IPL 2021: ಸತತ ಸೋಲುಗಳಿಂದ ಮುಖಭಂಗ.. ಡೇವಿಡ್ ವಾರ್ನರ್ ಬದಲಿಗೆ ಕೇನ್ ವಿಲಿಯಮ್ಸನ್​ಗೆ ನಾಯಕನ ಪಟ್ಟ ಕಟ್ಟಿದ ಸನ್‌ರೈಸರ್ಸ್ ಹೈದರಾಬಾದ್

IPL 2021: ಇನ್ನು ಮುಂದಿನ ಐಪಿಎಲ್​ ಪ್ರಯಾಣದಲ್ಲಿ ಕೇನ್ ವಿಲಿಯಮ್ಸನ್ ನಮ್ಮ ತಂಡದ ನಾಯಕನಾಗಿರುತ್ತಾರೆ ಎಂದು ಎಸ್ಆರ್ಹೆಚ್ ಸ್ಪಷ್ಟವಾಗಿ ಹೇಳಿದೆ

IPL 2021: ಸತತ ಸೋಲುಗಳಿಂದ ಮುಖಭಂಗ.. ಡೇವಿಡ್ ವಾರ್ನರ್ ಬದಲಿಗೆ ಕೇನ್ ವಿಲಿಯಮ್ಸನ್​ಗೆ ನಾಯಕನ ಪಟ್ಟ ಕಟ್ಟಿದ ಸನ್‌ರೈಸರ್ಸ್ ಹೈದರಾಬಾದ್
Follow us
ಪೃಥ್ವಿಶಂಕರ
|

Updated on:May 01, 2021 | 4:15 PM

ಐಪಿಎಲ್ 2021 ರಲ್ಲಿನ ಕಳಪೆ ಸಾಧನೆ ಸನ್‌ರೈಸರ್ಸ್ ಹೈದರಾಬಾದ್ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದೆ. ಆಡಿದ 6 ಪಂದ್ಯಗಳಲ್ಲಿ 5 ರಲ್ಲಿ ಸೋತ ನಂತರ ತಂಡವು ಅಂಕ ಪಟ್ಟಿಯಲ್ಲಿ ಕೆಳಭಾಗದಲ್ಲಿದೆ. ಹೀಗಾಗಿ ತಂಡವು ಈಗ ದೊಡ್ಡ ನಿರ್ಧಾರವನ್ನು ತೆಗೆದುಕೊಂಡು ನಾಯಕತ್ವವನ್ನು ಬದಲಾಯಿಸಲು ನಿರ್ಧರಿಸಿದೆ. ಎಸ್‌ಆರ್‌ಹೆಚ್ ಫ್ರಾಂಚೈಸ್​ ಡೇವಿಡ್ ವಾರ್ನರ್ ಅವರನ್ನು ನಾಯಕತ್ವದಿಂದ ತೆಗೆದುಹಾಕಿ, ಕೇನ್ ವಿಲಿಯಮ್ಸನ್ ಅವರನ್ನು ನಾಯಕನನ್ನಾಗಿ ಮಾಡಿದೆ. ಕೇನ್ ಮುಂದಿನ ಎಲ್ಲಾ ಮುಂದಿನ ಪಂದ್ಯಗಳಲ್ಲಿ ತಂಡದ ಜವಬ್ದಾರಿಯನ್ನು ಹೊರಲಿದ್ದಾರೆ.

ಕೇನ್ ವಿಲಿಯಮ್ಸನ್ ನಮ್ಮ ತಂಡದ ನಾಯಕನಾಗಿರುತ್ತಾರೆ ನಾಯಕತ್ವದಿಂದ ಡೇವಿಡ್ ವಾರ್ನರ್ ಬಿಡುಗಡೆ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡದ ನಿರ್ವಹಣೆಯನ್ನು ಕೇನ್ ವಿಲಿಯಮ್ಸನ್‌ಗೆ ಹಸ್ತಾಂತರಿಸುವುದನ್ನು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಲಾಯಿತು, ಈ ವಿಚಾರವನ್ನು ತಂಡದ ಟ್ವಿಟ್ಟರ್ ಹ್ಯಾಂಡಲ್‌ನೊಂದಿಗೆ ಹಂಚಿಕೊಳ್ಳಲಾಗಿದೆ. ತನ್ನ ಪತ್ರಿಕಾ ಪ್ರಕಟಣೆಯಲ್ಲಿ, ಇನ್ನು ಮುಂದಿನ ಐಪಿಎಲ್​ ಪ್ರಯಾಣದಲ್ಲಿ ಕೇನ್ ವಿಲಿಯಮ್ಸನ್ ನಮ್ಮ ತಂಡದ ನಾಯಕನಾಗಿರುತ್ತಾರೆ ಎಂದು ಎಸ್ಆರ್ಹೆಚ್ ಸ್ಪಷ್ಟವಾಗಿ ಹೇಳಿದೆ.

ಆರ್​ಆರ್​ ವಿರುದ್ಧದ ಪಂದ್ಯದಲ್ಲಿ ವಿದೇಶಿ ಸಂಯೋಜನೆಯು ಬದಲಾಗುತ್ತದೆ ಅಷ್ಟೇ ಅಲ್ಲ, ಮೇ 2 ರಂದು ನಡೆಯಲಿರುವ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಮುಂದಿನ ಪಂದ್ಯದಲ್ಲಿ ವಿದೇಶಿ ಆಟಗಾರರ ಸಂಯೋಜನೆಯಲ್ಲಿ ದೊಡ್ಡ ಬದಲಾವಣೆಯಾಗಬಹುದು ಎಂದು ಎಸ್‌ಆರ್‌ಹೆಚ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಡೇವಿಡ್ ವಾರ್ನರ್‌ಗೆ ತಂಡದಲ್ಲಿರುತ್ತಾ ಸ್ಥಾನ? ತಂಡದಲ್ಲಿ ಡೇವಿಡ್ ವಾರ್ನರ್ ಪಾತ್ರವೇನು ಎಂಬುದು ಈಗ ಪ್ರಶ್ನೆಯಾಗಿದೆ, ಆದರೆ ವಾರ್ನರ್ ತಂಡದೊಂದಿಗೆ ಮುಂದುವರಿಯುತ್ತಾರೆ ಎಂದು ಸನ್‌ರೈಸರ್ಸ್ ತಂಡದ ನಿರ್ವಹಣೆ ಹೇಳಿದೆ. ಅವರು ಇನ್ನೂ ನಮ್ಮ ಯಶಸ್ಸಿನ ಉತ್ತರಾಧಿಕಾರಿಗಳಾಗಿ ಮುಂದುವರಿಯುತ್ತಾರೆ. ಇಷ್ಟು ವರ್ಷಗಳಿಂದ ವಾರ್ನರ್ ನೀಡಿದ ಕೊಡುಗೆಯನ್ನು ನಾವು ಗೌರವಿಸುತ್ತೇವೆ ಎಂದು ತಂಡದ ಆಡಳಿತ ಹೇಳಿದೆ. ಆದಾಗ್ಯೂ, ತಂಡದ ಆಡಳಿತವು ತನ್ನ ಹೇಳಿಕೆಯಲ್ಲಿ ಡೇವಿಡ್ ವಾರ್ನರ್ ಆಡುವ ಹನ್ನೊಂದರ ಭಾಗವಾಗುತ್ತಾರೆಯೋ ಇಲ್ಲವೋ ಎಂದು ಎಲ್ಲಿಯೂ ಸ್ಪಷ್ಟಪಡಿಸಿಲ್ಲ.

ನಾಯಕತ್ವದ ಬದಲಾವಣೆಗೆ ಜೇಸನ್ ರಾಯ್ ನಿಜವಾದ ಕಾರಣವೇ? ನಾಯಕತ್ವದ ಈ ದೊಡ್ಡ ಬದಲಾವಣೆಯು ಡೇವಿಡ್ ವಾರ್ನರ್ ಅವರ ಸ್ಥಾನದಲ್ಲಿ ಆರಂಭಿಕ ಹಂತದಲ್ಲಿ ಕಿರು ಸ್ವರೂಪದ ಅತ್ಯುತ್ತಮ ಆಟಗಾರನಾಗಿರುವ ಜೇಸನ್ ರಾಯ್ ಅವರನ್ನು ಪ್ರಯತ್ನಿಸಲು ತಂಡದ ನಿರ್ವಹಣೆಯ ಈ ಚಿಂತನೆಯ ಫಲಿತಾಂಶವಾಗಿದೆ. ಇಂಗ್ಲೆಂಡ್‌ನ ಆರಂಭಿಕ ಆಟಗಾರ ಜೇಸನ್ ರಾಯ್ ಈ ಋತುವಿನಲ್ಲಿ ಇದುವರೆಗೆ ಒಂದು ಪಂದ್ಯವನ್ನೂ ಆಡಿಲ್ಲ. ಅದೇ ಸಮಯದಲ್ಲಿ, ವಾರ್ನರ್ ಮೊದಲ 6 ಪಂದ್ಯಗಳಲ್ಲಿ ಹೆಚ್ಚು ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ, ವಾರ್ನರ್‌ನನ್ನು ಬೆಂಚ್‌ನಲ್ಲಿ ಇರಿಸುವ ಮೂಲಕ, ತಂಡದ ಆಡಳಿತವು ಜೇಸನ್‌ ರಾಯ್‌ರನ್ನು ಬೈರ್‌ಸ್ಟೋವ್‌ನೊಂದಿಗೆ ಪ್ರಾರಂಭದಲ್ಲಿ ಕಣಕ್ಕಿಳಿಸಬಹುದು.

Published On - 4:06 pm, Sat, 1 May 21

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!