IPL 2021: ಕೊಹ್ಲಿಗೆ ಕೈ ಕೊಟ್ಟ ಕೋಟಿ ಕುಳಗಳು.. ಪಂದ್ಯ ಗೆಲ್ಲಿಸ್ತಿದ್ದಾರೆ ದೇಸಿ ಹುಲಿಗಳು! ಇಂದಿನ ಪಂದ್ಯದ ರಿಯಲ್ ಹೀರೋಸ್ ಇವರೆ!
IPL 2021: ಪ್ರತಿ ಹರಾಜಿನಲ್ಲೂ ವಿದೇಶಿ ಬೌಲರ್ಗಳ ಮೇಲೆ ಕೋಟಿ ಕೋಟಿ ಸುರಿಯುತ್ತಿತ್ತು. ಕೋಟಿ ಕೋಟಿ ಪಡೆದ ವಿದೇಶಿ ಬೌಲರ್ಗಳು ಆರ್ಸಿಬಿ ಡೆತ್ ಬೌಲಿಂಗ್ ಸಮಸ್ಯೆಯನ್ನು ಮತ್ತಷ್ಟು ಕಗ್ಗಂಟಾಗುವಂತೆ ಮಾಡಿದ್ರು.

ಕಳೆದ ಐದಾರು ಸೀಸನ್ಗಳಿಂದ ಆರ್ಸಿಬಿಗೆ ಬೆಂಬಿಡದೇ ಭೂತವಾಗಿ ಕಾಡಿದ್ದು ಡೆತ್ ಬೌಲರ್ಗಳು. ಡೆತ್ ಬೌಲಿಂಗ್ ಸಮಸ್ಯೆ ನೀಗಿಸಲು ಆರ್ಸಿಬಿ ಫ್ರಾಂಚೈಸಿ, ಪ್ರತಿ ಹರಾಜಿನಲ್ಲೂ ವಿದೇಶಿ ಬೌಲರ್ಗಳ ಮೇಲೆ ಕೋಟಿ ಕೋಟಿ ಸುರಿಯುತ್ತಿತ್ತು. ಕೋಟಿ ಕೋಟಿ ಪಡೆದ ವಿದೇಶಿ ಬೌಲರ್ಗಳು ಆರ್ಸಿಬಿ ಡೆತ್ ಬೌಲಿಂಗ್ ಸಮಸ್ಯೆಯನ್ನು ಮತ್ತಷ್ಟು ಕಗ್ಗಂಟಾಗುವಂತೆ ಮಾಡಿದ್ರು. ಇದೇ ಕಾರಣಕ್ಕೆ ಆರ್ಸಿಬಿ ಪ್ರತಿ ಸೀಸನ್ನಲ್ಲೂ ತಾನು ನೀಡಿದ ಗುರಿಯನ್ನ ಕಾಪಾಡಿಕೊಳ್ಳೋಕಾಗದೇ ಸೋಲು ಕಾಣುತ್ತಿತ್ತು. ಆದ್ರೀಗ ಈ ಸೀಸನ್ನಿಂದ ಆರ್ಸಿಬಿಯ ಡೆತ್ ಬೌಲರ್ ಸಮಸ್ಯೆ ದೂರವಾಗಿದೆ.
ಕೊಹ್ಲಿಗೆ ಕೈ ಕೊಟ್ಟ ಕೋಟಿ ಕುಳಗಳು.. ಪಂದ್ಯ ಗೆಲ್ಲಿಸಿದ ದೇಸಿ ಹುಲಿಗಳು! ಡೇಲ್ ಸ್ಟೇನ್.. ಕ್ರಿಸ್ ಮೋರಿಸ್.. ಇಸುರು ಉದಾನ.. ಟಿಮ್ ಸೌಥಿ.. ಕ್ರಿಸ್ ವೋಕ್ಸ್, ಟೈಮಿಲ್ ಮಿಲ್ಸ್ರಂತ ವಿದೇಶಿ ಬೌಲರ್ಗಳು, ಆರ್ಸಿಬಿಗೆ ಗೆಲುವು ತಂದುಕೊಡಲಿಲ್ಲ. ಆದ್ರೆ ಈ ವಿದೇಶಿ ಬೌಲರ್ಗಳ ಮಧ್ಯೆ ಆಗೋಮ್ಮೆ ಈಗೋಮ್ಮೆ ಅವಕಾಶ ಪಡೆದ ದೇಸಿ ಬೌಲರ್ಗಳೇ ಇವತ್ತು ಆರ್ಸಿಬಿಯ ಮ್ಯಾಚ್ ವಿನ್ನರ್ಗಳಾಗಿ ಗುರುತಿಸಿಕೊಂಡಿದ್ದಾರೆ.
ಆರ್ಸಿಬಿ ತಂಡಕ್ಕೆ ಹೊಸದಾಗಿ ಸೇರಿಕೊಂಡಿರುವ ಹರ್ಷಲ್ ಪಟೇಲ್, ನಾಯಕ ಕೊಹ್ಲಿಗೆ ಕಂಟಕವಾಗಿದ್ದ ಸಮಸ್ಯೆ ದೂರ ಮಾಡಿರುವ ಮೊದಲ ವೇಗಿ. ಮುಂಬೈ ವಿರುದ್ಧ ದಾಖಲೆಯ ಐದು ವಿಕೆಟ್ ಪಡೆದ ಹರ್ಷಲ್, ಕೊನೆ ಓವರ್ನಲ್ಲಿ ಅದ್ಭುತ ಬೌಲಿಂಗ್ ಮಾಡಿದ. ಹಾಗೇ ಹೈದರಾಬಾದ್ ವಿರುದ್ಧದ ಪಂದ್ಯದಲ್ಲೂ ಹರ್ಷಲ್ ಪಟೇಲ್, ಮ್ಯಾಚ್ ವಿನ್ನಿಂಗ್ ಸ್ಪೆಲ್ ಮಾಡಿ ಮಿಂಚಿದ್ದಾರೆ..
ಹರ್ಷಲ್ ಪಟೇಲ್ ಆರ್ಸಿಬಿ ಪರ ಎರಡೂ ಪಂದ್ಯಗಳನ್ನಾಡಿರುವ ಹರ್ಷಲ್ ಪಟೇಲ್, ಒಟ್ಟು 7 ವಿಕೆಟ್ ಪಡೆದು ಮಿಂಚಿದ್ದಾರೆ. ನೆಟ್ ಪ್ರಾಕ್ಟೀಸ್ನಲ್ಲಿ ತನ್ನ ಸ್ಪಿನ್ ಅಸ್ತ್ರದಿಂದ ಕ್ಯಾಪ್ಟನ್ ಕೊಹ್ಲಿಯನ್ನೇ ಬೌಲ್ಡ್ ಮಾಡಿದ್ದ ಆಲ್ರೌಂಡರ್ ಶಹಬಾಜ್ ಅಹ್ಮದ್, ಆರ್ಸಿಬಿ ಸಮಸ್ಯೆ ದೂರ ಮಾಡಿರುವ 2ನೇ ಆಟಗಾರ. ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಆರ್ಸಿಬಿ ಗೆಲುವುದ ದಾಖಲಿಸಲು, 17ನೇ ಓವರ್ನಲ್ಲಿ ಶಹಬಾಜ್ 3 ವಿಕೆಟ್ ಪಡೆದಿದ್ದೇ ಕಾರಣ..
ಶಹಬಾಜ್ ಅಹ್ಮದ್ ಆರ್ಸಿಬಿ ಪರ ಎರಡೂ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಶಹಬಾಜ್ ಅಹ್ಮದ್, ಡೆತ್ ಓವರ್ನಲ್ಲೇ ಮೂರು ವಿಕೆಟ್ ಪಡೆದು ಮಿಂಚಿದ್ದಾರೆ. ಆರ್ಸಿಬಿ ತಂಡದ ನಂಬಿಕಸ್ತ ಬೌಲರ್ ಆಗಿರುವ ಮೊಹಮ್ಮದ್ ಸಿರಾಜ್, ಕಳೆದ ಸೀಸನ್ನಿಂದ ಆರ್ಸಿಬಿಯ ಡೆತ್ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಈ ಸೀಸನ್ನ 2 ಪಂದ್ಯಗಳಲ್ಲೂ ಸಿರಾಜ್, ಕೊನೆ ಓವರ್ಗಳಲ್ಲಿ ಬೇಕಾಬಿಟ್ಟಿ ರನ್ ಕೊಡದೇ ನಿಯಂತ್ರಿಸಿದ್ದಾರೆ.
ಮೊಹಮ್ಮದ್ ಸಿರಾಜ್ ಪ್ರಸ್ತುತ ಆರ್ಸಿಬಿ 2 ಪಂದ್ಯಗಳನ್ನಾಡಿರುವ ಮೊಹಮ್ಮದ್ ಸಿರಾಜ್, 2 ವಿಕೆಟ್ ಪಡೆದಿದ್ದಾರೆ. ವಿದೇಶಿ ಬೌಲರ್ಗಳ ಮೇಲೆ ನಂಬಿಕೆ ಇಡ್ತಿದ್ದ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ, ದೇಸಿ ಬೌಲರ್ಗಳೇ ಇಂಪ್ರೆಸ್ ಮಾಡಿದ್ದಾರೆ. ಇದನ್ನ ಅರ್ಥಮಾಡಿಕೊಂಡಿರುವ ವಿರಾಟ್, ದೇಸಿ ಬೌಲರ್ಗಳಾದ ಸಿರಾಜ್, ಶಹಬಾಜ್ ಮತ್ತು ಹರ್ಷಲ್ ಪಟೇಲ್ನನ್ನ ಡೆತ್ ಓವರ್ನಲ್ಲಿ ಪ್ರಯೋಗಿಸಿ ಯಶಸ್ಸು ಕಾಣುತ್ತಿದ್ದಾರೆ.
ಇನ್ನು ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಔಟಾಗಿದ್ದ ಹತಾಶೆಯಲ್ಲಿ ವಿರಾಟ್, ಪೆವಿಲಿಯನ್ನಲ್ಲಿದ್ದ ಚೇರ್ಗಳನ್ನ ಚೆಲ್ಲಾಪಿಲ್ಲಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ರು. ಕೊಹ್ಲಿಯ ಈ ದುರ್ವರ್ತನೆಗೆ ವ್ಯಾಪಕವಾದ ಟೀಕೆಗಳು ಕೇಳಿ ಬಂದಿತ್ತು. ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರಂತೂ ಕೊಹ್ಲಿ ವರ್ತನೆ ಬಗ್ಗೆ ತೀವ್ರವಾದ ಅಸಮಾಧಾನ ವ್ಯಕ್ತಪಡಿಸಿದ್ರು. ಆದ್ರೀಗ ಐಪಿಎಲ್ ಶಿಸ್ತು ಸಮಿತಿ ವಿರಾಟ್ಗೆ ಖಡಕ್ ಎಚ್ಚರಿಕೆ ನೀಡಿದೆ. ಇದೇ ದುರ್ವರ್ತನೆಯನ್ನ ಮತ್ತೊಮ್ಮೆ ಮುಂದುವರೆಸಿದ್ರೆ, ಪಂದ್ಯದ ಶೇಕಡಾ ನೂರರಷ್ಟು ದಂಡ ಅಥವಾ, ಎರಡು ಪಂದ್ಯಗಳ ನಿಷೇಧಕ್ಕೆ ಒಳಗಾಗಬೇಕಾಗುತ್ತೆ ಎಂದು ಖಡಕ್ ಎಚ್ಚರಿಕೆ ನೀಡಿದೆ.
Published On - 9:51 am, Sun, 18 April 21