ತಂಡದ ನೈತಿಕ ಸ್ಥೈರ್ಯ ಹೆಚ್ಚಬೇಕಾದರೆ ಪಂಜಾಬ್ ಇಂದು ಗೆಲ್ಲಲೇಬೇಕು
ಮೈದಾನಗಳಲ್ಲಿ ಪ್ರೇಕ್ಷಕರಿಲ್ಲದ ಹೊರತಾಗಿಯೂ ಇಂಡಿಯನ್ ಪ್ರಿಮೀಯರ್ ಲೀಗ್ನ 13ನೇ ಆವೃತಿ ಮೈನವಿರೇಳಿಸುವ ಫಲಿತಾಂಶಗಳೊಂದಿಗೆ ರೋಚಕಗೊಳ್ಳುತ್ತಾ ಸಾಗಿದೆ. ಇಂದು ಟೂರ್ನಿಯ 22ನೇ ಪಂದ್ಯ ಕಿಂಗ್ಸ್ ಎಲೆವೆನ್ ಪಂಜಾಬ್ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವೆ ದುಬೈನ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಎರಡು ತಂಡಗಳು ತಲಾ ಐದೈದು ಪಂದ್ಯಗಳನ್ನಾಡಿದ್ದು ಪಾಯಿಂಟ್ಸ್ ಟೇಬಲ್ನ ತಳಭಾಗದಲ್ಲಿವೆ. ಕೆ ಎಲ್ ರಾಹುಲ್ ನೇತೃತ್ವದ ಪಂಜಾಬ್ ನಾಲ್ಕು ಸೋಲುಗಳೊಂದಿಗೆ ಕೊನೆ ಸ್ಥಾನದಲ್ಲಿದ್ದರೆ ಮೂರರಲ್ಲಿ ಸೋತಿರುವ ಹೈದರಾಬಾದ್ ಆರನೇ ಸ್ಥಾನದಲ್ಲಿದೆ. ಪಂಜಾಬ್ ಟೀಮಿನ ಬ್ಯಾಟಿಂಗ್ ಸಂಪೂರ್ಣವಾಗಿ ಇಬ್ಬರು ಕನ್ನಡಿಗರನ್ನು ಅವಲಂಬಿಸಿದೆ, […]
ಮೈದಾನಗಳಲ್ಲಿ ಪ್ರೇಕ್ಷಕರಿಲ್ಲದ ಹೊರತಾಗಿಯೂ ಇಂಡಿಯನ್ ಪ್ರಿಮೀಯರ್ ಲೀಗ್ನ 13ನೇ ಆವೃತಿ ಮೈನವಿರೇಳಿಸುವ ಫಲಿತಾಂಶಗಳೊಂದಿಗೆ ರೋಚಕಗೊಳ್ಳುತ್ತಾ ಸಾಗಿದೆ. ಇಂದು ಟೂರ್ನಿಯ 22ನೇ ಪಂದ್ಯ ಕಿಂಗ್ಸ್ ಎಲೆವೆನ್ ಪಂಜಾಬ್ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವೆ ದುಬೈನ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಎರಡು ತಂಡಗಳು ತಲಾ ಐದೈದು ಪಂದ್ಯಗಳನ್ನಾಡಿದ್ದು ಪಾಯಿಂಟ್ಸ್ ಟೇಬಲ್ನ ತಳಭಾಗದಲ್ಲಿವೆ. ಕೆ ಎಲ್ ರಾಹುಲ್ ನೇತೃತ್ವದ ಪಂಜಾಬ್ ನಾಲ್ಕು ಸೋಲುಗಳೊಂದಿಗೆ ಕೊನೆ ಸ್ಥಾನದಲ್ಲಿದ್ದರೆ ಮೂರರಲ್ಲಿ ಸೋತಿರುವ ಹೈದರಾಬಾದ್ ಆರನೇ ಸ್ಥಾನದಲ್ಲಿದೆ.
ಪಂಜಾಬ್ ಟೀಮಿನ ಬ್ಯಾಟಿಂಗ್ ಸಂಪೂರ್ಣವಾಗಿ ಇಬ್ಬರು ಕನ್ನಡಿಗರನ್ನು ಅವಲಂಬಿಸಿದೆ, ರಾಹುಲ್ ಮತ್ತು ಮಾಯಾಂಕ್ ಅಗರ್ವಾಲ್. ಒಂದರೆಡು ಬಾರಿ ಮೂರನೇ ಕ್ರಮಾಂಕದಲ್ಲಾಡುವ ನಿಕೊಲಾಸ್ ಪೂರನ್ ಉಪಯುಕ್ತ ಕೊಡುಗೆಗಳನ್ನು ನೀಡಿರುವುರಾದರೂ ಅವರ ಪ್ರದರ್ಶನಗಳಲ್ಲಿ ಸ್ಥಿರತೆ ಕಂಡುಬಂದಿಲ್ಲ. ರಾಹಲ್ ಮಾತ್ರ ತಮ್ಮ ಕರೀಯರ್ನ ಉತ್ತುಂಗ ಫಾರ್ಮ್ನಲ್ಲಿರುವಂತೆ ಆಡುತ್ತಿದ್ದಾರೆ. ಆಡಿರುವ 5 ಪಂದ್ಯಗಳಲ್ಲಿ ರಾಹುಲ್ 2 ಅರ್ಧ ಶತಕ ಮತ್ತು 1 ಅಜೇಯ ಶತಕವನ್ನು ಬಾರಿಸಿದ್ದಾರೆ. ಹಾಗೆಯೇ ಅಗರ್ವಾಲ್ ಅವರ ಬ್ಯಾಟ್ನಿಂದ 1 ಶತಕ ಮತ್ತೊಂದು ಅರ್ಧ ಶತಕ ಸಿಡಿದಿವೆ. ಇಂದಿನ ಪಂದ್ಯದಲ್ಲೂ ಪಂಜಾಬ್ ಟೀಮು ರನ್ಗಳಿಗಾಗಿ ಇವರಿಬ್ಬರನ್ನೇ ಜಾಸ್ತಿ ನೆಚ್ಚಿಕೊಳ್ಳಲಿದೆ.
[yop_poll id=”8″]
ಪಂಜಾಬ್ ಟೀಮಿನ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಸದರಿ ಆವೃತಿಯಲ್ಲಿ ಇನ್ನೂ ಮೈದಾನಕ್ಕಿಳಿದಿಲ್ಲ. ಆದರೆ ಇವತ್ತಿನ ಪಂದ್ಯದಲ್ಲಿ ಅವರನ್ನು ಆಡಿಸುವ ನಿರೀಕ್ಷೆಯಿದೆ. ಒಂದು ಪಕ್ಷ ವಿಂಡೀಸ್ ದೈತ್ಯನನ್ನು ಟೀಮ್ ಮ್ಯಾನೇಜ್ಮೆಂಟ್ ಆಡಿಸಿದರೆ, ರಾಹುಲ್ ಜೊತೆ ಅವರೇ ಇನ್ನಿಂಗ್ಸ್ ಆರಂಭಿಸುತ್ತಾರೆ. ಮಾಯಂಕ್ ಮೂರನೇ ಕ್ರಮಾಂಕದಲ್ಲಾಡುತ್ತಾರೆ. 2011ರಿಂದ ಪಂಜಾಬ್ ಟೀಮಿಗೆ ಆಡುತ್ತಿರುವ 28 ವರ್ಷ ವಯಸ್ಸಿನ ಮನ್ದೀಪ್ ಸಿಂಗ್ ಪ್ರತಿಭೆಯ ಬಗ್ಗೆ ಎರಡು ಮಾತಿಲ್ಲ. ಅಕ್ಟೋಬರ್ 4 ರಂದು ಚೆನೈ ವಿರುದ್ಧ ಆಡಿದ ಪಂದ್ಯದಲ್ಲಿ ಅವರು ಉತ್ತಮ ಸ್ಪರ್ಶದಲ್ಲಿ ಕಂಡಿದ್ದರಿಂದ ಆವರ ಬ್ಯಾಟ್ನಿಂದಲೂ ರನ್ ನಿರೀಕ್ಷಿಸಬಹುದು.
ಪ್ರತಿಭಾವಂತ ಯುವ ಬ್ಯಾಟ್ಸ್ಮನ್ ಸರ್ಫರಾಜ್ ಖಾನ್ಗೆ ಬ್ಯಾಟಿಂಗ್ ಮಾಡುವ ಅವಕಾಶಗಳು ಸಿಗುತ್ತಿಲ್ಲ. ಟಿ20 ಕ್ರಿಕೆಟ್ ಫಾರ್ಮಾಟ್ ಇರೋದೆ ಹಾಗೆ. ಕೇವಲ 20 ಓವರ್ಗಳಲ್ಲಿ ಎಲ್ಲರಿಗೂ ಬ್ಯಾಟಿಂಗ್ ಮಾಡುವ ಅವಕಾಶ ಸಿಗೋದು ವಿರಳ ಸಂದರ್ಭಗಳಲ್ಲಿ ಮಾತ್ರ.
ಇದನ್ನೂ ಓದಿ: IPL 2020: SRH vs KXIP Live Score
ಗೇಲ್ರಂತೆಯೇ, ಅಫ್ಘಾನಿಸ್ತಾನದ ಆಫ್ ಸ್ಪಿನ್ನರ್ ಮುಜೀಬ್ ಉರ್ ರಹಮಾನ್ ಕೂಡ ಇಂದಿನ ಪಂದ್ಯದಲ್ಲಿ ಆಡಬಹುದು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮೂರು ವಿಕೆಟ್ಗಳನ್ನು ಪಡೆದಿದ್ದ ರವಿ ಬಿಷ್ಣೊಯಿ ಅವರಿಂದ ಪುನಃ ಮ್ಯಾಚ್ ವಿನ್ನಿಂಗ್ ಪರ್ಫಾಮನ್ಸ್ ಬಂದಿಲ್ಲ. ಮೊಹಮ್ಮದ್ ಶಮಿ ಮಾತ್ರ ತನ್ನ ಖ್ಯಾತಿಗೆ ತಕ್ಕ ಬೌಲಿಂಗ್ ಪ್ರದರ್ಶನಗಳನ್ನು ನೀಡುತ್ತಿದ್ದಾರೆ.
ಮತ್ತೊಂದೆಡೆ, ಗಾಯದಿಂದಾಗಿ ಈ ಸೀಸನ್ನಿಂದ ಹೊರಬಿದ್ದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅನುಪಸ್ಥಿತಿ ಹೈದರಾಬಾದನ್ನು ತೀವ್ರವಾಗಿ ಕಾಡಲಿದೆ. ಅವರ ಸ್ಥಾನದಲ್ಲಿ ಖಲೀಲ್ ಅಹ್ಮದ್ ಮತ್ತು ಸಿದ್ದಾರ್ಥ್ ಕೌಲ್ ಅವರನ್ನು ಪಾಳಿಯ ಮೇಲೆ ಆಡುವ ಎಲೆವೆನ್ನಲ್ಲಿ ಸ್ಥಾನ ಕಲ್ಪಿಸಲಾಗುತ್ತಿದೆ. ಆದರೆ ಅವರಿಬ್ಬರೂ, ಭುವಿಯ ಕೊರತೆಯನ್ನು ನೀಗಿಸಲಾರರು. ಸಂದೀಪ್ ಶರ್ಮ ಮತ್ತು ಟಿ ನಟರಾಜನ್ ತಮ್ಮ ಜವಾಬ್ದಾರಿಗಳನ್ನು ಚೆನ್ನಾಗಿ ನಿಭಾಯಿಸುತ್ತಿರುವ ಹೈದರಾಬಾದ್ಗೆ ಬೌಲಿಂಗ್ನಲ್ಲಿ ಟ್ರಂಪ್ಕಾರ್ಡ್ ಎಂದರೆ ರಶೀದ್ ಖಾನ್. ಅವರನ್ನು ರೀಡ್ ಮಾಡೋದೇ ಕಷ್ಟ ಅಂತ ಎಲ್ಲ ಟೀಮುಗಳ ಬ್ಯಾಟ್ಸ್ಮನ್ಗಳು ಹೇಳುತ್ತಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಶೀದ್ರ ಚಮತ್ಕಾರಿಕ ಬೌಲಿಂಗ್ ಪ್ರದರ್ಶನವನ್ನು ಒಮ್ಮೆ ನೆನಪಿಸಿಕೊಂಡರೆ ಅವರು ಎಂಥ ಅಪಾಯಕಾರಿ ಬೌಲರ್ ಅನ್ನುವುದು ಗೊತ್ತಾಗುತ್ತದೆ.
ಬ್ಯಾಟಿಂಗ್ ವಿಭಾಗದಲ್ಲಿ ಹೈದರಾಬಾದ್ಗೆ ಸಮಸ್ಯೆಗಳಿಲ್ಲ. ನಾಯಕ ಡೇವಿಡ್ ವಾರ್ನರ್, ಅವರ ಆರಂಭಿಕ ಜೊತೆಗಾರ ಜಾನಿ ಬೇರ್ಸ್ಟೋ, ಮನೀಶ್ ಪಾಂಡೆ, ಮತ್ತು ಕೇನ್ ವಿಲಿಯಮ್ಸನ್ ರನ್ ಗಳಿಸುತ್ತಿದ್ದಾರೆ. ಕರ್ನಾಟಕದ ಪಾಂಡೆ, ಆಡಿರುವ 5 ಪಂದ್ಯಗಳಿಂದ 1 ಅರ್ಧ ಶತಕದೊಂದಿಗೆ ಕೇವಲ 147 ರನ್ ಗಳಿಸಿರುವರಾದರೂ ಉತ್ತಮ ಫಾರ್ಫ್ನಲ್ಲಿದ್ದಾರೆ. ಇವತ್ತು ಅವರ ದಿನವಾಗಿರಲೂಬಹುದು. ಮೊದಲಿನ ಎರಡು ಪಂದ್ಯಗಳನ್ನು ಆರ್ಸಿಬಿ ಮತ್ತು ಕೆಕೆಆರ್ಗೆ ಸೋತ ನಂತರ 3 ಮತ್ತು 4ನೇಯದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸಿಎಸ್ಕೆ ವಿರುದ್ಧ ಜಯ ಸಾಧಿಸಿದ ಹೈದರಾಬಾದ್ ತನ್ನ 5ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ಗೆ ಶರಣಾಯಿತು.
ಸತತ ಸೋಲುಗಳಿಂದ ಕಂಗೆಟ್ಟಿರುವ ಪಂಜಾಬ್ ಇಂದು ಗೆದ್ದಲ್ಲಿ ಮಾತ್ರ ಅದರ ನೈತಿಕ ಬಲ ಹೆಚ್ಚಲಿದೆ. ಆದು ನಾಯಕ ರಾಹುಲ್ಗೆ ಚೆನ್ನಾಗಿ ಗೊತ್ತಿದೆ.
Published On - 5:03 pm, Thu, 8 October 20