India vs England: 22ನೇ ಬಾರಿ 2 ದಿನಕ್ಕೆ ಮುಗಿದ ಟೆಸ್ಟ್ ಪಂದ್ಯ.. ಟೀಂ ಇಂಡಿಯಾ ಕೂಡ ಈ ಮೊದಲು ಈ ಸಾಧನೆ ಮಾಡಿತ್ತು..!
India vs England: ಇದುವರೆಗೆ 22 ಬಾರಿ 2 ದಿನಗಳಲ್ಲಿ ಟೆಸ್ಟ್ ಪಂದ್ಯ ಮುಗಿದಿದೆ . 1882 ರ ಆಗಸ್ಟ್ 28 ರಂದು ಲಂಡನ್‌ನ ಓವಲ್‌ನಲ್ಲಿ ಆಡಿದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಪಂದ್ಯವು 2 ದಿನಗಳಲ್ಲಿ ಕೊನೆಗೊಂಡಿತು.
ಅಹಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಡೇ-ನೈಟ್ ಟೆಸ್ಟ್ ಪಂದ್ಯ ಕೇವಲ 2 ದಿನಗಳಲ್ಲಿ ಕೊನೆಗೊಂಡಿತು. ಫೆಬ್ರವರಿ 24 ರ ಬುಧವಾರ, ಟೆಸ್ಟ್ ಸರಣಿಯ ಮೂರನೇ ಪಂದ್ಯವು ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪ್ರಾರಂಭವಾಯಿತು. ಈ ಹೊಸ ಮೈದಾನದಲ್ಲಿ ಇದು ಮೊದಲ ಟೆಸ್ಟ್ ಪಂದ್ಯವಾಗಿದ್ದು, ಮೊದಲ ಪಂದ್ಯದಲ್ಲಿ ಭಾರತವು ಅದ್ಭುತ ದಾಖಲೆಗಳನ್ನು ಮಾಡಿದೆ. ವಿರಾಟ್ ಕೊಹ್ಲಿ ನೇತೃತ್ವದ ಭಾರತೀಯ ತಂಡ, ಜೋ ರೂಟ್ ನಾಯಕತ್ವ ವಹಿಸಿದ್ದ ಇಂಗ್ಲಿಷ್ ತಂಡವನ್ನು ಎರಡು ದಿನಗಳಲ್ಲಿ ಕೇವಲ ಮೂರು ಸೆಷನ್‌ಗಳಲ್ಲಿ ಎರಡು ಬಾರಿ ಔಟ್ ಮಾಡಿತು. ಅದೇ ಸಮಯದಲ್ಲಿ, ಭಾರತ ತಂಡವೂ ಸಹ ಟೆಸ್ಟ್ ಪಂದ್ಯದ ಎರಡನೇ ದಿನ 10 ವಿಕೆಟ್‌ಗಳಿಂದ ಜಯಗಳಿಸಿ 5 ದಿನಗಳ ಟೆಸ್ಟ್ ಪಂದ್ಯ ಕೇವಲ 2 ದಿನದಲ್ಲಿ ಮುಗಿಯುವಂತೆ ಮಾಡಿತು. ಆದರೆ ಎರಡು ದಿನಗಳಲ್ಲಿ ಟೆಸ್ಟ್ ಪಂದ್ಯ ಮುಗಿದಿರುವುದು ಇದೇ ಮೊದಲಲ್ಲ.
ಈ ಪಂದ್ಯದಲ್ಲಿ ಎರಡೂ ತಂಡಗಳ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಹೆಣಗಾಡುತ್ತಿದಿದ್ದು ಕಂಡುಬಂತು. ಆದರೆ, ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಪರ ಜ್ಯಾಕ್ ಕ್ರೌಲಿ ಯಾವುದೇ ತೊಂದರೆಗಳಿಲ್ಲದೆ ಉತ್ತಮ ಅರ್ಧ ಶತಕವನ್ನು ಗಳಿಸಿದರು. ಹಾಗೆಯೇ, ರೋಹಿತ್ ಶರ್ಮಾ ಅತ್ಯುತ್ತಮ ಇನ್ನಿಂಗ್ಸ್ ಆಡಿ, ಭಾರತಕ್ಕಾಗಿ ಮೊದಲ ಇನ್ನಿಂಗ್ಸ್‌ನಲ್ಲಿ 66 ರನ್‌ಗಳ ಅಮೋಘ ಕೊಡುಗೆ ನೀಡಿದರು. ಆದರೆ, ಇವರುಗಳನ್ನು ಹೊರತುಪಡಿಸಿ, ಯಾವುದೇ ಬ್ಯಾಟ್ಸ್‌ಮನ್‌ಗಳು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಎರಡೂ ತಂಡಗಳ ಸ್ಪಿನ್ನರ್‌ಗಳು ಪಂದ್ಯದಲ್ಲಿ ವಿಕೆಟ್‌ಗಳ ಬೇಟೆಯನ್ನು ಭರ್ಜರಿಯಾಗಿ ಮಾಡಿದರು. ಮೊದಲ ದಿನದ ಆಟದಲ್ಲಿ 13 ವಿಕೆಟ್‌ಗಳು ಬಿದ್ದರೆ, ಎರಡನೇ ದಿನ 17 ವಿಕೆಟ್‌ಗಳು ಉರಿಳಿದವು.
22 ನೇ ಬಾರಿಗೆ 2 ದಿನಗಳಿಗೆ ಆಟ ಮುಗಿದಿದೆ. ಎರಡನೇ ದಿನ, ಎರಡನೇ ಇನ್ನಿಂಗ್ಸ್‌ನ ಕೇವಲ ಒಂದು ಸೆಷನ್‌ನಲ್ಲಿ ಇಂಗ್ಲೆಂಡ್ ತಂಡವನ್ನು 81 ರನ್‌ಗಳಿಗೆ ಆಲ್ಔಟ್ ಮಾಡಿ ಭಾರತವು ಕೇವಲ 49 ರನ್‌ಗಳ ಗೆಲುವಿನ ಗುರಿಯನ್ನು ಪಡೆದುಕೊಂಡಿತು. ಮೂರನೇ ಸೆಷನ್‌ನಲ್ಲಿ ಭಾರತ ವಿಕೆಟ್‌ಗಳನ್ನು ಕಳೆದುಕೊಳ್ಳದೆ ಸುಲಭವಾಗಿ ಜಯ ಸಾಧಿಸಿತು. ಈ ರೀತಿಯಾಗಿ ಭಾರತ ಎರಡನೇ ದಿನ ಪಂದ್ಯವನ್ನು 10 ವಿಕೆಟ್‌ಗಳ ಜಯದೊಂದಿಗೆ ಕೊನೆಗೊಳಿಸಿತು. ಆದರೆ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 2 ದಿನಗಳಲ್ಲಿ ಪಂದ್ಯ ಮುಗಿದಿರುವುದು ಇದೇ ಮೊದಲಲ್ಲ.
ಇದುವರೆಗೆ 22 ಬಾರಿ 2 ದಿನಗಳಲ್ಲಿ ಟೆಸ್ಟ್ ಪಂದ್ಯ ಮುಗಿದಿದೆ . 1882 ರ ಆಗಸ್ಟ್ 28 ರಂದು ಲಂಡನ್‌ನ ಓವಲ್‌ನಲ್ಲಿ ಆಡಿದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಪಂದ್ಯವು 2 ದಿನಗಳಲ್ಲಿ ಕೊನೆಗೊಂಡಿತು. ನಂತರ, 1950 ರ ಹೊತ್ತಿಗೆ, 15 ಟೆಸ್ಟ್ ಪಂದ್ಯಗಳು 2 ದಿನಗಳಲ್ಲಿ ಮುಗಿದು ಹೋಗಿದ್ದವು. ಆದಾದ ನಂತರ 2000 ರಿಂದ ಇದುವರೆಗೆ 7 ಬಾರಿ, 2 ದಿನಗಳಲ್ಲಿ ಟೆಸ್ಟ್ ಪಂದ್ಯ ಕೊನೆಗೊಂಡಿದೆ.
ಭಾರತಕ್ಕೂ ಇದು ಮೊದಲಲ್ಲ.. ಇದು ಭಾರತಕ್ಕೂ ಮೊದಲಲ್ಲ. ಎರಡೂವರೆ ವರ್ಷಗಳ ಹಿಂದೆ, 14 ಜೂನ್ 2018 ರಂದು ಭಾರತ ಮತ್ತು ಅಫ್ಘನಿಸ್ತಾನ ನಡುವೆ ಬೆಂಗಳೂರಿನಲ್ಲಿ ಆಡಿದ ಟೆಸ್ಟ್ ಪಂದ್ಯವೂ 2 ದಿನಗಳಲ್ಲಿ ಮುಗಿದಿತ್ತು. ಆ ಪಂದ್ಯವನ್ನು ಭಾರತ ಇನ್ನಿಂಗ್ಸ್ ಅಂತರದಿಂದ ಗೆದ್ದುಕೊಂಡಿತು.