AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video; ಸಂಜು ಸ್ಯಾಮ್ಸನ್​ಗೆ ಪಾಂಡ್ಯ ಕೀಟಲೆ; ಬ್ಯಾಟಿಂಗ್ ಮೂಲಕ ಉತ್ತರ ಕೊಟ್ಟ ಆರ್​ಆರ್ ಕ್ಯಾಪ್ಟನ್

IPL 2023: Hardik Pandya Sledging: ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ಬಿಸಿ ಏರಿಸಿದ ಘಟನೆಗಳು ನಡೆದವು. ಅಹ್ಮದಾಬಾದ್​ನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ನಾಯಕ ಮತ್ತು ಗುಜರಾತ್ ಟೈಟಾನ್ಸ್ ನಾಯಕರ ಮಧ್ಯೆ ನಡೆದ ಸ್ಲೆಡ್ಜಿಂಗ್ ಈಗ ಟ್ರೆಂಡಿಂಗ್ ಆಗುತ್ತಿದೆ.

Viral Video; ಸಂಜು ಸ್ಯಾಮ್ಸನ್​ಗೆ ಪಾಂಡ್ಯ ಕೀಟಲೆ; ಬ್ಯಾಟಿಂಗ್ ಮೂಲಕ ಉತ್ತರ ಕೊಟ್ಟ ಆರ್​ಆರ್ ಕ್ಯಾಪ್ಟನ್
ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 17, 2023 | 11:48 AM

Share

ಅಹ್ಮದಾಬಾದ್: ಕ್ರಿಕೆಟ್ ಮ್ಯಾಚ್​ನಲ್ಲಿ ಸ್ಲೆಡ್ಜಿಂಗ್ (Sledging in Cricket) ಅನಿವಾರ್ಯ ಎಂಬಂತಾಗಿ ಹೋಗಿದೆ. ಎದುರಾಳಿ ಆಟಗಾರರನ್ನು ನಿಂದಿಸುವ ಮೂಲಕ ಅವರ ಗಮನ ದೂರ ಮಾಡುವುದು, ಆತ್ಮಸ್ಥೈರ್ಯ ಕುಂದಿಸುವುದು ಈ ಸ್ಲೆಡ್ಜಿಂಗ್​ನ ಮುಖ್ಯ ಉದ್ದೇಶ. ಆಸ್ಟ್ರೇಲಿಯನ್ ಕ್ರಿಕೆಟಿಗರು ಈ ಸ್ಲೆಡ್ಜಿಂಗ್​ಗೆ ಖ್ಯಾತರಾದವರು. ಐಪಿಎಲ್​ನಲ್ಲೂ (IPL 2023) ಈ ಟ್ರೆಂಡ್ ಬಹಳ ಜೋರಾಗಿರುತ್ತದೆ. ನಿನ್ನೆ ಏಪ್ರಿಲ್ 16ರಂದು ನಡೆದ ಎರಡೂ ಪಂದ್ಯಗಳಲ್ಲೂ ಸ್ಲೆಡ್ಜಿಂಗ್ ಜೋರಾಗಿತ್ತು. ಕೆಕೆಆರ್ ಮತ್ತು ಡೆಲ್ಲಿ ಪಂದ್ಯದಲ್ಲಿ ಹೃತಿಕ್ ಶೋಕೀನ್ ಮತ್ತು ನಿತೀಶ್ ರಾಣಾ ಮಧ್ಯೆ ಜಗಳವಾಗಿ ಕೈಕೈ ಮಿಲಾಯಿಸುವ ಹಂತಕ್ಕೆ ಪರಿಸ್ಥಿತಿ ಹೋಗಿಬಿಡುತ್ತದೆನ್ನುವ ಭಯ ಇತ್ತು. ಆದಾದ ಬಳಿಕ ನಡೆದ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲೂ ಬಿಸಿ ಏರಿಸಿದ ಘಟನೆಗಳು ನಡೆದವು. ಗುಜರಾತ್​ನ ಅಖಾಡವಾದ ಅಹ್ಮದಾಬಾದ್​ನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ನಾಯಕ ಮತ್ತು ಗುಜರಾತ್ ಟೈಟಾನ್ಸ್ ನಾಯಕರ ಮಧ್ಯೆ ನಡೆದ ಸ್ಲೆಡ್ಜಿಂಗ್ ಈಗ ಟ್ರೆಂಡಿಂಗ್ ಆಗುತ್ತಿದೆ.

ಇಲ್ಲಿ ಗುಜರಾತ್ ಟೈಟಾನ್ಸ್​ನ 177 ರನ್ ಮೊತ್ತವನ್ನು ರಾಜಸ್ಥಾನ್ ಚೇಸ್ ಮಾಡುವಾಗ ನಡೆದ ಘಟನೆ ಇದು. ಇದರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಾಯಕ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಮಾಡುತ್ತಿದ್ದ ಸಂದರ್ಭ ಅದು. ಮೊಹಮ್ಮದ್ ಶಮಿ ಬೌಲಿಂಗ್ ಮಾಡಲು ಹೋಗುತ್ತಿದ್ದ ಸಂದರ್ಭದಲ್ಲಿ ಬ್ಯಾಟಿಂಗ್ ಕ್ರಿಸ್​ನಲ್ಲಿದ್ದ ಸಂಜು ಸ್ಯಾಮ್ಸನ್ ಬಳಿ ಹಾರ್ದಿಕ್ ಪಾಂಡ್ಯ ಬಂದು ಕಿವಿಯಲ್ಲಿ ಏನೋ ಉಸುರಿದ್ದಾರೆ. ಇದಕ್ಕೆ ಸಂಜು ಸ್ಯಾಮ್ಸನ್ ಏನೂ ಪ್ರತ್ಯುತ್ತರ ನೀಡದೇ ಇದ್ದರೂ ಅವರು ಪಾಂಡ್ಯ ಮಾತಿನಿಂದ ತುಸು ಬೇಸರಗೊಂಡಿರುವುದು ಈ ವಿಡಿಯೋದಲ್ಲಿ ಕಾಣುತ್ತದೆ. ಆ ಘಟನೆ ಬಳಿಕ ಸಂಜು ಸ್ಯಾಮ್ಸನ್ ಅಮೋಘ ಆಟ ರಾಜಸ್ಥಾನ್ ರಾಯಲ್ಸ್​ಗೆ ಅದ್ಭುತ ಗೆಲುವು ತಂದುಕೊಡಲು ಪ್ರಮುಖ ಕಾರಣವಾಯಿತು. ಇದೇ ಹಿನ್ನೆಲೆಯಲ್ಲಿ ಈ ಸ್ಲೆಡ್ಜಿಂಗ್ ವಿಡಿಯೋ ಟ್ರೆಂಡಿಂಗ್​ನಲ್ಲಿದೆ.

ಇದನ್ನೂ ಓದಿIPL 2023: ಪಂದ್ಯದ ನಡುವೆ ಮೈದಾನದಲ್ಲೇ ಜಗಳಕ್ಕಿಳಿದ ಡೆಲ್ಲಿ ಬಾಯ್ಸ್​..!

ಸ್ಯಾಮ್ಸನ್ ಮತ್ತು ಹೆಟ್ಮಯರ್ ಅಮೋಘ ಆಟ

ಗುಜರಾತ್ ಟೈಟಾನ್ಸ್ ತಂಡದ 177 ರನ್ ಗುರಿಯನ್ನು ಚೇಸ್ ಮಾಡುವುದು ಆರ್​ಆರ್​ಗೆ ಸುಲಭವಾಗಿರಲಿಲ್ಲ. ಒಂದು ಸಮಯದಲ್ಲಿ 55 ರನ್​ಗೆ 4 ವಿಕೆಟ್ ಕಳೆದುಕೊಂಡಿದ್ದ ರಾಯಲ್ಸ್ ತಂಡಕ್ಕೆ ಆಗ ಗುರಿ ಇನ್ನಷ್ಟು ಕಠಿಣಗೊಂಡಿತ್ತು. ಮೊಹಮ್ಮದ್ ಶಮಿ, ರಷೀದ್ ಖಾನ್, ಮೋಹಿತ್ ಶರ್ಮಾ, ಆಲ್​ಝರಿ ಜೋಸೆಫ್ ಅವರ ಮೊನಚಾದ ಬೌಲಿಂಗ್​ನಲ್ಲಿ ತ್ವರಿತಗತಿಯಲ್ಲಿ ರನ್ ಗಳಿಸುವುದು ಯಾವ ಬ್ಯಾಟುಗಾರರಿಗಾದರೂ ಕಷ್ಟವೇ ಸರಿ. ಈ ಹಂತದಲ್ಲಿ ಜೊತೆಯಾದ ಸಂಜು ಸ್ಯಾಮ್ಸನ್ ಮತ್ತು ವಿಂಡೀಸ್ ಹಿಟ್​ಮ್ಯಾನ್ ಸಿಮ್ರೋನ್ ಹೆಟ್ಮಯರ್ ಇಬ್ಬರೂ ಸೇರಿ 5ನೇ ವಿಕೆಟ್​ಗೆ ಸುಮಾರು 4 ಓವರ್​ನಲ್ಲಿ 59 ರನ್ ಜೊತೆಯಾಟ ಆಡಿದರು. ಅದು ಆರ್​ಆರ್ ಚೇಸಿಂಗ್​ನಲ್ಲಿ ಪಡೆದ ಪ್ರಮುಖ ತಿರುವು.

ಇದನ್ನೂ ಓದಿArjun Tendulkar: ಮೊದಲ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ ಪ್ರದರ್ಶನ ಹೇಗಿತ್ತು? ಇಲ್ಲಿದೆ ಸಂಕ್ಷಿಪ್ತ ವಿವರ

ಸಂಜು ಸ್ಯಾಮ್ಸನ್ ನಿರ್ಗಮನದ ಬಳಿಕ ಸಿಮ್ರೋನ್ ಹೆಟ್ಮಯರ್ ಆರ್ಭಟ ಮುಂದುವರಿಸಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಅದ್ಭುತ ಗೆಲುವು ತಂದುಕೊಟ್ಟು ಮ್ಯಾನ್ ಆಫ್ ದ ಮ್ಯಾಚ್ ಗೌರವಕ್ಕೂ ಪಾತ್ರರಾದರು. ಈ ಗೆಲುವಿನೊಂದಿಗೆ ರಾಜಸ್ಥಾನ ರಾಯಲ್ಸ್ ಅಗ್ರಸ್ಥಾನ ಭದ್ರಪಡಿಸಿಕೊಂಡಿತು. ಅದು ಆಡಿದ 5 ಪಂದ್ಯಗಳಿಂದ ನಾಲ್ಕರಲ್ಲಿ ಗೆದ್ದಿದೆ. ಈ ಪಂದ್ಯಕ್ಕೆ ಮುನ್ನ ಜಂಟಿ ಅಗ್ರಸ್ಥಾನದಲ್ಲಿದ್ದ ಗುಜರಾತ್ ಟೈಟಾನ್ಸ್ ಇದೀಗ 3ನೇ ಸ್ಥಾನಕ್ಕೆ ಕುಸಿದಿದೆ.

ಇವತ್ತು, ಏಪ್ರಿಲ್ 17ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಖಾಮುಖಿ ಆಗುತ್ತಿವೆ. ಪಂದ್ಯ ಸಂಜೆ ನಡೆಯಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ