ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಸೀಸನ್ಗೆ ಮೊದಲು ಎಲ್ಲ ಫ್ರಾಂಚೈಸಿಗಳು ತಮಗೆ ಬೇಕಿರದ ಕೆಲವು ಆಟಗಾರರನ್ನು ಬಿಡುಗಡೆಗೊಳಿಸಿವೆ. ಹಾಗೆ ರಿಲೀಸ್ ಆಗಿರುವ ಆಟಗಾರರು ಮತ್ತೊಮ್ಮೆ ಹರಾಜು ಪ್ರಕ್ರಿಯೆಯ ಭಾಗಿಯಾಗಲಿದ್ದಾರೆ. ಕ್ರಿಕೆಟ್ ಪ್ರೇಮಿಗಳಿಗೆ ಗೊತ್ತಿರುವ ಹಾಗೆ ಈ ಸೀಸನ್ನ ಆಕ್ಷನ್ ಗುರುವಾರದಂದು ಮಧ್ಯಾಹ್ನ ಚೆನೈ ನಗರದಲ್ಲಿ ನಡೆಯಲಿದೆ.
ಬಹಳಷ್ಟು ಕ್ರಿಕೆಟ್ ಅಭಿಮಾನಿಗಳಿಗೆ ಯಾವ್ಯಾವ ಟೀಮು ಯಾರು ಯಾರನ್ನು ಕೈಬಿಟ್ಟಿದೆ ಎನ್ನುವುದು ಗೊತ್ತಿರಲಿಕ್ಕಿಲ್ಲ. ಫ್ರಾಂಚೈಸಿಗಳ ಧಣಿಗಳು ತಮ್ಮ ಟೀಮಿನಲ್ಲಿ ಉಳಿಸಿಕೊಂಡಿರುವ ಮತ್ತು ಈ ಸೀಸನ್ಗೆ ಕೈಬಿಟ್ಟಿರುವ ಆಟಗಾರರ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ, ಈ ವರದಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ತಾನ ರಾಯಲ್ಸ್ ಟೀಮುಗಳು ರಿಟೇನ್ ಮಾಡಿಕೊಂಡಿರುವ ಮತ್ತು ಕೈಬಿಟ್ಟಿರುವ ಆಟಗಾರರ ವಿವರವಿದೆ.
ಸನ್ರೈಸರ್ಸ್ ಹೈದರಾಬಾದ್ ಟೀಮಿನಲ್ಲಿ ಉಳಿದುಕೊಂಡಿರುವ ಆಟಗಾರರರ ಪಟ್ಟಿ ಇಂತಿದೆ
ಡೇವಿಡ್ ವಾರ್ನರ್ (ಕ್ಯಾಪ್ಟನ್), ಅಭಿಷೇಕ್ ಶರ್ಮ, ಬೇಸಿಲ್ ಥಂಪಿ, ಭುವನೇಶ್ವರ್ ಕುಮಾರ್, ಜಾನಿ ಬೇರ್ಸ್ಟೋ, ಕೇನ್ ವಿಲಿಯಮ್ಸನ್, ಮನೀಶ್ ಪಾಂಡೆ, ಮೊಹಮ್ಮದ್ ನಬಿ, ರಶೀದ್ ಖಾನ್, ಸಂದೀಪ್ ಶರ್ಮ, ಶಾಹಬಾಜ್ ನದೀಮ್, ಶ್ರೀವತ್ಸ್ ಗೋಸ್ವಾಮಿ, ಸಿದ್ದಾರ್ಥ್ ಕೌಲ್, ಖಲೀಲ್ ಅಹ್ಮದ್, ಟಿ.ನಟರಾಜನ್, ವಿಜಯ ಶಂಕರ್, ವೃದ್ಧಿಮಾನ್ ಸಹಾ, ವಿರಾಟ್ ಸಿಂಗ್, ಪ್ರಿಯಮ್ ಗರ್ಗ್, ಮಿಚೆಲ್ ಮಾರ್ಷ್, ಜೇಸನ್ ಹೋಲ್ಡರ್ ಮತ್ತು ಅಬ್ದುಲ್ ಸಮದ್.
ಸನ್ರೈಸರ್ಸ್ ಹೈದರಾಬಾದ್ ಟೀಮು ರಿಲೀಸ್ ಮಾಡಿರುವ ಆಟಗಾರರ ಪಟ್ಟಿ
ಬಿಲ್ಲಿ ಸ್ಟ್ಯಾನ್ ಲೇಕ್, ಸಂದೀಪ್ ಬವನಕ, ಫೇಬಿಯನ್ ಅಲೆನ್, ಸಂಜಯ್ ಯಾದವ್ ಮತ್ತು ಪೃಥ್ವಿರಾಜ್ ಯರ.
ರಾಜಸ್ತಾನ್ ರಾಯಲ್ಸ್ ಟೀಮು ಯಾರನ್ನು ಉಳಿಸಿಕೊಂಡಿದೆ, ಯಾರನ್ನು ಕೈಬಿಟ್ಟಿದೆ ಅನ್ನುವುದನ್ನು ನೋಡುವ.
ರಾಜಸ್ತಾನ್ ರಾಯಲ್ಸ್ ತಂಡದಲ್ಲಿ ಉಳಿದುಕೊಂಡಿರುವ ಆಟಗಾರರು
ಸಂಜು ಸ್ಯಾಮ್ಸನ್, ಬೆನ್ ಸ್ಟೋಕ್ಸ್, ಜೊಫ್ರಾ ಆರ್ಚರ್, ಜೊಸ್ ಬಟ್ಲರ್, ಮಹಿಪಾಲ್ ಲೊಮ್ರಾರ್, ಮನನ್ ವೊಹ್ರಾ, ಮಾಯಾಂಕ್ ಮಾರ್ಕಂಡೆ, ರಾಹುಲ್ ತೆವಾಟಿಯ, ರಿಯಾನ್ ಪರಾಗ್, ಶ್ರೇಯಸ್ ಗೋಪಾಲ್, ರಾಬಿನ್ ಉತ್ತಪ್ಪ, ಜಯದೇವ್ ಉನಾಡ್ಕಟ್, ಯಶಸ್ವೀ ಜೈಸ್ವಾಲ್, ಅನುಜ್ ರಾವತ್, ಕಾರ್ತಿಕ್ ತ್ಯಾಗಿ, ಡೇವಿಡ್ ಮಿಲ್ಲರ್ ಮತ್ತು ಌಂಡ್ರ್ಯೂ ಟೈ.
ರಾಜಸ್ತಾನ್ ರಾಯಲ್ಸ್ ತಂಡ ಬಿಡುಗಡೆ ಮಾಡಿರುವ ಆಟಗಾರರ ಹೆಸರುಗಳು ಇಂತಿವೆ
ಸ್ಟೀವ್ ಸ್ಮಿತ್, ಆಕಾಶ್ ಸಿಂಗ್, ಅನಿರುದ್ಧ ಜೋಷಿ, ಅಂಕಿತ್ ರಜಪೂತ್, ಒಶೇನ್ ಥಾಮಸ್, ಶಶಾಂಕ್ ಸಿಂಗ್, ಟಾಮ್ ಕರನ್ ಮತ್ತು ವರುನ್ ಆರನ್
ಇದನ್ನೂ ಓದಿ: IPL Auction 2021: ಈ ಬಾರಿ ಬಿಕರಿಯಾಗದೆ ಉಳಿಯಬಹುದಾದ ಕೆಲ ಪ್ರಮುಖ ಆಟಗಾರರು
Published On - 10:03 pm, Wed, 17 February 21