RR vs PBKS Predicted Playing 11: ರಾಜಸ್ಥಾನ್ ರಾಯಲ್ಸ್- ಪಂಜಾಬ್ ಕಿಂಗ್ಸ್ ತಂಡದ ಸಂಭಾವ್ಯ ಆಟಗಾರರು ಇವರು

| Updated By: ganapathi bhat

Updated on: Apr 05, 2022 | 12:38 PM

RR vs PBKS: ರಾಜಸ್ಥಾನ್ ರಾಯಲ್ಸ್ ತಂಡದ ಸಂಜು ಸ್ಯಾಮ್ಸನ್ ಟೀಂ, ಪಂಜಾಬ್​ನ ಕೆ.ಎಲ್. ರಾಹುಲ್ ತಂಡವನ್ನು ಇಂದಿನ ಪಂದ್ಯದಲ್ಲಿ ಎದುರಿಸಲಿದ್ದಾರೆ.

RR vs PBKS Predicted Playing 11: ರಾಜಸ್ಥಾನ್ ರಾಯಲ್ಸ್- ಪಂಜಾಬ್ ಕಿಂಗ್ಸ್ ತಂಡದ ಸಂಭಾವ್ಯ ಆಟಗಾರರು ಇವರು
ರಾಜಸ್ಥಾನ್ ರಾಯಲ್ಸ್ ತಂಡದ ಸಂಜು ಸ್ಯಾಮ್ಸನ್ ಟೀಂ, ಪಂಜಾಬ್​ನ ಕೆ.ಎಲ್. ರಾಹುಲ್ ತಂಡವನ್ನು ಎದುರಿಸಲಿದೆ
Follow us on

ಮುಂಬೈ: ಐಪಿಎಲ್ 2021ನೇ ಆವೃತ್ತಿಯ ನಾಲ್ಕನೆಯ ಪಂದ್ಯಾಟವು ಇಂದು (ಏಪ್ರಿಲ್ 12) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ (ಹಿಂದಿನ ಕಿಂಗ್ಸ್ ಇಲೆವೆನ್ ಪಂಜಾಬ್) ತಂಡ ಮುಖಾಮುಖಿಯಾಗಲಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಸಂಜು ಸ್ಯಾಮ್ಸನ್ ಟೀಂ, ಪಂಜಾಬ್​ನ ಕೆ.ಎಲ್. ರಾಹುಲ್ ತಂಡವನ್ನು ಎದುರಿಸಲಿದ್ದಾರೆ.

ಉಭಯ ತಂಡದ ನಾಯಕರೂ ಯುವ ಹಾಗೂ ಟಿ20ಗೆ ಸೂಕ್ತವಾಗಿ ಒಗ್ಗಬಲ್ಲ ಆಟಗಾರರಾಗಿದ್ದಾರೆ. ಉಭಯ ತಂಡಗಳು ಈವರೆಗೆ ಐಪಿಎಲ್‌ನಲ್ಲಿ 21 ಪಂದ್ಯಗಳಲ್ಲಿ ಭೇಟಿಯಾಗಿವೆ, ಅದರಲ್ಲಿ 12 ಪಂದ್ಯಗಳನ್ನು ರಾಜಸ್ಥಾನ್ ರಾಯಲ್ಸ್ ಮತ್ತು ಉಳಿದ 9 ಪಂದ್ಯಗಳನ್ನು ಪಂಜಾಬ್ ಕಿಂಗ್ಸ್ ಗೆದ್ದಿದೆ. ಆದರೆ, ಐಪಿಎಲ್ ಪ್ಲೇ ಆಫ್ ಪಂದ್ಯದಲ್ಲಿ ಈ ಎರಡು ತಂಡಗಳು ಈವರೆಗೂ ಮುಖಾಮುಖಿಯಾಗಿಲ್ಲ.

ಪಂಜಾಬ್ ಕಿಂಗ್ಸ್ ತಂಡದ ಸಂಭಾವ್ಯ ಆಟಗಾರರು
1) ಕೆ.ಎಲ್ ರಾಹುಲ್ (ನಾಯಕ)
2) ಮಯಾಂಕ್ ಅಗರ್ವಾಲ್
3) ಕ್ರಿಸ್ ಗೇಲ್
4) ಪ್ರಭ್ಸಿಮ್ರಾನ್ ಸಿಂಗ್
5) ನಿಕೋಲಸ್ ಪೂರನ್
6) ಶಾರುಖ್ ಖಾನ್
7) ದೀಪಕ್ ಹೂಡಾ
8) ಜೈ ರಿಚರ್ಡ್ಸನ್
9) ರಿಲೆ ಮೆರೆಡಿತ್
10) ಮೊಹಮ್ಮದ್ ಶಮಿ
11) ರವಿ ಬಿಷ್ಣೋಯಿ

ರಾಜಸ್ಥಾನ್ ರಾಯಲ್ಸ್ ತಂಡದ ಸಂಭಾವ್ಯ ಆಟಗಾರರು
1) ಜೋಸ್ ಬಟ್ಲರ್
2) ಬೆನ್ ಸ್ಟೋಕ್ಸ್
3) ಸಂಜು ಸ್ಯಾಮ್ಸನ್ (ನಾಯಕ)
4) ರಿಯಾನ್ ಪರಾಗ್
5) ಶಿವಂ ದುಬೆ
6) ರಾಹುಲ್ ತಿವಾಟಿಯಾ
7) ಕ್ರಿಸ್ ಮೋರಿಸ್
8) ಲಿಯಾಮ್ ಲಿವಿಂಗ್ಸ್ಟೋನ್
9) ಶ್ರೇಯಸ್ ಗೋಪಾಲ್
10) ಜಯದೇವ್ ಉನಾದ್ಕತ್
11) ಕಾರ್ತಿಕ್ ತ್ಯಾಗಿ

ಇಂದಿನ ಪಂದ್ಯದಲ್ಲಿ ಗೆಲುವು ಯಾರಿಗೆ?
ಎರಡು ತಂಡಗಳ ಬಲಾಬಲದ ಬಗ್ಗೆ ಯೋಚಿಸಿದಾಗ ಪಂಜಾಬ್​ ತಂಡ ಬ್ಯಾಟಿಂಗ್ ವಿಭಾಗದಲ್ಲಿ ಬಲಿಷ್ಠರನ್ನೇ ಹೊಂದಿದೆ. ಆರಂಭಿಕರಾಗಿ ಬರುವ ರಾಹುಲ್ ಹಾಗೂ ಗೇಲ್ ರನ್​ ಮಳೆಯನ್ನೇ ಹರಿಸುವ ಸಾಮರ್ಥ್ಯ ಹೊಂದಿದ್ದಾರೆ. ನಂತರ ಬರುವ ಮಾಯಾಂಕ್ ಹಾಗೂ ಪೂರನ್​ ಎಂತಹ ಸಮಯದಲ್ಲೂ ಪಂದ್ಯದ ದಿಕ್ಕನೇ ಬದಲಿಸುವ ಸಾಮಥ್ರ್ಯ ಹೊಂದಿದ್ದಾರೆ. ಆದರೆ ಬೌಲಿಂಗ್ ವಿಭಾಗದಲ್ಲಿ ತಂಡ ಶಮೀ ಅವರನ್ನೇ ನೆಚ್ಚಿಕೊಳ್ಳಬೇಕಿದೆ. ಇತ್ತ ರಾಜಸ್ಥಾನ ತನ್ನ ತಂಡದಲ್ಲಿ ನಾಯಕ ಸಂಜು, ಬಟ್ಲರ್​, ಸ್ಟೋಕ್ಸ್​ ಹಾಗೂ ರಾಹುಲ್ ತಿವಾಟಿಯಾ ಅವರಂತಹ ಹೊಡಿಬಡಿ ಆಟಗಾರರನ್ನೇ ತಂಡದಲ್ಲಿರಿಸಿಕೊಂಡಿದೆ. ಆದರೆ ಬೌಲಿಂಗ್ ವಿಭಾಗದಲ್ಲಿ ಆರ್ಚರ್​ ಇಲ್ಲದಿರುವುದು ಕೊಂಚ ಹಿನ್ನಡೆ ಉಂಟುಮಾಡಿದೆ. ರಾಜಸ್ಥಾನಕ್ಕೆ ಹೋಲಿಸಿದರೆ ಪಂಜಾಬ್​ ಕೊಂಚ ಬಲಿಷ್ಠವಾಗಿದ್ದು ನಾಳಿನ ಪಂದ್ಯದಲ್ಲಿ ಗೆಲ್ಲುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Sanju Samson IPL 2021 RR team player: ಐಪಿಎಲ್​ನಲ್ಲಿ ಅಬ್ಬರದ ಆಟವೇ ಸಂಜು ಸ್ಯಾಮ್ಸನ್​ ಅವರನ್ನು ತಂಡದ ನಾಯಕನಾಗಿ ಮಾಡಿದೆ!

ಇದನ್ನೂ ಓದಿ: KL Rahul IPL 2021 PBKS Team Player: ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಗಿಟ್ಟಿಸಲು ಕನ್ನಡಿಗ ರಾಹುಲ್​ ಐಪಿಎಲ್​ನಲ್ಲಿ ಮಿಂಚಲೇಬೇಕಿದೆ!

Published On - 5:50 pm, Mon, 12 April 21