IPL 2021: ಚೆನ್ನೈನಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದೇವೆ, ಮುಂಬೈನಲ್ಲೂ ಕ್ಲೀನ್ ಸ್ವೀಪ್ ಮಾಡ್ತೀವಿ; ಗ್ಲೆನ್ ಮ್ಯಾಕ್ಸ್​ವೆಲ್

IPL 2021: . ಚೆನ್ನೈನಲ್ಲಿ ಕ್ಲೀನ್ ಸ್ವೀಪ್ ಮಾಡಿದಂತೆ, ಮುಂಬೈನಲ್ಲೂ ಕ್ಲೀನ್ ಸ್ವೀಪ್ ಸಾಧನೆ ಮಾಡಲು ಕೊಹ್ಲಿ ಹುಡುಗರು ತುದಿಗಾಲಲ್ಲಿ ನಿಂತಿದ್ದಾರೆ. ಆರ್​ಸಿಬಿ ತಂಡದ ಬಿಗ್ ಹಿಟ್ಟರ್ ಗ್ಲೆನ್ ಮ್ಯಾಕ್ಸ್​ವೆಲ್, ಮುಂಬೈನಲ್ಲಿ ಎರಡೂ ಪಂದ್ಯಗಳನ್ನ ನಾವೇ ಗೆಲ್ತೀವಿ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

IPL 2021: ಚೆನ್ನೈನಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದೇವೆ, ಮುಂಬೈನಲ್ಲೂ ಕ್ಲೀನ್ ಸ್ವೀಪ್ ಮಾಡ್ತೀವಿ; ಗ್ಲೆನ್ ಮ್ಯಾಕ್ಸ್​ವೆಲ್
ಗ್ಲೆನ್ ಮ್ಯಾಕ್ಸ್​ವೆಲ್
Follow us
ಪೃಥ್ವಿಶಂಕರ
| Updated By: Skanda

Updated on: Apr 22, 2021 | 9:15 AM

ಚೆನ್ನೈನಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಗೆಲುವು ದಾಖಲಿಸಿರುವ ಆರ್​ಸಿಬಿ, ಐಪಿಎಲ್​ನಲ್ಲಿ ಹ್ಯಾಟ್ರಿಕ್ ಗೆಲುವಿನ ದಾಖಲೆ ಬರೆದಿದೆ. ಚೆನ್ನೈನಲ್ಲಿ ಕ್ಲೀನ್ ಸ್ವೀಪ್ ಮಾಡಿರುವ ಕೊಹ್ಲಿ ಹುಡುಗರು, ಈಗ ಮುಂಬೈಗೆ ಪ್ರಯಾಣಿಸಿದ್ದಾರೆ. ವಾಂಖೆಡೆಯಲ್ಲಿ ಆರ್​ಸಿಬಿ ತಂಡ ರಾಜಸ್ಥಾನ ಮತ್ತು ಚೆನ್ನೈ ವಿರುದ್ಧ ಪಂದ್ಯಗಳನ್ನಾಡಲಿದೆ. ಚೆನ್ನೈನಲ್ಲಿ ಕ್ಲೀನ್ ಸ್ವೀಪ್ ಮಾಡಿದಂತೆ, ಮುಂಬೈನಲ್ಲೂ ಕ್ಲೀನ್ ಸ್ವೀಪ್ ಸಾಧನೆ ಮಾಡಲು ಕೊಹ್ಲಿ ಹುಡುಗರು ತುದಿಗಾಲಲ್ಲಿ ನಿಂತಿದ್ದಾರೆ. ಆರ್​ಸಿಬಿ ತಂಡದ ಬಿಗ್ ಹಿಟ್ಟರ್ ಗ್ಲೆನ್​ ಮ್ಯಾಕ್ಸ್​ವೆಲ್, ಮುಂಬೈನಲ್ಲಿ ಎರಡೂ ಪಂದ್ಯಗಳನ್ನ ನಾವೇ ಗೆಲ್ತೀವಿ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚೆನ್ನೈನಂತೆ ಮುಂಬೈನಲ್ಲೂ ಅಬ್ಬರಿಸಲು RCB ರೆಡಿ! ಚೆನ್ನೈನಲ್ಲಿ ಆಡಿದ ಮೊದಲ ಮೂರು ಪಂದ್ಯಗಳನ್ನ ಗೆದ್ದು ಬೀಗಿರುವ ಆರ್​ಸಿಬಿ, ಇದೀಗ ಮುಂಬೈನ ವಾಂಖೆಡೆ ಮೈದಾನದಲ್ಲೂ ಗೆಲುವಿನ ರಿದಮ್ ಮುಂದುವರಿಸುವ ವಿಶ್ವಾಸದಲ್ಲಿದೆ. ಚೆನ್ನೈ ಪಿಚ್ ಮುಖ್ಯವಾಗಿ ಸ್ಪಿನರ್​​ಗಳಿಗೆ ನೆರವಾಗುತ್ತಿತ್ತು. ಆದ್ರೆ ವಾಂಖೆಡೆ ಪಿಚ್ ಬ್ಯಾಟ್ಸ್​​ಮನ್​ಗಳಿಗೆ ಹೆಚ್ಚಾಗಿ ನೆರವಾಗಲಿದೆ. ಹೀಗಾಗಿ ಆರ್​ಸಿಬಿ ಆಟಗಾರರು ವಾಂಖೆಡೆ ಪಿಚ್​​ನ ಸ್ವರೂಪಕ್ಕೆ ತಕ್ಕಂತೆ, ತಂಡದ ಪ್ಲ್ಯಾನ್​ಗಳನ್ನ ಬದಲಿಸಿಕೊಂಡು ಅಬ್ಬರಿಸಿಲು ಸಜ್ಜಾಗಿದ್ದಾರೆ.

ವಾಂಖೆಡೆ ಮೈದಾನದಲ್ಲಿ ಕೊಹ್ಲಿ ಪಡೆಯಿಂದ ಅದ್ವಿತೀಯ ದಾಖಲೆ! ವಾಂಖೆಡೆ ಮೈದಾನದಲ್ಲಿ ಆರ್​ಸಿಬಿ ಸಾಧನೆ ಅದ್ಭುತವಾಗಿದೆ. ವಾಂಖೆಡೆಯಲ್ಲಿ ಅತೀ ಹೆಚ್ಚು ರನ್​ಗಳಿಸಿದ ಸಾಧನೆ ಆರ್​ಸಿಬಿ ತಂಡದ ಹೆಸರಿನಲ್ಲಿದೆ. 2015ರಲ್ಲಿ ಆರ್​ಸಿಬಿ, ಮುಂಬೈ ವಿರುದ್ಧ 235 ರನ್​ಗಳಿಸಿತ್ತು. ಮಿಸ್ಟರ್ 360 ಬ್ಯಾಟ್ಸ್​​ಮನ್​ 133 ರನ್​ಗಳಿಸಿ ಅಬ್ಬರಿಸಿದ್ರೆ, ನಾಯಕ ವಿರಾಟ್ ಕೊಹ್ಲಿ 82 ರನ್​ಗಳಿಸಿ ಅಜೇಯರಾಗುಳಿದಿದ್ದರು. ತವರಿನ ನೆಲದಲ್ಲೇ ಮುಂಬೈ ವಿರುದ್ಧ ಆರ್​ಸಿಬಿ ಮಾಡಿರುವ ಈ ಸಾಧನೆ, ಎದುರಾಳಿಗಳಿಗೆ ಆರ್​ಸಿಬಿ ಮೇಲೆ ಹೆಚ್ಚು ಆತಂಕವನ್ನುಂಟು ಮಾಡಿದೆ.

ಆರ್​ಸಿಬಿಗೆ ವರದಾನವಾಗಲಿದೆ ಚೇಸಿಂಗ್ ಪಿಚ್! ವಾಂಖೆಡೆ ಪಿಚ್​ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಕ್ಕಿಂತ, ಚೇಸಿಂಗ್ ಮಾಡಿದ ತಂಡಗಳೇ ಹೆಚ್ಚಿನ ಗೆಲುವು ದಾಖಲಿಸಿವೆ. ಇದು ಆರ್​ಸಿಬಿಗೆ ವರದಾನವಾಗಲಿದೆ. ಗುರಿ ಬೆನ್ನತ್ತುವ ವಿಚಾರದಲ್ಲಿ ಆರ್​ಸಿಇಬ ತಂಡದಲ್ಲಿ ಚೇಸಿಂಗ್ ಮಾಸ್ಟರ್​ಗಳೇ ಇದ್ದಾರೆ. ನಾಯಕ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಮತ್ತು ಗ್ಲೆನ್ ಮ್ಯಾಕ್ಸ್​ವೆಲ್ ಚೇಸಿಂಗ್ ಪಿಚ್​ನಲ್ಲಿ ಬೆಟ್ಟದಂತ ಗುರಿಯನ್ನ ನಿರಾಯಾಸವಾಗಿ ಬೆನ್ನಟ್ಟುವ ಸಾಮರ್ಥ್ಯ ಹೊಂದಿದ್ದಾರೆ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್