IPL 2021: ಮತ್ತಿಬ್ಬರು ಆಟಗಾರರಿಗೆ ಕೊರೊನಾ ಪಾಸಿಟಿವ್, ವೃದ್ಧಿಮಾನ್ ಸಹಾ, ಅಮಿತ್ ಮಿಶ್ರಾಗೆ ಸೋಂಕು
IPL 2021 | Wriddhiman Saha, Amit Mishra: ಸನ್ರೈಸರ್ಸ್ ಹೈದರಾಬಾದ್ ತಂಡದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಮಿತ್ ಮಿಶ್ರಾ ಅವರಿಗೆ ಕೊವಿಡ್ 19 ದೃಢಪಟ್ಟಿರುವುದಾಗಿ ತಿಳಿದುಬಂದಿದೆ.
ಮುಂಬೈ: ಐಪಿಎಲ್ 14ನೇ ಆವೃತ್ತಿ ಸುಗಮವಾಗಿ ಸಾಗುತ್ತಿದೆ ಎಂದು ಭಾವಿಸಿಕೊಂಡಿದ್ದಾಗಲೇ ಏಕಾಏಕಿ ಕೊರೊನಾ ಕಾರ್ಮೋಡ ಕವಿದಿದೆ. ಈ ಬಾರಿ ಸರಣಿಯಲ್ಲಿ ಪಾಲ್ಗೊಂಡಿದ್ದ ಕೆಲ ಆಟಗಾರರಲ್ಲಿ ಒಬ್ಬರಾದ ಮೇಲೊಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳಲಾರಂಭಿಸಿದ್ದು, ಇದೀಗ ಸನ್ರೈಸರ್ಸ್ ಹೈದರಾಬಾದ್ ತಂಡದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಮಿತ್ ಮಿಶ್ರಾ ಅವರಿಗೆ ಕೊವಿಡ್ 19 ದೃಢಪಟ್ಟಿರುವುದಾಗಿ ತಿಳಿದುಬಂದಿದೆ. ವೃದ್ಧಿಮಾನ್ ಹಾಗೂ ಅಮಿತ್ ಮಿಶ್ರಾಗೆ ಸೋಂಕು ಇರುವುದು ಖಾತರಿಯಾಗುತ್ತಿದ್ದಂತೆಯೇ ಎರಡೂ ತಂಡಗಳ ಎಲ್ಲಾ ಆಟಗಾರರನ್ನು ಐಸೋಲೇಷನ್ನಲ್ಲಿ ಇರಿಸಲಾಗಿದೆ.
Published On - 12:53 pm, Tue, 4 May 21