IPL Auction 2021: ಈ ಬಾರಿ ಬಿಕರಿಯಾಗದೆ ಉಳಿಯಬಹುದಾದ ಕೆಲ ಪ್ರಮುಖ ಆಟಗಾರರು
IPL Auction 2021: ದೇಶ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿದ್ದರೂ ಕೆಲ ಪ್ರಮುಖ ಆಟಗಾರರು ಐಪಿಎಲ್ 2021 ಹರಾಜು ಪ್ರಕ್ರಿಯೆಯಲ್ಲಿ ಮಾರಾಟವಾಗದೆ ಉಳಿಯಬಹುದು.
ಇಂಡಿಯನ್ ಪ್ರಿಮೀಯರ್ ಲೀಗ್ (ಐಪಿಎಲ್) 2021 ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಈ ಸೀಸನ್ನಲ್ಲಿ ಒಟ್ಟು 292 ಆಟಗಾರರು ಹರಾಜು ಪ್ರಕ್ರಿಯೆಯ ಭಾಗವಾಗಲಿದ್ದಾರೆ. ಅವರಲ್ಲಿ 164 ಮಂದಿ ಭಾರತೀಯರು, 125 ಅಟಗಾರರು ವಿದೇಶದವರು. ಅವರೊಂದಿಗೆ ಅಂತರರಾಷ್ಟ್ರ್ತೀಯ ಕ್ರಿಕೆಟ್ ಕೌನ್ಸಿಲ್ನ ಸದಸ್ಯ ರಾಷ್ಟ್ರಗಳ 3 ಆಟಗಾರರು ಸಹ ಹರಾಜಿಗೊಳಗಾಗಲಿದ್ದಾರೆ. ಈ ಆಟಗಾರರ ಪೈಕಿ 10 ಜನ ₹2 ಕೋಟಿ ಮೂಲಬೆಲೆ ನಿಗದಿಪಡಿಸಿಕೊಂಡಿದ್ದರೆ, 22 ಆಟಗಾರರ ಮುಖಬೆಲೆ ₹ 1.5 ಕೋಟಿ ಮತ್ತು 11 ಆಟಗಾರರು ₹ 1 ಕೋಟಿಗಿಂತ ಕಡಿಮೆ ಮುಖಬೆಲೆ ಘೋಷಿಸಿಕೊಂಡಿದ್ದಾರೆ.
2021 ಐಪಿಎಲ್ ಹರಾಜಿನಲ್ಲಿ ಚೆನೈ ಸೂಪರ್ ಕಿಂಗ್ಸ್ (CSK), ಡೆಲ್ಲಿ ಕ್ಯಾಪಿಟಲ್ಸ್ (DC), ಕಿಂಗ್ಸ್ ಇಲೆವೆನ್ ಪಂಜಾಬ್ (K XI P), ಕೊಲ್ಕತಾ ನೈಟ್ ರೈಡರ್ಸ್ (KKR), ಮುಂಬೈ ಇಂಡಿಯನ್ಸ್ (MI), ರಾಜಸ್ತಾನ ರಾಯಲ್ಸ್ (RR), ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್ರೈಸರ್ಸ್ ಹೈದರಾಬಾದ್ (SRH) ಫ್ರಾಂಚೈಸಿಗಳು ಭಾಗವಹಿಸಲಿವೆ.
ದೇಶ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿದ್ದರೂ ಕೆಲ ಪ್ರಮುಖ ಆಟಗಾರರು ಐಪಿಎಲ್ 2021 ಹರಾಜು ಪ್ರಕ್ರಿಯೆಯಲ್ಲಿ ಮಾರಾಟವಾಗದೇ ಉಳಿಯಬಹುದು. ಅವರು ಯಾರೆಂದು ನೀವೂ ಊಹಿಸಬಹುದು. ನಾವು ಮಾಡಿರುವ ಪಟ್ಟಿಯಲ್ಲಿ ಕೆಳಗಿನ ಆಟಗಾರರಿದ್ದಾರೆ. ನಿಮಗೆ ನೆನಪಿರಲಿ, ಐಪಿಎಲ್ ಫ್ರಾಂಚೈಸಿಗಳ ಮಾಲೀಕರು ಹಿರಿಯ ಆಟಗಾರನ ಖ್ಯಾತಿಗಿಂತ ಯುವ ಆಟಗಾರರ ಪ್ರತಿಭೆಗೆ ಮಣೆ ಹಾಕುತ್ತಾರೆ.
ಹರ್ಭಜನ್ ಸಿಂಗ್ ಸುರೇಶ್ ರೈನಾರಂತೆ ವೈಯಕ್ತಿಕ ಕಾರಣಗಳಿಂದಾಗಿ 2020 ಐಪಿಎಲ್ ಸೀಸನ್ನಿಂದ ದೂರವುಳಿದ ಹರ್ಭಜನ್ ಸಿಂಗ್ ಅವರನ್ನು ಸಿಎಸ್ಕೆ 2021ರ ಹರಾಜು ಪ್ರಕ್ರಿಯೆಗೆ ಮುಂಚೆ ಬಿಡುಗಡೆ ಮಾಡಿದೆ. ರೈನಾ ಮತ್ತು ಭಜ್ಜಿ ಅವರ ಗೈರು ಹಾಜರಿಯಲ್ಲಿ ದುರ್ಬಲಗೊಂಡ ಚೆನೈ ಟೀಮ್ ಕಳೆದ ಸೀಸನ್ ಪಾಯಿಂಟ್ಸ್ ಟೇಬಲ್ನಲ್ಲಿ 7ನೇ ಸ್ಥಾನ ಪಡೆದಿತ್ತು. ಮೂರು ಬಾರಿ ಚಾಂಪಿಯನ್ಶಿಪ್ ಗೆದ್ದಿರುವ ತಂಡಕ್ಕೆ ಅದು ನಿಜಕ್ಕೂ ದೊಡ್ಡ ಆಘಾತವೇ. ಕೇದಾರ್ ಜಾಧವ್ ಆವರಂತೆ ₹ 2 ಕೋಟಿ ಮುಖಬೆಲೆ ನಿಗದಿಪಡಿಸಿಕೊಂಡಿರುವ ಕೇವಲ ಎರಡನೇ ಆಟಗಾರ ಭಜ್ಜಿ ಆಗಿದ್ದಾರೆ.
ಕಳೆದ ಎರಡು ವರ್ಷಗಳಿಂದ ದೇಶೀಯ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ದೂರವಿರುವ ಭಜ್ಜಿಯನ್ನು ಕ್ರಿಕೆಟ್ ಪ್ರೇಮಿಗಳು ಮರೆತುಹೋಗಿದ್ದರೆ ಆಶ್ವರ್ಯ ಪಡುವಂಥದ್ದೇನೂ ಇಲ್ಲ. ಹಾಗಾಗಿ, ಹರ್ಭಜನ್ ಸಿಂಗ್ ಈ ಬಾರಿ ಬಿಕರಿಯಾಗದೆ ಉಳಿಯಬಹುದು.
ಕೇದಾರ ಜಾಧವ್ ಹಿಂದೊಮ್ಮೆ ಭಾರಿ ಹೊಡೆತಗಳಿಗೆ ಹೆಸರಾಗಿದ್ದ ಕೇದಾರ್ ಜಾಧವ್ ಕಳಡೆದೆರಡು ಸೀಸನ್ಗಳಿಂದ ಕಳಪೆ ಪ್ರದರ್ಶನಗಳನ್ನು ನೀಡುತ್ತಿದ್ದು ಅವರ ಮೂಲ ಬೆಲೆಯೂ ₹ 2 ಕೋಟಿಯಾಗಿರುವುದರಿಂದ ಫ್ರಾಂಚೈಸಿಗಳು ಖರೀದಿಸಲು ಹಿಂದೇಟು ಹಾಕಲಿದ್ದಾರೆ. ಅವರಿಗೆ ಮುಳುವಾಗಲಿರುವ ಮತ್ತೊದು ಅಂಶವೆಂದರೆ ಸೀಸನ್ 13ರಲ್ಲಿ ಅವರು ತೋರಿದ ಕಳಪೆ ಪ್ರದರ್ಶನ. ಆಡಿದ 8 ಪಂದ್ಯಗಳಲ್ಲಿ ಅವರು ಗಳಿಸಿದ್ದು ಕೇವಲ 62 ರನ್ ಮಾತ್ರ. ಸದರಿ ಸೀಸನ್ನಲ್ಲಿ ಅವರ ಗರಿಷ್ಠ ಸ್ಕೋರ್ 26 ಆಗಿತ್ತು. 2018ರ ಸೀಸನ್ನಲ್ಲೂ ಜಾಧವ್ ಆಡಿದ 14 ಪಂದ್ಯಗಳಿಂದ 162 ರನ್ ಮಾತ್ರ ಕಲೆ ಹಾಕಿದ್ದರು.
ರಾಷ್ಟ್ರೀಯ ತಂಡಕ್ಕೆ ಆಡುವಾಗ ಜಾಧವ್ರನ್ನು ಅರೆಕಾಲಿಕ ಬೌಲರ್ ಆಗಿ ಉಪಯೋಗಿಸಿಕೊಂಡಿದ್ದು ನಿಜವಾದರೂ ಐಪಿಎಲ್ ಟೂರ್ನಿಯಲ್ಲಿ ಅವರಿ ಬೌಲ್ ಮಾಡಿದ್ದು ತೀರಾ ಕಮ್ಮಿ ಅಥವಾ ಇಲ್ಲವೆಂದೇ ಹೇಳಬೇಕು. ನಿಮಗೆ ನೆನಪಿರಬಹುದು, 2014 ರಲ್ಲಿ ಸಿಎಸ್ಕೆ ಜಾಧವ್ರನ್ನು ಬೃಹತ್ ಎನಿಸುವ ₹ 7.8 ಕೋಟಿ ನೀಡಿ ಖರೀದಿಸಿತ್ತು. ಆದರೆ 2019ರ ಹರಾಜು ಪ್ರಕ್ರಿಯೆಗೆ ಮೊದಲು ಸಿಎಸ್ಕೆಯ ಧಣಿಗಳು ಅವರನ್ನು ರಿಲೀಸ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: IPL Auction 2021: ಐಪಿಎಲ್ 2021 ಇಂದಿನ ಹರಾಜಿನಲ್ಲಿ ಹೆಚ್ಚು ಬೆಲೆಗೆ ಮಾರಾಟವಾಗಬಹು
ಚೇತೇಶ್ವರ ಪೂಜಾರಾ ನಿಮಗೆ ಆಶ್ಚರ್ಯವಾಗಬಹುದು. ಟೆಸ್ಟ್ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾದ ಅವಿಭಾಜ್ಯ ಅಂಗವಾಗಿರುವ ಚೇತೇಶ್ವರ ಪೂಜಾರಾ ಐಪಿಎಲ್ನಲ್ಲಿ ಕೊನೆಯ ಬಾರಿಗೆ ಆಡಿದ್ದು (ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ) 2104ರಲ್ಲಿ! ಈ ಬಾರಿಯ ಆಕ್ಷನ್ನಲ್ಲಿ ಅವರ ತಮ್ಮ ಮೂಲಬೆಲೆಯನ್ನು ರೂ. 50 ಲಕ್ಷಕ್ಕೆ ನಿಗದಿಪಡಿಸಿಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಅವರು ಭಾರತಕ್ಕೆ ಅನಿವಾರ್ಯವಾದರೂ ಟಿ20 ಫಾರ್ಮಾಟ್ನಲ್ಲಿ ಟೀಮಿಗೆ ಹೊರೆಯೆನಿಸುತ್ತಿದ್ದಾರೆ. ಹಾಗಾಗಿಯೇ, ಐಪಿಎಲ್ ಟೀಮುಗಳ ಮಾಲೀಕರರು, ಪೂಜಾರಾ ಟೆಸ್ಟ್ ಕ್ರಿಕೆಟ್ನಲ್ಲಿ ಹೇರಳವಾಗಿ ರನ್ ಗಳಿಸಿದರೂ ಅವರನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಅಲ್ಲದೆ ಕಳೆದ 6 ಸೀಸನ್ಗಳಿಂದ ಐಪಿಎಲ್ನಿಂದ ದೂರವಿರುವುದು ಅವರ ನೆಗೆಟಿವ್ ಅಂಶವಾಗಿ ಗೋಚರಿಸಿಲಿದೆ. ಅವರನ್ನು ಯಾವುದಾದರೂ ಫ್ರಾಂಚೈಸಿ ಖರೀದಿಸಿದರೆ ಅದು ಆಶ್ಚರ್ಯ ಹುಟ್ಟಿಸಲಿದೆ.
ಉಮೇಶ್ ಯಾದವ್
ಐಪಿಎಲ್ 2020 ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮಿಗೆ ನಿರಾಶಾದಾಯಕ ಪ್ರದರ್ಶನ ನೀಡಿದ ನಂತರ ವೇಗದ ಬೌಲರ್ ಉಮೇಶ್ ಯಾದವ್ ಅವರನ್ನು ಆರ್ಸಿಬಿ ಧಣಿಗಳು ರಿಲೀಸ್ ಮಾಡಿದರು. ಅಸಲಿಗೆ ಅವರಿಗೆ ತೀರಾಕಡಿಮೆ ಆಡುವ ಅವಕಾಶಗಳನ್ನು ನೀಡಲಾಗಿತ್ತು. ನಿಖರವಾಗಿ ಹೇಳಬೇಕೆಂದರೆ ಯಾದವ್ ಕೇವಲ ಎರಡು ಪಂದ್ಯಗಳನ್ನು ಮಾತ್ರ ಆಡಿ 2 ವಿಕೆಟ್ ಪಡೆದರು. ಆರ್ಸಿಬಿಯಿಂದ ಡ್ರಾಪ್ ಆದ ಮೇಲೂ ಅವರು ತಮ್ಮ ಬೇಸ್ ಪ್ರೈಸ್ ಅನ್ನು ರೂ 1 ಕೋಟಿ ಇಟ್ಟುಕೊಂಡಿರುವುದು ಅವರಿಗೇ ತಿರುಗುಬಾಣವಾಗಬಹುದು.
ಪಿಯುಶ್ ಚಾವ್ಲಾ
ಪಿಯುಶ್ ಚಾವ್ಲಾ ಅವರನ್ನು ಧಡೂತಿ ಆಕಾರದ ಹೊರತಾಗಿಯೂ ಇದುವರೆಗೆ ಫ್ರಾಂಚೈಸಿಗಳು ಆಯ್ಕೆ ಮಾಡಿಕೊಂಡಿದ್ದು ಅವರು ಬೌಲಂಗ್ನಲ್ಲಿ ತೋರುತ್ತಿದ್ದ ಪ್ರತಿಭೆಗಾಗಿ. 6 ಸೀಸನ್ಗಳನ್ನು ಸತತವಾಗಿ ಕೊಲ್ಕತಾ ನೈಟ್ ರೈಡರ್ಸ್ಗೆ ಆಡಿದ ನಂತರ ಅವರನ್ನು ಕಳೆದ ಬಾರಿಯ ಸೀಸನ್ಗೆ ಸಿಎಸ್ಕೆ ಆರಿಸಿಕೊಂಡಿತ್ತು. ಸದರಿ ಸೀಸನ್ಲ್ಲಿ ಪಂದ್ಯಗಳನ್ನು ಆಡಿ 6 ವಿಕೆಟ್ ಪಡೆದ ನಂತರ ಅವರನ್ನ ಈ ಬಾರಿಯ ಸೀಸನ್ಗೆ ಡ್ರಾಪ್ ಮಾಡಲಾಯಿತು.
Published On - 8:18 pm, Wed, 17 February 21