ಧೋನಿಯನ್ನ ತೆಗಳಿ, ಕ್ಯಾಪ್ಟನ್ ಕೊಹ್ಲಿಯನ್ನ ಜೈ ಎಂದ ಇಶಾಂತ್ ಶರ್ಮಾ

ಕ್ರಿಕೆಟ್ ಅನ್ನೋ ಜಂಟಲ್​ಮೆನ್ ಗೇಮ್​ನಲ್ಲಿ ಕ್ಯಾಪ್ಟನ್ ಅಂತಾ ಬಂದ್ರೆ ನೆನಪಾಗೋದೇ ನಮ್ಮ ಮಹೇಂದ್ರ ಸಿಂಗ್ ಧೋನಿ ಹೆಸರು. ಅಷ್ಟರ ಮಟ್ಟಿಗೆ ನಾಯಕತ್ವದಲ್ಲಿ ಯಶೋಗಾಥೆ ಬರೆದ ಧೀರ ಮಹೇಂದ್ರ. ಆದ್ರೀಗ ಅದೇ ಧೋನಿಯ ನಾಯಕತ್ವವನ್ನೇ ಆತನೊಟ್ಟಿಗೆ ಆಡಿದ ವೇಗಿಯೊಬ್ಬ ಲಾಯಕ್ಕಿಲ್ಲ ಅನ್ನೋ ಹಾಗೇ ಮಾತಾಡಿದ್ದಾನೆ. ಅಷ್ಟೇ ಆಗಿದ್ರೆ ಪರ್ವಾಗಿರಲಿಲ್ಲ. ಧೋನಿಯನ್ನ ತೆಗಳಿ. ಕ್ಯಾಪ್ಟನ್ ಕೊಹ್ಲಿ ಜೈ ಎಂದು ಜೈಕಾರ ಹಾಕಿದ್ದಾನೆ. ಇಶಾಂತ್ ಶರ್ಮಾ. ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಟೀಮ್ ಇಂಡಿಯಾಕ್ಕೆ ಎಂಟ್ರಿ ಕೊಟ್ಟ ಘಾತಕ ವೇಗಿ. ಬಳಿಕ ಅನಿಲ್ […]

ಧೋನಿಯನ್ನ ತೆಗಳಿ, ಕ್ಯಾಪ್ಟನ್ ಕೊಹ್ಲಿಯನ್ನ ಜೈ ಎಂದ ಇಶಾಂತ್ ಶರ್ಮಾ
ಎಂ ಎಸ್ ಧೋನಿ, ಇಶಾಂತ್ ಶರ್ಮಾ
Follow us
ಸಾಧು ಶ್ರೀನಾಥ್​
|

Updated on: Dec 31, 2019 | 4:27 PM

ಕ್ರಿಕೆಟ್ ಅನ್ನೋ ಜಂಟಲ್​ಮೆನ್ ಗೇಮ್​ನಲ್ಲಿ ಕ್ಯಾಪ್ಟನ್ ಅಂತಾ ಬಂದ್ರೆ ನೆನಪಾಗೋದೇ ನಮ್ಮ ಮಹೇಂದ್ರ ಸಿಂಗ್ ಧೋನಿ ಹೆಸರು. ಅಷ್ಟರ ಮಟ್ಟಿಗೆ ನಾಯಕತ್ವದಲ್ಲಿ ಯಶೋಗಾಥೆ ಬರೆದ ಧೀರ ಮಹೇಂದ್ರ. ಆದ್ರೀಗ ಅದೇ ಧೋನಿಯ ನಾಯಕತ್ವವನ್ನೇ ಆತನೊಟ್ಟಿಗೆ ಆಡಿದ ವೇಗಿಯೊಬ್ಬ ಲಾಯಕ್ಕಿಲ್ಲ ಅನ್ನೋ ಹಾಗೇ ಮಾತಾಡಿದ್ದಾನೆ. ಅಷ್ಟೇ ಆಗಿದ್ರೆ ಪರ್ವಾಗಿರಲಿಲ್ಲ. ಧೋನಿಯನ್ನ ತೆಗಳಿ. ಕ್ಯಾಪ್ಟನ್ ಕೊಹ್ಲಿ ಜೈ ಎಂದು ಜೈಕಾರ ಹಾಕಿದ್ದಾನೆ.

ಇಶಾಂತ್ ಶರ್ಮಾ. ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಟೀಮ್ ಇಂಡಿಯಾಕ್ಕೆ ಎಂಟ್ರಿ ಕೊಟ್ಟ ಘಾತಕ ವೇಗಿ. ಬಳಿಕ ಅನಿಲ್ ಕುಂಬ್ಳೆ, ಮಹೇಂದ್ರ ಸಿಂಗ್ ಧೋನಿ. ಈಗ ವಿರಾಟ್ ಕೊಹ್ಲಿ ನಾಯಕತ್ವದಲ್ಲೂ ಟೀಮ್ ಇಂಡಿಯಾವನ್ನ ಪ್ರತಿನಿಧಿಸುತ್ತಿರೋ ವೇಗಿ. ಅದ್ರಲ್ಲೂ ಟೆಸ್ಟ್ ಕ್ರಿಕೆಟ್​ನಲ್ಲಿ ಕ್ಯಾಪ್ಟನ್ ಕೊಹ್ಲಿಗೆ ಯಶಸ್ಸು ತಂದುಕೊಡ್ತೀರೋದೇ ಈ ಡೆಲ್ಲಿ ಎಕ್ಸ್​ಪ್ರೆಸ್.

ಹೀಗೆ ನಾಲ್ವರು ನಾಯಕರ ಅಡಿಯಲ್ಲೂ ಟೀಮ್ ಇಂಡಿಯಾವನ್ನ ಪ್ರತಿನಿಧಿಸಿರೋ ಇಶಾಂತ್ ಶರ್ಮಾ, ಈಗ ಧೋನಿ ವಿಚಾರದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾನೆ. ಯಾಕಂದ್ರೆ ಧೋನಿ ನಾಯಕತ್ವ ಲಾಯಕ್ಕಿರಲಿಲ್ಲ ಅನ್ನೋ ಹಾಗೇ ಮಾತನಾಡಿ, ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಬಹುಪರಾಕ್ ಹೇಳಿಬಿಟ್ಟಿದ್ದಾನೆ.

ಸ್ಥಿರ ಪ್ರದರ್ಶನ ನೀಡಲು ಕಷ್ಟವಾಗ್ತಿತ್ತು. ‘‘ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ವೇಗದ ಬೌಲರ್​ಗಳನ್ನ ರೊಟೇಟ್ ಮಾಡಲಾಗ್ತಿತ್ತು. ಹೀಗಾಗಿ ಬೌಲರ್​ಗಳಿಗೆ ಸ್ಥಿರ ಪ್ರದರ್ಶನ ನೀಡೋದಕ್ಕೆ ಕಷ್ಟವಾಗ್ತಿತ್ತು. ಧೋನಿ ತಂಡದಲ್ಲಿ ಆರರಿಂದ ಏಳು ಮಂದಿ ಬೌಲರ್​ಗಳಿದ್ರು. ಹೀಗಾಗಿ ಟೀಮ್ ಮ್ಯಾನೇಜ್ಮೆಂಟ್ ಯಾರನ್ನೂ ಸಂಪರ್ಕಿಸಲು ಸಾಧ್ಯವಾಗ್ತಿರಲಿಲ್ಲ.’’ – ಇಶಾಂತ್ ಶರ್ಮಾ, ಟೀಮ್ ಇಂಡಿಯಾ ವೇಗಿ

ಹೀಗೆ ಧೋನಿ ನಾಯಕತ್ವದ ವಿರುದ್ಧ ಇಶಾಂತ್ ಶರ್ಮಾ ತಮ್ಮ ಅಸಮಾಧಾನ ಹೊರ ಹಾಕಿದ್ದಾನೆ. ಆದ್ರೆ ಅದೇ ಕೊಹ್ಲಿ ನಾಯಕತ್ವದಲ್ಲಿ ಭಾರತದ ವೇಗಿಗಳು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ ಅಂತಾ ಹಾಡಿ ಹೊಗಳಿ ಕೊಹ್ಲಿಯನ್ನ ಅಟ್ಟಕ್ಕೇರಿಸಿದ್ದಾನೆ.

ಆಟವನ್ನ ಎಂಜಾಯ್ ಮಾಡುತ್ತಿದ್ದೀವಿ. ‘‘ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಬೌಲರ್​ಗಳು ಸಾಕಷ್ಟು ಅನುಭವ ಪಡೆದುಕೊಂಡಿದ್ದಾರೆ. ಒಬ್ಬ ಆಟಗಾರ ಯಾವಾಗ ಹೆಚ್ಚು ಹೆಚ್ಚು ಪಂದ್ಯಗಳನ್ನ ಆಡುತ್ತಾನೋ, ಹಾಗೇ ಡ್ರೆಸ್ಸಿಂಗ್ ರೂಮ್​ನಲ್ಲಿ ಹೆಚ್ಚು ಕಾಲ ಕಳೆಯುತ್ತಾನೋ, ಆಗ ಆತ ತನ್ನ ಮನದಾಳದ ಅಭಿಪ್ರಾಯಗಳನ್ನ ತಿಳಿಸುತ್ತಾನೆ. ಫೀಲ್ಡ್​ಗೆ ಹೋದ್ರೆ ತನ್ನ ಆಟವನ್ನ ಎಂಜಾಯ್ ಮಾಡುತ್ತಾನೆ’’ -ಇಶಾಂತ್ ಶರ್ಮಾ, ಟೀಮ್ ಇಂಡಿಯಾ ವೇಗಿ

ಹೀಗೆ ವಿರಾಟ್ ಕೊಹ್ಲಿ ನಾಯಕತ್ವಕ್ಕೆ ಇಶಾಂತ್ ಶರ್ಮಾ ಫುಲ್ ಮಾರ್ಕ್ಸ್ ನೀಡಿದ್ದಾರೆ. ಇಶಾಂತ್ ಹೇಳಿರೋದ್ರಲ್ಲಿ ತಪ್ಪೇನು ಇಲ್ಲ. ಯಾಕಂದ್ರೆ ಧೋನಿ ತಮ್ಮ ನಾಯಕತ್ವದಲ್ಲಿ ರೊಟೇಷನ್ ಪಾಲಿಸಿ ಜಾರಿಗೆ ತಂದಿದ್ದು ನಿಜ. ಧೋನಿಯ ಈ ರೊಟೇಷನ್ ಪಾಲಿಸಿ ಬಗ್ಗೆ ಅವತ್ತು ಸೆಹ್ವಾಗ್, ಗಂಭೀರ್ ಕೂಡ ಅಸಮಾಧಾನ ಹೊರ ಹಾಕಿದ್ರು. ಇದೀಗ ಇಶಾಂತ್ ಬಹಿರಂಗವಾಗೇ ಧೋನಿ ವಿರುದ್ಧ ಅಸಮಾಧಾನ ಹೊರ ಹಾಕಿ, ಕೊಹ್ಲಿ ಜೈ ಎಂದಿರೋದು ಮತ್ತೇ ಧೋನಿ ವಿರೋಧಿಗಳ ಕೂಗಿಗೆ ಬಲ ಸಿಕ್ಕಂತಾಗಿದೆ.

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?