AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Corona Crisis: ಲಾಕ್​ಡೌನ್​ನಲ್ಲಿ ಜೀವನ ನಿರ್ವಹಣೆಗಾಗಿ ಚಿನ್ನದ ಒಡವೆಗಳನ್ನೇ ಮಾರಿದ ಶಿಕ್ಷಕಿಯರು

ಖಾಸಗಿ ಶಾಲೆಗಳ ಶೇ 90ರಷ್ಟು ಶಿಕ್ಷಕಿಯರು ಕೊರೊನಾ ಸಮಯದಲ್ಲಿ ಜೀವನ ಸಾಗಿಸಲು ತಮ್ಮ ಚಿನ್ನದ ಒಡವೆಗಳನ್ನು ಮಾರಿದ್ದಾರೆ, ಅಡವಿಟ್ಟಿದ್ದಾರೆ.

Corona Crisis: ಲಾಕ್​ಡೌನ್​ನಲ್ಲಿ ಜೀವನ ನಿರ್ವಹಣೆಗಾಗಿ ಚಿನ್ನದ ಒಡವೆಗಳನ್ನೇ ಮಾರಿದ ಶಿಕ್ಷಕಿಯರು
ಪ್ರಾತಿನಿಧಿಕ ಚಿತ್ರ
Lakshmi Hegde
| Edited By: |

Updated on: Feb 17, 2021 | 7:45 PM

Share

ಹೈದರಾಬಾದ್​: ಖಾಸಗಿ ಶಾಲೆಗಳ ಶೇ 90ರಷ್ಟು ಶಿಕ್ಷಕಿಯರು ಕೊರೊನಾ ಸಮಯದಲ್ಲಿ ಜೀವನ ಸಾಗಿಸಲು ತಮ್ಮ ಚಿನ್ನದ ಒಡವೆಗಳನ್ನು ಮಾರಿದ್ದಾರೆ, ಅಡವಿಟ್ಟಿದ್ದಾರೆ. ಹಾಗೇ ಶೇ 83ರಷ್ಟು ಶಿಕ್ಷಕಿಯರು ತಮ್ಮ ಐದು ತಿಂಗಳ ಮನೆ ಬಾಡಿಗೆಯನ್ನು ಬಾಕಿ ಉಳಿಸಿಕೊಂಡಿದ್ದಾರೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಕೊರೊನಾ ಲಾಕ್​ಡೌನ್​ನಿಂದ ಲಕ್ಷಾಂತರ ಜನ ಸಂಕಷ್ಟಕ್ಕೀಡಾಗಿದ್ದಾರೆ. ಕೆಲವು ಉದ್ಯಮಗಳಂತೂ ನೆಲಕಚ್ಚಿವೆ. ಹೀಗೆ ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿದವರಲ್ಲಿ ಬಜೆಟ್​ ಶಾಲೆಗಳು ಎಂದು ಕರೆಯಲ್ಪಡುವ ಮಧ್ಯಮವರ್ಗದ ಖಾಸಗಿ ಶಾಲೆಯ ಶಿಕ್ಷಕರೂ ಸೇರಿದ್ದಾರೆ. ಕೆಲವರಂತೂ ಜೀವನ ನಿರ್ವಹಣೆಗಾಗಿ ತರಕಾರಿ, ಹಣ್ಣು ಮಾರಾಟಕ್ಕೆ ಇಳಿದ ಬಗ್ಗೆಯೂ ವರದಿಯಾಗಿತ್ತು.

ಇದೀಗ ಭಾರತ್​ ದೇಖೋ ಎಂಬ ಯುವ ಸಂಘಟನೆ ಒಂದು ಸಮೀಕ್ಷೆ ನಡೆಸಿ, ಸುಮಾರು 220 ಬಜೆಟ್​ ಖಾಸಗಿ ಶಾಲೆಗಳ ಶಿಕ್ಷಕ-ಶಿಕ್ಷಕಿಯರನ್ನು ಮಾತನಾಡಿಸಿದೆ. ಇಂಥ ಮಧ್ಯಮ ಖಾಸಗಿ ಶಾಲೆಗಳ ಶಿಕ್ಷಕರ ಮೇಲೆ ಲಾಕ್​ಡೌನ್​ನಿಂದ ಮಾನಸಿಕ, ದೈಹಿಕ, ಆರ್ಥಿಕವಾಗಿ ಹೇಗೆಲ್ಲ ಪರಿಣಾಮ ಉಂಟಾಗಿದೆ ಮತ್ತು ನಿರುದ್ಯೋಗದಿಂದಾಗಿ ಅವರ ಸಾಮಾಜಿಕ ಸ್ಥಿತಿಗತಿ ಹೇಗಿದೆ ಎಂಬುದನ್ನು ತಿಳಿಯಲು ಸಮೀಕ್ಷೆ ನಡೆಸಲಾಗಿತ್ತು. ಮೊದಲ ಹಂತದಲ್ಲಿ ಶಿಕ್ಷಕಿಯರನ್ನು ಮಾತನಾಡಿಸಲಾಗಿತ್ತು. ಈ ವೇಳೆ ಶಿಕ್ಷಕಿಯರಿಗೆ ಆರೋಗ್ಯ ವಿಮೆ ಕೂಡ ಇಲ್ಲ, ಅಷ್ಟೇ ಏಕೆ, ಆರೋಗ್ಯ ವಿಮೆಯಿಂದ ಆಗುವ ಪ್ರಯೋಜನಗಳ ಬಗ್ಗೆಯೂ ಅವರಿಗೆ ಮಾಹಿತಿ ಇಲ್ಲ ಎಂಬುದು ಗೊತ್ತಾಯಿತು ಎಂದು ಸರ್ವೇ ನಡೆಸಿದ ಭಾರತ್ ದೇಖೋ ಸಹ ಸಂಸ್ಥಾಪಕರಾದ ರೋಮಿಲಾ ಗಿಲ್ಲೆಲ್ಲಾ ತಿಳಿಸಿದ್ದಾರೆ.

ಜೀವನ ನಿರ್ವಹಣೆಗಾಗಿ ತಮ್ಮ ಬೆಳ್ಳಿ ಬಂಗಾರದ ಆಭರಣಗಳನ್ನು ಮಾರಿದವರು, ಮನೆ ಬಾಡಿಗೆ ಸೇರಿ ಕೆಲವು ಬಿಲ್ ಪಾವತಿಗಳನ್ನು ಉಳಿಸಿಕೊಂಡವರ ಜತೆಗೆ, ಶೇ 90ರಷ್ಟು ಶಿಕ್ಷಕಿಯರು ತಮ್ಮ ಸಂಬಂಧಿಗಳಿಂದ 30 ಸಾವಿರ ರೂಪಾಯಿಗೂ ಹೆಚ್ಚು ಸಾಲ ಪಡೆದಿದ್ದಾರೆ. ಲಾಕ್​ಡೌನ್​ ಸಮಯದಲ್ಲಿ ನಮ್ಮ ಉಳಿತಾಯವೆಲ್ಲ ಸಂಪೂರ್ಣವಾಗಿ ಖಾಲಿ ಆಯಿತು ಎಂದು ನಮ್ಮೊಂದಿಗೆ ಮಾತನಾಡಿದ ಎಲ್ಲ ಶಿಕ್ಷಕಿಯರೂ ನೋವು ತೋಡಿಕೊಂಡಿದ್ದಾರೆ ಎಂದು ರೋಮಿಲಾ ಗಿಲ್ಲೆಲ್ಲಾ ಹೇಳಿದ್ದಾರೆ.

ಪತ್ನಿಯ ಚಿನ್ನದ ಸರ ಮಾರಿದ ಶಿಕ್ಷಕ  ಇನ್ನು ಎರಡನೇ ಹಂತದ ಸಮೀಕ್ಷೆಯಲ್ಲಿ ಈ ಬಜೆಟ್ ಶಾಲೆಗಳ ಶಿಕ್ಷಕರನ್ನು ಮಾತನಾಡಿಸಲಾಯಿತು. ಅವರೂ ಸಹ ಜೀವನ ನಿರ್ವಹಣೆಗೆ ತುಂಬಾ ಕಷ್ಟಪಟ್ಟಿದ್ದಾರೆ. ತಮ್ಮ ವಾಹನಗಳು, ಕೂಡಿಟ್ಟಿದ್ದ ಚಿನ್ನ ಸೇರಿ ಹಲವು ಅಮೂಲ್ಯ ವಸ್ತುಗಳನ್ನು ಮಾರಾಟ ಮಾಡಿ ಬದುಕು ಸಾಗಿಸಿದ್ದಾರೆ. ಈಗಲೂ ಅವರು ಸಂಕಷ್ಟದಿಂದ ಪೂರ್ತಿಯಾಗಿ ಹೊರಬಂದಿಲ್ಲ. ನಾನು ನನ್ನ ಪತ್ನಿಯ ಚಿನ್ನದ ಸರವನ್ನು ಅಡವಿಟ್ಟು 40,000 ರೂ.ಪಡೆದಿದ್ದೇನೆ ಎಂದು ಖಾಸಗಿ ಹೈಸ್ಕೂಲ್ ಶಿಕ್ಷಕರೊಬ್ಬರು ತಿಳಿಸಿದ್ದಾರೆ ಎಂದು ಭಾರತ್ ದೇಖೋ ತಿಳಿಸಿದೆ.

ಹಾಗೇ, ಇನ್ನೊಬ್ಬ ಶಿಕ್ಷಕ ಆರ್​.ರಾಮು ನಾಯ್ಕ್​ ಕೂಡ ತಮ್ಮ ಅಳಲು ತೋಡಿಕೊಂಡಿದ್ದಾರೆ. ನನಗೆ ಲಾಕ್​ಡೌನ್​ ಸಮಯದಲ್ಲಿ ಜೀವನ ನಿರ್ವಹಣೆ ತುಂಬ ಕಷ್ಟವಾಯಿತು. ಬೇರೆ ದಾರಿ ಕಾಣದೆ ಬೈಕ್​ ಮಾರಬೇಕಾಯಿತು. ಅಷ್ಟಾದರೂ ಆರ್ಥಿಕ ಸಮಸ್ಯೆ ತಗ್ಗದಾಗ ನಾನು ವಾಪಸ್​ ನನ್ನ ಹಳ್ಳಿಗೆ ಹೋದೆ. ಇಲ್ಲಿ ಪೇಟೆಯಲ್ಲಿ ಬಾಡಿಗೆಯಲ್ಲಿದ್ದ ಮನೆಯ ಬಾಡಿಗೆಯನ್ನು ಇವತ್ತಿನವರೆಗೆ ಕೊಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬಿಗ್​ಬಾಸ್​ ಮಾಜಿ ಸ್ಪರ್ಧಿ ಸೋನಾಲಿ ಫೋಗಾಟ್ ಮನೆಯಲ್ಲಿ ಕಳ್ಳತನ; ರಿವಾಲ್ವರ್​, ಸಿಸಿಟಿವಿ ಫೂಟೇಜ್​​ನ್ನೂ ಬಿಟ್ಟಿಲ್ಲ ಕಳ್ಳರು

ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ ವಸತಿ ಭಾಗ್ಯ ಇಲ್ಲ
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ ವಸತಿ ಭಾಗ್ಯ ಇಲ್ಲ