India vs England: ಕೇವಲ 842 ಎಸೆತಗಳಲ್ಲಿ ಮುಗಿದ 3ನೇ ಟೆಸ್ಟ್ಗೆ 7ನೇ ಸ್ಥಾನ.. ಇದಕ್ಕೂ ಮೊದಲಿನವು ಯಾವುವು ಗೊತ್ತಾ?
India vs England: ಪಂದ್ಯವು ಅಂತಿಮವಾಗಿ ಮುಗಿಯಲು ಕೇವಲ 140.2 ಓವರ್‌ಗಳನ್ನು ತೆಗೆದುಕೊಂಡಿತು. ಒಟ್ಟಾರೆಯಾಗಿ, 842 ಎಸೆತಗಳಲ್ಲಿ ಪಂದ್ಯವನ್ನು ಪೂರ್ಣಗೊಳಿಸಲಾಯಿತು.
ಅಹಮದಾಬಾದ್: ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಅಷ್ಟು ಸುಲಭವಾಗಿ ಮತ್ತು ವೇಗವಾಗಿ ಬರುವಂತಹದಲ್ಲ. ಆದರೆ, ಇಂಡಿಯಾ- ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಎರಡೂ ಘಟನೆಗಳು ನಡೆದವು. ಕೇವಲ ಎರಡು ಸೆಷನ್‌ಗಳಲ್ಲಿ ಬರೋಬ್ಬರಿ 17 ವಿಕೆಟ್‌ಗಳು ಬಿದ್ದರೆ, ಭಾರತವು ಕೇವಲ ಎರಡು ದಿನಗಳಲ್ಲಿ ಪಂದ್ಯವನ್ನು ಗೆದ್ದು, ಸರಣಿಯಲ್ಲಿ ಎರಡನೇ ಗೆಲುವು ಸಾಧಿಸಿತು. ಜೊತೆಗೆ ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್ ಆಡಲು ಒಂದು ಹೆಜ್ಜೆ ಹಿಂದೆ ಇದೆ.
ಈ 3ನೇ ಟೆಸ್ಟ್ ಪಂದ್ಯ, ಕೇವಲ ಎರಡು ದಿನಗಳಲ್ಲಿ ಯಶಸ್ವಿಯಾಗಿ ಮುಗಿಯುತ್ತಿರುವ 22 ನೇ ಟೆಸ್ಟ್ ಮಾತ್ರವಾಗಿಲ್ಲ, ಬದಲಿಗೆ ಕಡಿಮೆ ಎಸೆತಗಳಲ್ಲಿ ಪೂರ್ಣಗೊಂಡ 7 ನೇ ಅತಿ ವೇಗದ ಪಂದ್ಯ ಕೂಡ ಇದಾಗಿದೆ.
ಕಡಿಮೆ ಎಸೆತಗಳಲ್ಲೇ ಮುಗಿದ 7ನೇ ಟೆಸ್ಟ್.. ಪಂದ್ಯವು ಅಂತಿಮವಾಗಿ ಮುಗಿಯಲು ಕೇವಲ 140.2 ಓವರ್‌ಗಳನ್ನು ತೆಗೆದುಕೊಂಡಿತು. ಒಟ್ಟಾರೆಯಾಗಿ, 842 ಎಸೆತಗಳಲ್ಲಿ ಪಂದ್ಯವನ್ನು ಪೂರ್ಣಗೊಳಿಸಲಾಯಿತು. ಹೀಗಾಗಿ ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಕಡಿಮೆ ಬಾಲ್ಗಳಲ್ಲಿ ಪೂರ್ಣಗೊಂಡ ಏಳನೇ ಪಂದ್ಯವಾಗಿದೆ. ಹಿಂದಿನ ಆರು ಗೆಲುವುಗಳಲ್ಲಿ ಇಂಗ್ಲೆಂಡ್ 3 ಬಾರಿ ಗೆದ್ದಿದ್ದರೆ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಲಾ ಒಂದು ಪಂದ್ಯಗಳಲ್ಲಿ ಜಯಗಳಿಸಿವೆ. 1932 ರಲ್ಲಿ ಮೆಲ್ಬೋರ್ನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 656 ಎಸೆತಗಳಲ್ಲಿ ಆಸ್ಟ್ರೇಲಿಯಾ ತಂಡ ಪಂದ್ಯವನ್ನು ಗೆದ್ದುಕೊಂಡಿತ್ತು. ಇದು ಅತ್ಯಲ್ಪಾವಧಿ ಟೆಸ್ಟ್ ಪಂದ್ಯವಾಗಿದೆ!
ಎಸೆತಗಳು | ತಂಡಗಳು | ಸ್ಥಳ | ವರ್ಷ |
656 | ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ | ಮೆಲ್ಬೋರ್ನ್ | 1932 |
672 | ವೆಸ್ಟ್ ಇಂಡೀಸ್ vs ಇಂಗ್ಲೆಂಡ್ | ಬ್ರಿಡ್ಜ್‌ಟೌನ್ | 1935 |
788 | ಇಂಗ್ಲೆಂಡ್ vs ಆಸ್ಟ್ರೇಲಿಯಾ | ಮ್ಯಾಂಚೆಸ್ಟರ್ | 1888 |
792 | ಇಂಗ್ಲೆಂಡ್ vs ಆಸ್ಟ್ರೇಲಿಯಾ | ಲಾರ್ಡ್ಸ್ | 1888 |
796 | ದಕ್ಷಿಣ ಆಫ್ರಿಕಾ vs ಇಂಗ್ಲೆಂಡ್ | ಕೇಪ್ ಟೌನ್ | 1889 |
815 | ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ | ದಿ ಓವಲ್ | 1912 |
842 | ಇಂಡಿಯಾ vs ಇಂಗ್ಲೆಂಡ್ | ಅಹಮದಾಬಾದ್ | 2021 |