194 ಅಂತರಾಷ್ಟ್ರೀಯ ಪಂದ್ಯ, ಎದುರಿಸಿದ್ದು ಬರೋಬ್ಬರಿ 2677 ಎಸೆತ, ಹೊಡೆದಿದ್ದು ಮಾತ್ರ ಕೇವಲ ಒಂದೇ ಸಿಕ್ಸರ್​.. ಯಾರು ಆ ಆಟಗಾರ?

ಇದುವರೆಗೆ 80 ಏಕದಿನ, 14 ಟಿ20 ಮತ್ತು 100 ಟೆಸ್ಟ್ ಪಂದ್ಯಗಳನ್ನು ಆಡಿರುವ ಇಶಾಂತ್​ ಶರ್ಮಾ ತಮ್ಮ 100ನೇ ಟೆಸ್ಟ್​ ಪಂದ್ಯದಲ್ಲಿ ತಮ್ಮ ವೃತ್ತಿ ಜೀವನದ ಮೊದಲ ಸಿಕ್ಸರ್​ ಬಾರಿಸಿದ್ದಾರೆ.

194 ಅಂತರಾಷ್ಟ್ರೀಯ ಪಂದ್ಯ, ಎದುರಿಸಿದ್ದು ಬರೋಬ್ಬರಿ 2677 ಎಸೆತ, ಹೊಡೆದಿದ್ದು ಮಾತ್ರ ಕೇವಲ ಒಂದೇ ಸಿಕ್ಸರ್​.. ಯಾರು ಆ ಆಟಗಾರ?
ಇಶಾಂತ್ ಶರ್ಮಾ
Follow us
ಪೃಥ್ವಿಶಂಕರ
|

Updated on: Feb 26, 2021 | 3:48 PM

ಅಹಮದಾಬಾದ್‌: ಇಂದಿನ ವೇಗದ ಕ್ರಿಕೆಟ್‌ನಲ್ಲಿ ಸಿಕ್ಸರ್ ಮತ್ತು ಬೌಂಡರಿಗಳ ಮಳೆ ಸುರಿಯುವುದು ಸರ್ವೆಸಾಮಾನ್ಯವಾಗಿದೆ. ಇಂದಿನ ಕ್ರಿಕೆಟ್​ನಲ್ಲಿ ಯಾರಿಗೆ ಅವಕಾಶ ಸಿಕ್ಕರೂ, ಚೆಂಡನ್ನು ಬೌಂಡರಿ ಗೆರೆ ದಾಟಿಸುವುದಕ್ಕೆ ಪ್ರಯತ್ನಿಸುತ್ತಿರುತ್ತಾರೆ. ಆದರೆ ಇವೆಲ್ಲದರ ನಡುವೆ ಸುಮಾರು 194 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ನಂತರ ಮೊದಲ ಸಿಕ್ಸರ್ ಹೊಡೆದ ಆಟಗಾರನೂ ಸಹ ಇದ್ದಾನೆ. ಈ ಆಟಗಾರ ಬೇರೆ ಯಾರೂ ಅಲ್ಲ ಭಾರತದ ವೇಗದ ಬೌಲರ್ ಇಶಾಂತ್ ಶರ್ಮಾ. ತಮ್ಮ 100 ನೇ ಟೆಸ್ಟ್ ಪಂದ್ಯದಲ್ಲಿ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದ ಮೊದಲ ಸಿಕ್ಸರ್​ ಬಾರಿಸುವುದರಲ್ಲಿ ಇಶಾಂತ್​ ಯಶಸ್ವಿಯಾಗಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಹಗಲು-ರಾತ್ರಿ ಟೆಸ್ಟ್ ಪಂದ್ಯದ ಎರಡನೇ ದಿನದಂದು ಭಾರತದ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಹೆಣಗಾಡುತ್ತಿದ್ದರು. ಅಲ್ಲದೆ ರನ್​ಗಳಿಸುವ ಭರದಲ್ಲಿ ಬೇಗನೆ ಔಟಾಗಿ ಪೆವಿಲಿಯನ್​ ಸೇರಿಕೊಂಡರು. ಇದರಿಂದಾಗಿ ಇಶಾಂತ್‌ಗೆ ಬೇಗನೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತು. ಈ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡ ಇಶಾಂತ್, ಇಂಗ್ಲೆಂಡ್ ತಂಡದ ಎಡಗೈ ಸ್ಪಿನ್ನರ್ ಜ್ಯಾಕ್ ಲೀಚ್ ಎಸೆತವನ್ನು ಸಿಕ್ಸರ್​ ಬಾರಿಸುವ ಮೂಲಕ ತಮ್ಮ ವೃತ್ತಿಜೀವನದ ಮೊದಲ ಸಿಕ್ಸರನ್ನು ತಮ್ಮ ಖಾತೆಗೆ ಹಾಕಿಕೊಂಡರು.

ಆಡಿದ 2677 ಎಸೆತಗಳಲ್ಲಿ ಮೊದಲ ಸಿಕ್ಸರ್​.. ಮೇ 25, 2007 ರಂದು ಬಾಂಗ್ಲಾದೇಶ ವಿರುದ್ಧ ಆಡಿದ ಟೆಸ್ಟ್ ಪಂದ್ಯದ ಮೂಲಕ ಇಶಾಂತ್ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಅಂದಿನಿಂದ, ಇದುವರೆಗೆ 80 ಏಕದಿನ, 14 ಟಿ20 ಮತ್ತು 100 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಸಮಯದಲ್ಲಿ ಅವರು ಒಟ್ಟು 2677 ಎಸೆತಗಳನ್ನು ಆಡಿದರು ಇನ್ನೂ ಸಹ ಒಂದು ಸಿಕ್ಸರ್ ಬಾರಿಸಿರಲಿಲ್ಲ. 3ನೇ ಟೆಸ್ಟ್​ ಮೊದಲನೇ ಇನ್ನಿಂಗ್ಸ್​ನ 50 ನೇ ಓವರ್ ಎಸೆಯಲು ಬಂದ ಲೀಚ್​ ಎಸೆತವನ್ನು ಇಶಾಂತ್, ಲಾಂಗ್ ಆನ್ ದಿಕ್ಕಿನ ಕಡೆ ಬಾರಿಸಿ ತಮ್ಮ ವೃತ್ತಿ ಜೀವನದ ಮೊದಲ ಸಿಕ್ಸರ್​ ಪಡೆದುಕೊಂಡರು.

ಇಶಾಂತ್​ಗಿದು 100 ನೇ ಟೆಸ್ಟ್ ಪಂದ್ಯ.. ಈ ಪಂದ್ಯದಲ್ಲಿ ಇಶಾಂತ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇದು ಅವರ ವೃತ್ತಿಜೀವನದ 100 ನೇ ಟೆಸ್ಟ್ ಪಂದ್ಯವಾಗಿದೆ. ಈ ಮೈಲಿಗಲ್ಲು ತಲುಪಿದ ಭಾರತದ ಎರಡನೇ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಶಾಂತ್​ಗು ಮೊದಲು, 1983 ರಲ್ಲಿ ಭಾರತಕ್ಕೆ ಮೊದಲ ವಿಶ್ವಕಪ್ ತಂದುಕೊಟ್ಟ ಕ್ಯಾಪ್ಟನ್ ಕಪಿಲ್ ದೇವ್, ಭಾರತಕ್ಕಾಗಿ 100 ಟೆಸ್ಟ್ ಪಂದ್ಯಗಳನ್ನು ಆಡಿದ ಏಕೈಕ ವೇಗದ ಬೌಲರ್ ಆಗಿದ್ದಾರೆ. ಮತ್ತೊಂದೆಡೆ, 100 ಟೆಸ್ಟ್ ಪಂದ್ಯಗಳನ್ನು ಆಡಿದ ಭಾರತದ ನಾಲ್ಕನೇ ಬೌಲರ್ ಇಶಾಂತ್. ಇಶಾಂತ್​ಗು ಮೊದಲು ಅನಿಲ್ ಕುಂಬೆಲ್ 132 ಟೆಸ್ಟ್ ಪಂದ್ಯ, ಕಪಿಲ್ 131 ಟೆಸ್ಟ್ ಪಂದ್ಯ ಮತ್ತು ಹರ್ಭಜನ್ ಸಿಂಗ್ 103 ಟೆಸ್ಟ್ ಪಂದ್ಯಗಳನ್ನು ಭಾರತಕ್ಕಾಗಿ 100 ಅಥವಾ ಅದಕ್ಕಿಂತ ಹೆಚ್ಚಿನ ಟೆಸ್ಟ್ ಪಂದ್ಯಗಳನ್ನು ಆಡಿದ ಬೌಲರ್‌ಗಳಾಗಿದ್ದಾರೆ.

ಇದನ್ನೂ ಓದಿ:India vs England: ಕೇವಲ 842 ಎಸೆತಗಳಲ್ಲಿ ಮುಗಿದ 3ನೇ ಟೆಸ್ಟ್​ಗೆ 7ನೇ ಸ್ಥಾನ.. ಇದಕ್ಕೂ ಮೊದಲಿನವು ಯಾವುವು ಗೊತ್ತಾ?

ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ
ನಮ್ಮಣ್ಣ ಹುಟ್ಟೇ ಇರಲಿಲ್ಲ ಅಂತ ಸರ್ಕಾರ ಹೇಳಬಹುದು: ಸಚಿನ್ ಸಹೋದರಿ
ನಮ್ಮಣ್ಣ ಹುಟ್ಟೇ ಇರಲಿಲ್ಲ ಅಂತ ಸರ್ಕಾರ ಹೇಳಬಹುದು: ಸಚಿನ್ ಸಹೋದರಿ
ಹುಲಿ ಹಿಂಸ್ರಪಶುವಾದರೂ ತನ್ನ ಮರಿಗಳ ವಿಷಯದಲ್ಲಿ ಮಮತಾಮಯಿ
ಹುಲಿ ಹಿಂಸ್ರಪಶುವಾದರೂ ತನ್ನ ಮರಿಗಳ ವಿಷಯದಲ್ಲಿ ಮಮತಾಮಯಿ
ಐಶ್ವರ್ಯಾಗೆ ಲೈನ್ ಹೊಡೀತಿದ್ರಾ ಧನರಾಜ್? ಪತ್ನಿಗೆ ಮೂಡಿದೆ ಅನುಮಾನ
ಐಶ್ವರ್ಯಾಗೆ ಲೈನ್ ಹೊಡೀತಿದ್ರಾ ಧನರಾಜ್? ಪತ್ನಿಗೆ ಮೂಡಿದೆ ಅನುಮಾನ