ ಸುರೇಶ್ ರೈನಾ ಕ್ರೀಸ್​ಗಿಳಿಯುತ್ತಿದ್ರು. ಆದ್ರೀಗ ಸುರೇಶ್ ರೈನಾ ಚೆನ್ನೈ ತಂಡವನ್ನ ತೊರೆದಿದ್ದಾರೆ. ಹೀಗಾಗಿ ರೈನಾ ಕ್ರೀಸ್​ಗಿಳಿಯುತ್ತಿದ್ದ ನಂಬರ್ 3ನಲ್ಲಿ ಧೋನಿ ಬ್ಯಾಟಿಂಗ್ ಮಾಡೋದಕ್ಕೆ ಮನಸ್ಸು ಮಾಡಿದ್ದಾರೆ.

ಒಂದು ವೇಳೆ ಧೋನಿ ನಂಬರ್ 3ನಲ್ಲಿ ಅಂಬಟಿ ರಾಯುಡುರನ್ನ ಕಣಕ್ಕಿಳಿಸಿದ್ರೆ, ನಂ.4ನಲ್ಲಿ ಕಣಕ್ಕಿಳಿದೇ ಇಳೀತಾರೆ. ರೈನಾ ಅನುಪಸ್ಥಿತಿಯಿಂದ ಧೋನಿ ಮೇಲಿನ ಜವಾಬ್ದಾರಿಯೂ ಹೆಚ್ಚಿದೆ. ಹೀಗಾಗಿ ಧೋನಿ ಅಪ್ಪರ್ ಆರ್ಡರ್​ನಲ್ಲೇ ಬ್ಯಾಟಿಂಗ್ ಮಾಡಬೇಕಿದೆ.

ಧೋನಿ ನಂ.3ನಲ್ಲಿ ಕಣಕ್ಕಿಳಿದ್ರೆ ಚೆನ್ನೈಗೆ ಬಲ! ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕೂಡ, ಧೋನಿ ಈ ಸೀಸನ್​ನಲ್ಲಿ ನಂಬರ್ 3ನಲ್ಲೇ ಬ್ಯಾಟಿಂಗ್ ಮಾಡಿದ್ರೆ, ಉತ್ತಮ ಎಂದು ಸಲಹೆ ನೀಡಿದ್ದಾರೆ. ಒಬ್ಬ ಬ್ಯಾಟ್ಸ್​ಮನ್ ಆಗಿ ಧೋನಿ, ಮೇಲಿನ ಕ್ರಮಾಂಕದಲ್ಲೇ ಕಣಕ್ಕಿಳಿದ್ರೆ, ಚೆನ್ನೈ ತಂಡ ಇನ್ನು ಹೆಚ್ಚಿನ ರನ್​ಗಳಿಸಲಿದೆ ಎಂದಿದ್ದಾರೆ.

ಸದ್ಯ ರೈನಾ ಅಲಭ್ಯತೆಯಿಂದಾಗಿ.. ಚೆನ್ನೈ ತಂಡದ ಬ್ಯಾಟಿಂಗ್ ಆರ್ಡರ್ ಚೇಂಜ್ ಆಗಲಿದೆ. ಹೀಗಾಗಿ ಧೋನಿ ಕ್ಲೈಮ್ಯಾಕ್ಸ್​ನಲ್ಲಿ ಬಂದು ಅಬ್ಬರಿಸೋದಕ್ಕಿಂತ, ನಂ.ತ್ರೀ ಇಲ್ಲಾ ನಂ.ಫೋರ್​ನಲ್ಲೂ ಬಂದು ಅಬ್ಬರಿಸಿದ್ರೆ, ಚೆನ್ನೈ ತಂಡದ ಬ್ಯಾಟಿಂಗ್ ಡಿಪಾರ್ಟ್​ಮೆಂಟ್ ಇನ್ನು ಸ್ಟ್ರಾಂಗ್ ಆಗೋದ್ರಲ್ಲಿ ಅನುಮಾನವೇ ಇಲ್ಲ.

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಭಾರತ ಪ್ರಜಾತಂತ್ರದ ತಾಯಿ: ಬ್ಲೂಮ್​ಬರ್ಗ್ ಫೋರಂನಲ್ಲಿ ನರೇಂದ್ರ ಮೋದಿ
ಭಾರತ ಪ್ರಜಾತಂತ್ರದ ತಾಯಿ: ಬ್ಲೂಮ್​ಬರ್ಗ್ ಫೋರಂನಲ್ಲಿ ನರೇಂದ್ರ ಮೋದಿ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!