Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಹೊಸ ಜರ್ಸಿಯಲ್ಲಿ ಇಂಡಿಯನ್​ ಆರ್ಮಿಗೆ ಗೌರವ ಸಲ್ಲಿಸಿದ ಸಿಎಸ್​ಕೆ! ನಾಯಕ ಧೋನಿಯಿಂದ ಅನಾವರಣ

IPL 2021: ಸ್ವತಃ ಧೋನಿ ಭಾರತೀಯ ಸೈನ್ಯದಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆ ಹೊಂದಿರುವುದರಿಂದ ಫ್ರಾಂಚೈಸಿ ಈ ನಿರ್ಧಾರಕ್ಕೆ ಬಂದಿದೆ.

IPL 2021: ಹೊಸ ಜರ್ಸಿಯಲ್ಲಿ ಇಂಡಿಯನ್​ ಆರ್ಮಿಗೆ ಗೌರವ ಸಲ್ಲಿಸಿದ ಸಿಎಸ್​ಕೆ! ನಾಯಕ ಧೋನಿಯಿಂದ ಅನಾವರಣ
ಸಿಎಸ್​ಕೆ ತಂಡದ ಹೊಸ ಜೆರ್ಸಿ
Follow us
ಪೃಥ್ವಿಶಂಕರ
|

Updated on: Mar 25, 2021 | 1:37 PM

ಐಪಿಎಲ್‌ನ ಮೋಸ್ಟ್ ವಾಂಟೆಡ್ ತಂಡಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ ಲೀಗ್ ಪ್ರಾರಂಭವಾಗುವ ಮೊದಲು ದೊಡ್ಡ ಬದಲಾವಣೆಯನ್ನು ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಹೊಸ ಬದಲಾವಣೆಯ ಬಗ್ಗೆ ಸಿಎಸ್ಕೆ ಅಭಿಮಾನಿಗಳಿಗೆ ಮಾಹಿತಿ ನೀಡಿದೆ. ವಾಸ್ತವವಾಗಿ, ಐಪಿಎಲ್‌ನಲ್ಲಿ ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ಜರ್ಸಿಯಲ್ಲಿ ಬದಲಾವಣೆ ತಂದಿದೆ. 2008 ರಿಂದ, ಸಿಎಸ್ಕೆ 12 ಆವೃತ್ತಿಗಳನ್ನು ಆಡಿದೆ ಮತ್ತು ಪ್ರತಿ ಬಾರಿಯೂ ಅದೇ ಜರ್ಸಿಯನ್ನು ಧರಿಸಿದೆ. ಅವರಲ್ಲದೆ, ಎಲ್ಲಾ ತಂಡಗಳು ತಮ್ಮ ಜರ್ಸಿಗಳನ್ನು ಬದಲಾಯಿಸಿವೆ.

ಧೋನಿಗೆ ಸೈನ್ಯದ ಬಗ್ಗೆ ಅಪಾರ ಗೌರವವಿದೆ ತಂಡದ ಜರ್ಸಿಯಲ್ಲಿ ಈ ಬದಲಾವಣೆಗೆ ಧೋನಿ ಕಾರಣ. ವಾಸ್ತವವಾಗಿ, ಧೋನಿಗೆ ಸೈನ್ಯದ ಬಗ್ಗೆ ಅಪಾರ ಗೌರವವಿದೆ, ಅದಕ್ಕಾಗಿಯೇ ಚೆನ್ನೈ ಸೂಪರ್ ಕಿಂಗ್ಸ್‌ನ ಜರ್ಸಿಯ ಮೇಲೂ ಅದರ ಪ್ರಭಾವವನ್ನು ಧೋನಿ ಬೀರಿದ್ದಾರೆ. ಧೋನಿ ಬಿಡುಗಡೆಗೊಳಿಸಿರುವ ಹೊಸ ಜೆರ್ಸಿಯ ಎರಡು ಭುಜಗಳ ಮೇಲ್ ಸೈನ್ಯದ ಬಣ್ಣ ಕಾಣಿಸುತ್ತದೆ. ಸ್ವತಃ ಧೋನಿ ಭಾರತೀಯ ಸೈನ್ಯದಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆ ಹೊಂದಿರುವುದರಿಂದ ಫ್ರಾಂಚೈಸಿ ಈ ನಿರ್ಧಾರಕ್ಕೆ ಬಂದಿದೆ.

ಜರ್ಸಿಯಲ್ಲಿ ಮೂರು ಸ್ಟಾರ್​ಗಳಿವೆ ಸಶಸ್ತ್ರ ಪಡೆಗಳ ಮಹತ್ವ ಮತ್ತು ಅವರ ನಿಸ್ವಾರ್ಥ ಸೇವೆಯ ಬಗ್ಗೆ ಜಾಗೃತಿ ಮೂಡಿಸುವ ಮಾರ್ಗಗಳನ್ನು ಕಂಡುಕೊಳ್ಳುವ ಸಲುವಾಗಿ ಜರ್ಸಿಯ ಭುಜದಲ್ಲಿ ಸೇನೆಯ ಸಮವಸ್ತ್ರದ ಮಾದರಿಯನ್ನು ಮುದ್ರಿಸಲಾಗಿದೆ ಎಂದು ​ಸಿಎಸ್‌ಕೆ ಸಿಇಒ ಕೆ ಎಸ್ ವಿಶ್ವನಾಥನ್ ಹೇಳಿದರು. ಅಲ್ಲದೆ ಜರ್ಸಿಯಲ್ಲಿ ಮೂರು ಸ್ಟಾರ್​ಗಳಿವೆ. ಅದು ಮೂರು ಐಪಿಎಲ್ ಟ್ರೋಫಿಗಳನ್ನು​ ಗೆದ್ದಿರುವುದನ್ನು ಸೂಚಿಸುತ್ತಿದೆ. ಜೊತೆಗೆ ಈ ಬಾರಿ ಸ್ಪಾನ್ಸರ್ ಆಗಿರುವ ಮಿಂತ್ರಾದ ಲೋಗೊ ಕೂಡ ಜರ್ಸಿಯ ಮುಂಭಾಗದಲ್ಲಿ ಮುದ್ರಿತವಾಗಿದೆ.

ಕಳೆದ ಆವೃತ್ತಿಯಲ್ಲಿ ಧೋನಿ ನೇತೃತ್ವದ ಚೆನ್ನೈ ತಂಡ, ಐಪಿಎಲ್​ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಪ್ರದರ್ಶನ ನೀಡಿತು. ಸಿಎಸ್‌ಕೆ ಸತತ ಪಂದ್ಯಗಳಲ್ಲಿ ಸೋಲನ್ನು ಎದುರಿಸಬೇಕಾಯಿತು. ಜೊತೆಗೆ ತಂಡವು ಮೊದಲ ಬಾರಿಗೆ ಪ್ಲೇಆಫ್‌ಗೆ ಅರ್ಹತೆ ಪಡೆಯಲಿಲ್ಲ. ಲೀಗ್ ಹಂತ ಮುಗಿದ ನಂತರ ಸಿಎಸ್‌ಕೆ ತಂಡ ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಧೋನಿ ಸೇರಿದಂತೆ ಇತರ ಆಟಗಾರರ ತರಬೇತಿ ಪ್ರಾರಂಭ ಪ್ರತಿ ಆವೃತ್ತಿಯಂತೆ, ಈ ಆವೃತ್ತಿಯಲ್ಲಿ ಚೆನ್ನೈ ತನ್ನ ತರಬೇತಿ ಶಿಬಿರವನ್ನು ಇತರ ತಂಡಗಳಿಗಿಂತ ಬೇಗ ಪ್ರಾರಂಭಿಸಿದೆ. ನಾಯಕ ಧೋನಿ ಸೇರಿದಂತೆ ತಂಡದ ಹಲವಾರು ಆಟಗಾರರು ಚೆನ್ನೈಗೆ ಆಗಮಿಸಿದ್ದರು. ಕ್ವಾರಂಟೈನ್​ ನಿಯಮಗಳನ್ನು ಮುಗಿಸಿ, ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್​ ವರದಿ ಬಂದ ನಂತರ ತಮ್ಮ ಅಭ್ಯಾಸವನ್ನು ಪ್ರಾರಂಭಿಸಿದ್ದರು. ಚೆನ್ನೈನಲ್ಲಿ ಅಭ್ಯಾಸ ಮುಗಿಸಿದ ಧೋನಿ ಪಾಳಯ ಈಗ ಮುಂಬೈಗೆ ಹಾರಿದೆ.

ಚೆಪಾಕ್‌ನಲ್ಲಿ ಆಡುವುದಿಲ್ಲ ಸಿಎಸ್‌ಕೆ ಏಪ್ರಿಲ್ 9 ರಂದು ಚೆನ್ನೈನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಪಂದ್ಯದೊಂದಿಗೆ ಐಪಿಎಲ್​2021 ಪ್ರಾರಂಭವಾಗಲಿದೆ. ಚೆನ್ನೈ ತಂಡ ಏಪ್ರಿಲ್ 10 ರಂದು ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಲಿದೆ. ಆದರೆ, ಈ ವರ್ಷದ ಐಪಿಎಲ್‌ನಲ್ಲಿ ಯಾವುದೇ ತಂಡವು ಸಹ ತಮ್ಮ ತವರು ಮೈದಾನದಲ್ಲಿ ಪಂದ್ಯಗಳನ್ನು ಆಡಲು ಸಾಧ್ಯವಾಗುವುದಿಲ್ಲ. ಲೀಗ್ ಹಂತದ ಎಲ್ಲಾ ಪಂದ್ಯಗಳು ದೆಹಲಿ, ಮುಂಬೈ, ಕೋಲ್ಕತಾ, ಬೆಂಗಳೂರು, ಚೆನ್ನೈ ಮತ್ತು ಅಹಮದಾಬಾದ್‌ನಲ್ಲಿ ನಡೆಯಲಿದ್ದು, ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳು ಅಹಮದಾಬಾದ್‌ನಲ್ಲಿ ನಡೆಯಲಿದೆ.

ಇದನ್ನೂ ಓದಿ:IPL 2021: ಆರ್​ಸಿಬಿ ರಣತಂತ್ರ! ಐಪಿಎಲ್​ನಲ್ಲಿ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿಯುವುದನ್ನು ನಾವು ಹರಾಜಿಗೂ ಮುನ್ನವೇ ತೀರ್ಮಾನಿಸಿದ್ದೇವು