KL Rahul IPL 2021 PBKS Team Player: ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಗಿಟ್ಟಿಸಲು ಕನ್ನಡಿಗ ರಾಹುಲ್ ಐಪಿಎಲ್ನಲ್ಲಿ ಮಿಂಚಲೇಬೇಕಿದೆ!
KL Rahul Profile: 67 ಪಂದ್ಯಗಳಲ್ಲಿ, ಅವರು 42.06 ಸರಾಸರಿಯಲ್ಲಿ 1,977 ರನ್ ಗಳಿಸಿದ್ದಾರೆ ಮತ್ತು ಸ್ಟ್ರೈಕ್ ರೇಟ್ 138.15 ರಲ್ಲಿ, 16 ಅರ್ಧಶತಕ ಮತ್ತು ಒಂದು ಶತಕವನ್ನು ಗಳಿಸಿ, ಔಟಾಗದೆ 100 ರನ್ ಗಳಿಸಿರುವುದು ಅವರ ಗರಿಷ್ಠ ಸ್ಕೋರ್.
ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ 2019ರಲ್ಲಿ ಆಡಲು ಭಾರತ ತಂಡದಲ್ಲಿ ಸ್ಥಾನ ಪಡೆದ 15 ಆಟಗಾರರಲ್ಲಿ ಕೆ ಎಲ್ ರಾಹುಲ್ ಒಬ್ಬರು. 11-ಜೂನ್ 2016 ರಂದು ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ ಕೆ ಎಲ್ ರಾಹುಲ್, 2019 ರ ವಿಶ್ವಕಪ್ ತನಕ 14 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು ಬ್ಯಾಟಿಂಗ್ ಮಾಡಿದ 13 ಇನ್ನಿಂಗ್ಸ್‌ಗಳಲ್ಲಿ 424 ಎಸೆತಗಳನ್ನು ಎದುರಿಸಿ ಒಟ್ಟು 343 ರನ್ ಗಳಿಸಿದ್ದಾರೆ, ಸರಾಸರಿ 34.3 ಮತ್ತು ಸ್ಟ್ರೈಕ್ ರೇಟ್ 80.9 ಇದೆ. ಆ 3 ಇನ್ನಿಂಗ್ಸ್‌ಗಳಲ್ಲಿ ಅವರು ಅಜೇಯರಾಗಿದ್ದರು. ಇನಿಂಗ್ಸ್‌ನಲ್ಲಿ ಅವರ ಗರಿಷ್ಠ ಸ್ಕೋರ್ 100 ಎಂಬುದು ಸಹ ಗಮನಾರ್ಹ. ಇಂತಹ ಅತ್ಯದ್ಭುತ ಪ್ರದರ್ಶನದ ಮೂಲಕ ಅವರು ತಮ್ಮ ಹೆಸರಿಗೆ 1 ಶತಕ ಮತ್ತು 2 ಅರ್ಧಶತಕಗಳನ್ನು ದಾಖಲಿಸಿಕೊಂಡಿದ್ದಾರೆ.
ಕಣ್ಣನೂರ್ ಲೋಕೇಶ್ ರಾಹುಲ್ ಟೀಂ ಇಂಡಿಯಾದ ಆರಂಭಿಕ ಆಟಗಾರನಾಗಿದ್ದು, ಸಾಂದರ್ಭಿಕವಾಗಿ ತಂಡಕ್ಕೆ ತಮ್ಮ ಅವಶ್ಯಕತೆ ಬಿದ್ದಾಗ ವಿಕೆಟ್ ಕೀಪಿಂಗ್ ಕೈಗವಸುಗಳನ್ನೂ ಧರಿಸುತ್ತಾರೆ. ರಾಹುಲ್ 2010 ರ ವಿಶ್ವಕಪ್ ಆಡಿದ ಭಾರತದ ಅಂಡರ್ -19 ತಂಡದ ಭಾಗವಾಗಿದ್ದರು. ಅವರು 2010-11ರ ಆವೃತ್ತಿಯಲ್ಲಿ ಕರ್ನಾಟಕ ಪರ ಪ್ರಥಮ ದರ್ಜೆ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದು ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ ಶತಕ ಗಳಿಸಿದ ಮೂರನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಟಿ 20 ಪಂದ್ಯಗಳಲ್ಲಿ ರಾಹುಲ್ ಜೂನ್ 18, 2016 ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಜಿಂಬಾಬ್ವೆ ವಿರುದ್ಧ ರಾಹುಲ್ ತಮ್ಮ ಟಿ 20 ಇಂಟರ್ನ್ಯಾಷನಲ್ಗೆ ಪದಾರ್ಪಣೆ ಮಾಡಿದರು. ಚೊಚ್ಚಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದರು ಮತ್ತು ಟಿ 20 ಐ ಪಂದ್ಯದಲ್ಲಿ ಮೊದಲ ಎಸೆತದಲ್ಲಿ ಶೂನ್ಯಕ್ಕೆ ಔಟಾದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಅವರು ಯುನೈಟೆಡ್ ಸ್ಟೇಟ್ಸ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕಾಗಿ ವೇಗವಾಗಿ ಟಿ 20 ಶತಕವನ್ನು (46 ಎಸೆತಗಳು) ಗಳಿಸಿದರು. ಟಿ 20 ಇತಿಹಾಸದಲ್ಲಿ 4 ನೇ ಸ್ಥಾನ ಅಥವಾ ಅದಕ್ಕಿಂತ ಕಡಿಮೆ ಬ್ಯಾಟಿಂಗ್ ಮಾಡುವಾಗ ಶತಕ (110 *) ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. 3 ಜುಲೈ 2018 ರಂದು ರಾಹುಲ್ ಇಂಗ್ಲೆಂಡ್ ವಿರುದ್ಧದ ಎರಡನೇ ಟಿ 20 ಪಂದ್ಯದಲ್ಲಿ ಶತಕವನ್ನು ಹೊಡೆದರು. ಟಿ 20 ಗಳಲ್ಲಿ ಹಿಟ್-ವಿಕೆಟ್ ಪಡೆದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಒಟ್ಟಾರೆಯಾಗಿ, 27 ಪಂದ್ಯಗಳಲ್ಲಿ, ಅವರು 43.95 ರ ಸರಾಸರಿಯಲ್ಲಿ 879 ರನ್ ಗಳಿಸಿದ್ದಾರೆ ಮತ್ತು 149.24 ಸ್ಟ್ರೈಕ್ ರೇಟ್ ಮಾಡಿದ್ದಾರೆ, 2 ಶತಕಗಳು ಮತ್ತು ಐದು ಅರ್ಧಶತಕಗಳನ್ನು ಹೊಂದಿದ್ದಾರೆ.
ಐಪಿಎಲ್ನಲ್ಲಿ ರಾಹುಲ್ ಲೋಕೇಶ್ ರಾಹುಲ್ ತಮ್ಮ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವೃತ್ತಿಜೀವನವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿಕೆಟ್‌ಕೀಪರ್ ಆಗಿ 2013 ರಲ್ಲಿ ಪ್ರಾರಂಭಿಸಿದರು. 2014 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಅವರನ್ನು ಹರಾಜಿನಲ್ಲಿ 1 ಕೋಟಿ ರೂ.ಗೆ ಖರೀದಿಸಿತು. ನಂತರ ಅವರು ಮತ್ತೆ 2016 ರಲ್ಲಿ ಆರ್‌ಸಿಬಿಗೆ ಮರಳಿದರು ಹಾಗೂ 44.11 ಸರಾಸರಿಯಲ್ಲಿ 397 ರನ್ ಗಳಿಸಿದರು. ಭುಜದ ಗಾಯದಿಂದಾಗಿ ಅವರು 2017ರ ಆವೃತ್ತಿಯನ್ನು ತಪ್ಪಿಸಿಕೊಂಡರು. ಐಪಿಎಲ್ 2018 ಆಟಗಾರರ ಹರಾಜಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ 11 ಕೋಟಿ ರೂ ನೀಡಿ ಖರೀದಿಸಿತು. ಒಟ್ಟಾರೆ, 67 ಪಂದ್ಯಗಳಲ್ಲಿ, ಅವರು 42.06 ಸರಾಸರಿಯಲ್ಲಿ 1,977 ರನ್ ಗಳಿಸಿದ್ದಾರೆ ಮತ್ತು ಸ್ಟ್ರೈಕ್ ರೇಟ್ 138.15 ರಲ್ಲಿ, 16 ಅರ್ಧಶತಕ ಮತ್ತು ಒಂದು ಶತಕವನ್ನು ಗಳಿಸಿ, ಔಟಾಗದೆ 100 ರನ್ ಗಳಿಸಿರುವುದು ಅವರ ಗರಿಷ್ಠ ಸ್ಕೋರ್ ಆಗಿದೆ.