RCB ಪರ ಇನ್ನಿಂಗ್ಸ್ ಆರಂಭಿಸಲಿದ್ದಾನೆ ಅಣ್ಣಾವ್ರ ಅಭಿಮಾನಿ ದೇವದತ್ತ!
ಕರ್ನಾಟಕದ ಪರಾಕ್ರಮಿ ಕ್ರಿಕೆಟಿಗರ ಸಾಲಿಗೆ ಸೇರ್ಪಡೆಯಾಗೋ ಮತ್ತೊಬ್ಬ ಕೆಚ್ಚೆದೆಯ ಕ್ರಿಕೆಟಿಗ ಈತ.. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿರೋ ವೀರ ಕನ್ನಡಿಗ.. ಈ ಬಾರಿ ಮರಳುಗಾಡಿನ ಐಪಿಎಲ್ ಮಹಾಸಂಗ್ರಾಮದಲ್ಲಿ, ಆರ್ಸಿಬಿ ಪರ ಆರಂಭಿಕನಾಗಿ ಕಣಕ್ಕಿಳಿಯೋ ಕನ್ನಡದ ಹೆಮ್ಮೆಯ ಧೀರ ದೇವದತ್ ಪಡಿಕ್ಕಲ್. ದೇಸಿ ಕ್ರಿಕೆಟ್ನಲ್ಲಿ ರನ್ ಮಳೆ.. ದೇವದತ್ ಪಡಿಕ್ಕಲ್ ಎಂತ ಡೆಡ್ಲಿ ಬ್ಯಾಟ್ಸ್ಮನ್ ಅನ್ನೋದಕ್ಕೆ. ಕಳೆದ ವರ್ಷ ನಡೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ, ಆಂಧ್ರ ಪ್ರದೇಶ ವಿರುದ್ಧ ಪಡಿಕ್ಕಲ್ ಭರ್ಜರಿ ಶತಕ ಸಿಡಿಸಿದ್ದ. ಕೇವಲ 60 […]
ಕರ್ನಾಟಕದ ಪರಾಕ್ರಮಿ ಕ್ರಿಕೆಟಿಗರ ಸಾಲಿಗೆ ಸೇರ್ಪಡೆಯಾಗೋ ಮತ್ತೊಬ್ಬ ಕೆಚ್ಚೆದೆಯ ಕ್ರಿಕೆಟಿಗ ಈತ.. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿರೋ ವೀರ ಕನ್ನಡಿಗ.. ಈ ಬಾರಿ ಮರಳುಗಾಡಿನ ಐಪಿಎಲ್ ಮಹಾಸಂಗ್ರಾಮದಲ್ಲಿ, ಆರ್ಸಿಬಿ ಪರ ಆರಂಭಿಕನಾಗಿ ಕಣಕ್ಕಿಳಿಯೋ ಕನ್ನಡದ ಹೆಮ್ಮೆಯ ಧೀರ ದೇವದತ್ ಪಡಿಕ್ಕಲ್.
ದೇಸಿ ಕ್ರಿಕೆಟ್ನಲ್ಲಿ ರನ್ ಮಳೆ.. ದೇವದತ್ ಪಡಿಕ್ಕಲ್ ಎಂತ ಡೆಡ್ಲಿ ಬ್ಯಾಟ್ಸ್ಮನ್ ಅನ್ನೋದಕ್ಕೆ. ಕಳೆದ ವರ್ಷ ನಡೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ, ಆಂಧ್ರ ಪ್ರದೇಶ ವಿರುದ್ಧ ಪಡಿಕ್ಕಲ್ ಭರ್ಜರಿ ಶತಕ ಸಿಡಿಸಿದ್ದ. ಕೇವಲ 60 ಎಸೆತಗಳಲ್ಲೇ ಅಜೇಯ 122 ರನ್ಗಳಿಸಿದ್ದ.
ದೇವದತ್ ಪಡಿಕ್ಕಲ್ ಮಾಡಿದ ಈ ಭರ್ಜರಿ ಬ್ಯಾಟಿಂಗ್ ಪರಾಕ್ರಮ ಕ್ಯಾಪ್ಟನ್ ಕೊಹ್ಲಿಯನ್ನ ಇಂಪ್ರೆಸ್ ಮಾಡಿದೆ. ಇದೇ ಕಾರಣಕ್ಕೆ ವಿರಾಟ್, ಈ ಸೀಸನ್ನಲ್ಲಿ ಬ್ರಹ್ಮಾಸ್ತ್ರವಾಗಿ ಪ್ರಯೋಗಿಸೋದಕ್ಕೆ ಪಡಿಕ್ಕಲ್ನನ್ನ ಆರ್ಸಿಬಿ ತಂಡಕ್ಕೆ ಸೇರಿಸಿಕೊಂಡಿದ್ದಾರೆ.
ಆರ್ಸಿಬಿ ಕ್ಯಾಪ್ಟನ್ ಕೊಹ್ಲಿಗೆ, ಪಡಿಕ್ಕಲ್ ಮೇಲೆ ಎಷ್ಟು ನಂಬಿಕೆಯಿದೆ ಅನ್ನೋದಕ್ಕೆ ಇದೇ ಸಾಕ್ಷಿ. ದುಬೈ ಪಿಚ್ಗಳಲ್ಲಿ ಹೇಗೆ ಆಡ್ಬೇಕು ಅನ್ನೋದನ್ನ ಜಡ್ಜ್ ಮಾಡೋದಕ್ಕೆ ವಿರಾಟ್, ಪಡಿಕ್ಕಲ್ ಜೊತೆಯಲ್ಲೇ ಹೆಲ್ಮೆಟ್ ಕ್ಯಾಮ್ನಿಂದ ಪ್ರಾಕ್ಟೀಸ್ ಮಾಡ್ತಿದ್ದಾರೆ. ಅಲ್ಲಿಗೆ ಈ ಬಾರಿ ಆರ್ಸಿಬಿ ಪರ ಪಡಿಕ್ಕಲ್, ಆರಂಭಿಕನಾಗಿ ಕಣಕ್ಕಿಳಿಯೋದು ಪಕ್ಕಾ ಅನ್ನೋ ಸೂಚನೆ ನೀಡಿದ್ದಾರೆ.
20 ವರ್ಷ ವಯಸ್ಸಿನ ಕನ್ನಡಿಗ ದೇವದತ್ ಪಡಿಕಲ್ ಎಡಗೈ ಬ್ಯಾಟ್ಸ್ಮನ್. ಓಪನಿಂಗ್ ಸ್ಲಾಟ್ನಲ್ಲಿ ಬ್ಯಾಟಿಂಗ್ ಮಾಡುವ ದೇವದತ್, 6.1 ಅಡಿ ಎತ್ತರದ ಹ್ಯಾಂಡ್ಸಮ್ ಬಾಯ್.
ಹುಟ್ಟಿದ್ದು ಕೇರಳದಲ್ಲಿ.. ಬೆಳೆದಿದ್ದು ಹೈದರಾಬಾದ್ನಲ್ಲಿ.. ಮಿಂಚಿದ್ದು ಬೆಂಗಳೂರಿನಲ್ಲಿ! ದೇವದತ್ ಪಡಿಕ್ಕಲ್ ಹುಟ್ಟಿದ್ದು ಕೇರಳದ ಎಡಪ್ಪಾಲ್ನಲ್ಲಿ. ಬೆಳೆದಿದ್ದು ಹೈದ್ರಾಬಾದ್ನಲ್ಲಿ. ಆದ್ರೆ ಪಡಿಕ್ಕಲ್ ಕ್ರಿಕೆಟಿಗನಾಗ್ಬೇಕು ಅನ್ನೋ ಕನಸು ಸಾಕಾರಾಗೊಂಡಿದ್ದು ನಮ್ಮ ಬೆಂಗಳೂರಿನಲ್ಲಿ. ಇದೇ ಕಾರಣಕ್ಕೆ, ಪಡಿಕ್ಕಲ್, ನಾನು ಕರ್ನಾಟಕದ ಹೆಮ್ಮೆಯಾಗಿರೋಕೆ ಇಷ್ಟಪಡ್ತೀನಿ ಅಂತಾರೆ.
ಸಚಿನ್ ಮಗನ ಜೊತೆ U-19 ತಂಡಕ್ಕೆ ಆಯ್ಕೆಯಾಗಿದ್ದ ಪಡಿಕ್ಕಲ್! 2018ರಲ್ಲಿ ದೇವ್ದತ್ ಪಡಿಕ್ಕಲ್ ಭಾರತ ಅಂಡರ್ ನೈಂಟೀನ್ ತಂಡಕ್ಕೆ ಆಯ್ಕೆಯಾಗಿದ್ದ. ಸವ್ಯಸಾಚಿ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಜೊತೆಯಲ್ಲೇ ಆಯ್ಕೆಯಾಗಿದ್ದ ಪಡಿಕ್ಕಲ್, ಅರ್ಜುನ್ ತೆಂಡುಲ್ಕರ್ ಪಾಲಿನ ಆಪ್ತಮಿತ್ರ.
ದೇವದತ್ ಯಶಸ್ಸಿನ ಹಿಂದಿದೆ ಹೆತ್ತವರ ಪರಿಶ್ರಮ! ದೇವದತ್ ಇವತ್ತು ಐಪಿಎಲ್ ಅನ್ನೋ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಆರ್ಸಿಬಿಯಂತ ತಂಡವನ್ನ ಪ್ರತಿನಿಧಿಸುತ್ತಿದ್ದಾನೆ ಅಂದ್ರೆ, ಇದಕ್ಕೆ ಹೆತ್ತವರ ಪರಿಶ್ರಮವೇ ಕಾರಣ.
ಅಣ್ಣಾವ್ರ ಅಭಿಮಾನಿಗೆ ಇಷ್ಟ ಯುವರತ್ನನ ಧಂ ಪವರೇ ಹಾಡು! ಕೇರಳದಲ್ಲಿ ಹುಟ್ಟಿ, ಹೈದ್ರಾಬಾದ್ನಲ್ಲಿ ಬೆಳೆದು ಬೆಂಗಳೂರಿನಲ್ಲಿ ಭವಿಷ್ಯ ರೂಪಿಸಿಕೊಂಡಿರೋ ಪಡಿಕ್ಕಲ್ಗೆ, ಕನ್ನಡದ ಮೇಲೆ ಅಪಾರ ಪ್ರೀತಿಯಿದೆ. ತಮ್ಮ ನೆಚ್ಚಿನ ಹೀರೋ ಡಾಕ್ಟರ್ ರಾಜ್ಕುಮಾರ್ ಎನ್ನೋ ಪಡಿಕ್ಕಲ್ಗೆ, ಪುನೀತ್ ಅಭಿನಯದ ಪವರ್ ಸಿನಿಮಾದ ಧಂ ಪವರೇ ಸಾಂಗು ಅಚ್ಚು ಮೆಚ್ಚಂತೆ.
ಈ ಸೀಸನ್ನಲ್ಲಿ ಪಡಿಕ್ಕಲ್ನನ್ನ ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿಸಬೇಕು ಅಂತಾ, ತಮ್ಮ ಜೊತೆಯಲ್ಲೇ ಪ್ರಾಕ್ಟೀಸ್ ಮಾಡಿಸುತ್ತಿದ್ದಾರೆ. ಒಂದು ವೇಳೆ ಪಡಿಕ್ಕಲ್ಗೆ ಅವಕಾಶ ಸಿಕ್ಕಿದ್ದೇ ಆದ್ರೆ, ಅದು ಟೀಮ್ ಇಂಡಿಯಾಗೆ ಎಂಟ್ರಿ ಕೊಡೋಕೆ ಮೊದಲ ಮೆಟ್ಟಿಲಾಗೋದ್ರಲ್ಲಿ ಅನುಮಾನವೇ ಇಲ್ಲ.
Published On - 11:30 am, Wed, 16 September 20