AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: IPL 2021: ಐಪಿಎಲ್​ಗಾಗಿ ಬದ್ಧ ವೈರಿಗಳಾದ ದಾಯಾದಿಗಳು! ಅಣ್ಣನೆದುರು ಸ್ಲೆಡ್ಜಿಂಗ್​ಗೆ ರೆಡಿ ಎಂದ ತಮ್ಮ

ಪಂದ್ಯದ ಸಮಯದಲ್ಲಿ ಟಾಮ್ ವಿರುದ್ಧ ಸ್ಲೆಡ್ಡಿಂಗ್ ಮಾಡುತ್ತೀರಾ ಎಂದು ಸ್ಯಾಮ್ ಕುರ್ರನ್ಅವರನ್ನು ಕೇಳಲಾಯಿತು. ಈ ಬಗ್ಗೆ, ಅವರು ಕೆಲವು ಸ್ಲೆಡ್ಜಿಂಗ್ ಇರಬಹುದು ಎಂದು ಹೇಳಿದರು.

IPL 2021: IPL 2021: ಐಪಿಎಲ್​ಗಾಗಿ ಬದ್ಧ ವೈರಿಗಳಾದ ದಾಯಾದಿಗಳು! ಅಣ್ಣನೆದುರು ಸ್ಲೆಡ್ಜಿಂಗ್​ಗೆ ರೆಡಿ ಎಂದ ತಮ್ಮ
ಸ್ಯಾಮ್ ಕುರ್ರನ್ ಮತ್ತು ಟಾಮ್ ಕುರ್ರನ್
ಪೃಥ್ವಿಶಂಕರ
|

Updated on:Apr 10, 2021 | 7:49 PM

Share

ಐಪಿಎಲ್ 2021 ರ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಇಬ್ಬರು ಸಹೋದರರ ನಡುವೆ ಸ್ಪರ್ಧೆಯೂ ನಡೆಯಲಿದೆ. ಈ ಇಬ್ಬರು ಸಹೋದರರು ಸ್ಯಾಮ್ ಕುರ್ರನ್ ಮತ್ತು ಟಾಮ್ ಕುರ್ರನ್ ಆಗಿದ್ದಾರೆ. ಇಬ್ಬರೂ ಇಂಗ್ಲೆಂಡ್‌ನಿಂದ ಬಂದವರು. ಕಿರಿಯ ಸಹೋದರ ಸ್ಯಾಮ್ ಕುರ್ರನ್ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದರೆ, ಹಿರಿಯ ಸಹೋದರ ಟಾಮ್ ದೆಹಲಿ ಕ್ಯಾಪಿಟಲ್ಸ್ ನ ಒಂದು ಭಾಗವಾಗಿದ್ದಾರೆ. ಪಂದ್ಯದ ಮೊದಲು, ಸ್ಯಾಮ್ ಕುರ್ರನ್ ತನ್ನ ಸಹೋದರನ ವಿರುದ್ಧ ಆಡುವ ಬಗ್ಗೆ ಪ್ರತಿಕ್ರಿಯಿಸಿದರು. ಇವತ್ತು ರಾತ್ರಿ ತನ್ನ ತಾಯಿ ತುಂಬಾ ನರಳುತ್ತಾರೆ ಎಂದು ಹೇಳಿದರು. ಸ್ಟಾರ್ ಸ್ಪೋರ್ಟ್ಸ್‌ನೊಂದಿಗಿನ ಸಂಭಾಷಣೆಯ ಸಮಯದಲ್ಲಿ, ಸಹೋದರ ಟಾಮ್ ಕರಣ್ ವಿರುದ್ಧ ಆಡಿದ ಅನುಭವದ ಬಗ್ಗೆ ಕೇಳಲಾಯಿತು. ಅಂದಹಾಗೆ, ಐಪಿಎಲ್ 2020 ರಲ್ಲಿ ಇಬ್ಬರೂ ಸಹೋದರರು ಬೇರೆ ಬೇರೆ ತಂಡಗಳಲ್ಲಿದ್ದರು. ಆ ಸಮಯದಲ್ಲಿ, ಸ್ಯಾಮ್ ಕುರ್ರನ್ ಇನ್ನೂ ಸಿಎಸ್‌ಕೆ ಯಲ್ಲಿದ್ದರು ಆದರೆ ಟಾಮ್ ರಾಜಸ್ಥಾನ್ ರಾಯಲ್ಸ್ ಜೊತೆಗಿದ್ದರು.

ಕೆಲವು ಸ್ಲೆಡ್ಜಿಂಗ್ ಇರಬಹುದು ಪಂದ್ಯದ ಸಮಯದಲ್ಲಿ ಟಾಮ್ ವಿರುದ್ಧ ಸ್ಲೆಡ್ಡಿಂಗ್ ಮಾಡುತ್ತೀರಾ ಎಂದು ಸ್ಯಾಮ್ ಕುರ್ರನ್ಅವರನ್ನು ಕೇಳಲಾಯಿತು. ಈ ಬಗ್ಗೆ, ಅವರು ಕೆಲವು ಸ್ಲೆಡ್ಜಿಂಗ್ ಇರಬಹುದು ಎಂದು ಹೇಳಿದರು. ಯುವ ಇಂಗ್ಲೆಂಡ್‌ನ ಆಲ್‌ರೌಂಡರ್ ಐಪಿಎಲ್ 2021 ರ ಸಮಯದಲ್ಲಿ ಬಯೋ ಬಬಲ್‌ನಲ್ಲಿರುವ ಬಗ್ಗೆಯೂ ಮಾತನಾಡಿದರು. ಎರಡು ವಾರಗಳ ಹಿಂದೆ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿದ್ದೇವು. ನಂತರ ಸ್ವಲ್ಪ ವಿಶ್ರಾಂತಿ ಸಿಕ್ಕಿತು. ಬಯೋ ಬಬಲ್‌ನಲ್ಲಿ ಬದುಕುವುದು ಕಷ್ಟ, ಆದರೆ ಇದು ನಾವು ವಾಸಿಸುತ್ತಿರುವ ಹೊಸ ಜಗತ್ತು ಎಂದರು. ಇದು ಸ್ಯಾಮ್ ಕರಣ್ ಅವರ ಮೂರನೇ ಐಪಿಎಲ್ ಆಗಿದೆ. ಐಪಿಎಲ್ 2019 ರಲ್ಲಿ ಪಂಜಾಬ್ ಕಿಂಗ್ಸ್ ಜೊತೆ ಪಂದ್ಯಾವಳಿಯಲ್ಲಿ ಹೆಜ್ಜೆ ಹಾಕಿದರು.

ಸ್ಯಾಮ್ ಕರಣ್ ಸಿಎಸ್ಕೆ ಮುಖ್ಯ ಆಟಗಾರರಾಗಿದ್ದಾರೆ ಮೊದಲ ಆವೃತ್ತಿಯಲ್ಲಿ ಕುರ್ರನ್ ಪಂಜಾಬ್‌ಗಾಗಿ ಹ್ಯಾಟ್ರಿಕ್ ಕೂಡ ಪಡೆದರು. ಅದೇನೇ ಇದ್ದರೂ, ಪಂಜಾಬ್ ಅವರನ್ನು ಬಿಡುಗಡೆ ಮಾಡಿತ್ತು. ಅಂತಹ ಪರಿಸ್ಥಿತಿಯಲ್ಲಿ ಚೆನ್ನೈ ಅವರನ್ನು ಕೊಂಡುಕೊಂಡಿತು. ಮಹೇಂದ್ರ ಸಿಂಗ್ ಧೋನಿ ತಂಡದಲ್ಲಿಯೂ ಸ್ಯಾಮ್ ಕುರ್ರನ್ ತಮ್ಮ ಆಟದಿಂದ ಅಭಿಮಾನಿಗಳ ಹೃದಯ ಗೆದ್ದರು. ಅವರು ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ವಿಶ್ವಾಸ ಮೂಡಿಸಿದರು. ಸ್ಯಾಮ್ ಕುರ್ರನ್ ಅವರು ಐಪಿಎಲ್ 2019 ರಲ್ಲಿ ಭಾರತದಲ್ಲಿ ಆಡಿದರು ಮತ್ತು ಐಪಿಎಲ್ 2020 ರಲ್ಲಿ ಯುಎಇಯಲ್ಲಿ ಆಡಿದ ನಂತರ, ಅವರು ಮತ್ತೆ ಭಾರತೀಯ ಪಿಚ್‌ಗಳಲ್ಲಿ ದೊಡ್ಡ ಸ್ಪ್ಲಾಶ್ ಮಾಡಲು ಸಿದ್ಧರಾಗಿದ್ದಾರೆ.

Published On - 7:38 pm, Sat, 10 April 21

‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ನಮ್ಮ ನಿರ್ಮಾಣದ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ: ಹೆಬ್ಬಾಳ್ಕರ್
ನಮ್ಮ ನಿರ್ಮಾಣದ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ: ಹೆಬ್ಬಾಳ್ಕರ್