IPL 2021 Auction CSK Players List: ಐಪಿಎಲ್ 2021 ಧೋನಿ ಬಳಗದಲ್ಲಿ ಉಳಿದುಕೊಂಡವರು, ಹೊರನಡೆದವರ ಡೀಟೈಲ್ಸ್

IPL 2021 Auction CSK Players List: ಐಪಿಎಲ್ 2021 ಧೋನಿ ಬಳಗದಲ್ಲಿ ಉಳಿದುಕೊಂಡವರು, ಹೊರನಡೆದವರ ಡೀಟೈಲ್ಸ್
ಚೆನ್ನೈ ಸೂಪರ್ ಕಿಂಗ್ಸ್

IPL 2021 Auction Chennai Super Kings Players List: ಚೆನ್ನೈ ಸೂಪರ್ ಕಿಂಗ್ಸ್ ಇದುವರೆಗೆ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಮೂರು ಬಾರಿ (2010, 2011 ಮತ್ತು 2018) ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದಿದೆ.

pruthvi Shankar

| Edited By: Ghanashyam D M | ಡಿ.ಎಂ.ಘನಶ್ಯಾಮ

Feb 17, 2021 | 7:19 PM

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ (Chennai Super Kings – CSK) ಇದುವರೆಗೆ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಮೂರು ಬಾರಿ (2010, 2011 ಮತ್ತು 2018) ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಈ ಮೊದಲು, ಚೆನ್ನೈ ಮೂಲದ ಈ ಫ್ರ್ಯಾಂಚೈಸ್ ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್ ಒಡೆತನದಲ್ಲಿತ್ತು. ಎನ್.ಶ್ರೀನಿವಾಸನ್ ಅಧ್ಯಕ್ಷರಾಗಿದ್ದರು. 2015ರಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ನಂತರ ಇದನ್ನು ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಲಿಮಿಟೆಡ್ ಎಂಬ ಪ್ರತ್ಯೇಕ ಘಟಕಕ್ಕೆ ವರ್ಗಾಯಿಸಲಾಯಿತು.

ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್‌ನ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾಗಿದೆ. ಒಂಬತ್ತು ಆವೃತ್ತಿಗಳಲ್ಲಿ ಪ್ಲೇಆಫ್‌ಗೆ ಅರ್ಹತೆ ಪಡೆದಿರುವ ಏಕೈಕ ತಂಡ ಮತ್ತು ಮೂರು ಬಾರಿ ಪ್ರಶಸ್ತಿ ಗೆದ್ದಿರುವ ಹೆಗ್ಗಳಿಕೆ ಪಡೆದಿದೆ. ಸ್ಪಾಟ್ ಫಿಕ್ಸಿಂಗ್ ಹಗರಣದಿಂದಾಗಿ ಎರಡು ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದ ಈ ತಂಡ, ನಿಷೇಧದಿಂದ ವಾಪಾಸ್ಸಾದ ಬಳಿಕ 2018 ರಲ್ಲಿ ಐಪಿಎಲ್ ಪ್ರಶಸ್ತಿಯನ್ನು ಎತ್ತಿ ಹಿಡಿದಿತ್ತು.

ಚೆನ್ನೈ ಸೂಪರ್ ಕಿಂಗ್ಸ್ ಉಳಿಸಿಕೊಂಡಿರುವ ಆಟಗಾರರು: ಎಂ.ಎಸ್.ಧೋನಿ, ಸುರೇಶ್ ರೈನಾ, ಅಂಬಾಟಿ ರಾಯುಡು, ಕೆಎಂ ಆಸಿಫ್, ದೀಪಕ್ ಚಹರ್, ಡ್ವೇನ್ ಬ್ರಾವೋ, ಫಾಫ್ ಡು ಪ್ಲೆಸಿಸ್, ಇಮ್ರಾನ್ ತಾಹಿರ್, ಎನ್ ಜಗದೀಸನ್, ಕರಣ್ ಶರ್ಮಾ, ಲುಂಗಿ ಎನ್‌ಗಿಡಿ, ಮಿಚೆಲ್ ಸಾಂಟ್ನರ್, ರವೀಂದ್ರ ಜಡೇಜಾ, ರುತುರಾಜ್ ಶಾರ್ಕ್ವಾಕ್ ಕರ್ರನ್, ಜೋಶ್ ಹ್ಯಾಝಲ್‌ವುಡ್, ಆರ್ ಸಾಯಿ ಕಿಶೋರ್.

ತಂಡದಿಂದ ಕೈಬಿಟ್ಟ ಆಟಗಾರರು: ಕೇದಾರ್ ಜಾಧವ್, ಮುರಳಿ ವಿಜಯ್, ಹರ್ಭಜನ್ ಸಿಂಗ್, ಪಿಯೂಷ್ ಚಾವ್ಲಾ, ಮೋನು ಸಿಂಗ್, ಶೇನ್ ವ್ಯಾಟ್ಸನ್.

Follow us on

Most Read Stories

Click on your DTH Provider to Add TV9 Kannada