AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

DC vs KKR: ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ; ವಿಡಿಯೋ

DC vs KKR: ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ; ವಿಡಿಯೋ

ಪೃಥ್ವಿಶಂಕರ
|

Updated on: May 08, 2026 | 10:33 PM

Share

IPL 2026 KKR vs DC: ಐಪಿಎಲ್ 2026ರ 51ನೇ ಪಂದ್ಯದಲ್ಲಿ KKR ವಿರುದ್ಧ DC ಕೇವಲ 142 ರನ್ ಗಳಿಸಿತು. ಗುರಿ ಬೆನ್ನಟ್ಟಿದ KKR ತಂಡಕ್ಕೆ ಅಜಿಂಕ್ಯ ರಹಾನೆ ಮಿಚೆಲ್ ಸ್ಟಾರ್ಕ್‌ ಬೌಲಿಂಗ್‌ನಲ್ಲಿ ದುರದೃಷ್ಟವಶಾತ್ ರನ್ ಔಟ್ ಆಗಿ ಆಘಾತ ಎದುರಾಯಿತು. ನಂತರ, ಅಂಗ್ಕ್ರೀಶ್ ರಘುವಂಶಿ ಸಹ ಅಕ್ಷರ್ ಪಟೇಲ್ ಓವರ್‌ನಲ್ಲಿ ಅನಿರೀಕ್ಷಿತವಾಗಿ ಹಿಟ್-ವಿಕೆಟ್ ಆಗಿ ನಿರ್ಗಮಿಸಿದರು, ಇದು KKR ಇನ್ನಿಂಗ್ಸ್‌ಗೆ ದೊಡ್ಡ ಹಿನ್ನಡೆ ತಂದಿತು.

ಐಪಿಎಲ್ 2026 ರ 51 ನೇ ಪಂದ್ಯದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದವು. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ತಂಡವು 20 ಓವರ್‌ಗಳಲ್ಲಿ ಕೇವಲ 142 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್ ಕೂಡ ಉತ್ತಮ ಆರಂಭ ಪಡೆದುಕೊಂಡಿತು. ಆದರೆ ಮಿಚೆಲ್ ಸ್ಟಾರ್ಕ್​ ಎಸೆದ 3ನೇ ಓವರ್ ಕೆಕೆಆರ್ ತಂಡಕ್ಕೆ ಆಘಾತ ನೀಡಿತು.

ಸ್ಟಾರ್ಕ್​ ಎಸೆದ ಈ ಓವರ್​ನ ಕೊನೆಯ ಎಸೆತವನ್ನು ಅಲೆನ್ ಸ್ಟ್ರೈಟ್ ಹಿಟ್ ಮಾಡಿದರು. ಹೀಗಾಗಿ ಬೌಲರ್ ಸ್ಟಾರ್ಕ್​ ಅದನ್ನು ಕ್ಯಾಚ್ ಮಾಡಲು ಪ್ರಯತ್ನಿಸಿದರು. ಆದರೆ ಅದರಲ್ಲಿ ಯಶಸ್ವಿಯಾಗಲಿಲ್ಲ. ಆದರೆ ಚೆಂಡು ಸ್ಟಾರ್ಕ್ ಅವರ ಕೈಗೆ ತಾಗಿ ನೇರವಾಗಿ ವಿಕೆಟ್​ಗೆ ಬಡಿಯಿತು. ಇತ್ತ ನಾನ್ ಸ್ಟ್ರೈಕ್​ನಲ್ಲಿದ್ದ ರಹಾನೆ ರನ್​ಗಾಗಿ ಓಡಲು ವಿಕೆಟ್ ಬಿಟ್ಟಿದ್ದರು. ಹೀಗಾಗಿ ರಹಾನೆ ರನೌಟ್ ಆಗಬೇಕಾಯಿತು.

ಈ ಓವರ್ ಮುಗಿದ ಮುಂದಿನ ಓವರ್​ನಲ್ಲೇ ಅಂದರೆ 4ನೇ ಓವರ್​ನಲ್ಲಿ ಅಂಗ್ಕ್ರೀಶ್ ರಘುವಂಶಿ ಸ್ಟ್ರೈಕ್​ಗೆ ಬಂದರು. ಅಕ್ಷರ್ ಪಟೇಲ್ ಬೌಲ್ ಮಾಡಿದ ಈ ಓವರ್​ನ 4ನೇ ಎಸೆತವನ್ನು ರಘುವಂಶಿ ಸ್ವೀಪ್ ಮಾಡಲು ಪ್ರಯತ್ನಿಸಿದರು. ಆದರೆ ಅದರಲ್ಲಿ ಅವರು ಸಫಲರಾಗಲಿಲ್ಲ. ಹೀಗಾಗಿ ಚೆಂಡು ರಘುವಂಶಿ ಅವರ ಪ್ಯಾಡ್​ಗೆ ತಗುಲಿ ನೆಲದಿಂದ ಪುಟಿದು ಸೀದ ವಿಕೆಟ್​​ಗೆ ಬಡಿಯಿತು. ಹೀಗಾಗಿ ರಹಾನೆ ಹಾಗೂ ರಘುವಂಶಿ ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾಗಬೇಕಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us