IPL 2021: ಶಹಬ್ಬಾಸ್ ಪೃಥ್ವಿ ಶಾ! ನನ್ನ ವೃತ್ತಿ ಜೀವನದಲ್ಲಿ ನನ್ನಿಂದ ಮಾಡಲಾಗದ ದಾಖಲೆಯನ್ನು ನೀನು ಮಾಡಿದ್ದೀಯಾ; ವೀರೇಂದ್ರ ಸೆಹ್ವಾಗ್
IPL 2021: ನನ್ನ ವೃತ್ತಿ ಜೀವನದಲ್ಲಿ ತುಂಬಾ ಸಲ ಓಪನಿಂಗ್ ಮಾಡಿದ್ದೇನೆ ಹಾಗೂ ಓವರ್‌ನ ಎಲ್ಲಾ ಎಸೆತಗಳನ್ನು ಹೊಡೆದಿದ್ದೇನೆ. ಆದರೆ ಒಂದು ಓವರ್‌ನಲ್ಲಿ 18 ರಿಂದ 20 ರನ್‌ಗಳಿಗಿಂತ ಹೆಚ್ಚು ರನ್ ಗಳಿಸಲು ನನಗೆ ಸಾಧ್ಯವಾಗಲಿಲ್ಲ.
ಗುರುವಾರ ಆಡಿದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ, ಪೃಥ್ವಿ ಶಾ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ತಮ್ಮ ಬಿರುಗಾಳಿಯ ಇನ್ನಿಂಗ್ಸ್‌ನಿಂದಾಗಿ ಅದ್ಭುತ ಗೆಲುವು ದಾಖಲಿಸುವಂತೆ ಮಾಡಿದರು. ಈ ಪಂದ್ಯದಲ್ಲಿ ಕೋಲ್ಕತಾ 6 ವಿಕೆಟ್‌ಗೆ 154 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ ದೆಹಲಿ ಕೇವಲ 16.3 ಓವರ್‌ಗಳಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು ಗುರಿ ಸಾಧಿಸಿತು. ಇದರಲ್ಲಿ ಕೋಲ್ಕತಾ ಪರ ಮೊದಲ ಓವರ್ ಬೌಲಿಂಗ್ ಮಾಡಲು ಬಂದ ವೇಗದ ಬೌಲರ್ ಶಿವಂ ಮಾವಿ ಅವರ ಓವರ್‌ನಲ್ಲಿ ಪೃಥ್ವಿ ಶಾ ಸತತ ಆರು ಬೌಂಡರಿಗಳಿಗೆ 24 ರನ್ ಗಳಿಸಿದರು. 41 ಎಸೆತಗಳಲ್ಲಿ 82 ರನ್ ಗಳಿಸಿದ ನಂತರ ಶಾ ಔಟಾದರು. ಅಷ್ಟೊತ್ತಿಗೆ ಅವರು ತಂಡವನ್ನು ವಿಜಯದ ಬಾಗಿಲಿಗೆ ಕರೆದೊಯ್ದಿದ್ದರು. ಈ ಇನ್ನಿಂಗ್ಸ್‌ನಲ್ಲಿ ಅವರು 11 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಬಾರಿಸಿದರು. ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ಪೃಥ್ವಿ ಶಾ ಅವರ ಇನ್ನಿಂಗ್ಸ್ ಅನ್ನು ಶ್ಲಾಘಿಸಿದ್ದಾರೆ.
18 ರಿಂದ 20 ರನ್ ಮಾತ್ರ ಗಳಿಸಿದ್ದೇನೆ ವೀರೇಂದ್ರ ಸೆಹ್ವಾಗ್, ಓವರ್‌ನ ಆರು ಎಸೆತಗಳಲ್ಲಿ ಆರು ಬೌಂಡರಿಗಳನ್ನು ಬಾರಿಸುವುದು ಎಂದರೆ ಅದು ಸುಲಭವಲ್ಲ. ನನ್ನ ವೃತ್ತಿ ಜೀವನದಲ್ಲಿ ತುಂಬಾ ಸಲ ಓಪನಿಂಗ್ ಮಾಡಿದ್ದೇನೆ ಹಾಗೂ ಓವರ್‌ನ ಎಲ್ಲಾ ಎಸೆತಗಳನ್ನು ಹೊಡೆದಿದ್ದೇನೆ. ಆದರೆ ಒಂದು ಓವರ್‌ನಲ್ಲಿ 18 ರಿಂದ 20 ರನ್‌ಗಳಿಗಿಂತ ಹೆಚ್ಚು ರನ್ ಗಳಿಸಲು ನನಗೆ ಸಾಧ್ಯವಾಗಲಿಲ್ಲ. ಆದರೆ ಪೃಥ್ವಿ ಶಾ ಅದನ್ನು ಮಾಡಿದರು. ನಾನು ಓವರ್‌ನಲ್ಲಿ ಆರು ಬೌಂಡರಿ ಅಥವಾ ಆರು ಸಿಕ್ಸರ್‌ಗಳನ್ನು ಹೊಡೆಯಲು ಸಾಧ್ಯವಾಗಲಿಲ್ಲ. ಈ ವಿಷಯದಲ್ಲಿ ಚೆಂಡು ಹಾಗೂ ಬ್ಯಾಟ್ ನಡುವೆ ಸಮಯ ಚೆನ್ನಾಗಿ ಇರಬೇಕು ಹಾಗೂ ಗ್ಯಾಪ್‌ಗಳನ್ನು ಪತ್ತೆ ಮಾಡಬೇಕು ಎಂದು ಸೆಹ್ವಾಗ್ ತಿಳಿಸಿದರು.
ಪೃಥ್ವಿ ಶಾ ಅಸಾಧಾರಣ ಬ್ಯಾಟ್ಸ್‌ಮನ್ ಪೃಥ್ವಿ ಶಾ ಅಸಾಧಾರಣ ಪ್ರತಿಭಾವಂತ ಬ್ಯಾಟ್ಸ್‌ಮನ್ ಎಂದು ಸೆಹ್ವಾಗ್ ಹೇಳಿದ್ದಾರೆ. ಅವರು ಕ್ರಿಕೆಟ್ ಪಂದ್ಯವನ್ನು ಆಡಲು ಬಂದಂತೆ ನನಗೆ ಕಾಣಿಸಲಿಲ್ಲ ಅಥವಾ 19 ವಯೋಮಿತಿ ತಂಡದ ಸಹ ಆಟಗಾರನಾಗಿದ್ದ ಶಿವಂ ಮಾವಿ ಬೌಲಿಂಗ್ ಚೆನ್ನಾಗಿ ತಿಳಿದಿದ್ದ ಕಾರಣ ಅವರಲ್ಲಿ ಅಪಾರವಾದ ವಿಶ್ವಾಸವಿತ್ತು ಎಂದು ಭಾವಿಸುತ್ತೇನೆ. ಆದರೆ ನಾನು ಕೂಡ ಆಶಿಶ್ ನೆಹ್ರಾ ಅವರೊಂದಿಗೆ ದೇಶೀಯ ಕ್ರಿಕೆಟ್ ಮತ್ತು ನೆಟ್ಸ್‌ನಲ್ಲಿ ಉತ್ತಮ ಸಮಯವನ್ನು ಕಳೆದಿದ್ದೇನೆ ಆದರೆ ಅವರ ಒಂದು ಓವರ್‌ನಲ್ಲಿ ಆರು ಬೌಂಡರಿಗಳನ್ನು ಬಾರಿಸಲು ನನಗೆ ಸಾಧ್ಯವಾಗಲಿಲ್ಲ. ಪೃಥ್ವಿ ಶಾ ಅವರು ಈ ಇನ್ನಿಂಗ್ಸ್‌ಗಾಗಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಪೃಥ್ವಿ ಶಾ ಕೂಡ ಈ ವರ್ಷ ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿ ದ್ವಿಶತಕ ಬಾರಿಸಿದರು. ಈ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಪ್ರಸ್ತುತ, ಪೃಥ್ವಿ ಶಾ ಕೂಡ ಈ ಋತುವಿನಲ್ಲಿ ದೆಹಲಿ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.