IPL 2021: ‘ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ನೋಡೇ ಐಪಿಎಲ್ ಲೋಗೋ ಡಿಸೈನ್ ಮಾಡಿದ್ದು’
ಇಂದು ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸವಾಲೊಡ್ಡಲಿದೆ. ಈ ನಡುವೆ, ನಿನ್ನೆಯ ಪಂದ್ಯಾಟದ ಎಬಿಡಿ ಆಟ ಗಮನಿಸಿ, ವೀರೇಂದ್ರ ಸೆಹವಾಗ್ ವಿಶೇಷ ಟ್ವೀಟ್ ಒಂದನ್ನು ಮಾಡಿದ್ದಾರೆ.
ಎಬಿ ಡಿವಿಲಿಯರ್ಸ್ ಕ್ರಿಕೆಟ್ ಲೋಕದ ದಂತಕಥೆ ಅನ್ನೋದನ್ನು ಎಲ್ಲಾ ಕ್ರಿಕೆಟ್ ಅಭಿಮಾನಿಗಳೂ ಒಪ್ಪಿಕೊಳ್ಳುತ್ತಾರೆ. ದೇಶ, ಭಾಷೆ ಹೊರತುಪಡಿಸಿ ಅವರಿಗೆ ಅತಿ ದೊಡ್ಡ ಅಭಿಮಾನಿ ಸಮೂಹವಿದೆ. ಮಿಸ್ಟರ್ 360 ಎಂದು ಕರೆಸಿಕೊಳ್ಳುವ ಎಬಿಡಿ ಆಟವನ್ನು ಎಂಜಾಯ್ ಮಾಡದವರು ಯಾರೂ ಇರಲಿಕ್ಕಿಲ್ಲ. ಎಂತಹುದೇ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಬಲ್ಲ ಚಾಕಚಕ್ಯತೆ ಡಿವಿಲಿಯರ್ಸ್ಗೆ ಇದೆ. ಇದೇ ರೀತಿ ಯಾವುದೇ ಎಸೆತಗಾರರ ಬಾಲ್ನ್ನು ಅಟ್ಟಾಡಿಸಬಲ್ಲ, ಮೊದಲ ಬಾಲ್ಗೆ ಫೋರ್-ಸಿಕ್ಸ್ ಬಾರಿಸಬಲ್ಲ ಮತ್ತೊಬ್ಬ ಸೂಪರ್ ದಾಂಡಿಗನಿದ್ದರೆ ಅದು ವೀರೂ.. ವೀರೇಂದ್ರ ಸೆಹವಾಗ್.
ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದೊಂದಿಗೆ ಐಪಿಎಲ್ ಕ್ರಿಕೆಟ್ ಜ್ವರ ಶುರುವಾಗಿದೆ. ಇಂದು ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸವಾಲೊಡ್ಡಲಿದೆ. ಈ ನಡುವೆ, ನಿನ್ನೆಯ ಪಂದ್ಯಾಟದ ಎಬಿಡಿ ಆಟ ಗಮನಿಸಿ, ವೀರೇಂದ್ರ ಸೆಹವಾಗ್ ವಿಶೇಷ ಟ್ವೀಟ್ ಒಂದನ್ನು ಮಾಡಿದ್ದಾರೆ.
ಭಾರತೀಯ ತಂಡ ಕಂಡ ಅಬ್ಬರದ ಬ್ಯಾಟ್ಸ್ಮನ್ ವೀರೇಂದ್ರ ಸೆಹವಾಗ್, ಡಿವಿಲಿಯರ್ಸ್ರನ್ನು ಸ್ಪೆಷಲ್ ಆಗಿ ಕೊಂಡಾಡಿದ್ದಾರೆ. ಈ ಐಪಿಎಲ್ ಲೋಗೋವನ್ನು ಡಿವಿಲಿಯರ್ಸ್ ಬ್ಯಾಟಿಂಗ್ ನೋಡಿಯೇ ತಯಾರಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ, ನಿನ್ನೆಯ ಪಂದ್ಯದಲ್ಲಿ ಐದು ವಿಕೆಟ್ ಕಬಳಿಸಿದ್ದಕ್ಕಾಗಿ ಹರ್ಷಲ್ ಪಟೇಲ್ರನ್ನೂ ಅಭಿನಂದಿಸಿದ್ದಾರೆ.
Will power = De villiers Power. Defeats all power.
No wonder the @IPL logo is secretly designed after @ABdeVilliers17 . Champion knock. But Patel Bhai ke raaz mein , RCB bowling mazaa aaya. Top spell 5/27. Is saal cup aande , no vaandey. #RCBvsMI pic.twitter.com/NcPBRzaRrd
— Virender Sehwag (@virendersehwag) April 9, 2021
ನಿನ್ನೆ ಮುಂಬೈ ವಿರುದ್ಧ ಸಿಡಿದಿದ್ದ ಡಿವಿಲಿಯರ್ಸ್ ಮುಂಬೈ ನಿಡಿದ 160 ರನ್ಗಳ ಟಾರ್ಗೆಟನ್ನು ಬೆನ್ನಟ್ಟಿದ್ದ ಆರ್ಸಿಬಿಯ ಆರಂಭ ಅಷ್ಟು ಉತ್ತಮವಾಗಿರಲಿಲ್ಲ. ಆರಂಭಿಕನಾಗಿ ಬಂದ ಸುಂದರ್ 10 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದರು. ನಂತರ ಬಂದ ರಜತ್ ಕೂಡ ಹೆಚ್ಚು ಸಮಯ ನಿಲ್ಲಲಿಲ್ಲ. ಕೊಹ್ಲಿ ಜೊತೆಗೂಡಿದ ಮ್ಯಾಕ್ಸ್ವೆಲ್ ಉತ್ತಮ ಆಟ ಆಡಿದರು. 28 ಎಸೆತ ಎದುರಿಸಿದ ಮ್ಯಾಕ್ಸ್ವೆಲ್ 39 ರನ್ ಗಳಿಸಿದ್ದರು. ಇದರಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸೇರಿದ್ದವು.
ಉತ್ತಮ ಜೊತೆಯಾಟ ಆಡುತ್ತಿದ್ದ ಕೊಹ್ಲಿ 33 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಡಿವಿಲಿಯರ್ಸ್ ತಮ್ಮ ಎಂದಿನ ಆಟಕ್ಕೆ ಮುಂದಾದರು. ಒಂದು ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ಮ್ಯಾಕ್ಸ್ವೆಲ್ ಇಲ್ಲದ ಹೊಡೆತ ಆಡಲು ಹೋಗಿ ಔಟಾದರು. ಈ ವಿಕೆಟ್ ಬಳಿಕ ಏಕಾಂಗಿ ಹೋರಾಟ ನಡೆಸಿದ ಡಿವಿಲಿಯರ್ಸ್ ತಂಡವನ್ನು ಗೆಲುವಿನ ಅಂಚಿಗೆ ತಂದು ರನ್ ಔಟ್ ಆದರು. ವಿಕೆಟ್ಗೂ ಮುನ್ನ ಡಿವಿಲಿಯರ್ಸ್ ಕೇವಲ 27 ಬಾಲ್ಗಳಲ್ಲಿ 48 ರನ್ ಗಳಿಸಿದ್ದರು. ಅಂತಿಮವಾಗಿ ಬೌಲಿಂಗ್ನಲ್ಲಿ ಮಿಂಚಿದ್ದ ಹರ್ಷಲ್ ಪಟೇಲ್ ಕೊನೆಯ ಎಸೆತದಲ್ಲಿ ಸಿಂಗಲ್ ತೆಗೆದುಕೊಳ್ಳುವ ಮೂಲಕ ಆರ್ಸಿಬಿಗೆ ಗೆಲುವಿನ ಮಾಲೆ ತೊಡಿಸಿದರು.
ಇದನ್ನೂ ಓದಿ: CSK vs DC, IPL 2021: ಇಂದಿನ ಪಂದ್ಯದ ಬಗ್ಗೆ ಹೆಚ್ಚು ಕುತೂಹಲ ಮೂಡಲು ಕಾರಣ ತಿಳಿಸಿದ ರವಿ ಶಾಸ್ತ್ರಿ
ಇದನ್ನೂ ಓದಿ: Rishabh Pant IPL 2021 DC Team Player: ಡೆಲ್ಲಿ ತಂಡದ ಸಾರಥ್ಯವಹಿಸಿಕೊಂಡಿರುವ ಪಂತ್ಗೆ ಸವಾಲುಗಳ ಮಹಾಗೋಡೆಯೇ ಮುಂದಿದೆ
Published On - 5:13 pm, Sat, 10 April 21