IPL Auction 2021: ಡೆಲ್ಲಿ ಮತ್ತು ಪಂಜಾಬ್ ಟೀಮಿನಲ್ಲಿ ಉಳಿದವರು ಯಾರು, ಹೊರಬಿದ್ದವರು ಯಾರು?
ಎರಡು ಟೀಮುಗಳು-ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಯಾವ ಆಟಗಾರನನ್ನು ಟೀಮಿನಲ್ಲಿ ಉಳಿಸಿಕೊಂಡಿವೆ ಮತ್ತು ಯಾರನ್ನು ಟೀಮಿನಿಂದ ರಿಲೀಸ್ ಮಾಡಿವೆ ಎನ್ನುವ ವಿವರ ಇಲ್ಲಿ ನೀಡಲಾಗಿದೆ
ಇಂಡಿಯನ್ ಪ್ರಿಮೀಯರ್ ಲೀಗಿನಲ್ಲಿ ಆಡುವ ಆಟಗಾರರು ತಮಗೆ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲೇ ಬೇಕು, ಇಲ್ಲವಾದರೆ ಅವರಿಗೆ ಉಳಿಗಾಲವಿಲ್ಲ, ಹಣಕೊಟ್ಟು ಖರೀದಿಸಿದ ಮಾಲೀಕರು ನಿರ್ದಾಕ್ಷಿಣ್ಯವಾಗಿ ನಾನ್-ಪರ್ಫಾರ್ಮರ್ಗಳನ್ನು ಟೀಮಿನಿಂದ ಕಿತ್ತೊಗೆಯುತ್ತಾರೆ. ಈ ಬಾರಿಯೂ ಕಳಪೆಯಾಗಿ ಆಡಿದ ಆಟಗಾರರು ತಮ್ಮ ಧಣಿಗಳ ಅವಕೃಪೆಗೆ ಒಳಗಾಗಿದ್ದಾರೆ.
ಇಲ್ಲಿ ಎರಡು ಟೀಮುಗಳು-ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಯಾವ ಆಟಗಾರನನ್ನು ಟೀಮಿನಲ್ಲಿ ಉಳಿಸಿಕೊಂಡಿವೆ ಮತ್ತು ಯಾರನ್ನು ಟೀಮಿನಿಂದ ರಿಲೀಸ್ ಮಾಡಿವೆ ಎನ್ನುವ ವಿವರ ನೀಡಲಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡಿರುವ ಆಟಗಾರರು:
ಶ್ರೇಯಸ್ ಅಯ್ಯರ್ಮ ಅಜಿಂಕ್ಯಾ ರಹಾನೆ, ಅಮಿತ್ ಮಿಶ್ರಾ, ಆವೇಶ್ ಖಾನ್, ಆಕ್ಷರ್ ಪಟೇಲ್, ಹೆರ್ಷಲ್ ಪಟೇಲ್, ಇಶಾಂತ್ ಶರ್ಮ, ಕಗಿಸೊ ರಬಾಡಮ ಪೃಥ್ವಿ ಶಾ, ರವಿಚಂದ್ರನ್ ಅಶ್ವಿನ್, ರಿಷಭ್ ಪಂತ್, ಶಿಖರ್ ಧವನ್ಮ ಶಮ್ರೊನ್ ಹೆಟ್ಮೆಯರ್, ಮಾರ್ಕಸ್ ಸ್ಟಾಯ್ನಿಸ್, ಲಲಿತ್ ಯಾದವ್, ಌನ್ರಿಖ್ ನೊರ್ಕಿಯ, ಡೇನಿಯಲ್ ಸ್ಯಾಮ್ಸ್, ಪ್ರವೀಣ್ ದುಬೆ ಮತ್ತು ಕ್ರಿಸ್ ವೋಕ್ಸ್
ಡೆಲ್ಲಿ ಕ್ಯಾಪಿಟಲ್ಸ್ ರಿಲೀಸ್ ಮಾಡಿರುವ ಆಟಗಾರರು:
ಅಲೆಕ್ಸ್ ಕೇರಿ, ಕೀಮೊ ಪಾಲ್, ತುಷಾರ್ ದೇಶಪಾಂಡೆ, ಸಂದೀಪ್ ಲಮಿಚಾನೆ, ಮೊಹಿತ್ ಶರ್ಮ ಮತ್ತು ಜೇಸನ್ ರಾಯ್
ಕಿಂಗ್ಸ್ ಇಲೆವೆನ್ ಪಂಜಾಬ್ ರಿಟೇನ್ ಮಾಡಿಕೊಂಡಿರುವ ಆಟಗಾರರು:
ಕೆ ಎಲ್ ರಾಹುಲ್, ಕ್ರಿಸ್ ಗೇಲ್, ಮಾಯಾಂಕ್ ಅಗರವಾಲ್, ನಿಕೊಲಾಸ್ ಪೂರನ್, ಮನ್ದೀಪ್ ಸಿಂಗ್, ಸರ್ಫ್ರಾಜ್ ಖಾನ್, ದೀಪಕ್ ಹೂಡ, ಪ್ರಭ್ಸಿಮ್ರನ್ ಸಿಂಗ್, ಮೊಹಮ್ಮದ್ ಶಮಿ, ಕ್ರಿಸ್ ಜೊರ್ಡನ್, ದರ್ಶನ್ ನಳಕಂಡೆ, ರವಿ ಬಿಷ್ನೋಯಿ, ಮುರುಗನ್ ಅಶ್ವಿನ್, ಅರ್ಷ್ದೀಪ್ ಸಿಂಗ್, ಹರ್ಪ್ರೀತ್ ಬ್ರಾರ್, ಇಶಾನ್ ಪೊರೆಲ್
ಕಿಂಗ್ಸ್ ಇಲೆವೆನ್ ಪಂಜಾಬ್ ರಿಲೀಸ್ ಮಾಡಿರುವ ಆಟಗಾರರು:
ಗ್ಲೆನ್ ಮ್ಯಾಕ್ಸ್ವೆಲ್, ಕರುಣ್ ನಾಯರ್, ಹಾರ್ದಸ್ ವಿಯೊಲಿನ್, ಜಗದೀಶ ಸುಚಿತ್, ಮುಜಬ್-ಉರ್ ರಹೆಮಾನ್, ಶೆಲ್ಡನ್ ಕಾಟ್ರೆಲ್. ಜಿಮ್ಮಿ ನೀಷಮ್, ಕೃಷ್ಣಪ್ಪ ಗೌತಮ್, ತಜಿಂದರ್ ಸಿಂಗ್
ಇದನ್ನೂ ಓದಿ: IPL Auction 2021: ಹೈದರಾಬಾದ್, ರಾಜಸ್ತಾನ್ ತಂಡಗಳಲ್ಲಿ ಉಳಿದವರು ಯಾರು? ವಿವರ ಇಲ್ಲಿದೆ