ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದ ಬಗ್ಗೆ ಜನ ಮಾತನಾಡುತ್ತಿಲ್ಲ. ಕುತೂಹಲ ಯಾಕೆಂದರೆ, ಗೆಲ್ಲುವ ಪಂದ್ಯವನ್ನು ಸನ್ ರೈಸರ್ಸ್ ಹೈದರಾಬಾದ್ ಕೈಯ್ಯಾರೆ ಬಿಟ್ಟುಕೊಟ್ಟಿದ್ದು ಹೇಗೆ? ಈ ಕುರಿತು ಜನ ಚರ್ಚಿಸುತ್ತಿದ್ದಾರೆ. 10 ಓವರ್ಗಳಲ್ಲಿ 70 ರನ್ ಗಳಿಸುವ ಗುರಿ ಹೊಂದಿದ್ದ ಎಸ್ಆರ್ಎಚ್, ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿತ್ತು. ಎಸ್ಆರ್ಎಚ್ ಫ್ಯಾನ್ಸ್ಗಳು ಬೇಸರ ಮತ್ತು ಸಿಟ್ಟಿನಿಂದ ಟಿವಿ ಆಫ್ ಮಾಡಿ ಹೋದವರು ಇದ್ದಾರೆ. ಎಸ್ಆರ್ಎಚ್ನ ಎಲ್ಲಾ ಆಟಗಾರರು ಕೆಟ್ಟದಾದ ಹೊಡೆತದ ಸೆಳೆತಕ್ಕೆ ಬಲಿಯಾಗಿ ಕಂಡಕಂಡಂತೆ ಬ್ಯಾಟ್ ಬೀಸಿ ವಿಕೆಟ್ ಒಪ್ಪಿಸಿದ್ದನ್ನು ನೋಡಿ ಎಸ್ಆರ್ಎಚ್ ಫ್ಯಾನ್ಸ್ಗಳಿಗೆ ತುಂಬಾ ನಿರಾಸೆ ಆಗಿದ್ದಂತು ನಿಜ.
ಹೆಚ್ಚಿನ ಅರ್ಧಶತಕಗಳು ವ್ಯರ್ಥವಾಗಿದ್ದವು
ಎಸ್ಆರ್ಎಚ್ನ ಓರ್ವ ಆಟಗಾರ ಎಲ್ಲರಿಗಿಂತ ಹೆಚ್ಚಿನ ಟೀಕೆಗೆ ಒಳಗಾಗಿದ್ದಾರೆ. ಅವರೇ ಬೆಂಗಳೂರಿನ ಮನೀಶ್ ಪಾಂಡೆ. ಐಪಿಎಲ್ನಲ್ಲಿ ಎಸ್ಆರ್ಎಚ್ ಪರವಾಗಿ ಆಡುವ ಅವರು ತಾವು ಆಡಿದ ಎರಡು ಪಂದ್ಯಗಳಲ್ಲೂ ಉತ್ತಮವಾಗಿ ರನ್ ಪೇರಿಸಿದ್ದಾರೆ. 119.27 ಸ್ಟ್ರೈಕ್ ರೇಟ್ನೊಂದಿಗೆ ಆಡುತ್ತಿರುವ ಪಾಂಡೆ, ಆರ್ಸಿಬಿ ವಿರುದ್ಧ 39 ಬಾಲ್ಗಳಲ್ಲಿ 38 ರನ್ ಹೊಡೆದು ಔಟಾಗಿದ್ದರು. ಕಳೆದ ಮೂರು ವರ್ಷದಿಂದ ಎಸ್ಆರ್ಎಚ್ ಪರವಾಗಿ ಆಡುತ್ತಿರುವ ಪಾಂಡೆ, ಮೊದಲ ಸೀಸನ್ಗಿಂತ ಎರಡನೇ ಸೀಸನ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. 11 ಪಂದ್ಯಗಳಿಂದ 344 ರನ್ ಗಳಿಸಿದ್ದ ಪಾಂಡೆ, ಉತ್ತಮ ಸ್ಟ್ರೈಕ್ ರೇಟ್ ಹೊಂದಿದ್ದರು. ಕಳೆದ ವರ್ಷ ಕೂಡ ಉತ್ತಮ ಪ್ರದರ್ಶನ ನೀಡಿದ್ದ ಪಾಂಡೆ 15 ಪಂದ್ಯಗಳಿಂದ 425 ರನ್ ಗಳಿಸಿದ್ದರು. ಎಸ್ಆರ್ಎಚ್ ಕ್ವಾಲಿಫೈಯರ್ ಹಂತಕ್ಕೆ ಬರಲು ಪಾಂಡೆಯವರ ಆಟ ಮುಖ್ಯವಾಗಿತ್ತು. ಆದರೆ ಕೆಲವು ಅಂಕಿ ಅಂಶ ನೋಡಿದಾಗ ಪಾಂಡೆ ಕಿಲ್ಲರ್ ಇನ್ಸ್ಟಿಂಕ್ಟ್ ಹೊಂದಿಲ್ಲವಾ ಎಂಬ ಸಂಶಯ ಕೂಡ ಬರುತ್ತದೆ. ಆದರೆ, ಹೈದರಾಬಾದಿಗಾಗಿ ಗಳಿಸಿದ 9 ಅರ್ಧ ಶತಕಗಳಲ್ಲಿ ಎರಡು ಮಾತ್ರ ಆ ತಂಡದ ಗೆಲುವಿಗೆ ಸಹಾಯವಾಗಿತ್ತು. ಹೆಚ್ಚಿನ ಅರ್ಧಶತಕಗಳು ವ್ಯರ್ಥವಾಗಿದ್ದವು.
ನೆಹ್ರಾ ಮತ್ತು ಪಾರ್ಥಿವ್ ಪಟೇಲ್ ಪಾಂಡೆಯನ್ನು ಟೀಕಿಸಿದ್ದಾರೆ
ಮಾಜಿ ಕ್ರಿಕೆಟ್ ಆಟಗಾರರಾದ ಆಶಿಶ್ ನೆಹ್ರಾ ಮತ್ತು ಪಾರ್ಥಿವ್ ಪಟೇಲ್ ಪಾಂಡೆಯನ್ನು ಟೀಕಿಸಿದ್ದಾರೆ. ಓರ್ವ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಕೊನೆಯ ಆಟಗಾರರ ತರಹ ಬ್ಯಾಟ್ ಮಾಡಿದ್ದು ಸರಿ ಇರಲಿಲ್ಲ. ಇದೇ ಕಾರಣಕ್ಕಾಗಿಯೇ ಅವರಿಗೆ ಟೀಂ ಇಂಡಿಯಾದಲ್ಲಿ ಖಚಿತ ಸ್ಥಾನ ಸಿಕ್ಕಿಲ್ಲ ಎಂದು ಹೇಳಿದ್ದಾರೆ. 2008 ರಲ್ಲಿ ಟೀಂ ಇಂಡಿಯಾಕ್ಕೆ ಪದಾರ್ಪಣೆ ಮಾಡಿರುವ ಪಾಂಡೆ, ಈಗಲೂ ಕಷ್ಟ ಪಡುತ್ತಿದ್ದಾರೆ. ಈಗಂತೂ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಮತ್ತು ರಿಶಬ್ ಪಂತ್ ಬಂದ ಮೇಲೆ ಪಾಂಡೆಗೆ ಸ್ಥಾನ ಸಿಗುವುದು ಕಷ್ಟವಿದೆ. ಪಾಂಡೆ ಅತ್ಯುತ್ತಮ ಪ್ರದರ್ಶನ ನೀಡಿದರೆ ಮಾತ್ರ ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ನಡೆಯುವ ಟಿ20 ವಿಶ್ವ ಕಪ್ಗಾಗಿ ಆಯ್ಕೆ ಮಾಡುವ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಬಹುದು.
ಐಪಿಎಲ್ನ ಕಳೆದ ಮೂರು ಆವೃತ್ತಿಯಲ್ಲಿ ಪಾಂಡೆಯ ಆಟದ ಝಲಕ್
Year | Innings | Runs | Highest Score | Strike Rate | 50s |
2018 | 13 | 284 | 62 | 115.44 | 3 |
2019 | 11 | 344 | 83 | 130.79 | 3 |
2020 | 15 | 425 | 83 | 127.62 | 3 |