IPL 2024: ಮಾರ್ಚ್ 22 ರಿಂದ ಐಪಿಎಲ್ ಆರಂಭ; ಫೈನಲ್ ಪಂದ್ಯ ಯಾವಾಗ ಗೊತ್ತಾ?

|

Updated on: Dec 18, 2023 | 9:46 PM

IPL 2024: ವರದಿಯ ಪ್ರಕಾರ 17ನೇ ಆವೃತ್ತಿಯ ಐಪಿಎಲ್ ಮಾರ್ಚ್ 22 ರಿಂದ ಆರಂಭವಾಗಿ ಮೇ ಅಂತ್ಯದವರೆಗೆ ಅಂದರೆ ಮೇ 29 ರವರೆಗೆ ನಡೆಯುವ ನಿರೀಕ್ಷೆಯಿದೆ. ಜೂನ್‌ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು, ಈ ಬಾರಿಯ ಐಪಿಎಲ್ ಅನ್ನು ಬೇಗನೇ ಮುಗಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ವರದಿಯಾಗಿದೆ.

IPL 2024: ಮಾರ್ಚ್ 22 ರಿಂದ ಐಪಿಎಲ್ ಆರಂಭ; ಫೈನಲ್ ಪಂದ್ಯ ಯಾವಾಗ ಗೊತ್ತಾ?
ಐಪಿಎಲ್ 2024
Follow us on

2024 ರಲ್ಲಿ ನಡೆಯಲಿರುವ 17ನೇ ಐಪಿಎಲ್ ಸೀಸನ್‌ಗಾಗಿ ಆಟಗಾರರ ಹರಾಜು (IPL Auction 2024) ಪ್ರಕ್ರಿಯೆ ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲ್ಲಿದೆ. ಈ ನಡುವೆ ಮುಂದಿನ ಆವೃತ್ತಿಯ ಐಪಿಎಲ್ ಆರಂಭದ ಬಗ್ಗೆ ಬಿಗ್​ ಅಪ್​ಡೇಟ್ ಹೊರಬಿದ್ದಿದ್ದು, ವರದಿಯ ಪ್ರಕಾರ 17ನೇ ಆವೃತ್ತಿಯ ಐಪಿಎಲ್ (IPL) ಮಾರ್ಚ್ 22 ರಿಂದ ಆರಂಭವಾಗಿ ಮೇ ಅಂತ್ಯದವರೆಗೆ ಅಂದರೆ ಮೇ 29 ರವರೆಗೆ ನಡೆಯುವ ನಿರೀಕ್ಷೆಯಿದೆ. ಜೂನ್‌ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ (T20 World Cup 2024) ಅನ್ನು ಗಮನದಲ್ಲಿಟ್ಟುಕೊಂಡು, ಈ ಬಾರಿಯ ಐಪಿಎಲ್ ಅನ್ನು ಬೇಗನೇ ಮುಗಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ವರದಿಯಾಗಿದೆ.

ಮೇ 29 ರಂದು ಫೈನಲ್ ಪಂದ್ಯ

ಮುಂದಿನ ವರ್ಷ ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿದ್ದು, ಇದು ಐಪಿಎಲ್ ವೇಳಾಪಟ್ಟಿಯ ಮೇಲೂ ಪರಿಣಾಮ ಬೀರುವ ನಿರೀಕ್ಷೆಯಿದೆ. ಈ ಕಾರಣಕ್ಕೆ ಐಪಿಎಲ್‌ನ ಸಂಪೂರ್ಣ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಕ್ರಿಕ್‌ಬಜ್ ವರದಿಯ ಪ್ರಕಾರ, ಎಲ್ಲವೂ ಸರಿಯಾಗಿ ನಡೆದರೆ ಐಪಿಎಲ್ 2024 ಅನ್ನು ಮಾರ್ಚ್ 22 ರಿಂದ ಮೇ ಅಂತ್ಯದವರೆಗೆ ಆಯೋಜಿಸಬಹುದು. ಬಿಸಿಸಿಐ ಐಪಿಎಲ್ 2024 ಕ್ಕೆ ವಿಂಡೋವನ್ನು ನಿಗದಿಪಡಿಸಿದೆ. ಹರಾಜು ಪ್ರಕ್ರಿಯೆ ಮುಗಿದ ಬಳಿಕ ವೇಳಾಪಟ್ಟಿಗೆ ಸಂಬಂಧಿಸಿದ ಸಿದ್ಧತೆಗಳು ಆರಂಭವಾಗಲಿವೆ.

IPL Auction 2024: ಹರಾಜಿನಲ್ಲಿ ಈ ಆಟಗಾರರೇ ನಮ್ಮ ಟಾರ್ಗೆಟ್ ಎಂದ ಆರ್​ಸಿಬಿ ಡೈರೆಕ್ಟರ್

ಮಿನಿ ಹರಾಜಿನಲ್ಲಿ 333 ಆಟಗಾರರು

ಐಪಿಎಲ್‌ನ ಮಿನಿ ಹರಾಜಿನ ಕುರಿತು ಮಾತನಾಡುವುದಾದರೆ, ಮೊದಲ ಬಾರಿಗೆ ಐಪಿಎಲ್ 2024 ರ ಹರಾಜು ವಿದೇಶದಲ್ಲಿ ನಡೆಯಲಿದೆ. ದುಬೈನ ಕೋಕಾಕೋಲಾ ಅರೆನಾದಲ್ಲಿ ಹರಾಜು ನಡೆಯಲಿದೆ. 1000 ಕ್ಕೂ ಹೆಚ್ಚು ಆಟಗಾರರು ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ನಂತರ 333 ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಎಲ್ಲಾ ತಂಡಗಳ ಖಾಲಿ ಇರುವ ಸ್ಲಾಟ್‌ಗಳನ್ನು ಒಟ್ಟಿಗೆ ನೋಡಿದರೆ, 77 ಆಟಗಾರರನ್ನು ಮಾತ್ರ ಖರೀದಿಸಲಾಗುತ್ತದೆ. ಇದರಲ್ಲಿ 30 ವಿದೇಶಿ ಆಟಗಾರರು ಸೇರಿದ್ದಾರೆ.

ಹರಾಜುದಾರರೂ ಬದಲಾಗಿದ್ದಾರೆ

ಪುರುಷರ ಐಪಿಎಲ್ ಹರಾಜಿನಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಹರಾಜುದಾರರು ಆಟಗಾರರನ್ನು ಬಿಡ್ ಮಾಡಲಿದ್ದಾರೆ. ಇದಕ್ಕೂ ಮೊದಲು, ಹ್ಯೂಸ್ ಎಡ್ಮೀಡ್ಸ್ ಆಟಗಾರರ ಹರಾಜುದಾರರಾಗಿ ಕಾಣಿಸಿಕೊಳ್ಳುತ್ತಿದ್ದರು. 2021 ರ ಹರಾಜಿನ ಸಮಯದಲ್ಲಿ ಹ್ಯೂಸ್ ಎಡ್ಮೀಡ್ಸ್ ವೇದಿಕೆಯ ಮೇಲೆಯೇ ಕುಸಿದು ಬಿದ್ದಿದ್ದರು. ಹೀಗಾಗಿ ಅವರ ಬದಲು ಬೇರೆಯವರು ಹರಾಜು ನಡೆಸಿಕೊಟ್ಟಿದ್ದರು. ಆದರೆ ಈ ಬಾರಿ ಅವರ ಸ್ಥಾನಕ್ಕೆ ಮಲ್ಲಿಕಾ ಸಾಗರ್ ಬಂದಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಮಲ್ಲಿಕಾ ಈ ಹಿಂದೆ ಎರಡು ಬಾರಿ ಈ ಪಾತ್ರವನ್ನು ನಿರ್ವಹಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ